Home Elections 2019 “ಜಯಲಲಿತಾ” ಬಯೋಪಿಕ್‌ನಲ್ಲಿ ಯಾರು ಹಚ್ಚಲಿದ್ದಾರೆ “ಅಮ್ಮ”ನ ಪಾತ್ರಕ್ಕೆ ಬಣ್ಣ..?! ಹೊರಬಿತ್ತು ಸ್ಫೋಟಕ ಕಾಲಿವುಡ್ ಸುದ್ಧಿ..?!

“ಜಯಲಲಿತಾ” ಬಯೋಪಿಕ್‌ನಲ್ಲಿ ಯಾರು ಹಚ್ಚಲಿದ್ದಾರೆ “ಅಮ್ಮ”ನ ಪಾತ್ರಕ್ಕೆ ಬಣ್ಣ..?! ಹೊರಬಿತ್ತು ಸ್ಫೋಟಕ ಕಾಲಿವುಡ್ ಸುದ್ಧಿ..?!

671
0
SHARE

ಇತ್ತೀಚಿಗೆ ಬಯೋಪಿಕ್ ಗಳ ಸರಣಿ ಹೆಚ್ಚಾಗುತ್ತಿದೆ..ಬಾಲಿವುಡ್ ಕಾಲಿವುಡ್ ಟಾಲಿವುಡ್ ನಲ್ಲಿ ಒಂದಾದ ನಂತರ ಒಂದು ಬಯೋಪಿಕ್ ಗಳು ಬರ್ತಾನೆ ಇವೆ ಬಾಕ್ಸ್ ಆಫೀಸ್ ಕೊಳ್ಳೆ ಹೊಡೀತಾನೆ ಇವೆ.. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ಯಶಸ್ವಿ ತಮಿಳು ನಾಡಿನ ಯಶಸ್ವಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿ, ಅಮ್ಮ ಎಂದೇ ಖ್ಯಾತಿಯಾಗಿದ್ದ  ದಿವಂಗತ ಜೆ ಜಯಲಲಿತ.ಜಯಲಲಿತ…

ತಮಿಳುನಾಡು ಕಂಡ ಯಶಸ್ವಿ ಮಹಿಳಾ ಮುಖ್ಯಮಂತ್ರಿ…ಐದು ಬಾರಿ ತಮಿಳುನಾಡಿನ ಗದ್ದುಗೆ ಹಿಡಿದು ಯಶಸ್ವಿಯಾದವ್ರು ಜಯಲಲಿತ.. .ಅನಾರೋಗ್ಯದಿಂದ  ಮರಣಕ್ಕೆ ತುತ್ತಾದ ತಮಿಳಿಗರ ಪ್ರೀತಿಯ, ಅಚ್ಚುಮೆಚ್ಚಿನ `ಅಮ್ಮ` ನ ಜೀವನವೇ ಒಂದು ಸಾಹಸಗಾಥೆ..ನಟಿಯಾಗಿ ತೆರೆ ಮೇಲೆ ಮಿಂಚಿ ನಂತರ ರಾಜಕೀಯಕ್ಕೆ ಧುಮುಕಿ ಯಶಸ್ಸನ್ನು ಕಂಡ ಬೆರಳಿಕೆಯರಲ್ಲ್ಲಿ ಅಮ್ಮ ಕೂಡ ಒಬ್ಬರು.. ಆಕೆ ಬದುಕಿದ್ದಾಗಲೇ  ಆಕೆಯ ಜೀವನವನ್ನ ತೆರೆ ಮೇಲೆ ತರಲು ಹಲವು ನಿರ್ದೆಶಕರು ಮುಂದೆ ಬಂದಿದ್ರು. ಆದ್ರೆ ಸಾಧ್ಯವಾಗಲಿಲ್ಲ..

ಇದೀಗ ಜಯಲಲಿತ ಜೀವನ ಕಥನವನ್ನ ತೆರೆ ಮೇಲೆ ನೋಡೋ ಅವಕಾಶ ಸಿಗೋದು ಕನ್ ಫರ್ಮ್ ಆಗಿದೆ.ಜೆ ಜಯಲಲಿತ  ಹೋರಾಟ ಹಾಗು ಛಲದಿಂದಲೇ ಮೇಲೆ ಬಂದವರು. ಆಕೆಯ ಜೀವನ ಪ್ರತಿಯೊಬ್ಬ ಮಹಿಳಾ ಮಣಿಗಳಿಗೂ ಸ್ಪೂರ್ತಿ.ಇಂತಹ ಛಲವಂತೆಯ ಜೀವನಗಾಥೆ ಈಗ ಬೆಳ್ಳಿತೆರೆ ಮೇಲೆ ಅನಾವರಣವಾಗಲು ಸಿದ್ದವಾಗುತ್ತಿದೆ..ಈ ಸುದ್ದಿ, ತಮಿಳುನಾಡಿನ ಅಮ್ಮನ ಅಭಿಮಾನಿಗಳ ಹರುಷ ಹೆಚ್ಚಿಸಿದೆ.ಅಂದ್ಹಾಗೆ ಜಯಜಲಿತ ಬಯೋಪಿಕ್ ಚಿತ್ರ ತೆರೆ ಮೇಲೆ ತರಲು ಮುಂದಾಗಿದ್ದುವಿಬ್ರಿ ಮೀಡಿಯಾ ಸ್ಟುಡಿಯೋ..

ಇನ್ನ ಚಿತ್ರವನ್ನ ತಮಿಳು ಅವಾರ್ಡ್ ವಿನ್ನಿಂಗ್ ಡೈರೆಕ್ಟರ್ ಎಲ್. ವಿಜಯ್ ನಿರ್ದೇಶನ ಮಾಡ್ತಿದ್ದಾರೆ…ಈಗಾಗಲೇ ಬಯೋಪಿಕ್ ಗಾಗಿ ಸಕಲ ಸಿದ್ದತೆ ಮಾಡಿಕೊಂಡು ಸಜ್ಜಾಗಿರುವ ಚಿತ್ರತಂಡ ಜಯಲಲಿತ ಪಾತ್ರಕ್ಕೆ ಜೀವ ತುಂಬುವ ನಟಿಗಾಗಿ ಇಷ್ಟು ದಿನ ಹುಡುಕಾಟ ನಡೆಸಿತ್ತು..ಇದೀಗ ಚಿತ್ರ ತಂಡಕ್ಕೆ ನಾಯಕಿ ಸಿಕ್ಕಿದ್ದು ಬಿ ಟೌನ್ ಡರ್ಟಿ ಗರ್ಲ್  ವಿದ್ಯಾ ಬಾಲನ್ ಜಯಲಲಿತ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ..

ಎಸ್,,ಈಗಾಗಲೇ ಚಿತ್ರತಂಡ ವಿದ್ಯಾ ಬಾಲನ್ ಸಂಪರ್ಕಿಸಿದ್ದು ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದಾರೆ.ವಿದ್ಯಾ ಬಾಲನ್ ಜಯಲಿಲತ ಬಯೋಪಿಕ್ ನಲ್ಲಿ ನಟಿಸೋದು ಬಹುತೇಕ ಖಚಿತವಾಗಿದ್ದು, ಕಲಾವಿದರ ಆಯ್ಕೆಯಲ್ಲಿ ಸದ್ಯ ಚಿತ್ರತಂಡ ಬ್ಯುಸಿಯಾಗಿದೆ… ಇನ್ನು, 2019ರಲ್ಲಿ ಫಸ್ಟ್ ಲುಕ್ ರಿಲೀಸ್ ಮಾಡಲು ವಿಬ್ರ ಮಿಡಿಯಾ ಸ್ಟುಡಿಯೋ ಡಿಸೈಡ್ ಮಾಡಿದ್ದು ಪೆಬ್ರವರಿ 24ರಂದು ಅಂದರೆ ಜಯಲಲಿತ ಹುಟ್ಟಿದ ದಿನವೇ ಫಸ್ಟ್ ಲುಕ್ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.

ಇನ್ನು, ಜಯಲಲಿತ ಬಯೋಪಿಕ್ ಗಾಗಿ ಸಕಲ ತಯಾರಿಗಳು ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ.. ಅಮ್ಮನ ಪಾತ್ರಕ್ಕೆ ಜೀವ ತುಂಬಲು ಬಿ ಟೌನ್ ಬಾಲೆಯ ಆಗಮನವಾಗಿದ್ದು, ಜಯಲಲಿತ ಜೀವನದಲ್ಲಿ ಬಂದ ಪ್ರಮುಖ ವ್ಯಕ್ತಿಗಳ ಪಾತ್ರದಲ್ಲಿ ಯಾರ್ಯಾರು ಬಣ್ಣ ಹಚ್ಚಲಿದ್ದಾರೆ, ಚಿತ್ರಕ್ಕೆ ಟೈಟಲ್ ಏನಿರುತ್ತೆ ಇದೆಲ್ಲದರ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯದಲ್ಲೆ ಹೊರಬೀಳಬೇಕಿದೆ.

LEAVE A REPLY

Please enter your comment!
Please enter your name here