Home Crime ಜಾತಿ ಭಾಷೆ ಗಡಿ ದಾಟಿ ಹುಟ್ಟಿದ್ದ ಲವ್ ಸ್ಟೋರಿ..!! 20 ವರ್ಷಗಳ ಪ್ರೀತಿಗೆ ಜಸ್ಟ್ ಇಪ್ಪತ್ತೇ...

ಜಾತಿ ಭಾಷೆ ಗಡಿ ದಾಟಿ ಹುಟ್ಟಿದ್ದ ಲವ್ ಸ್ಟೋರಿ..!! 20 ವರ್ಷಗಳ ಪ್ರೀತಿಗೆ ಜಸ್ಟ್ ಇಪ್ಪತ್ತೇ ನಿಮಿಷದಲ್ಲಿ ಕಟ್ಟಿದ್ದ ಗೋರಿ..!! ಮುದ್ದಿನ ಮಡದಿ ಎದೆಗೆ 20 ಬಾರಿ ಚೂರಿ ಹಾಕಿದ್ಯಾಕೆ ಬಂಡ ಗಂಡ..?

1581
0
SHARE

ಬೆಂಗಳೂರಿನ ರಾಜಾಜಿನಗರದ ಪೊಲೀಸ್  ಠಾಣೆ ವ್ಯಾಪ್ತಿಯ ರಾಮಮಂದಿರ ಬಳಿಯ 58 ನೇ ಕ್ರಾಸ್ ಆ ಘೋರ ಘಟನೆಗೆ ಸಾಕ್ಷಿಯಾಗಿತ್ತು. ಮಧ್ಯರಾತ್ರಿ ಹೊತ್ತಲ್ಲಿ ಇಡೀ ಏರಿಯಾದ ಮಂದಿ ಅಲ್ಲಿ ಜಮಾಯಿಸಿದ್ದರು. ಸ್ಥಳಕ್ಕೆ ರಾಜಾಜಿನಗರ ಪೊಲೀಸರು ಬಂದು ಪರಶೀಲನೆ ನಡೆಸಿದ್ದರು. ಜೊತೆಗೆ ಆಂಬ್ಯುಲೆನ್ಸ್ ಕೂಡ ಅಲ್ಲಿಗೆ ಬಂದಿತ್ತು. ಅಲ್ಲಿ ನಿಂತು ಕುತೂಹಲದಿಂದ ನೋಡ್ತಿದ್ದರಿಗೆಲ್ಲಾ ಅಯ್ಯೋ ನಮ್ ಬೀದಿಯಲ್ಲಿ ಇಂತಾ ಘಟನೆ ನಡೆದೋಯ್ತಾ ಅಂತ ಅಚ್ಚರಿಯಿಂದ ಇದ್ದರು.

ಇಷ್ಟಕ್ಕೆಲ್ಲಾ ಕಾರಣ ಆಗಿದ್ದು ಆ ಮನೆಯಲ್ಲಿ ನಡೆದಿದ್ದ ಬ್ರೂಟಲ್ ಮರ್ಡರ್. ಮರ್ಡರ್ ಆಗಿದ್ದು ಮತ್ತ್ಯಾರು ಅಲ್ಲ ಹಿರೇನ್ ಮಡದಿ ಈ ಪ್ರೀತಿ.ಗೃಹಿಣಿ ಪ್ರೀತಿಯನ್ನ ಯಾರೋ ಆಗಂತುಕ ಬಂದು ಕೊಂದಿದ್ದಲ್ಲ, ಕಳ್ಳತನಕ್ಕೆ ಬಂದ ದುಷ್ಕರ್ಮಿಗಳು ಹಣಕ್ಕಾಗಿ ಕೊಂದು ಮುಗಿಸಿದಲ್ಲ. ಬದಲಾಗಿ ಆಕೆಯ ಕೈಹಿಡಿದ ಗಂಡ ಹಿರೇನ್ ನೇ ಬರ್ಬರವಾಗಿ ಕೊಂದು ಮುಗಿಸಿದ್ದ. ಅಥಾರ್ತ್.. ಪತ್ನಿಯನ್ನ ಕೊಂದಿದ್ದ ಈ ಪಾಪಿ ಪತಿರಾಯ.

ಅವೊತ್ತು ಮಧ್ಯಾಹ್ನ ಸುಮಾರು ಎರಡೂವರೆಯಿಂದ ಮೂರು ಗಂಟೆ ಸುಮಾರಿಗೆ ಪ್ರೀತಿಯನ್ನ ಕೊಂದು ಮುಗಿಸಿದ್ದ ಹಿರೇನ್ ರಾತ್ರಿಯಾಗೋವರೆಗೂ ಹೆಂಡತಿಯ ಹೆಣವನ್ನ ಮನೆಯಲ್ಲೇ ಇಟ್ಟು ಕೂತಿದ್ದ. ರಾತ್ರಿ ಹತ್ತು ಗಂಟೆ ನಂತರ ಬಿಲ್ಡಿಂಗಿನ ಬೇಸ್ ಮೆಂಟ್ ಗೆ ಹೆಣ ಸಾಗಿಸಿ ಕಾರಲ್ಲಿ ಹಾಕಿ ಎಲ್ಲಾದ್ರೂ ಬಿಸಾಡ್ಬೇಕು ಅಂತ ಹೊರಟು ನಿಂತಿದ್ದ. ಆದ್ರೆ ಪ್ರಜ್ಞೆಯಿಲ್ಲದ ಹಾಗೆ ಕಂಡ ಹೆಂಡತಿಯನ್ನ ಸಾಗಿಸ್ತಾ ಇದ್ದದ್ದನ್ನ ನೋಡಿದ ಸ್ಥಳೀಕರೊಬ್ಬರು ಏನಾಯ್ತು ಅಂತ ಕೇಳಿದ್ದರು. ಅವರ ಮಾತಿಂದ ಗಾಭರಿಗೊಂಡ ಹಿರೇನ್, ನನ್ನ ಹೆಂಡ್ತಿಗೆ ಹುಷಾರಿಲ್ಲ.

ಆಸ್ಪತ್ರೆಗೆ ಕರ್ಕೊಂಡು ಹೋಗ್ತಿದ್ದೇವೆ ಅಂತ ಸಬೂಬು ಹೇಳಿದ್ದ. ಆದ್ರೆ ಆ ಹೆಣ್ಮಗಳ ಬಟ್ಟೆ ಮೇಲೆ ರಕ್ತದ ಕಲೆಗಳು ಕಂಡಿದ್ದರಿಂದ ಅನುಮಾನಗೊಂಡು ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದರು. ಮತ್ತೊಂದು ವಿಚಾರ ಏನಂದ್ರೆ ಹಿರೇನ್ ಹೆಂಡತಿಯ ಶವವನ್ನ ಕಾರಲ್ಲಿ ಸಾಗಿಸ್ಬೇಕಾದ್ರೆ ಸಹಾಯ ಮಾಡಿದ್ದು ಅವರ ಮಗನೇ.ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿ ಬಂದಿದ್ದ ರಾಜಾಜಿನಗರ ಪೊಲೀಸರಿಗೆ ರೆಡ್ ಹ್ಯಾಂಡಾಗಿ ಹಿರೇನ್ ಸಿಕ್ಕಿಬಿದ್ದಿದ್ದ.

ಸ್ಪಾಟಲ್ಲೇ ಹಿರೇನ್ ನನ್ನ ಸೆರೆ ಹಿಡಿದ ಪೊಲೀಸರು ಜೀಪ್ ಹತ್ತಿಸಿಕೊಂಡು ಸ್ಟೇಷನ್ನಿಗೆ ಎತ್ತಾಕೊಂಡು ಹೋಗಿದ್ರು. ಅವರ ಮಗನನ್ನೂ ಕೂಡ ವಿಚಾರಣೆಗೆ ಠಾಣೆಗೆ ಕರ್ಕೊಂಡು ಹೋಗಿದ್ರು. ಅಷ್ಟಕ್ಕೂ ಗಂಡ ಹೆಂಡತಿ ನಡುವೆ ಏನ್ ನಡೀತು.. ಯಾಕಾಗಿ ಮುದ್ದಿನ ಮಡದಿಯನ್ನ ಹಿರೇನ್ ಕೊಂದು ಮುಗಿಸಿದ್ದ.. ಅಂತಾ ದ್ವೇಷವೇನು ಅಂತ.. ನೋಡಿದ್ರೆ ಆಕೆಯ ಎದೆಗೆ ಬಿದ್ದ ಚೂರಿ ಇರಿತಗಳೇ ಹೇಳ್ತಿದ್ವು ಕಾರಣವನ್ನ.. ಅದು ಒಂದಲ್ಲಾ ಎರಡಲ್ಲಾ ಬರೋಬ್ಬರಿ 20 ಚಾಕು ಇರಿತಗಳು.ಮುದ್ದಿನ ಮಡದಿಯನ್ನ ಅತಿ ಕ್ರೂರವಾಗಿ ಕೊಂದ ಹಿರೇನ್ ಆಕೆಯ ಹೆಣದ ಮುಂದೆಯೇ ಸುಮಾರು ತಾಸುಗಳ ಕಾಲ ಕೂತಿದ್ದ.

ಕತ್ತಲಾಗಿ ಎಲ್ಲರೂ ಮಲಗೋದನ್ನೇ ಕಾದು ಹೆಂಡತಿಯ ಹೆಣವನ್ನ ಸಾಗಿಸೋವಾಗ ಸಿಕ್ಕಿಬಿದ್ದಿದ್ದ. ಅಚ್ಚರಿ ಅಂದ್ರೆ ಅಮ್ಮನ ಕೊಂದ ಅಪ್ಪನಿಗೆ ಸಹಾಯ ಮಾಡಿದ್ದು ಅವರು ಹೆತ್ತ ಮಗನೇನೆ. ಯಾವಾಗ ವಿಷಯ ಗೊತ್ತಾಗಿ ಪೊಲೀಸರು ಬಂದು ನೋಡಿದ್ರೋ ಅಲ್ಲಿಗೆ ನನ್ನ ಆಟ ಇನ್ನ ನಡೆಯಲ್ಲ ಅಂತ ಗೊತ್ತಾಗಿ ಸತ್ಯ ಒಪ್ಪಿಕೊಂಡುಬಿಟ್ಟಿದ್ದ ಹಿರೇನ್. ಕೂಡಲೇ ಪಾಪಿ ಗಂಡನನ್ನ ಅರೆಸ್ಟ್ ಮಾಡಿದ್ರೆ ಮಗನನ್ನೂ ವಿಚಾರಣೆಗೆ ಅಂತ ಜೀಪ್ ಹತ್ತಿಸಿ ಸ್ಟೇಷನ್ನಿಗೆ ಕರ್ಕೊಂಡು ಹೋಗಿದ್ರು. ಅದ್ಯಾಕಾಗಿ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಹೆಂಡತಿಯನ್ನ ಹಿರೇನ್ ಕೊಂದಿದ್ಯಾಕೆ, 20 ಬಾರಿ ಚಾಕುವಿಂದ ಆಕೆಯ ಎದೆಗೆ ಚುಚ್ಚಿ ಕೊಲ್ಲುವಂತಾ ದ್ವೇಷವೇನಿತ್ತು ಅವನ ಮನಸ್ಸಲ್ಲಿ, ಆ ಬರ್ಬರ ಹತ್ಯೆಗೆ ಕಾರಣವೇನು ಅಂತ ಇನ್ನ ಸ್ವಲ್ಪ ಹೊತ್ತಲ್ಲೇ ಹೇಳ್ತೀವಿ.

ಅದಕ್ಕೂ ಮುನ್ನ ಮೊನ್ನೆ ದಿನ ಏನ್ ನಡೀತು, ಅಮ್ಮನ ಹೆಣವನ್ನ ಸಾಗಿಸೋಕೆ ಅಪ್ಪನಿಗೆ ಹೆಗಲು ಕೊಟ್ಟಿದ್ದ್ಯಾಕೆ ಅವರ ಮಗ ಅಂತ ಹೇಳ್ತೀವಿ ಕೇಳಿಸ್ಕೊಳ್ಳಿ. ಮೊನ್ನೆ ದಿನ ಅಂದ್ರೆ ಇದೇ 5 ನೇ ತಾರೀಕು ಮಧ್ಯಾಹ್ನದಿಂದಲೇ ಗಂಡ ಹೆಂಡ್ತಿ ನಡುವೆ ಜಗಳ ನಡೀತಿತ್ತು. ಬರ್ತಾ ಬರ್ತಾ ಆ ಜಗಳ ತಾರಕಕ್ಕೇರಿ ಕೂಗಾಟ ಚೀರಾಟ ಆ ಮನೆಯಿಂದ ಕೇಳಿ ಬರ್ತಿತ್ತು. ಅದನ್ನ ಕೇಳಿಸಿಕೊಂಡ ಅಕ್ಕಪಕ್ಕದ ಮನೆಯವರೆಲ್ಲಾ ಆ ಗಂಡ ಹೆಂಡ್ತಿ ನಡುವೆ ಗಲಾಟೆ ಇದ್ದಿದ್ದೇ ಅಂತ ಸುಮ್ಮನಾಗಿದ್ರು. ಆದ್ರೆ ಮನೆ ಓನರ್ ಮಾತ್ರ ಏನು ಅಂತ ಕೇಳೋದಕ್ಕೆ ಹೋದ್ರೆ ಬಾಗಿಲೇ ತೆರೆಯಲಿಲ್ಲ.ಕಾಪಾಡಿ ಕಾಪಾಡಿ ಅಂತ ಪ್ರೀತಿ ಕಿರುಚಾಡ್ತಿದ್ದಳಂತೆ. ಸ್ವಲ್ಪ ಹೊತ್ತಾದ್ಮೇಲೆ ಆಕೆಯ ಧ್ವನಿಯೇ ಇರಲಿಲ್ಲ. ಅಷ್ಟೊತ್ತಿಗಾಗಲೇ ಆಕೆಯ ಉಸಿರೇ ನಿಂತೋಗಿತ್ತು. ಗಂಡ ಹೆಂಡ್ತಿ ಜಗಳ ಈಗ ಜಗಳ ಆಡ್ತಾರೆ ಆಮೇಲೆ ಒಂದಾಗ್ತಾರೆ ಬಿಡು ಅಂತ ಸುಮ್ಮನಾಗಿದ್ರು.

ಆದ್ರೂ ಕೂಡ ಏನ್ ಗಲಾಟೆ ಅಂತ ಕೇಳೋಣ ಅಂತ ಹೋದ್ರೆ ಆಗಲೂ ಬಾಗಿಲು ಓಪನ್ ಮಾಡಲೇ ಇರಲಿಲ್ಲ. ಸಂಜೆ ಆಗ್ತಿದ್ದ ಹಾಗೆ ಕಾಲೇಜಿಗೆ ಹೋಗಿದ್ದ ಮಗ ಮನೆಗೆ ಬಂದಿದ್ದ. ಬರ್ತಿದ್ದ ಹಾಗೆ ಏನಪ್ಪಾ ನಿನ್ನ ಅಪ್ಪ ಅಮ್ಮ ಜಗಳ ಆಡ್ತಿದ್ರು ಅಂತ ಕೇಳಿದ್ದಕ್ಕೆ ಅಯ್ಯೋ ಬಿಡಿ ಅಂಕಲ್ ಅವರ ಗಲಾಟೆ ಇದ್ದಿದ್ದೇ ಅಂತೇಳಿದ್ದ. ಹಾಗಂದವನು ಮನೆಯೊಳಗೂ ಹೋಗದ ವಾಪಸ್ ಹೋಗಿದ್ದನಂತೆ. ರಾತ್ರಿ 10 ಗಂಟೆ ಆಯ್ತು ಇನ್ನೇನು ಎಲ್ಲರೂ ಮಲಗೋ ಹೊತ್ತಿಗೆ ಹಿರೇನ್ ಹಾಗೂ ಆತನ ಮಗ ಡೆಡ್ಬಾಡಿಯನ್ನ ಹೊತ್ತುಕೊಂಡು ಬೇಸ್ ಮೆಂಟ್ ಗೆ ಬಂದು ಕಾರೊಳಗೆ ಹಾಕ್ತಿದ್ದರು. ಆದ್ರೆ ಅದನ್ನ ಕಂಡ ಬಿಲ್ಡಿಂಗ್ ನವರು ಏನಾಯ್ತು ನಿನ್ನ ಹೆಂಡ್ತಿಗೆ ಅಂತ ಪ್ರಶ್ನೆ ಮಾಡಿದ್ರೆ ಅವಳಿಗೆ ಹುಷಾರಿಲ್ಲ. ಆಸ್ಪತ್ರೆಗೆ ಕರ್ಕೊಂಡು ಹೋಗ್ತಿದ್ದೇವೆ ಅಂತೇಳಿದ್ದ.

ಆಕೆಯ ಬಟ್ಟೆಗಳ ಮೇಲೆ ರಕ್ತದ ಕಲೆಗಳು ನೋಡಿ ಅನುಮಾನಗೊಂಡಿದ್ದರು. ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ರು. ಆಗ್ಲೇ ನೋಡಿ ಕೊಲೆಯಾಗಿರೋದು ಬೆಳಕಿಗೆ ಬಂದಿದ್ದು.ಅಷ್ಟಕ್ಕೂ ಹಿರೇನ್ ಯಾಕೆ ತನ್ನ ಹೆಂಡತಿಯನ್ನ ಬರ್ಬರವಾಗಿ ಕೊಂದಿದ್ದು ಅನ್ನೋದು ನಿಮ್ಮ ಪ್ರಶ್ನೆ ಅಲ್ವಾ. ಪ್ರಾಣಕಿಂತ ಹೆಚ್ಚಾಗಿ ಪ್ರೀತಿ ಮಾಡಿದ್ದ ಹೆಂಡತಿ ಪ್ರೀತಿಯ ಬಗ್ಗೆ ಇತ್ತೀಚೆಗೆ ಗಂಡ ಹಿರೇನ್ ಗೆ ಅನುಮಾನ ಹುಟ್ಟಿತ್ತಂತೆ.

ಅಂದ್ರೆ ಸಂಶಯ ಪಿಶಾಚಿ ಈತನ ಮನಸೊಳಗೆ ಬಂದು ವಕ್ಕರಿಸಿತ್ತಂತೆ. ತನಗೆ ಮೋಸ ಮಾಡಿ ಅವಳು ಬೇರೆ ಯಾವನೋ ಜೊತೆ ತಿರುಗಾಡ್ತಿದ್ದಾಳೆ ಅನ್ನೋ ಅನುಮಾನ ಹುಟ್ಟಿತ್ತಂತೆ. ಆದ್ರೆ ಅದು ಅದು ಎಷ್ಟು ಸತ್ಯಾನೋ ಅದೆಷ್ಟು ಸುಳ್ಳೋ ಗೊತ್ತಿಲ್ಲ. ಬಟ್.. ಹಿರೇನ್ ಮಾತ್ರ ಅದೇ ಸತ್ಯ ಅಂತ ತಿಳಿದು, ಹೆಂಡತಿ ಜತೆ ಪದೇ ಪದೇ ಜಗಳ ಮಾಡ್ತಿದ್ದನಂತೆ. ಗಂಡನ ಅನುಮಾನದಿಂದ ಬೇಸತ್ತಿದ್ದ ಪ್ರೀತಿಯೂ ಕೂಡ ಸಣ್ಣಪುಟ್ಟ ವಿಚಾರಗಳಿಗೂ ಜಗಳ ಮಾಡೋಕೆ ಶುರುವಿಟ್ಟುಕೊಂಡಿದ್ದಳಂತೆ. ಆ ಜಗಳ ಮೊನ್ನೆ ದಿನ ವಿಕೋಪಕ್ಕೆ ಹೋಗಿ ನಡೆದಿದ್ದೇ ಪ್ರೀತಿಯ ಬರ್ಬರ ಕೊಲೆ.

LEAVE A REPLY

Please enter your comment!
Please enter your name here