Home District ಜೆಡಿಎಸ್ ಗೆ ಓಟು ಹಾಕೋದು ಹೇಗೆ ಎಂದ ಕೈ ಮುಖಂಡ..! ಕಾರ್ಯಕರ್ತನ ಪ್ರಶ್ನೆಗೆ ಮುಖಂಡರಲ್ಲಿ ಮುಜುಗರ..

ಜೆಡಿಎಸ್ ಗೆ ಓಟು ಹಾಕೋದು ಹೇಗೆ ಎಂದ ಕೈ ಮುಖಂಡ..! ಕಾರ್ಯಕರ್ತನ ಪ್ರಶ್ನೆಗೆ ಮುಖಂಡರಲ್ಲಿ ಮುಜುಗರ..

2181
0
SHARE

ತೀವ್ರ ಕುತೂಹಲ ಕೆರಳಿಸಿರೋ ಹಾಸನ ಕ್ಷೇತ್ರದಲ್ಲಿ ಮೈತ್ರಿ ಪಕ್ಷದಿಂದ ಜಂಟಿ ಚುನಾವಣಾ ಪ್ರಚಾರ ನಡೆಯುತ್ತಿದೆ. ಪ್ರಚಾರದಲ್ಲಿ ಕಾಂಗ್ರೆಸ್ ಜೆಡಿಎಸ್ ನಾಯಕರು ಭಾಗಿಯಾಗಿದ್ದಾರೆ. ಇತ್ತ ಕೈ ಕಾರ್ಯಕರ್ತರ ಸಭೆಯಲ್ಲಿ ನಮಗೆ ಜೆಡಿಎಸ್ ಬದ್ಧ ವೈರಿ ಹೇಗೆ ಮತಹಾಕೋದು ಎಂದು ಪ್ರಶ್ನೆ ಕೇಳಿಬಂದಿದೆ. ಈ ವೇಳೆ ಗದ್ದಲವೂ ಆಗಿದೆ.

ಲೋಕಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಸಚಿವ ರೇವಣ್ಣ ಹಾಗೂ ಹಾಸನದ ಜೆಡಿಎಸ್ ಶಾಸಕರು, ಇದಕ್ಕಾಗಿ ಕಾಂಗ್ರೆಸ್ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮುಂದುವರಿಸಿದ್ದಾರೆ. ಅರಸೀಕೆರೆಯಲ್ಲಿ ಕಾಂಗ್ರೆಸ್ ನವರು ಆಯೋಜಿಸಿದ್ದ ಸಭೆಯಲ್ಲಿ ಸಚಿವ ಹೆಚ್.ಡಿ.ರೇವಣ್ಣ, ಸ್ಥಳೀಯ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಮೊದಲಾದವರು ಬೆಂಬಲ ಕೋರಿದರು.

ಸಭೆಯ ಆರಂಭದಲ್ಲಿ ಕಾರ್ಯಕರ್ತರು-ಮುಖಂಡರಿಗೆ ಅಭಿಪ್ರಾಯ ಹೇಳಲು ಅವಕಾಶ ಮಾಡಿಕೊಡಲಾಗಿತ್ತು. ವೇಳೆ ಗಂಗಾಧರ್ ಎಂಬಾತ ಜಿಲ್ಲೆಯಲ್ಲಿ ಮೈತ್ರಿ ಧರ್ಮ ಪಾಲನೆಯಾಗುತ್ತಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ನಾಮ ನಿರ್ದೇಶನ ಸೇರಿದಂತೆ ಎಲ್ಲೂ ನಮಗೆ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಅಲ್ಲದೇ ಜೆಡಿಎಸ್ ಗೆ ಮತ ಹಾಕೋದಿಲ್ಲ. ಬಿಜೆಪಿಗೆ ಹಾಕುತ್ತೇವೆ ಎಂದು ನೇರವಾಗಿಯೇ ಹೇಳಿದರು.ಇದಕ್ಕೆ ಕೆಲವರು ದನಿ ಗೂಡಿಸಿದ್ದರಿಂದ ಸಭೆಯಲ್ಲಿ ಗದ್ದಲ-ಗೊಂದಲ ಶುರುವಾಯಿತು. ಇದಾದ ಕೂಡಲೇ ಘೋಷಣೆ ಕೂಗಿದವರು ಸಭೆಯಿಂದ ದಿಢೀರ್ ಕಣ್ಮರೆಯಾಗಿದ್ದಲ್ಲದೇ, ಬಿಜೆಪಿಗೆ ಹೋಗೋದಾಗಿ ಹೇಳಿದರು.ಈ ಬೆಳವಣಿಗೆ ನಂತರ ತೇಪೆ ಹಾಕುವ ಪ್ರಯತ್ನಕ್ಕೆ ಮುಂದಾದ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು, ಗದ್ದಲ ಎಬ್ಬಿಸಿದ ವ್ಯಕ್ತಿ ಹಿಂದೆ ಕಾಂಗ್ರೆಸ್ ನಲ್ಲೇ ಇದ್ದು, ಈಗ ಬಿಜೆಪಿಗೆ ಹೋಗಿದ್ದಾರೆ.

ಅವರ ಮಾತಿಗೆ ಮಹತ್ವ ನೀಡೋ ಅಗತ್ಯವಿಲ್ಲ ಎಂದ್ರು. ಇನ್ನೂ ಸಚಿವ ರೇವಣ್ಣ ಮಾತನಾಡಿ ಕೋಮುವಾದಿಗಳನ್ನ ದೂರ ಇಡಬೇಕಾಗಿದೆ, ಯಾವುದೇ ಗೊಂದಲ ಬೇಡ ಎಂದು ಸಚಿವ ರೇವಣ್ಣ ಹೇಳಿದ್ರು.ಒಟ್ಟಿನಲ್ಲಿ ದೋಸ್ತಿ ಪಕ್ಷದಲ್ಲಿ ಸಣ್ಣಪುಟ್ಟ ಅಸಮಾಧಾನ ಇರೋದು ಮೇಲಿಂದ ಮೇಲೆ ಬಹಿರಂಗವಾಗುತ್ತಿದೆ. ಚುನಾವಣೆಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here