Home District ಜಿಲ್ಲಾಧಿಕಾರಿ ಸಭೆಗೆ ತಂದ ಬಿಸ್ಕೆಟ್‌ನಲ್ಲಿ ಸಿಕ್ಕ ಕಬ್ಬಿಣದ ಮೊಳೆ..! ಮೊಳೆ ಸಿಕ್ಕಿದ್ದರಿಂದ ಬೇಕರಿಯನ್ನು ಸೀಜ್ ಮಾಡಿಸಿದ...

ಜಿಲ್ಲಾಧಿಕಾರಿ ಸಭೆಗೆ ತಂದ ಬಿಸ್ಕೆಟ್‌ನಲ್ಲಿ ಸಿಕ್ಕ ಕಬ್ಬಿಣದ ಮೊಳೆ..! ಮೊಳೆ ಸಿಕ್ಕಿದ್ದರಿಂದ ಬೇಕರಿಯನ್ನು ಸೀಜ್ ಮಾಡಿಸಿದ ಜಿಲ್ಲಾಧಿಕಾರಿ..!

1854
0
SHARE

ಕಲ್ಪತರು ನಗರಿ ತುಮಕೂರಿನಲ್ಲಿ ತಯರಾಗೋ ಹಾಗೂ ಮಾರಾಟ ಮಾಡೋ ಬೇಕರಿ ತಿಂಡಿ ತಿನಿಸುಗಳನ್ನ ತಿನ್ನೋ ಮುನ್ನ ಸ್ವಲ್ಪ ಎಚ್ಚರದಿಂದಿರಿ..ಯಾಕಂದ್ರೆ ಯಾವಾಗ ಸೀಟ್ಸ್ ನಲ್ಲಿ ಕಬ್ಬಿಣ ಸಿಗುತ್ತೋ ಹೇಳೋಕಾಗಲ್ಲ.ಇದೇ ತಿಂಗಳು 30ರಿಂದ ಮೂರು ದಿನಗಳ ಕಾಲ ತುಮಕೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಯುವಜನೋತ್ಸವದ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು..

ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯುತ್ತಿತ್ತು..ಈ ಮಧ್ಯೆ ಸಭೆಯಲ್ಲಿ ಭಾಗವಹಿಸಿದವರಿಗೆ ಬಿಸ್ಕೆಟ್, ಕೇಕ್, ಚಿಪ್ಸ್ ಕೊಡಲಾಗಿತ್ತು..ಜಿಲ್ಲಾಧಿಕಾರಿ ಕೈಗೆ ಸಿಕ್ಕಿದ್ದ ಬಿಸ್ಕೆಟ್ ಒಂದು ಇಡೀ ಸಭೆಯನ್ನೇ ದಂಗುಬಡಿಸಿತ್ತು..ಡಿಸಿ ಬಾಯಲ್ಲಿ ಚಪ್ಪರಿಸಬೇಕಿದ್ದ ಬಿಸ್ಕೆಟ್‌ನ್ನು ಪರೀಕ್ಷೆಗೆಂದು ಲ್ಯಾಬ್ ಗೆ ಕಳುಹಿಸುವ ಪ್ರಸಂಗ ಉಂಟಾಯಿತು.ಸಭೆಯಲ್ಲಿ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಬಿಸ್ಕೆಟ್ ತಿನ್ನಲು ಮುಂದಾದಾಗ ಅದರಲ್ಲಿ ಕಬ್ಬಿಣದ ಮೊಳೆ ಕಂಡು ಬಂದಿದೆ.

ಸ್ಕ್ರೂ ಆಕಾರದ ಕಬ್ಬಿಣದ ತುಂಡು ಕಂಡು ಜಿಲ್ಲಾಧಿಕಾರಿ ಗಾಬರಿಯಾದರು. ಅಲ್ಲದೆ ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ, ಯಾವ ಬೇಕರಿಯಿಂದ ಬಿಸ್ಕೆಟ್ ಮತ್ತು ಕೇಕ್ ತಂದದ್ದು ಎಂದು ವಿಚಾರಿಸಿದ್ರು. ಮಹಾತ್ಮ ಗಾಂಧಿ ಕ್ರೀಡಾಂಗಣ ಬಳಿಯ ಮಯೂರ ಬೇಕರಿಯಲ್ಲಿ ತಂದಿರುವುದಾಗಿ ಸಿಬ್ಬಂದಿ ತಿಳಿಸಿದ್ದಾರೆ.

ತಡಮಾಡದ ಜಿಲ್ಲಾಧಿಕಾರಿ ರಾಕೇಶ್ ತಕ್ಷಣ ಬೇಕರಿ ಸೀಜ್ ಮಾಡುವಂತೆ ಆದೇಶಿಸಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಉಪ ವಿಭಾಗಾಧಿಕಾರಿ ಶಿವಕುಮಾರ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಅಲ್ಲದೆ ಬೇಕರಿ ಮಾಲೀಕನನ್ನು ತರಾಟೆಗೆ ತೆಗೆದುಕೊಂಡು. ಬೇಕರಿಯಲ್ಲಿದ್ದ ಕೆಲ ಸಾಮಗ್ರಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ನಂತರ ಜಿಲ್ಲಾಧಿಕಾರಿ ಸೂಚನೆಯಂತೆ ಬೇಕರಿಗೆ ಬೀಗ ಹಾಕಿದ್ದಾರೆ. ಇಷ್ಟೇ ಅಲ್ಲದೇ ತುಮಕೂರಿನಲ್ಲಿ ಒಟ್ಟು 2000 ಸಾವಿರ ಬೇಕರಿಗಳಿದ್ದು ಬಹುತೇಕ ಬೇಕರಿಗಳಲ್ಲಿ ಶುಚಿತ್ವವೇ ಇಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಒಟ್ಟಾರೆ ದೊಡ್ಡ ದೊಡ್ಡ ಬೇಕರಿಗಳ ಮುಂದೆ ಸಾಲುಗಟ್ಟಿ ನಿಂತು ಕೇಕ್, ಸ್ವೀಟ್ಸ್, ಬಿಸ್ಕೇಟ್ಸ್ , ಇತರೆ ತಿಂಡಿಗಳನ್ನ ತಿನ್ನೋ ಮಂದಿ ಇನ್ನಾದ್ರೂ ಎಚ್ಚರಿಕೆ ವಹಿಸೋ ಅವಶ್ಯಕತೆಯಿದೆ. ಸಾರ್ವಜನಿಕರಿಗೆ ಈ ರೀತಿ ಆದಾಗ ಯಾವ ರೀತಿ ಎಚ್ಚರಿಕೆ ತೆಗೆದುಕೊಳ್ತಾರೆ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here