Home Cinema ಜಾತ್ರಿಯೊಳಗ ನಿಂತಾನ “ಮದಗಜ” ನೋಡ್ರೀ ಕಣ್ಣ್ ಬಿಟ್ಟು..!

ಜಾತ್ರಿಯೊಳಗ ನಿಂತಾನ “ಮದಗಜ” ನೋಡ್ರೀ ಕಣ್ಣ್ ಬಿಟ್ಟು..!

494
0
SHARE

ಯಸ್. ಮದಗಜ.. ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಸಿನಿಮಾ. ಆರಂಭಕ್ಕೂ ಮುನ್ನ ಆರಂಭದ ಬಳಿಕ ಎಲ್ಲರ ಚಿತ್ತವನ್ನ ಕದಿಯುತ್ತಾನೇ ಬಂದಿರುವ ಮದಗಜ, ಗಣರಾಜ್ಯೋತ್ಸವದ ಪ್ರಯುಕ್ತ.. ಮೋಷನ್ ಪೋಸ್ಟರ್‌ನ್ನ ಹೊತ್ತು ತಂದಿದ್ದಾನೆ. ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದ್ದಾನೆ
ಹಿಂದೆಂದೂ ಕಾಣದ ಅವತಾರದಲ್ಲಿ ನಿಮಗಿಲ್ಲಿ ಶ್ರೀಮುರಳಿ ದರ್ಶನವಾಗಲಿದೆ. ಇದಕ್ಕೆ ಸಾಕ್ಷಿ ಬಿಡುಗಡೆಯಾಗಿರುವ ಇದೇ ಮೋಷನ್ ಪೋಸ್ಟರ್.

ಯಸ್.. ಖಡಕ್ ಆಗಿರುವ.. ಮೈ ಜುಮ್ಮೆನಿಸುವ ಮೋಷನ್ ಪೋಸ್ಟರ್, ಶ್ರೀ ಮುರಳಿಯ ವೃತ್ತಿಯ ಮತ್ತೊಂದು ಬಹುದೊಡ್ಡ ಮೈಲಿಗಲ್ಲಾಗುವ ಸೂಚನೆಯನ್ನ ನೀಡುತ್ತಿದೆ. ಇನ್ನೂ.. ಮದವೇರಿಸುವ ಮದಗಜ, ಮತ್ತೊಂದು ಹಂತದ ಕೂತುಹಲಕ್ಕೂ ಕಾರಣವಾಗಿದೆ. ಅದುವೇ, ಜಾತ್ರೆಯ ವೈಭೋಗದ ವಿಚಾರದಿಂದ.

ಹೌದು.. ಮದಗಜನ ಟೀಸರ್ ಭರ್ತಿ ಒಂದೂವರೆ ನಿಮಿಷದಷ್ಟಿದೆ. ಇದೇ ಒಂದೂವರೆ ನಿಮಿಷದ ಟೀಸರ್‌ನಲ್ಲಿ ಜಾತ್ರೆಯ ದೃಶ್ಯಗಳನ್ನ ಗ್ರಾಫಿಕ್ಸ್ ಮೂಲಕ ಸೃಷ್ಠಿಸಲಾಗಿದೆ. ಇದು, ಅಭಿಮಾನಿಗಳಲ್ಲೊಂದು ಕೌತುಕವನ್ನೂ ಹುಟ್ಟುಹಾಕಿದೆ.ಮದಗಜದ ಇದೇ ಟೀಸರ್‌ನಲ್ಲಿ ಕಂಡು ಬರುವ, ಇದೇ ಜಾತ್ರೆಯ ಸನ್ನಿವೇಶವನ್ನೂ ಅದ್ಧೂರಿಯಾಗಿ ನಿರ್ಮಾಣ ಮಾಡಿ.. ಸೆರೆಬ ಹಿಡಿಯುವ ಯೋಚನೆ ಚಿತ್ರತಂಡಕ್ಕಿದೆ.

ಇದ್ರ ಮೊದಲ ಹಂತವೆನ್ನುವಂತೆ ಜಾತ್ರೆಯ ಭಾಗದ ಚಿತ್ರೀಕರಣಕ್ಕಾಗಿ ತಯಾರಿಗಳೂ ಆಗ್ಲೇ ನಡೆಯುತ್ತಿವೆ.ಇನ್ನೂ ಮದಗಜದಲ್ಲಿ ಬರೀ ನಾಯಕ, ನಾಯಕಿಯರಷ್ಟೇ ಅಲ್ಲದೇ ಚಿತ್ರದಲ್ಲಿ ಪ್ರಮುಖವಾಗಿ ನಾಯಕ, ನಾಯಕಿಯರಷ್ಟೇ ಅಲ್ಲದೆ ೫,೦೦೦ ಜೂನಿಯರ್ ಕಲಾವಿದರು, ಮತ್ತು ಒಂದು ಆನೆ ಸಹ ಅಭಿನಯಿಸುತ್ತಿದೆ. ಇದು.. ಕೂಡಾ ಸಿನಿಮಾದ ವಿಶೇಷತೆಗಳಲ್ಲೊಂದು.
ಅಂದ ಹಾಗೇ ಮದಗಜನಿಗೆ ಮಹೇಶ್ ಕುಮಾರ್ ನಿರ್ದೇಶನವಿದೆ. ಅಯೋಗ್ಯದ ಬಳಿಕ ಮಹೇಶ್ ಮಾಡ್ತಿರುವ ಎರಡನೇ ಪ್ರಯತ್ನವಿದು.

ಇನ್ನೂ ಹೆಬ್ಬುಲಿಯಂಥ ಸೂಪರ್ ಹಿಟ್ ಸಿನಿಮಾ ನಿರ್ಮಾಣ ಮಾಡಿದ್ದ ಉಮಾಪತಿ ಶ್ರೀನಿವಾಸ್ ಇದೇ ಮದಗಜದ ಹಿಂದೆ ನಿರ್ಮಾಪಕರಾಗಿ ನಿಂತಿದ್ದಾರೆ.ಅರ್ಜುನ್ ಜನ್ಯ ಸಂಗೀತ ನಿರ್ದೇಶನ ವಿರಲಿರುವ ಮದಗಜನ ಅಷ್ಟು ಹಾಡುಗಳಿಗೆ, ಬಹದ್ಧೂರ್ ಹಾಗೂ ಭರಾಟೆ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಸಾಹಿತ್ಯವಿರಲಿದೆ. ಸದ್ಯ.. ಶ್ರೀ ಮುರಳಿ ಭರಾಟೆ ಚಿತ್ರವನ್ನ ಮುಗಿಸುವ ಹಂತದಲ್ಲಿದ್ದಾರೆ.

ಭರಾಟೆ ಮುಗಿದ ಬಳಿಕವೇ ಮದಗಜನ ಚಿತ್ರೀಕರಣ ಆರಂಭವಾಗಲಿದೆ. ಇದ್ರ ನಡುವೆ ನಾಯಕಿಯ ಹುಡುಕಾಟವನ್ನ ಚಿತ್ರತಂಡ ನಡೆಸಿದೆ. ಅದೇನೆ ಇರ‍್ಲಿ ಸದ್ಯ ಮದಗಜನ ಅಬ್ಬರಕ್ಕೆ ಬುನಾದಿ ಹಾಕಿಯಾಗಿದೆ. ಇನ್ನೇನ್ ಇದ್ರೂ ಹಬ್ಬ ನಡೆಯಬೇಕು. ಅಭಿಮಾನಿಗಳು ಆ ಹಬ್ಬ ಕಣ್ತುಂಬಿಕೊಳ್ಳುವ ದಿನ ಬರ‍್ಬೇಕು ಅಷ್ಟೇ. ಅಲ್ಲಿವರೆಗೂ ಇದೇ ಮೋಶನ್ ಪೋಸ್ಟರ್ ನೋಡಿ ಉತ್ಸಾಹ, ಹುಮ್ಮಸ್ಸನ್ನ ಕಾಪಾಡಿಕೊಂಡಿ ಇರಬೇಕಾದ ಜವಾಬ್ಧಾರಿ ನಿಮ್ಮದು.

LEAVE A REPLY

Please enter your comment!
Please enter your name here