Home KARNATAKA ಜಯದೇವ ಜಂಕ್ಷನ್ ಫ್ಲೈಓವರ್‌ ಮೇಲೆ ಓಡಾಡುವ ಜನರೇ ಎಚ್ಚರ ಎಚ್ಚರ..! ಯಾವ ಕ್ಷಣದಲ್ಲದರೂ ಉರುಳಿ ಬೀಳಬಹುದು...

ಜಯದೇವ ಜಂಕ್ಷನ್ ಫ್ಲೈಓವರ್‌ ಮೇಲೆ ಓಡಾಡುವ ಜನರೇ ಎಚ್ಚರ ಎಚ್ಚರ..! ಯಾವ ಕ್ಷಣದಲ್ಲದರೂ ಉರುಳಿ ಬೀಳಬಹುದು ಮೇಲ್ಸೆತುವೆ..!

645
0
SHARE

ಅದೊಂದು ಫ್ಲೈಓವರ್ ಬೆಂಗಳೂರಿನ‌ ಜನರಿಗೆ ಚಿರ ಪರಿಚಿತ. ಸದಾ ವಾಹನ ದಟ್ಟನೆಯಿಂದ ಜನರ ಬಾಯಲ್ಲಿ ಬೇಸರದಿಂದ ಕೇಳಿ ಬರುತ್ತಿತ್ತು. ಆದ್ರೆ ಆ ಹೆಸರು ಇನ್ನು ಕೆಲವೇ ದಿನಗಳಲ್ಲಿ ನೆಲಸಮವಾಗಲಿದೆ.ಸದಾ ಗಿಜಿಗುಡುವ ಟ್ರಾಫಿಕ್, ತಲೆ ಚಿಟ್ಟು ಹಿಡಿಸುವ ಹಾರನ್ ಸದ್ದು, ಆ ರಸ್ತೆಯ ಹೆಸರು ಕೇಳಿದರೆ ಬೆಂಗಳೂರಿಗರ ಬಾಯಲ್ಲಿ ಬರುತ್ತಿದ್ದ ಮೊದಲ ಮಾತು, ಟ್ರಾಫಿಕ್ ಜಾಮ್.

ಹೌದು ಆ ರಸ್ತೆಯ ವಾಹನ ದಟ್ಟನೆಯೆ‌ ಅಂತದ್ದು,‌ ಕೋರಮಂಗಲ,‌ ಬನ್ನೇರುಘಟ್ಟ, ಡೈರಿ ವೃತ್ತ ರಸ್ತೆಗಳನ್ನು ಒಂದೆಡೆ ಸೇರಿಸುತ್ತಿದ್ದ ಜಯದೇವ ಫ್ಲೈ – ಓವರ್ ಜಂಕ್ಷನ್ ಯಾರಿಗೆ ಗೊತ್ತಿಲ್ಲ ಹೇಳಿ, ಅದರಲ್ಲೂ ವಾಹನ ದಟ್ಟನೆ ನಿವಾರಿಸಲೆಂದೆ ಕಟ್ಟಲಾಗಿದ್ದ ಫ್ಲೈ ಓವರ್ ನೆಲಕ್ಕುರುಳಲು ಸಿದ್ದವಾಗಿದೆ. ವಾಹನ ದಟ್ಟಣೆಗೆ ಔಷಧಿಯಾಗಿದ್ದ ಮೇಲ್ಸೆತುವೆ ತನ್ನ ಕೊನೆ ದಿನಗಳನ್ನ ಎಣಿಸುತ್ತಿದೆ.

ಮೆಟ್ರೋ ಕಾಮಗಾರಿಗಾಗಿ ಜಯದೇವ ಜಂಕ್ಷನ್ ಫ್ಲೈಓವರ್ ಅನ್ನು ನೆಲಸಮ ಮಾಡಲಾಗ್ತಿದೆ. ನೆಲಸಮ ಮಾಡೋದು ಇನ್ನೂ ಮೂರು ತಿಂಗಳಾದರೂ ಆಗಬಹುದು.ಆದ್ರೆ ಪ್ಲೈಓವರ್ ರೋಡ್ ಕ್ಲೋಸ್ ಮಾಡದೇ ವಾಹನ ಸವಾರರ ಜೀವದ ಜೊತೆ ಚಲ್ಲಾಟ ಆಡ್ತಾ ಇದೆ ಸರ್ಕಾರ.ಮೂರನೇ ಹಂತದ ಬನ್ನೇರುಘಟ್ಟ, ಬಿಟಿಎಮ್ ಮೆಟ್ರೋ ಕಾಮಗಾರಿ ಆರಂಭವಾಗಿದ್ದು, ಅದರ ಮಾರ್ಗ ಮಧ್ಯೆ ಇರುವ ಜಯದೇವ ಫ್ಲೈ ಓವರ್ ಡೆಮಾಲಿಷ್ ಮಾಡಲು ಸಕಲ‌ ಸಿದ್ದತೆಗಳು ನಡೆದಿವೆ.

ಫ್ಲೈ ಓವರ್ ಪಿಲ್ಲರ್ ಗಳ ಸುತ್ತ ಈಗಾಗ್ಲೇ ಮಣ್ಣು ತಗೆದಿದ್ದು, ಅದನ್ನು ಉರುಳಿಸಲು ಮುಂದಾಗಿದೆ. ಆದರೆ ಅದನ್ನು ನೆಲಕ್ಕುಳಿಸುವ ಕೆಲ ತಿಂಗಳುಗಳ ಮುಂಚೆಯೇ ಪಿಲ್ಲರ್ ಸಡಿಲಗೊಳಿಸಿರುವುದು, ಮುಂದಿನ ಅನಾಹುತಕ್ಕೆ ಆಹ್ವಾನ ನೀಡಿದಂತಿದೆ.ಸದಾ ದೊಡ್ಡ ವಾಹನಗಳೆ ಓಡಾಡುವ ಫ್ಲೈ ಓವರ್ ಪಿಲ್ಲರ್ ಗಳು ಸಡಿಲವಾಗಿದ್ದು ಯಾವ ಕ್ಷಣದಲ್ಲಾದ್ರು ಅನಾಹುತ ಸಂಭವಿಸುವ ಲಕ್ಷಣಗಳಿವೆ. ಇನ್ನು ಕೋಟಿ ಕೋಟಿ ಖರ್ಚು ಮಾಡಿ ನಿರ್ಮಿಸಿರುವ ಫ್ಲೈ ಓವರ್ ಅನ್ನು ಕೇವಲ 11 ವರ್ಷಕ್ಕೆ ನೆಲಸಮ ಮಾಡಲು ಮುಂದಾಗಿರುವುದು ವಿಪರ್ಯಾಸ.

LEAVE A REPLY

Please enter your comment!
Please enter your name here