Home District ಜೆಡಿಎಸ್ ಅಭ್ಯರ್ಥಿಗೆ ನಾಮಪತ್ರ ಸಲ್ಲಿಸುವ ವೇಳೆ ಹಾಲಿನ ಅಭಿಷೇಕ ಮಾಡಿ ಅಭಿಮಾನ ಮೆರೆದ ಅಭಿಮಾನಿಗಳು…

ಜೆಡಿಎಸ್ ಅಭ್ಯರ್ಥಿಗೆ ನಾಮಪತ್ರ ಸಲ್ಲಿಸುವ ವೇಳೆ ಹಾಲಿನ ಅಭಿಷೇಕ ಮಾಡಿ ಅಭಿಮಾನ ಮೆರೆದ ಅಭಿಮಾನಿಗಳು…

2630
0
SHARE

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಮುನೇಗೌಡ ನಾಮಪತ್ರ ಸಲ್ಲಿಸಿದ್ರು. ನಾಮಪತ್ರ ಸಲ್ಲಿಸುವ ಮುನ್ನ ನಗರ ಹೊರವಲದಯ ಬಯಲು ಬಸವಣ್ಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು…

ಅನಂತರ ಬಯಲು ಬಸವಣ್ಣ ದೇವಸ್ಥಾನದಿಂದ ತಾಲೂಕು ಕಛೇರಿ ವರೆಗೂ ತೆರೆದ ವಾಹನದಲ್ಲಿ ಅಭ್ಯರ್ಥಿ ಮೆರವಣಿಗೆ ಮಾಡಲಾಯಿತು. ಭಾರಿ ಸಂಖ್ಯೆಯಲ್ಲಿ ಸೇರಿದ ಜೆಡಿಎಸ್ ಕಾರ್ಯಕರ್ತರು ಮುನೇಗೌಡರವರಿಗೆ ಜಯಾಕಾರ ಕೂಗಿದ್ರು.

ಇದೇ ವೇಳೆ ತಾಲೂಕು ಕಛೇರಿ ವೃತ್ತದಲ್ಲಿ ಮುನೇಗೌಡರಿಗೆ ಹಾಲಿನ ಅಭಿಷೇಕ ಮಾಡಲಾಯಿತು. ಹಾಲಿನ ಕ್ಯಾನ್ ನಿಂದ ಮುನೇಗೌಡರ ಮೇಲೆ ಸುರಿಯುವ ಮೂಲಕ ಅಭಿಷೇಕ ಮಾಡಲಾಯಿತು. ಅನಂತರ ಒದ್ದೆ ಬಟ್ಟೆಯಲ್ಲಿಯೇ ನಾಮಪತ್ರವನ್ನ ಚುನಾವಣಾಧಿಕಾರಿ ನಾಗೇಂದ್ರ ಪ್ರಸಾದ್ ರವರಿಗೆ ಸಲ್ಲಿಸಲಾಯಿತು.

ತಾಲೂಕಿಗೆ ನೀರು ಕೊಟ್ಟ ಕಾರಣಕ್ಕೆ ಕೃತಜ್ಞೆಯನ್ನು ತೋರಿಸುವ ಕಾರಣಕ್ಕೆ ಹಾಲಿನ ಅಭಿಷೇಕ ನಡೆಸಿದ್ದಾರೆ. ಅವರ ಅಭಿಮಾನಕ್ಕೆ ನಾನು ಕೃತಜ್ಞರೆಂದು ಹೇಳಿದ್ರು ಮುನೇಗೌಡ.

ಕಳೆದ ವಿಧಾನಸಭಾ ಚುನಾವಣೆಯಲ್ಲು ನಾಮಪತ್ರ ಸಲ್ಲಿಸುವ ಮುನ್ನ ಹಾಲಿನ ಅಭಿಷೇಕ ಮಾಡಲಾಯಿತು. ಇದೇ ವೇಳೆ ಮಾತನಾಡಿದ ಮುನೇಗೌಡ ಜೆಡಿಎಸ್ ಪಕ್ಷ ರೈತರ ಪಕ್ಷವಾಗಿದ್ದು.

ರೈತರ ಸರ್ಕಾರ ಬರಬೇಕಾದ್ರೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರ್ಬೇಕು. ಅದರಿಂದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ನನ್ನನು ಗೆಲ್ಲಿಸುವಂತೆ ಜನರಲ್ಲಿ ಮನವಿ ಮಾಡಿಕೊಂಡರು.

LEAVE A REPLY

Please enter your comment!
Please enter your name here