ವಿಧಾನಸಭಾ ಚುನಾವಣೆ ಹಿನ್ನೆಲೆ ದಿನದಿಂದ ದಿನಕ್ಕೆ ರಾಜಕೀಯ ಕಾವು ಹೆಚ್ಚಾಗ್ತಿದೆ. ಸ್ಟಾರ್ ಪ್ರಚಾರಕರು ಪಕ್ಷಗಳ ಪರ ಪ್ರಚಾರ ಮಾಡಲು ಸಜ್ಜಾಗಿದ್ದಾರೆ…
ಈ ಬಾರಿಯ ಎಲೆಕ್ಷನ್ನಲ್ಲಿ ಟಾಲಿವುಡ್ನ ಇಬ್ಬರು ಸ್ಟಾರ್ಗಳಾದ ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಸ್ಟಾರ್ ಪ್ರಚಾರಕರಾಗಿ ಎಂಟ್ರಿಕೊಡ್ತಿದ್ದಾರೆ…
ಚಿರಂಜೀವಿ ಅವರು ಕಾಂಗ್ರೆಸ್ ಪರ ಪ್ರಚಾರ ಮಾಡಲಿದ್ದಾರೆ.ಮೇ 1ರಂದು ಚಿಂತಾಮಣಿ
ಕೋಲಾರ, ಗೌರಿಬಿದನೂರು, ಚಿಕ್ಕಬಳ್ಳಾಪುರ, ಮುಳಬಾಗಿಲು, ಬಾಗೇಪಲ್ಲಿ ಪ್ರಚಾರ ಮಾಡಲಿದ್ದಾರೆ. ಇನ್ನು ಪವನ್ ಕಲ್ಯಾಣ್ ಜೆ.ಡಿ.ಎಸ್ ಪರ ಪ್ರಚಾರಕ್ಕೆ ಧುಮುಕಲಿದ್ದಾರೆ.
ಮೇ 3 ಮತ್ತು 4ರಂದು ಚಿಕ್ಕಬಳ್ಳಾಪುರ, ಬಂಗಾರ್ಪೇಟ, ಕೋಲಾರದಲ್ಲಿ ಪ್ರಚಾರ ಮಾಡಲಿದ್ದಾರೆ…