Home Crime ಜಾಗ ಯಾರದ್ದೋ, ಲೋನ್ ಇನ್ಯಾರದ್ದೋ..!? ಖತರ‍್ನಾಕ್ ಗ್ಯಾಂಗ್ ಲಕ್ಷ-ಲಕ್ಷ ಪಂಗನಾಮ ಹಾಕಿದ್ದು ಹೇಗೆ ಗೊತ್ತಾ..?!

ಜಾಗ ಯಾರದ್ದೋ, ಲೋನ್ ಇನ್ಯಾರದ್ದೋ..!? ಖತರ‍್ನಾಕ್ ಗ್ಯಾಂಗ್ ಲಕ್ಷ-ಲಕ್ಷ ಪಂಗನಾಮ ಹಾಕಿದ್ದು ಹೇಗೆ ಗೊತ್ತಾ..?!

351
0
SHARE

ದೂರು ದುಡ್ಡು ಮಾಡೋಕೆ ಈ ಕಾಲದಲ್ಲಿ ನಿಯತ್ತಾಗಿ ದುಡಿಯುವವರ ಸಂಖ್ಯೆಯೇ ಕಡಿಮೆಯಾಗ್ತಿದೆ. ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಅನ್ನೋ ಹಾಗೆ ಕಂಡವರ ಆಸ್ತಿ ಬ್ಯಾಂಕಿಗೆ ಅಡವಿಟ್ಟು ಲಕ್ಷ ಲಕ್ಷ ಹಣ ಪಡೇದು ಗಾಯಬ್ ಆಗಿದ್ದಾರೆ. ಬೇರೆಯವರ ಜಮೀನಿನ ಮೇಲೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಾಲ ಪಡೆದು ಬ್ಯಾಂಕಿಗೆ ಪಂಗನಾಮ ಹಾಕಿ ಎಸ್ಕೇಪ್ ಆಗಿದ್ದಾರೆ.

ಪುಕ್ಕಟ್ಟೆ ಸಿಗುತ್ತೆ ಅಂದ್ರೆ ಜನ ಏನ ಮಾಡೋದಕ್ಕೂ ಹೇಸಲ್ಲ ಅನ್ನೋದುಕ್ಕೆ ಈ ಪ್ರಕರಣವೆ ಸಾಕ್ಷಿ. ಬ್ಯಾಂಕಿಗೆ ಹೇಗೆ ಮೋಸ ಮಾಡ್ಬೇಕು ಅನ್ನೋದಕ್ಕೆ ಕಲಬುರ್ಗಿಯಲ್ಲಿ ತಲೆ ಎತ್ತಿರುವ ಈ ಟೀಂ ಎತ್ತಿದ ಕೈ ಅನ್ಸುತ್ತೆ. ಜಿಲ್ಲೆಯಲ್ಲಿ ಆಕ್ಟಿವ್ ಆಗಿರುವ ಕಿಲಾಡಿಗಳ ತಂಡವೊಂದು SBI ಬ್ಯಾಂಕ್ ಗೆ 28 ಲಕ್ಷ ರೂಪಾಯಿ ಪಂಗನಾಮ ಹಾಕಿದೆ.

ಕಲಬುರಗಿಯ ಸುಪರ್ ಮಾರ್ಕೇಟ್ ನಲ್ಲಿರುವ SBI ಬ್ಯಾಂಕ್‌ಗೆ ನಕಲಿ ದಾಖಲೆಗಳನ್ನ ನೀಡಿ 28 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ್ದಾರೆ. ಅಂದ ಹಾಗೆ ಕಲಬುರಗಿಯ ಬಡೆಪುರದಲ್ಲಿ ತನ್ನ ನಿವಾಸ ಇದೆ ಅಂತಾ ಮಹಮ್ಮದ್ ಅಲಿ, ಎಂ.ಡಿ.ಇರ್ಫಾನ್, ಸದಾಶಿವ ಎಂಬುವವರು ನಕಲಿ ದಾಖಲೆಗಳನ್ನ ನೀಡಿದ್ದಾರೆ.

ಆದ್ರೆ ಪ್ರತಿ ತಿಂಗಳು 41 ಸಾವಿರ ರೂಪಾಯಿ, 180 ಕಂತುಗಳು ಹಣ ಕಟ್ಟಬೇಕಿತ್ತು. ಕಂತು ಕಟ್ಟದೆ ಬ್ಯಾಂಕ್ ಗೆ ವಂಚನೆ ಮಾಡಿ ತಲೆಮರೆಸಿಕೊಂಡಿದ್ದಾರೆ.ಇನ್ನೂ ಬ್ಯಾಂಕ್ ಅಧಿಕಾರಿಗಳು ಬಡೇಪುರದಲ್ಲಿರುವ ಸ್ಥಳಕ್ಕೆ ಬೇಟಿ ನೀಡಿದಾಗ ಈ ಮೂವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ.

ಮೂವರು ಆರೋಪಿಗಳ ವಿರುದ್ದ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಲೋನ್ ಪಡೆದು ವಂಚಿಸಿರುವ ಆರೋಪಿಗಳಿಗಾಗಿ ಬಲೆ ಬಿಸಿದ್ದಾರೆ.ಸಾಮಾನ್ಯ ಜನರು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಆಸ್ತಿಯನ್ನ ಅಡವಿಟ್ಟು ಸಾಲ ಪಡೇಯಬೇಕಿದ್ರೆ ನೂರು ಸಹಿ ಸಾವಿರ ಪ್ರಶ್ನೆ ಮಾಡ್ತಾರೆ. ನೂರೆಂಟು ಬಾರಿ ಸ್ಥಳಕ್ಕೆ ತಮ್ಮ ಸಿಬಂದಿ ಕಳುಹಿಸಿ ಪರಿಶೀಲನೆ ಮಾಡ್ತಾರೆ.

ಆದ್ರೆ ಈ ಖದೀಮರಿಗೆ ಸಾಲ ಕೊಡುವಾಗ ಬ್ಯಾಂಕ್ ಅಧಿಕಾರಿಗಳು ಅದೆಂತಹ ಪರಿಶೀಲನೆ ಮಾಡಿದ್ರು ಅನ್ನೋ ಅನುಮಾನ ಮೂಡಲೇಬೇಕು. ಇಷ್ಟು ದಿನ ಸುಮ್ಮನೇ ಇದ್ದು 180 ಕಂತುಗಳನ್ನು ಬಾಕಿ ಇಟ್ಟುಕೊಂಡ, ಬ್ಯಾಂಕ್ ಅಧಿಕಾರಿಗಳು, ಮಹಮದ್ ಅಲಿ ಆಂಡ್ ಟೀಮ್ ನ ಮನೆ ಸೀಜ್ ಮಾಡಲು ಹೋದಾಗ ಸುಳ್ಳು ದಾಖಲೆ ಸೃಷ್ಟಿಸಿ ಹಣ ಪಡೆದಿದ್ದು ಬೆಳಕಿಗೆ ಬಂದಿದ್ದು, ಅಧಿಕಾರಿಗಳೇ ಶಾಕ್ ಆಗಿದ್ದಾರೆ.

ಈ ಕಾಲದಲ್ಲಿ ಸರಿಯಾದ ದಾಖಲೆಗಳಿದ್ದರೇ ಬ್ಯಾಂಕಿನವರು ಲೋನ್ ಕೊಡೋದು ಕಷ್ಟ… ಅಂಥದ್ರಲ್ಲಿ ಸೈಟ್ ಇಲ್ಲದವರಿಗೆ, ಸರಿಯಾಗಿ ಪರಿಶೀಲನೆ ಮಾಡದೆ ಹೇಗೆ ಸಾಲ ಕೊಟ್ರೂ ಅನ್ನೋದೆ ಬ್ಯಾಂಕ್ ನವರ ಮೇಲೆ ಅನುಮಾನ ಮೂಡುವಂತೆ ಮಾಡಿದೆ.

LEAVE A REPLY

Please enter your comment!
Please enter your name here