Home District “ಜೆಡಿಎಸ್ ಶಾಸಕನಿಗೆ ಹುಚ್ಚು ನಾಯಿಗೆ ಹೊಡೆದಂತೆ ಹೊಡೆಯಿರಿ” ಎಂದು ದೋಸ್ತಿ ಸಮಯದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ...

“ಜೆಡಿಎಸ್ ಶಾಸಕನಿಗೆ ಹುಚ್ಚು ನಾಯಿಗೆ ಹೊಡೆದಂತೆ ಹೊಡೆಯಿರಿ” ಎಂದು ದೋಸ್ತಿ ಸಮಯದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ..!

2504
0
SHARE

ಎಲ್ಲರೂ ಗೆದ್ದ ಮೇಲೆ ದರ್ಪ ತೋರಿದ್ರೆ, ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್‍ನ ಮಾಜಿ ಶಾಸಕ ಸೋತು ಸುಣ್ಣವಾದ ಮೇಲೆ ದರ್ಪ ತೋರಲು ಶುರು ಮಾಡಿದ್ದಾರೆ. ಗೆದ್ದು ದರ್ಪ ತೋರಿಸಿದ್ರೆ ಜೆಡಿಎಸ್ ಶಾಸಕನಿಗೆ ಹುಚ್ಚು ನಾಯಿಗೆ ಹೊಡೆದಂತೆ ಹೊಡೆಯಿರಿ ಎನ್ನುವ ಮೂಲಕ ನಾಲಿಗೆ ಹರಿಬಿಟ್ಟಿದ್ದು, ಕಾಂಗ್ರೆಸ್ ಕಾರ್ಯಕರ್ತರನ್ನು ಪ್ರಚೋದಿಸಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ…

ಇನ್ನು, ಹೀನಾಯ ಸೋಲುಂಡ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹಾಗೂ ಚಾಮರಾಜ ಕ್ಷೇತ್ರದ ಮಾಜಿ ಶಾಸಕ ವಾಸು ಸೋಲಿನ ಪರಾಮರ್ಶೆ ಮಾಡಿಕೊಂಡಿದ್ದಾರೆ.ಚುನಾವಣೆಗೂ ಮುನ್ನ ಹಾವು-ಮುಂಗೂಸಿಯಂತಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಇದೀಗ ಮೈತ್ರಿ ಮಾಡಿಕೊಳ್ಳೊ ಮೂಲಕ ಒಟ್ಟಾಗಿ ಸರ್ಕಾರ ರಚನೆ ಮಾಡಿದ್ರು…

ಆದ್ರೆ ತಳಮಟ್ಟದಲ್ಲಿ ಈ ಎರಡೂ ಪಕ್ಷಗಳ ನಡುವಣ ಕಿತ್ತಾಟ ಮಾತ್ರ ಕಮ್ಮಿಯಾಗಿಲ್ಲ. ಗೆದ್ದು ಬೀಗಿದವರು ದರ್ಪ ತೋರುವುದು ಸಾಮಾನ್ಯ ಆದ್ರೆ, ಮೈಸೂರು ಜಿಲ್ಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರ ಆಪ್ತರು ಸೋತು ಸುಣ್ಣವಾದ ನಂತರ ದರ್ಪ ತೋರಲು ಮುಂದಾಗಿದ್ದಾರೆ…

ವೇದಿಕೆ ಮೇಲೆ ನಿಂತು ಬಾಯಿಗೆ ಬಂದಂತೆ ಭಾಷಣ ಬಿಗಿತಿರೋ ಇವರು ಪಿರಿಯಾಟ್ಟಣದ ಮಾಜಿ ಶಾಸಕರು ಹಾಗೂ ಸಿದ್ದರಾಮಯ್ಯರ ಆಪ್ತರೂ ಆಗಿರುವ ಸನ್ಮಾನ್ಯ ಕೆ.ವೆಂಕಟೇಶ್. 2018ರ ವಿಧಾನಸಭಾ ಚುನಾವಣೆಯಲ್ಲಿ ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೆಂಕಟೇಶ್ ಪರಾಭವಗೊಂಡಿದ್ರು, ಕ್ಷೇತ್ರದಲ್ಲಿ ನೂತನವಾಗಿ ಗೆದ್ದಿರುವ ಜೆಡಿಎಸ್ ಶಾಸಕನಿಗೆ ಹುಚ್ಚು ನಾಯಿಗೆ ಹೊಡೆದಂತೆ ಹೊಡೆಯಿರಿ ಎಂದು ಕೈ ಕಾರ್ಯಕರ್ತರನ್ನು ಪ್ರಚೋದಿಸಿದ್ದಾರೆ…

ಆತ್ಮಾವಲೋಕ ಸಭೆಯಲ್ಲಿ ಮಾತನಾಡಿದ ವೆಂಕಟೇಶ್, ನೂತನವಾಗಿ ಗೆದ್ದಿರುವ ಜೆಡಿಎಸ್ ಶಾಸಕ ಕೆ.ಮಹದೇವು ವಿರುದ್ಧ ಕಾಡಿಕಾರುವ ಭರದಲ್ಲಿ ನಾಲಿಗೆ ಹರಿಬಿಟ್ಟಿದ್ದಾರೆ.ಇನ್ನು ಮತ್ತೋರ್ವ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಸೋತ ನಂತರ ಟಿ.ನರಸೀಪುರದಲ್ಲಿ ಇಂದು ಆತ್ಮಾವಲೋಕನ ಸಭೆ ನಡೆಸಿದ್ದು, ಅಭಿವೃದ್ದಿ ಮಾನದಂಡವಲ್ಲ ಎಂಬುದನ್ನು ಈ ಚುನಾವಣೆ ನಮಗೆ ಪಾಠ ಕಲಿಸಿದೆ ಎಂದ್ರು…

ನನ್ನ ಸೋಲಿಗಿಂತ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯರ ಸೋಲು ನನ್ನನ್ನು ಆಘಾತಕ್ಕೀಡು ಮಾಡಿದೆ. ಸಿದ್ದರಾಮಯ್ಯರ ಸೋಲು ಅಭಿವೃದ್ದಿಯ ಸೋಲು ಎಂದ್ರು.ಇನ್ನು ಈ ನಡುವೆ ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಚಾಮರಾಜ ಕ್ಷೇತ್ರದ ಮಾಜಿ ಶಾಸಕ ವಾಸು ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯರ ಆಪ್ತ ಹಾಗೂ ಮಾಜಿ ಮೂಡಾ ಅಧ್ಯಕ್ಷರ ಪಿತೂರಿಯಿಂದ ನನಗೆ ಸೋಲಾಯಿತು ಎಂದು ಆರ್.ಧ್ರುವಕುಮಾರ್ ಹೆಸರು ಹೇಳದೆ ಗಂಭೀರ ಆರೋಪ ಮಾಡಿದ್ದಾರೆ.

ನನ್ನನ್ನ ಸೋಲಿಸುವ ಸಲುವಾಗಿ ಬಿಜೆಪಿ ಅಭ್ಯರ್ಥಿ ಜೊತೆ ಕೈ ಜೋಡಿಸಿದ್ದಾರೆ. ನನ್ನ ಮತಗಳು ಬಿಜೆಪಿಗೆ ಹೋಗಲು ಪಕ್ಷದೊಳಗಿನ ಮುಖಂಡರೇ ಕಾರಣರಾಗಿದ್ದಾರೆ ಎಂದ್ರು. ಪಕ್ಷ ಅಪೇಕ್ಷೆ ಪಟ್ಟು ಟಿಕೆಟ್ ನೀಡಿದರೆ ಮುಂದೆ ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ…
ಒಟ್ನಲ್ಲಿ, ಮೈಸೂರು ಭಾಗದಲ್ಲಿ ಜೆಡಿಎಸ್ ಕೊಟ್ಟ ಹೊಡೆತಕ್ಕೆ ಸೋತು ಸುಣ್ಣವಾದ ನಂತರ ಕೈ ನಾಯಕರು ಒಂದೆಡೆ ಸೋಲಿನ ಪರಾಮರ್ಶೆ ಮಾಡಿಕೊಂಡರೆ, ಮತ್ತೊಂದೆ ಹತಾಶೆಯ ಮಾತುಗಳನ್ನಾಡುವ ಮೂಲಕ ವಿವಾದಕ್ಕೂ ಎಡೆ ಮಾಡಿಕೊಡುತ್ತಿದ್ದಾರೆ…

LEAVE A REPLY

Please enter your comment!
Please enter your name here