Home District ಜೆಡಿಎಸ್–ಕಾಂಗ್ರೆಸ್ ಮೈತ್ರಿಯಿಂದ ಯಾರಿಗೆ ಲಾಭ ಯಾರಿಗೆ ನಷ್ಟ.!? ಹೆಚ್ಚು ಸ್ಥಾನಗೆಲ್ಲಲು ಅಮಿತ್ ಷಾ ಬಿಜೆಪಿಗರಿಗೆ ಕೊಡುತ್ತಿದ್ದಾರೆ...

ಜೆಡಿಎಸ್–ಕಾಂಗ್ರೆಸ್ ಮೈತ್ರಿಯಿಂದ ಯಾರಿಗೆ ಲಾಭ ಯಾರಿಗೆ ನಷ್ಟ.!? ಹೆಚ್ಚು ಸ್ಥಾನಗೆಲ್ಲಲು ಅಮಿತ್ ಷಾ ಬಿಜೆಪಿಗರಿಗೆ ಕೊಡುತ್ತಿದ್ದಾರೆ ಟಾಸ್ಕ್.!?

583
0
SHARE

ಯುದ್ಧ ಬಂದಿತು ಸಿದ್ಧರಾಗಿ, ಮತ್ತೊಮ್ಮೆ ಮೋದಿಯನ್ನ ಅಧಿಕಾರಕ್ಕೆ ತನ್ನಿ.ಇದ ಸದ್ಯ ಬಿಜೆಪಿ ಪಾಳೆಯದಲ್ಲಿ ಕೇಳಿ ಬರುತ್ತಿರೋ ಜಯಘೋಷ. 5 ವರ್ಷ ಯಶಸ್ವಿಯಾಗಿ ಅಧಿಕಾರವಧಿ ಪೂರೈಸಿರೋ ಮೋದಿ ಸರ್ಕಾರ ಮತ್ತೊಮ್ಮೆ ದೆಹಲಿ ಗದ್ದುಗೆ ಏರಿ ಕುಳಿತುಕೊಳ್ಳೋದಕ್ಕೆ ಭರ್ಜರಿ ಪ್ಲಾನ್ ನಡೆಸುತ್ತಿದೆ. ವಿರೋದಿಗಳು ಏನೇ ತಂತ್ರ, ಕುತಂತ್ರ ಮಾಡಿದ್ರು, ಅದಕ್ಕೆ ಪ್ರತಿತಂತ್ರ ಹೆಣಿಯಲು ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಷಾ ಸಿದ್ಧವಾಗಿದ್ದಾರೆ, ಆ ನಿಟ್ಟಿನಲ್ಲಿ ಬಿಜೆಪಿಗರಿಗೆ ಟಾಸ್ಕ್ ಗಳನ್ನ ಕೊಡುತ್ತಿದ್ದಾರೆ. ಷಾ ಕೊಟ್ಟ ಟಾಸ್ಕ್ ಪೂರೈಸಿದ್ರೆ ಈ ಎಲೆಕ್ಷನ್ ನಲ್ಲಿ ಕೇಸರಿ ಪಡೆಗೆ ಜಯ ಕಟ್ಟಿಟ್ಟ ಬುತ್ತಿ ಅನ್ನೋದು ಷಾ ಪ್ಲಾನ್, ಆ ಕಾರಣಕ್ಕೆ ಚುನಾವಣೆಗೆ ಇನ್ನು ಕೆಲವು ತಿಂಗಳು ಬಾಕಿ ಇರುವಾಗಲಿ ಪುಕಾರೋ ದಿಲ್ ಸೇ ಮೋದಿ ಪಿರ್ ಸೇ ಅಂತಿದ್ದಾರೆ…..

ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲೇ 20 ರಿಂದ 25 ಸ್ಥಾನ ಗೆಲ್ಲುವ ಟಾರ್ಗೆಟ್‌ ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌, ರಾಜ್ಯ ನಾಯಕರಿಗೆ 23 ಅಂಶಗಳ ಕಾರ್ಯಯೋಜನೆ ನೀಡಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಗೆ 19 ಅಂಶಗಳ ಕಾರ್ಯಯೋಜನೆ ನೀಡಿದ್ದ ಅಮಿತ್‌ ಶಾ, ಇದೀಗ ಇನ್ನೂ ನಾಲ್ಕು ಅಂಶ ಸೇರಿಸಿದ್ದಾರೆ. ಚುನಾವಣೆಗೆ ಸಿದ್ಧತೆ ಆರಂಭಿಸುವಂತೆ ಹೇಳಿರೋ ಷಾ, ಪ್ರತಿ ಲೋಕಸಭೆ ಕ್ಷೇತ್ರಕ್ಕೆ ಶಾಸಕರು, ರಾಜ್ಯ ಪದಾಧಿಕಾರಿಗಳು, ಕೋರ್‌ ಕಮಿಟಿ ಸದಸ್ಯರನ್ನು ಉಸ್ತುವಾರಿಯಾಗಿ ನೇಮಿಸಲು ನಿರ್ದೇಶಿಸಿದ್ದಾರೆ .ಪ್ರಮುಖವಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಂಸದರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿನ ವೈಫ‌ಲ್ಯಗಳ ಚಾರ್ಚ್‌ಶೀಟ್‌ ಸಿದ್ಧಪಡಿಸುವುದು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ವೈಫ‌ಲ್ಯ ಅಂಕಿ-ಅಂಶಗಳ ಸಮೇತ ಜನರ ಮುಂದಿಡುವುದು. ಸಾಮಾಜಿಕ ಜಾಲತಾಣಗಳನ್ನ ಪರಿಣಾಮಕಾರಿಯಾಗಿ ಬಳಕೆ ಮಾಡುವ ನಿಟ್ಟಿನಲ್ಲಿ ಕಾರ್ಯಾಗಾರ ಮಾಡುವುದು.  ಸಾಮಾಜಿಕ ಜಾಲತಾಣ ಮೂಲಕ ಬಿಜೆಪಿ ಪ್ರಣಾಳಿಕೆ ಹಾಗೂ ಕೇಂದ್ರ ಸರ್ಕಾರ ಜಾರಿಗೊಳಿಸಿದ ಕಾರ್ಯಕ್ರಮ ಹಾಗೂ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಸಂಬಂಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.  ಅಲ್ಲದೆ ವಾಟ್ಸ್‌ ಅಪ್‌ ಗ್ರೂಪ್‌ಗಳ ರಚನೆ, ಚುನಾವಣೆ ವಿಸ್ತಾರಕರ ಜತೆ ವಿಚಾರ ವಿನಿಮಯ ಮಾಡಿಕೊಳ್ಳುವುದು. ಪೇಜ್‌ ಪ್ರಮುಖರಿಗೆ ಹೆಚ್ಚಿನ ಹೊಣೆಗಾರಿಕೆ ವಹಿಸುವುದು.ಹೀಗೆ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯನ್ನ ಹೆಚ್ಚಾಗಿ ಬಿಂಬಿಸುವ ಟಾಸ್ಕ್ ನೀಡವಾಗಿದೆ. ಅಷ್ಟೆ ಅಲ್ಲ ಭೂತ್ ಮಟ್ಟದಲ್ಲಿ ಮತ್ತೆ ಪಕ್ಷವನ್ನ ಇನ್ನಷ್ಟು ಬಲರವ್ಧನೆ ಮಾಡುವ ನಿಟ್ಟಿನಲ್ಲೂ ಅಮಿತಾ ಷಾ ಸೂಚನೆಯನ್ನ ನೀಡಿದ್ದಾರೆ. ಅದನ್ನ ನೋಡೋದ್ ಆದ್ರೆ…

ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 8 ರಿಂದ 10 ಪ್ರಮುಖರ ಕೋರ್‌ ಕಮಿಟಿ ರಚನೆ ಮಾಡುವುದು. ಮತಗಟ್ಟೆಯ ಪ್ರತಿ ಬೂತ್‌ ಅಧ್ಯಕ್ಷರಿಗೆ ಹೆಚ್ಚಿನ ಹೊಣೆಗಾರಿಕೆ ನೀಡುವುದು. ನವಶಕ್ತಿ ಸಮಾವೇಶ ಕಡ್ಡಾಯವಾಗಿ ಆಯೋಜಿಸುವುದು. ಉಸ್ತುವಾರಿಗಳು ವಾರದಲ್ಲಿ ವಾಸ್ತವ್ಯ ಸಹಿತ ಎರಡು ದಿನ ಪ್ರವಾಸ, ಪ್ರತಿ ಮತಗಟ್ಟೆಗೆ ಶಕ್ತಿಕೇಂದ್ರದ ಪ್ರಮುಖರ ನೇಮಕ, ನಿರಂತರ ಸಭೆ, ಶಕ್ತಿ ಕೇಂದ್ರದ ಪ್ರಮುಖರು ವಾರದಲ್ಲಿ ಎರಡು ದಿನ ಕಡ್ಡಾಯ ಪ್ರವಾಸ, ಕಳೆದ ಎರಡು ಲೋಕಸಭೆ ಚುನಾವಣೆ ಆಧಾರದ ಮೇಲೆ ಮತಗಟ್ಟೆಗಳನ್ನು ಎಬಿಸಿ ಎಂದು ವರ್ಗೀಕರಣ ಮಾಡುವುದು. ಬಿಜೆಪಿ ಮತಗಳಿಕೆ ಕಡಿಮೆ ಇದ್ದ ಕಡೆ ಮತದಾರರ ಮನವೊಲಿಕೆಗೆ ಕಾರ್ಯಕ್ರಮ ರೂಪಿಸುವುದು.

ಪ್ರತಿ ಮತಗಟ್ಟೆಯಲ್ಲಿ ಎಸ್‌ಸಿ-ಎಸ್‌ಟಿ ಓಬಿಸಿ ಸಮುದಾಯದ 10 ಕಾರ್ಯಕರ್ತರ ಸೇರ್ಪಡೆ, ಆಯಾ ಮತಗಟ್ಟೆ ವ್ಯಾಪ್ತಿಯಲ್ಲಿರಬಹುದಾದ ಸಹಕಾರ ಸಂಘದ ನಿರ್ದೇಶಕರು ಹಾಗೂ ಸ್ವ ಸಹಾಯ ಸಂಘಗಳ ಸದಸ್ಯರ ಪಟ್ಟಿ ಸಿದ್ಧಪಡಿಸುವುದು. ಮಂದಿರ, ಮಠ,ಸಾಧು-ಸಂತರ ಮಾಹಿತಿ ಸಂಗ್ರಹಿಸುವುದು. ಪಂಚಾಯಿತಿ ಚುನಾವಣೆಯಲ್ಲಿ ಸೋತವರು ಹಾಗೂ ಬೇರೆ ಪಕ್ಷಗಳಲ್ಲಿರುವ ವೈಯಕ್ತಿಕ ಸಾಮರ್ಥ್ಯ ಇರುವವರನ್ನು ಗುರುತಿಸಿ ಬಿಜೆಪಿಗೆ ಸೇರಿಸಿಕೊಳ್ಳುವುದು. ಮತಗಟ್ಟೆ ವ್ಯಾಪ್ತಿಯಲ್ಲಿ ಸ್ಮಾರ್ಟ್‌ ಫೋನ್‌ ಹೊಂದಿರುವವರ ಪಟ್ಟಿ, ಮೋಟಾರ್‌ ಬೈಕ್‌ ಇರುವವರ ಪಟ್ಟಿ ಸಿದ್ಧಪಡಿಸುವುದು. ಪ್ರತಿ ಮತಗಟ್ಟೆಯಲ್ಲಿ “ಈ ಬಾರಿಯೂ ಮತ್ತೆ ಬಿಜೆಪಿ’ ಎಂಬ ಘೋಷಣೆಯುಳ್ಳ ಗೋಡೆ ಬರಹ ಬರೆಯುವುದು.

ಕರಾವಳಿ ಭಾಗದಲ್ಲಿ ಜೆಡಿಎಸ್‌ಗೆ ಶಕ್ತಿ ಇಲ್ಲ. ಆದರೆ, ಮಲೆನಾಡು ಮತ್ತು ಉತ್ತರ ಕರ್ನಾಟಕದಲ್ಲಿ ಸ್ವಲ್ಪ ಮಟ್ಟಿನ ಶಕ್ತಿ ಇದೆ. ಈ ಹಿಂದಿನ ಚುನಾವಣೆಗಳಲ್ಲಿ ಅದು ಸ್ಪಷ್ಟವಾಗಿದ್ದು, ಅನೇಕ ಕಡೆ ಜೆಡಿಎಸ್‌ ಗೆದ್ದಿತ್ತು. ಹೀಗಾಗಿ ಆ ಭಾಗದಲ್ಲಿ ಪಕ್ಷವನ್ನು ಬಲಪಡಿಸಬೇಕಾದರೆ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದು ಸೂಕ್ತ ಎನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಜನ ಬೆಂಬಲಿಸುತ್ತಾರೆ ಎಂಬುದು ಅನೇಕ ಸಂದರ್ಭದಲ್ಲಿ ಸಾಬೀತಾಗಿದೆ. ಹೀಗಾಗಿ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲದ ಲೋಕಸಭೆ ಚುನಾವಣೆಯಲ್ಲಿ ಏಕೆ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳಬೇಕು? ಅದರ ಬದಲು ಪ್ರತ್ಯೇಕವಾಗಿ ಚುನಾವಣೆ ಎದುರಿಸಿ ಪಕ್ಷವನ್ನು ಬಲಪಡಿಸೋಣ. ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಅನುಕೂಲವಾಗುತ್ತದೆ, ಅನ್ನೋ ಜೆಡಿಎಸ್ ನಾಯತಕ ಲೆಕ್ಕಾಚಾರ….

ಕಾಂಗ್ರೆಸ್‌ ಹಾಲಿ ಸಂಸದರಿರೋ  ಕ್ಷೇತ್ರಗಳನ್ನು ಬಿಟ್ಟು ಕೊಡಬಾರದು ಎಂಬ ಒತ್ತಡ ಸ್ಥಳೀಯ ಮಟ್ಟದಲ್ಲಿ ಹೆಚ್ಚಾಗಿದೆ. ಮಂಡ್ಯ ಹಾಗೂ ಹಾಸನದಲ್ಲಿ ಜೆಡಿಎಸ್‌ಗೆ ಕಾಂಗ್ರೆಸ್‌ ಪ್ರಬಲ ಸ್ಪರ್ಧಿಯಾಗಿದೆ. ಆ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡುವುದರಿಂದ ತಳ ಮಟ್ಟದಲ್ಲಿನ ಕಾಂಗ್ರೆಸ್‌ ಕಾರ್ಯಕರ್ತರು ಪಕ್ಷದ ಮೇಲಿನ ವಿಶ್ವಾಸ ಕಳೆದುಕೊಳ್ಳುವ ಆತಂಕ ಇದೆ.  ಅಲ್ಲದೆ ಬೇರೆ ಪಕ್ಷದ ಕಡೆಗೆ ಮುಖ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈಗಾಗಲೇ ಹಾಸನದಲ್ಲಿ ಬಿಜೆಪಿ ತನ್ನ ಖಾತೆ ತೆರೆದಿದ್ದು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಬಿಜೆಪಿಯೇ ನೇರ ಸ್ಪರ್ಧಿಯಾಗಿರುವುದರಿಂದ ಜೆಡಿಎಸ್‌ ವಿರೋಧಿಸುವ ಕಾಂಗ್ರೆಸ್‌ ಮತಗಳು ಬಿಜೆಪಿಗೆ ಹೋಗುವ ಆತಂಕ ಇದೆ.

ಇದ್ರಿಂದ ಅನಾಯಾಸವಾಗಿ ಈ ಭಾಗದಲ್ಲಿ ಬಿಜೆಪಿಗೆ ಬಾಗಿಲು ತೆರೆದುಕೊಟ್ಟಂತಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.  ರಾಷ್ಟ್ರ ಮಟ್ಟದ ಲೆಕ್ಕಾಚಾರ ಹಾಕುವ ಭರದಲ್ಲಿ ಕಾಂಗ್ರೆಸ್‌ ತನ್ನ ಬೇರುಗಳನ್ನು ತಾನೇ ಸಡಿಲು ಮಾಡಿಕೊಳ್ಳುತ್ತಿದೆ. ಈ ಮೂಲಕ ಜೆಡಿಎಸ್‌ ಶಕ್ತಿ ವೃದ್ಧಿಗೂ ಪರೋಕ್ಷವಾಗಿ ಕಾರಣವಾಗುತ್ತಿದೆ ಎಂಬ  ಲೆಕ್ಕಾಚಾರ ರಾಜಕೀಯ ಪಂಡಿತರು ಹಾಕುತ್ತಿದ್ದಾರೆ.ಒಟ್ಟಾರೆ ಜೆಡಿಎಸ್ ಬಾಲ ಹಿಡಿದು ನೇತಾಡುತ್ತಿರೋ ಕಾಂಗ್ರೆಸ್ ಕ್ಷೇತ್ರ ಹೊಂದಾಣಿಕೆ ಮಾಡಿಕೊಂಡರೆ ಇನ್ನು ಕೆಳಗೆ ಜಾರುವ ಅಪಾಯವಿದೆ, ಆ ಕಾರಣಕ್ಕೋ ಏನೋ ಲೋಕಸಭೆಯಲ್ಲಿ ಹೊಂದಾಣಿಕೆ ಬೇಡ ಅಂತಾ ಹೇಳುತ್ತಿದ್ದಾರೆ. ಈ ದೋಸ್ತಿಯ ಮೈತ್ರಿಯಲ್ಲಿ ಯಾರಿಗೆ ಲಾಭವಾಗುತ್ತೆ ಯಾರಿಗೆ ನಷ್ಟವಾಗುತ್ತೆ ಅನ್ನೋ ಲೆಕ್ಕಾಚಾರ ಜೋರಾಗಿದೆ, ಈ ಲೆಕ್ಕಚಾರದಲ್ಲಿ ಹೆಚ್ಚಿನ ಲಾಭ ಯಾರು ಪಡೆಯಲಿದ್ದಾರೆ ಅನ್ನೋದು ಮುಂದಿನ ಚುನಾವಣೆಯಲ್ಲಿ ಗೊತ್ತಾಗಲಿದೆ. ಅಲ್ಲಿವರೆಗೂ ವೆಯ್ಟ್ ಅಂಡ್ ವಾಚ್…

LEAVE A REPLY

Please enter your comment!
Please enter your name here