Home Latest ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಕರಿಸಿದ ಹಿರಿಯ ವಯಸ್ಸಿನ ಅಜ್ಜಿ – ವಿಡಿಯೋ ವೈರಲ್

ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಕರಿಸಿದ ಹಿರಿಯ ವಯಸ್ಸಿನ ಅಜ್ಜಿ – ವಿಡಿಯೋ ವೈರಲ್

535
0
SHARE

ಕ್ರಿಕೆಟ್ ವರ್ಲ್ಡ್ ಕಪ್ ಟೂರ್ನಿಯಲ್ಲಿ ಅತ್ಯಂತ ಯಶಸ್ವಿ ಮತ್ತು ವಿಶ್ವದ ನಂಬರ್ ಒನ್ ವೇಗದ ಬೌಲರ್ ಪಟ್ಟ ಅಲಂಕರಿಸಿರುವ ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ಶೈಲಿಯನ್ನು ಒಬ್ಬ ಹಿರಿಯ ವಯಸ್ಸಿನ ಅಜ್ಜಿ ಅನುಕರಿಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದೆ.

ಶಾಂತ ಸಕ್ಕುಬಾಯಿ@himsini ಅನ್ನುವ ಟ್ವಿಟ್ಟರ್ ಅಕೌಂಟ್ ನಲ್ಲಿ ಬುಮ್ರಾ ಅವರಿಂದ ಪ್ರೇರಣೆಯಾಗಿರುವ ಮಹಿಳೆಯೊಬ್ಬರು ಬುಮ್ರಾ ಬೌಲಿಂಗ್ ಶೈಲಿಯನ್ನು ಅನುಸರಿಸುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿದ್ದರು.ಈ ಟ್ವೀಟ್ ಅನ್ನು ಬುಮ್ರಾ ಟ್ವೀಟ್ ಮಾಡಿ ಈ ವಿಡಿಯೋ ನೋಡಿ ಸಂತೋಷ ಪಟ್ಟೆ ಎಂದು ಅರ್ಥ ಬರುವ “This made my day” ಎಂದು ಟೈಪ್ ಮಾಡಿ ನಗುವ ಇಮೋಜಿ ಹಾಕಿ ಟ್ವೀಟ್ ಮಾಡಿದ್ದಾರೆ. ಬುಮ್ರಾ ಅವರ ಟ್ವೀಟ್ ಅನ್ನು 73 ಸಾವಿರ ಜನ ಲೈಕ್ ಮಾಡಿದರೆ, 5.6 ಸಾವಿರ ಜನ ರಿಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here