Home Crime ಜೈಲಿನಲ್ಲಿದ್ದ ತನ್ನ ಪ್ರಿಯಕರನಿಗೆ ಗಾಂಜಾ ಪೂರೈಕೆ.?! ಸಿಕ್ಕಿಬಿದ್ದ ಪತ್ರಿಕೋದ್ಯಮಿ ವಿದ್ಯಾರ್ಥಿನಿ ಅರೆಸ್ಟ್…?

ಜೈಲಿನಲ್ಲಿದ್ದ ತನ್ನ ಪ್ರಿಯಕರನಿಗೆ ಗಾಂಜಾ ಪೂರೈಕೆ.?! ಸಿಕ್ಕಿಬಿದ್ದ ಪತ್ರಿಕೋದ್ಯಮಿ ವಿದ್ಯಾರ್ಥಿನಿ ಅರೆಸ್ಟ್…?

5925
0
SHARE

ಆಕೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿ. ಆದರೆ, ರೌಡಿ ಒಬ್ಬನನ್ನು ಪ್ರೀತಿಸಿ ಇಲ್ಲದ ಉಸಾಬರಿ ಮೈಮೇಲೆ ಎಳ್ಕೊಂಡಿದ್ದಾಳೆ. ಹೌದು…. ಜೈಲಿನಲ್ಲಿದ್ದ ಪ್ರಿಯಕರ ರೌಡಿಗೆ ಗಾಂಜಾ ಒಯ್ದು ಎಂಸಿಜೆ ವಿದ್ಯಾರ್ಥಿನಿ ಒಬ್ಬಳು ಸಿಕ್ಕಿಬಿದ್ದಿದ್ದಾಳೆ. ಅಷ್ಟೇ ಅಲ್ಲ, ಆಕೆಯ ಲವ್ ಮತ್ತು ಜಿಹಾದ್ ಕತೆಯೂ ಹೊರಬಿದ್ದಿದೆ.ಹೌದು. ಆಕೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂಸಿಜೆ ಎರಡನೇ ವರ್ಷದ ವಿದ್ಯಾರ್ಥಿನಿ.

ಒಂದನೇ ವರ್ಷ ಪೂರೈಸಿ, ಮಧ್ಯಂತರ ರಜೆಯಲ್ಲಿದ್ದಾಗ ಮಂಗಳೂರಿನ ಕೇಬಲ್ ವಾಹಿನಿಯಲ್ಲಿ ಇಂಟರ್ನ್ ಶಿಪ್ ಮಾಡಿದ್ದಳು. ವಾಮಂಜೂರಿನ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಹೋಗಿ ಬರುತ್ತಿದ್ದಾಗ, ಮುಸ್ತಫಾ ಎಂಬಾತನ ಪರಿಚಯವಾಗಿತ್ತು. ಅದು ಬಳಿಕ ಪ್ರೀತಿಗೆ ತಿರುಗಿದ್ದಲ್ಲದೆ, ಗೆಳೆತನ ಗಾಢವಾಗಿ ಬೆಳೆದಿತ್ತು.ಆದರೆ, ಮುಸ್ತಫಾ ಅದಾಗಲೇ ಮಂಗಳೂರಿನ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ರೌಡಿ ಶೀಟರ್.

2015ರಲ್ಲಿ ಚರಣ್ ಎಂಬಾತನ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನಿನಲ್ಲಿ ಹೊರಬಂದಿದ್ದಾಗ ಈ ಹುಡುಗಿಯ ಪರಿಚಯ ಆಗಿತ್ತು. ಆದರೆ, ಎರಡು ತಿಂಗಳ ಹಿಂದೆ ಗಾಂಜಾ ಪಾರ್ಟಿ ಖಾಲಿದ್ ಎಂಬಾತನ ಕೊಲೆಗೆ ಯತ್ನಿಸಿ, ಮುಸ್ತಫಾ ಮತ್ತೆ ಬಂಧನಕ್ಕೊಳಗಾಗಿ ಮಂಗಳೂರಿನ ಜೈಲು ಸೇರಿದ್ದ. ಹೀಗಿದ್ದರೂ, ಅದಾಗಲೇ ಮುಸ್ಲಿಂ ಹುಡುಗನ ಹೀರೋಯಿಸಂಗೆ ವಿದ್ಯಾರ್ಥಿನಿ ಮಾರು ಹೋಗಿದ್ದಳು. ಸುಳ್ಯ ತಾಲೂಕಿನ ಉಬರಡ್ಕದ ಹಿಂದುಳಿದ ವರ್ಗದ ವಿದ್ಯಾರ್ಥಿನಿ ಆಗಿದ್ದರೂ, ವಾಮಂಜೂರಿನಲ್ಲಿ ಇದ್ದುಕೊಂಡೇ ಕ್ಲಾಸ್ ಇಲ್ಲದ ವೇಳೆ ಜೈಲಿಗೂ ಹೋಗಿಬರತೊಡಗಿದ್ದಳು.

ಜೈಲಿನಲ್ಲಿದ್ದ ಮುಸ್ತಫಾ, ಲವರ್ ತನ್ನನ್ನು ಕಾಣಲು ಬರುತ್ತಿದ್ದುದನ್ನು ತಿಳಿದು ತನ್ನ ಗೆಳೆಯ ಲತೀಫ್ ಬಳಿ ಗಾಂಜಾ ಪ್ಯಾಕೆಟ್ ನೀಡಲು ಹೇಳಿದ್ದ. ಅದರಂತೆ, ಲತೀಫ್ ನೀಡಿದ್ದ ಪ್ಯಾಕೆಟ್ ಒಂದನ್ನು ವಿದ್ಯಾರ್ಥಿನಿ ತನ್ನ ಪ್ರಿಯಕರನಿಗೆ ನೀಡಲೆಂದು ಜೈಲಿಗೆ ಹೋಗಿದ್ದಳು. ಆದರೆ, ಆ ಬಗ್ಗೆ ಮಾಹಿತಿ ಪಡೆದ ಪೊಲೀಸರು ವಿದ್ಯಾರ್ಥಿನಿಯನ್ನು ರೆಡ್ ಹ್ಯಾಂಡ್ ಆಗಿ ಅರೆಸ್ಟ್ ಮಾಡಿದ್ದಾರೆ.ಆಕೆಯ ಬಳಿಯಿದ್ದ 20 ಗ್ರಾಂ ಗಾಂಜಾ ಮತ್ತು ಆಕೆಯ ಮೊಬೈಲನ್ನು ಪಡೆದು ಮಂಗಳೂರಿನ ಬರ್ಕೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಿಚಾರಣೆ ವೇಳೆ ಈಕೆ ಎಂಸಿಜೆ ಸ್ಟೂಡೆಂಟ್ ಅನ್ನುವ ವಿಚಾರ ತಿಳಿದು ಜಡ್ಜ್ ಮೂಲಕ ಪೊಲೀಸರು ಬೇಲ್ ನೀಡಿದ್ದಾರೆ. ಬಂಧನ ವಿಚಾರ ಗೊತ್ತಾಗುತ್ತಿದ್ದಂತೆ ಆಕೆಯ ಲವ್ವಿ ಡವ್ವಿ ಕತೆನೂ ಹೊರಬಿದ್ದಿದೆ. ಅಲ್ಲದೆ, ಮುಸ್ಲಿಂ ಸಹಪಾಠಿಗಳ ಜೊತೆ ತಾನು ಮುಸ್ಲಿಂ ಆಗಿ ಮತಾಂತರ ಆಗಲು ಬಯಸುತ್ತೇನೆಂಬುದನ್ನು ಹೇಳಿಕೊಂಡಿದ್ದಳೆಂಬ ವಿಚಾರವೂ ಗೊತ್ತಾಗಿದೆ. ಹೀಗಾಗಿ ಕರಾವಳಿಯಲ್ಲಿ ಈ ಹಿಂದೆ ಸದ್ದು ಮಾಡಿದ್ದ ಲವ್ ಜಿಹಾದ್ ಪ್ರಕರಣಕ್ಕೆ ಈಕೆಯೂ ಸೇರ್ಪಡೆಯಾಗುತ್ತಿದ್ದಳೇ ಅನ್ನುವ ಮಾತು ಕೇಳಿಬರುವಂತಾಗಿದೆ.

LEAVE A REPLY

Please enter your comment!
Please enter your name here