Home District “ಜಯಮಾಲ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ಗೆದ್ದು ಬರಲಿ” ಜಯಮಾಲ ಹೇಳಿಕೆಗೆ ಟಾಂಗ್ ಮೂಲಕ ಸವಾಲೆಸೆದ A.ಮಂಜು..!

“ಜಯಮಾಲ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ಗೆದ್ದು ಬರಲಿ” ಜಯಮಾಲ ಹೇಳಿಕೆಗೆ ಟಾಂಗ್ ಮೂಲಕ ಸವಾಲೆಸೆದ A.ಮಂಜು..!

479
0
SHARE

ಸಚಿವೆ ಜಲಮಾಲಾರಿಂದ ಹೆಚ್.ಡಿ.ರೇವಣ್ಣ ಗುಣಗಾನ ವಿಚಾರ.ಹಾಸನದಲ್ಲಿ ಮತ್ತೆ ಗುಡುಗಿದ ಮಾಜಿ ಸಚಿವ ಎಂ.ಮಂಜು. ಹೈಕಮಾಂಡ್‌ಗೆ ದೂರು ನೀಡುವ ಎಚ್ಚರಿಕೆ.ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರನ್ನು ಸಚಿವ ಜಯಮಾಲಾ ಹೊಗಳಿ ಹಾಸನ ಕಾಂಗ್ರೆಸ್ ನಾಯಕರನ್ನು ಇರಿಸುಮುರಿಸು ಉಂಟು ಮಾಡಿದ್ದಾರೆ.

ಹಾಸನ ಜಿಲ್ಲೆಯ ಶ್ರವಣಬೆಳೊಗಳದಲ್ಲಿ ನಡೆದ ಚಾರೂಕೀರ್ತಿ ಭಟ್ಟಾರಕ‌ ಶ್ರೀಗೆ ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಜಯಮಾಲಾ, ಬದುಕಿರೋವರೆಗೂ ಹೆಚ್.ಡಿ.ರೇವಣ್ಣ ಶಾಸಕಾಗಿರ್ತಾರೆ..

ರೇವಣ್ಣ ಅವ್ರು ಜನರಿಗೆ ಏನು ಬೇಕೋ ಅದನ್ನು ಅರ್ಥಮಾಡಿಕೊಂಡು ತಮ್ಮದೇ ‌ಸಾಮ್ರಾಜ್ಯ ಕಟ್ಟಿದ್ದಾರೆ ಹಾಸನವನ್ನ ನೋಡಿದ್ರೆ, ಇಲ್ಲಿನ ಶುಚಿತ್ವ ನೋಡಿದ್ರೆ ಅವರ‌‌ ಕೆಲಸ ಅರ್ಥವಾಗುತ್ತೆ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ..

ರೇವಣ್ಣ ಅವ್ರನ್ನ ಹೊಗಳಿದ ಜಯಮಾಲಾಗೆ ಮಾಜಿ ಸಚಿವ ಎ.ಮಂಜು ಟಾಂಗ್ ಕೊಟ್ಟಿದ್ದಾರೆ. ಹಾಡು ಹೇಳುವುದು, ನಟನೆ ಮಾಡುವುದೇ ಅವರ ಕಾಯಕ.ಅನುಭವದ ಕೊರತೆಯಿಂದ ಅವರು ಮಾತನಾಡಿದ್ದಾರೆ .

ಕಾರ್ಯಕ್ರಮ ಏನು ಎಂಬುದನ್ನು ತಿಳಿದುಕೊಳ್ಳದೇ ಹೇಳಿಕೆ ನೀಡಿದ್ದಾರೆ. ಇದು ಸ್ವಂತ ಹೇಳಿಕೆ ಎಂದು ಸಚಿವೆ ಸ್ಪಷ್ಟನೆ ನೀಡಬೇಕು ಇಲ್ಲವಾದಲ್ಲಿ ಕಾಂಗ್ರೆಸ್ ಹೈಕಮಾಂಡ್ ಗೆ ದೂರು ನೀಡುವುದಾಗಿ ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here