Home District ಜಮೀರ್ ಆಹ್ಮದ್ ಗೆ ದೋಸ್ತಿ ಸರ್ಕಾರದಲ್ಲಿ ಸಂಪೂರ್ಣ ಅಸಹಕಾರ..?! ರಾಜೀನಾಮೆ ನೀಡಲು ಚಿಂತನೆ ನಡೆಸುತ್ತಿರೋ ಜಮೀರ್.?

ಜಮೀರ್ ಆಹ್ಮದ್ ಗೆ ದೋಸ್ತಿ ಸರ್ಕಾರದಲ್ಲಿ ಸಂಪೂರ್ಣ ಅಸಹಕಾರ..?! ರಾಜೀನಾಮೆ ನೀಡಲು ಚಿಂತನೆ ನಡೆಸುತ್ತಿರೋ ಜಮೀರ್.?

1773
0
SHARE

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಒಂದ ಕಾಲದ ಆಪ್ತ… ದೋಸ್ತಿ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಆಹ್ಮದ್ ಅಸಮಾಧಾನಗೊಂಡಿದ್ದಾರೆ…. ದೋಸ್ತಿ ಸರ್ಕಾರದಲ್ಲಿ ಮುಕ್ತವಾಗಿ ಕೆಲಸ ಮಾಡಲು ಆಗುತ್ತಿಲ್ಲ ಅಂತಾ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಜನರ ಆಶೋತ್ತರಗಳನ್ನು ಈಡೇರಿಸಲು ಆಗುತ್ತಿಲ್ಲ…

ಒಳ್ಳೆ ಕೆಲಸ ಮಾಡಲು ಹೋದ್ರೆ ನೂರಾರು ಅಡೆತಡೆ ಎದುರಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ… ಮಾಜಿ ಸಿಎಂ ಸಿದ್ದರಾಮಯ್ಯನವರ ಕನಸಿನ ಯೋಜನೆಯಾದ ಅನ್ನಭಾಗ್ಯ ಅಕ್ಕಿ ಕಡಿತಕ್ಕೆ ಜಮೀರ್ ಅತೀವ ಅಸಮಾಧಾನಗೊಂಡಿದ್ದಾರೆ.. ಹಿಂದಿನ ಘಟನಾವಳಿಗಳನ್ನ ಮನಸ್ಸಿನಲ್ಲಿಟ್ಟುಕೊಂಡಿರೋ ಸಿಎಂ ಹೆಚ್ಡಿಕೆ ಇಲಾಖೆಯಲ್ಲಿ ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡುತ್ತಿಲ್ಲ..

5 ಕೆಜಿ ಅಕ್ಕಿ ಬದಲು 7 ಕೆಜಿ ಅಕ್ಕಿ ನೀಡುವಂತೆ ಎಷ್ಟೇ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ ಎಂದು ಜಮೀರ್ ಆಪ್ತರಲ್ಲಿ ಹೇಳಿಕೊಂಡಿದ್ದಾರೆ… ಹೀಗೆ ಮುಂದಿನ ದಿನಗಳಲ್ಲಿ ಅಸಹಕಾರ ಎದುರಾದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಜಮೀರ್ ಗಂಭೀರವಾಗಿ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ…

ಇನ್ನೂ ಜಮೀರ್ ಉತ್ತಮವಾಗಿ ಕೆಲಸ ಮಾಡಿದ್ರೆ ಮುಸ್ಲಿಂ ಸಮುದಾಯದಲ್ಲಿ ದೊಡ್ಡ ನಾಯಕನಾಗಿ ಬೆಳೆದುಬಿಡುತ್ತಾರೆ ಅಂತ ತಿಳಿದು ತಮ್ಮನ್ನು ತುಳಿಯುವ ಪ್ರಯತ್ನ ನಡೆದಿದೆ ಎಂದು ಜಮೀರ್ ಬೇಸರ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ… ಇನ್ನೂ ಶಾದಿ ಭಾಗ್ಯ ಯೋಜನೆಗೆ ಅನುದಾನ ಕಡಿತ ಮಾಡಿರೋ ಬಗ್ಗೆಯೂ ಜಮೀರ್ ಕೋಪಿಸಿಕೊಂಡಿದ್ದು, ಶೀಘ್ರದಲ್ಲೇ ಬಹಿರಂಗವಾಗಿ ತಮ್ಮ ಅಸಮಾಧಾನವನ್ನ ಹೊರ ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ..

LEAVE A REPLY

Please enter your comment!
Please enter your name here