Home District ಜಯಮಾಲ ಬಗ್ಗೆ ವಿವಾದಾತ್ಮಕ ಹೇಳಿಕೆ ಹಿನ್ನೆಲೆ “ಸೇವೆ ಅಂದ್ರೆ ಅದು ಉರುಳು ಸೇವೆ” ಎಂದು ಹೆಬ್ಬಾಳ್ಕರ್...

ಜಯಮಾಲ ಬಗ್ಗೆ ವಿವಾದಾತ್ಮಕ ಹೇಳಿಕೆ ಹಿನ್ನೆಲೆ “ಸೇವೆ ಅಂದ್ರೆ ಅದು ಉರುಳು ಸೇವೆ” ಎಂದು ಹೆಬ್ಬಾಳ್ಕರ್ ಸಮಜಾಯಿಷಿ…

936
0
SHARE

ಸಚಿವೆ ಜಯಮಾಲಾ ಸೇವೆ ಪಕ್ಷದ ನಾಯಕರಿಗೆ ಇಷ್ಟವಾಗಿದೆ ಅಂತ ವಿವಾದಾತ್ಮಕ ಹೇಳಿಕೆ ನೀಡಿದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಈಗ ತಮ್ಮ ಹೇಳಿಕೆಗೆ ಸಮಜಾಯಿಷಿ ಹೇಳಿದ್ದಾರೆ. ಸೇವೆ ಅಂದರೆ ಪಕ್ಷದ ಕೆಲಸ ಅಂತ ಹೇಳಿದ್ದು. ಅದನ್ನು ಸಚಿವೆ ಜಯಮಾಲಾ ಅವ್ರು ಅಪಾರ್ಥ ಮಾಡಿಕೊಳ್ಳಬಾರದು ಎಂದಿದ್ದಾರೆ.

ನಮ್ಮ ಉತ್ತರ ಕರ್ನಾಟಕ ಶೈಲಿಯಲ್ಲಿ ಸೇವೆ ಅಂದ್ರೆ ಅದು ಉರುಳು ಸೇವೆ, ಹರಕೆ ಸೇವೆ ಅಂತೀವಿ ಮತ್ತು ಪಕ್ಷದ ಸೇವೆ ಅಂತೀವಿ. ನಾನು ಆ ಅರ್ಥದಲ್ಲಿ ಜಯಮಾಲಾ ಅವರು ಪಕ್ಷ ಸೇವೆ ಮಾಡಿದ್ದಾರೆ ಅಂತ ಹೇಳಿದ್ದೀನಿ. ನಮ್ಮ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥ ಮಾಡಿಕೊಂಡಿವೆ ಅಂತ ತೇಪೆ ಹಚ್ಚಿದ್ದಾರೆ.

ಆ ರೀತಿ ಭಾವನೆಗಳು ನನ್ನ ಬಳಿಯಿಲ್ಲ. ಜಯಮಾಲಾ ಅವರ ಜೊತೆಯಲ್ಲಿ ನನ್ನ ವೈಯಕ್ತಿಕ ಸಂಬಂಧ ಅನ್ಯೋನ್ಯವಾಗಿದೆ. ನನ್ನ ಹಿರಿಯ ಅಕ್ಕನಂತೆ ಜಯಮಾಲಾ ಅವರು ಇದ್ದಾರೆ. ಸದಾ ನನ್ನ ಬೆನ್ನು ತಟ್ಟುವ ಕೆಲಸ ಮಾಡಿದ್ದಾರೆ. ಅವರ ಭವಿಷ್ಯ ಉಜ್ವಲವಾಗಲಿ, ಅವರಿಂದ ಒಳ್ಳೆಯ ಕೆಲಸ ಆಗಲಿ, ಅದರಿಂದ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಹೆಸರು ಬರಲಿ ಅಂತ ಲಕ್ಷ್ಮೀ ಹೆಬ್ಬಾಳ್ಕರ್ ಉಲ್ಟಾ ಹೊಡೆದಿದ್ದಾರೆ.

LEAVE A REPLY

Please enter your comment!
Please enter your name here