Home Crime ಜೊಮೊಟೋನಲ್ಲಿ ಫುಡ್ ಆರ್ಡರ್ ಮಾಡೋ ಮುನ್ನ ಎಚ್ಚರ..!! ಆತುರದಲ್ಲಿ ನೀವು ತಿಂತಿದ್ದೀರ ಜಿರಲೆ,ತಿಗಣೆ..?! ಈ ಸ್ಟೋರಿ...

ಜೊಮೊಟೋನಲ್ಲಿ ಫುಡ್ ಆರ್ಡರ್ ಮಾಡೋ ಮುನ್ನ ಎಚ್ಚರ..!! ಆತುರದಲ್ಲಿ ನೀವು ತಿಂತಿದ್ದೀರ ಜಿರಲೆ,ತಿಗಣೆ..?! ಈ ಸ್ಟೋರಿ ಓದಿದ್ರೆ ಇನ್ಮೇಲೆ ಆನ್ ಲೈನ್ ಫುಡ್ ಆರ್ಡರ್ ಸಹವಾಸಕ್ಕೆ ಹೋಗೊಲ್ಲ…!!!

1039
0
SHARE

ಆನ್ ಲೈನ್ ಫುಡ್ ಪ್ರಿಯರೇ ಎಚ್ಚರ ಎಚ್ಚರ.. ಅಪ್ಪಿ ತಪ್ಪಿ ನೀವು ಬೇಗ ಆಗುತ್ತೆ ಅಂತ ಆನ್ ಲೈನ್‌ನಲ್ಲಿ ಫುಡ್ ಬುಕ್ ಮಾಡಿದ್ರೆ ಸಾವಿನ ಮನಗೆ ಕದ ತಟ್ಟಿದಂಗೆ. ಯಾಕಂದ್ರೆ ನೀವು ಆನ್ ಲೈನ್ ನಲ್ಲಿ ತರಿಸಿ ತಿನ್ನೋ ಪದಾರ್ಥ ನೀವು ಅಂದುಕೊಂಡಂಗೆ ಫ್ರೆಶ್ ಆಗಿ ಇರೊಲ್ಲ, ಬದಲಿಗೆ ಅದು ನಿಮ್ಮ ನಿರೀಕ್ಷೆಗೂ ಮೀರಿದಂತಿರುತ್ತದೆ, ಅಂಥಹದೊಂದು ಆನ್ ಲೈನ್ ಫುಡ್ ಕಂಪನಿಯೊಂದು ಜನರಿಗೆ ಮೋಸ ಮಾಡುತ್ತಿದೆ.

ಇತ್ತೀಚೆಗೆ ಫುಲ್ ಫೇಮಸ್ ಆಗಿರುವ ಜೊಮೋಟೋ ಕಂಪನಿಯಲ್ಲಿ ಫುಡ್ ಆರ್ಡರ್ ಮಾಡಿ ಪದಾರ್ಥ ತಿಂದ್ರೆ ಕೊಳೆತ ತರಕಾರಿ ಹಾಗೂ ಕೊಳೆತ ಮಾಂಸ ನಿಮ್ಮ ಹೊಟ್ಟೆ ಸೇರುತ್ತದೆ, ಪ್ರಜಾಟಿವಿಯಲ್ಲಿ ದಿ ಫೇಮಸ್ ಕಂಪನಿಯ ಬಂಡವಾಳ ಬಯಲಾಗಿದೆ.ಈಗ ಮನೆಯಲ್ಲಿ ಅಡುಗೆ ಮಾಡೋ ಸಂಪ್ರದಾಯ ಕಡಿಮೆಯಾಗ್ತಿದೆ. ಈಗೇನಿದ್ರೂ ಮನೆ ಬಾಗಿಲಿಗೆ ರೆಡಿ ಫುಡ್ ಆರ್ಡರ್ ಮಾಡೋ ಕಾಲ. ನಮಗಿಷ್ಟವಾದ ಅಡುಗೆಯನ್ನ ಮೊಬೈಲ್ ಫುಡ್ ಆಪ್ ನಲ್ಲಿ ಬುಕ್ ಮಾಡಿದ್ರೆ ಕೂತಲ್ಲೇ ಫುಡ್ ಬರುತ್ತೆ.

ಅದ್ರಲ್ಲೂ ಈಗಂತೂ ಮನೆ ಮನೆಗೆ ಫುಡ್ ತಲುಪಿಸೋದಕ್ಕೆ ಆಪ್ ಗಳು ನಾಮುಂದು ತಾಮುಂದು ಅಂತ ಮುಂದೆ ಬರ್ತಿವೆ. ಯಾಕಂದ್ರೆ ಬೆಂಗಳೂರಿನವರ ಸೋಮಾರಿತನವೇ ಅವರಿಗೆ ಬಂಡವಾಳ. ಅದ್ರಲ್ಲೂ ಚೀಪ್ ರೇಟಿಗೆ ಫುಡ್ ಸಿಗುತ್ತೆ ಅಂದ್ರೆ ಜನ ಒಂದರ ಬದಲು ಎರಡು ಆರ್ಡರ್ ಮಾಡಿ ಗುಳುಂ ಅನಿಸ್ತಾರೆ. ಆದ್ರೆ ಆ ಫುಡ್ ನ ಅಸಲಿಯತ್ತನ್ನ ಅವ್ರು ಪರೀಕ್ಷೆ ಮಾಡೋದಕ್ಕೆ ಹೋಗೋದಿಲ್ಲ. ಇತ್ತೀಚೆಗೆ ಡೋರ್ ಟು ಡೋರ್ ಫುಡ್ ಸಪ್ಲೈ ಮಾಡೋದ್ರಲ್ಲಿ ಜೊಮಟೋ ಅನ್ನೋ ಮೊಬೈಲ್ ಆಪ್ ತುಂಬಾ ಫೇಮಸ್ ಆಗಿದೆ.

ಆದ್ರೆ ಈ ಜೊಮಟೋ ಆಪ್ ನೀಡೋ ಆಫರ್ ಗಳಿಗೆ ಬೆರಾಗಾಗಿ ಅಲ್ಲಿಂದ ಏನಾದ್ರೂ ಫುಡ್ ಆರ್ಡರ್ ಮಾಡಿದ್ರೆ, ಯಮನ ಹತ್ರ ಹೋಗೋದಕ್ಕೆ ಟಿಕೆಟ್ ಬುಕ್ ಮಾಡಿದ ಹಾಗೆ ಆಗುತ್ತೆ. ಯಾಕಂದ್ರೆ ಜೊಮಟೋ ಕಂಪನಿ ಕೆಲವು ಹೋಟೆಲ್ ಗಳೊಂದಿಗೆ ಟೈ ಅಪ್ ಮಾಡ್ಕೊಂಡಿದೆ. ಈ ಹೋಟೆಲ್ ಗಳ ಮೂಲಕವೇ ಆಪ್ ನಲ್ಲಿ ಫುಡ್ ಬುಕ್ ಮಾಡಲಾಗುತ್ತೆ. ಆದ್ರೆ ಆ ಹೋಟೆಲ್ ಎಲ್ಲಿದೆ, ಅದರ ಕ್ವಾಲಿಟಿ ಏನು ಅನ್ನೋದು ಯಾರಿಗೂ ಗೊತ್ತಾಗೋದಿಲ್ಲ.

ಇದನ್ನೇ ಬಂಡವಾಳ ಮಾಡಿಕೊಂಡಿರೋ ಜೊಮಟೋ ತನ್ನ ಗ್ರಾಹರಕರಿಗೆ ಮೋಸಮಾಡ್ತಿದೆ. ಅಲ್ಲದೆ ಕೊಳೆತು ಹೋಗಿರೋ ಮಾಂಸ, ಕೊಳೆತು ಹೋಗಿರೋ ತರಕಾರಿಗಳನ್ನ ಹಾಕಿ ಅಡುಗೆ ಮಾಡಿ ಮನೆ ಮನೆಗೆ ತಲುಪಿಸ್ತಿದೆ. ಜೊಮಟೋ ಟೈಅಪ್ ಮಾಡ್ಕೊಂಡಿರೋ ಎರಡು ಹೋಟೆಲ್ ಗಳು ಜನರಿಗೆ ಊಟದ ಬದಲಿಗೆ ವಿಷವನ್ನ ನೀಡ್ತಿವೆ.ಆರ್ ಆರ್ ನಗರದ ಚನ್ನಸಂದ್ರದಲ್ಲಿರೋ ಎಗ್ಗೀಸ್ ಹೋಟೆಲ್:ಈ ಹೋಟೆಲ್ ನಿಂದ ಜೊಮಟೋ ಆಹಾರವನ್ನ ರೆಡಿ ಮಾಡಿಸಿ ತನ್ನ ಗ್ರಾಹಕರಿಗೆ ನೀಡುತ್ತೆ.

ಆದ್ರೆ ಇದನ್ನ ತಯಾರು ಮಾಡೋ ಹೋಟೆಲ್ ನ ನೋಡಿದ್ರೆ ಜೀವನ ಪೂರ್ತಿ ಅನ್ನವೇ ಸೇರೋದಿಲ್ಲ. ಯಾಕಂದ್ರೆ ಅಷ್ಟು ಕೆಟ್ಟದಾಗಿ ತಮ್ಮ ಕಿಚನ್ ಅನ್ನ ಮೆಂಟೇನ್ ಮಾಡ್ಕೊಂಡಿದ್ದಾರೆ. ಯಾಕಂದ್ರೆ ಇಲ್ಲಿ ಗ್ರಾಹಕರ ಕಣ್ಣಿಗೆ ಯಾವುದು ಕಾಣದ ಕಾರಣ ತಮಗೆ ಇಷ್ಟಬಂದ ಹಾಗೆ ಇಟ್ಕೊಂಡಿರ್ತಾರೆ. ಗ್ರಾಹಕರು ಹಣ ಕೊಟ್ಟು ಬುಕ್ ಮಾಡೋ ಫುಡ್ ಅನ್ನ ಅವ್ರು ತಿನ್ನೋ ಮೊದಲು ಅದನ್ನ ಕಿಚನ್ ನಲ್ಲಿರೋ ಜಿರಲೆ ಮತ್ತು ಇಲಿಗಳು ಟೇಸ್ಟ್ ಮಾಡಿ ಕಳುಹಿಸಿ ಕೊಟ್ಟಿರುತ್ತೆ. ಇನ್ನು ಆ ಕಿಚನ್ ಅನ್ನ ನೋಡಿದ್ರೆ ಕಸದ ತೊಟ್ಟಿಯಂತಿರುತ್ತೆ.

ಹೀಗಿರೋ ಕಿಚನ್ ನಲ್ಲಿ ಅಡುಗೆ ತಯಾರಿಸಿ ಪಳಪಳ ಹೊಳೆಯುವ ಕವರ್ ನಲ್ಲಿ ಪ್ಯಾಕ್ ಮಾಡಿ ಡೆಲವರಿ ಕೊಟ್ಟು ಗ್ರಾಹಕರನ್ನ ವಂಚಿಸ್ತಿದ್ದಾರೆ.ನಂಬರ್ 2 ಅತಿಥಿ ಹೋಟೆಲ್:ಮೈಲಸಂದ್ರದದ ಗ್ಲೋಬಲ್ ವಿಲೇಜ್ ನಲ್ಲಿರೋ ಹೋಟೆಲ್ ಈ ಹೋಟೆಲ್ ಕೂಡಾ ಜೊಮಟೋ ಕಂಪನಿಯೊಂದಿಗೆ ಟೈಅಪ್ ಮಾಡ್ಕೊಂಡಿದೆ. ಇಲ್ಲಿ ಕೂಡಾ ಅದೇ ಕಥೆ. ಜೊಮಟೋ ತನ್ನ ಆಪ್ ನಲ್ಲಿ ನೀಡಿರೋ ಫುಡ್ ನ ಪಿಕ್ಟರ್ ನೋಡಿ ಬಾಯಲ್ಲಿ ನೀರು ಸುರಿಸುತ್ತ ಫುಡ್ ಬುಕ್ ಮಾಡಿದ್ರೆ ಇವ್ರು ಬೆಂಗಳೂರಲ್ಲಿ ಉಳಿದ ಎಲ್ಲಾ ಗುಡ್ಡೆ ಮಾಂಸವನ್ನ ಚೀಪ್ ರೇಟ್ ಗೆ ತಂದು ಅದನ್ನ ಬಿಸಿ ಮಾಡಿ ಗ್ರಾಹಕರಿಗೆ ನೀಡ್ತಿದ್ದಾರೆ.

ಅಲ್ಲದೆ ಅದನ್ನ ತಿಂಗಳುಗಟ್ಟಲೆ ಫ್ರಿಡ್ಜ್ ನಲ್ಲಿ ಇಟ್ಟು ವೆರಿ ಟೇಸ್ಟಿ, ಯಮ್ಮಿ ಅನ್ನೋ ಸ್ಲೋಗಾನ್ ನಲ್ಲಿ ಗ್ರಾಹಕರ ಹೊಟ್ಟೆ ತುಂಬಿಸ್ತಿದ್ದಾರೆ. ಆನ್ ಲೈನ್ ಫುಡ್ ಆಪ್ ಗಳಿಗಾಗಿ ಇರೋ ಕಿಚನ್ ಇದು. ಇಲ್ಲಿ ತಯಾರಾದ ಒಂದು ಊಟವನ್ನ ತಿಂದ್ರೆ ನರಕವನ್ನ ಇಲ್ಲೇ ನೋಡಬೇಕಾಗುತ್ತೆ. ಯಾಕಂದ್ರೆ
ಇಲ್ಲಿ ಆಲ್ ಮೋಸ್ಟ್ ಫುಡ್ ಪ್ರಿಪೇರ್ ಆಗೋದೆ ಟಾಯ್ಲೆಟ್ ನಲ್ಲಿ. ಅಲ್ಲದೆ ಆನ್ ಲೈನ್ ನಲ್ಲಿ ಚೀಪ್ ರೇಟ್ ಗೆ ಫುಡ್ ಕೊಡ್ತಾರೆ ಅಂದ್ರೆ ಅಷ್ಟೇ ಚೀಪ್ ಆಗಿ ಫುಡ್ ಪ್ರಿಪೇರ್ ಮಾಡ್ತಾರೆ. ಇಲ್ಲಿನ ಕಿಚನ್ ಅನ್ನ ಒಮ್ಮೆ ನೋಡಿದ್ರೆ ತಿಂದವ್ರು ತಕ್ಷಣವೇ ಆಸ್ಪತ್ರೆ ಸೇರೋದ್ರಲ್ಲಿ ಅನುಮಾನವಿಲ್ಲ.

ಎಲ್ಲೊ ಕೂತ್ಕೊಂಡಿರೋ ಜೊಮಟೋ ಕಂಪನಿಯ ಓನರ್ ತಾನು ಮಾತ್ರ ಫ್ರೆಶ್ ಫುಡ್ ಅನ್ನ ತಿಂದು ಹಾಯಾಗಿದ್ದಾನೆ. ಆದ್ರೆ ಬೆಂಗಳೂರಿರ ಜನರ ಹೊಟ್ಟೆಯನ್ನ ಮಾತ್ರ ಗಟಾರವನ್ನಾಗಿ ಮಾಡ್ತಿದ್ದಾನೆ. ಇನ್ನು ಈ ಆಪ್ ಗೆ ವ್ಯವಹಾರ ಮಾಡೋದಕ್ಕೆ ಅವಕಾಶ ಮಾಡಿಕೊಟ್ಟಿರೋ ಫುಡ್ ಡಿಪಾರ್ಟ್ ಮೆಂಟ್ ನವರು ಅದೆಷ್ಟು ಪ್ರಸಾದವನ್ನ ನೈವೇದ್ಯವನ್ನಾಗಿ ಸ್ವೀಕರಿಸಿದ್ದಾರೋ ಗೊತ್ತಿಲ್ಲ. ಬೆಂಗಳೂರಿನ ಜನ ವಿಷಾಹಾರವನ್ನ ತಿಂದು ಒದ್ದಾಡ್ತಿದ್ರೆ ಫುಡ್ ಡಿಪಾರ್ಟ್ ಮೆಂಟ್ ಲಂಚ ತಿಂದು ತೇಗ್ತಿದೆ. ಒಟ್ನಲ್ಲಿ ಫುಡ್ ಆಪ್ ಬೆಂಗಳೂರಿಗರ ಆರೋಗ್ಯವನ್ನ ನಿಧಾನವಾಗಿ ಆಪೋಷನ ತೆಗೆದುಕೊಳ್ತಿರೋದು ಮಾತ್ರ ಯಾರಿಗೂ ಗೊತ್ತೇ ಆಗ್ತಿಲ್ಲ.

LEAVE A REPLY

Please enter your comment!
Please enter your name here