ಕಳೆದ ಹದಿನೈದು ದಿನಗಳಿಂದ ಮಂಡ್ಯ ಲೋಕಸಭಾ ಚುನಾವಣಾ ಕದನ ಕಣದ ಬಿಸಿ ಹೆಚ್ಚಾಗ್ತಿದೆ. ಕಳೆದವಾರ ಮಂಡ್ಯದಲ್ಲಿ ಸ್ವತಂತ್ಯ ಅಭ್ಯರ್ಥಿಯಾಗಿ ಸುಮಲತಾ ಅಂಬರೀಷ್ ನಾಮಪತ್ರ ಸಲ್ಲಿಸಿ, ತಮ್ಮ ಬಲ ಪ್ರದರ್ಶನ ಮಾಡಿದ್ರು.
ಆ ಬಳಿಕ ಸುಮಲತಾ ಪರ ಪ್ರಚಾರ ಮಾಡಿದ್ದ ದರ್ಶನ್ ಮತ್ತು ಯಶ್ ಮಾತಿನ ಬಾಣದ ಮೂಲಕ ಜೆ.ಡಿ.ಎಸ್ಗೆ ಟಾಂಗ್ ಕೊಟ್ರಿದ್ರು. ನಾವು ಜೊಡೆತ್ತುಗಳೆನ್ನುವ ಮಾತುಗಳನ್ನು ಪುನಂರುಚ್ಚರಿಸಿದ್ರು. ಅದೇ ಮಾತಿಗೆ ಸದ್ಯ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮೌನ ಮುರಿದು ಕಹಳೆ ಊದಿದ್ದಾರೆ. ಜೊಡೆತ್ತುಗಳ ಮಾತಿಗೆ ತಿರುಗುಬಾಣ ಬಿಟ್ಟಿದ್ದಾರೆ.ಯಸ್.. ಸುಮಲತಾ ಅಂಬರೀಷ್ & ನಿಖಿಲ್ ಕುಮಾರಸ್ವಾಮಿ ಲೋಕಸಭಾ ಸಂಗ್ರಾಮದ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಮಲತಾ ಅಂಬರೀಷ್ ಪರ ದರ್ಶನ್ ಯಶ್ ಬೆಂಬಲ ಸೂಚಿಸಿದಾಗಿನಿಂದ್ಲೂ ಕುಮಾರಸ್ವಾಮಿ ದರ್ಶನ್ ಮತ್ತು ಯಶ್ ವಿರುದ್ದ ಗರಂ ಆಗಿದ್ದಾರೆ.
ಅವರ ಮಾತಿಗೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಜೆ.ಡಿ.ಎಸ್ನ ಕಾರ್ಯಕರ್ತ ಸುರೇಶ್ ಬಹಿರಂಗ ಸಭೆಯಲ್ಲಿ ದರ್ಶನ್ ಧನದ ಮಾಂಸ ತಿನ್ನುವವನು ಅವನು ಯಾರಿಗೆ ಕಾಫೀ-ಟೀ ಕೊಡ್ತಿದ್ದ ಎನ್ನುವುದು ಮಂಡ್ಯ ಜನತೆಗೆ ಗೊತ್ತಿದೆ ಎಂಬ ಮಾತನ್ನು ಬಹಿರಂಗವಾಗಿ ಹಾಡಿದ್ರು. ಇದಾದ ಬೆನ್ನಲೆ ದರ್ಶನ್ ಮನೆಮೇಲೆ ಕಲ್ಲು ತುರಾಟಗಳಾಗಿತ್ತು. ಇಷೆಲ್ಲಾ ಘಟನೆಗಳು ಮಾಸುವ ಮುನ್ನವೇ ದರ್ಶನ್ ಬಗ್ಗೆ ಸಿ.ಎಂ ಧಿಕ್ಕಾರ ಕೂಗಿದ್ದಾರೆ.ಹೌದು.. ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡುವಾಗ ಕುಮಾರಸ್ವಾಮಿ ದರ್ಶನ್ ಮತ್ತು ಯಶ್ ವಿರುದ್ದ ರಾಂಗ್ ಆಗಿ ಮಾತನಾಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ಪದ ಕೆಲವರು ಕೇಳಿರಬಹುದು. ಜನರ ಮುಂದೆ ರೈತರ ಮುಂದೆ ಡಿ ಬಾಸ್ ಆಗಲು ಆಗಲ್ಲ . ಸಿನಿಮಾದಲ್ಲಿ ಡಿ ಬಾಸ್ ಆಗಬಹುದು. ಆದ್ರೆ ಮಂಡ್ಯದ ಜನರ ಮುಂದೆ ರೈತರ ಮುಂದೆ ಡಿ ಬಾಸ್ ಆಗೋದಕ್ಕೆ ಸಾಧ್ಯವಿಲ್ಲ. ಮಂಡ್ಯದ ಜನರನ್ನು ದರ್ಶನ್ ಗುತ್ತಿಗೆ ಪಡೆದುಕೊಂಡಿದ್ದಾರಾ ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ. ದರ್ಶನ್ ಏನ್ ಮಾತನಾಡಿದ್ದಾ ರೆಂಬುದು ಮಂಡ್ಯ ಜನರಿಗೆ ತಿಳಿದಿದೆ ಎಂದು ಚಾಲೆಂಜಿಂಗ್ ಸ್ಟಾರ್ ವಿರುದ್ದ ಕಿಡಿಕಾರಿದ್ದಾರೆ.ಇನ್ನು ಇವ್ರು ಜೊಡೆತ್ತುಗಳು ಎಂಬ ಮಾತಿಗೆ ವ್ಯಂಗವಾಡಿರುವ ಕುಮಾರಸ್ವಾಮಿ. ಯಶ್ ಮತ್ತು ದರ್ಶನ್ ಉಳುವ ಎತ್ತುಗಳಲ್ಲ.
ರೈತರು ಬೆಳೆದ ಪೈರನ್ನು ಅರ್ಧ ರಾತ್ರಿ ಹೋಗಿ ತಿನ್ನುವ ಎತ್ತುಗಳು. ಮಂಡ್ಯದಲ್ಲಿ ಸಾಲು ಸಾಲು ದುರಂತಗಳಾದಾಗ ಎಲ್ಲಿ ಹೋಗಿದ್ರು. ಆಗ ಯಾವ ಜೋಡೆತ್ತುಗಳು ಮಂಡ್ಯದ ಜನರ ಸಹಾಯಕ್ಕೆ ಬಂದಿರಲಿಲ್ಲ. ಮಂಡ್ಯದ ಮನೆಮಗನಾಗಿರುವ ಸಿ.ಎಸ್. ಪುಟ್ಟರಾಜು ಶವಗಳನ್ನು ಹೊರತೆಗೆಯಲು, ಸೂಕ್ತ ಕ್ರಮಗಳನ್ನು ಕೈಗೊಂಡ್ರು. ಸಾವಿನ ನೋವಿನಲ್ಲಿದ್ದವರಿಗೆ ಸಾಂತ್ವಾನ ಮಾಡಿದ್ದಾರೆ. ಆಗ ಸುಮಲತಾ ಮನೆಮಕ್ಕಳು ಎಲ್ಲಿ ಹೋಗಿದ್ರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇನ್ನು ನಟ ದರ್ಶನ್ ಅವರ ಮನೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಸಿಎಂ.
ದರ್ಶನ್ ಮನೆ ಮೇಲಿನ ದಾಳಿ ಯಾದ ಮರುಕ್ಷಣವೇ ಆ ಭಾಗದ ಅಧಿಕಾರಿಗಳಿಗೆ ಸಿಸಿಟಿವಿ ಫುಟೇಜ್ ಸೀಝ್ ಮಾಡಲು ಹೇಳಿದ್ದೆ ಆದರೆ ಸಿಸಿಟಿವಿ ಆಫ್ ಆಗಿತ್ತು ಆ ಘಟನೆ ನಡೆದ ಸಂದರ್ಭದಲ್ಲಿ ಎಂಬ ವಿಷಯ ತಿಳಿದು ಬಂದಿದೆ. ಆದ್ರೆ ಅಂದು ದರ್ಶನ್ ಮನೆ ಮೇಲೆ ಆದಂತಹ ಕಲ್ಲುತೂರಾಟಕ್ಕೆ ನಮ್ಮ ಪಕ್ಷದ ಕಾರ್ಯಕರ್ತರನ್ನು ಯಾಕೆ ದೂರುತ್ತೀರಾ. ಯಾಕೆ ಸಿಸಿಟಿವಿ ಫುಟೇಜ್ ಆಫ್ ಮಾಡಿದ್ರು. ಎಂದು ದರ್ಶನ್ ಅವರ ಮೇಲೆ ಮುರುಪ್ರಶ್ನೆ ಹಾಗಿದ್ದಾರೆ.ಕುಮಾರಸ್ವಾಮಿಯವರ ಮಾತಿಗೆ ಪ್ರತಿಕ್ರಿಯಿಸಿರುವ ಸುಮಲತಾ ಅಂಬರೀಷ್.
ಅಂಬರೀಷ್ ಮತ್ತು ದರ್ಶನ್- ಯಶ್ ಹೆಸರು ಹೇಳಿಕೊಂಡು ಪ್ರಚಾರ ಮಾಡುವುದನ್ನು ಮೊದಲು ಬಿಡಿ. ನಿಮ್ಮ ಪ್ರಚಾರವನ್ನು ನೀವು ಮಾಡಿ. ನೀವು ಮಾಡ್ತಿರುವ ಕೆಲಸವನ್ನು ಜನರ ನೋಡ್ತಿರುತ್ತಾರೆ. ನನ್ನ ಹೆಸರೇ ಸುಮಲತಾ ಅಂಬರೀಷ್ ನನ್ನ ಹೆಸರಿನಿಂದ ಅಂಬರೀಷ್ ಅನ್ನುವ ಹೆಸರನ್ನು ಬೇರ್ ಪಡಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಅದೇನೇ ಇದ್ರು… ಮಂಡ್ಯದಲ್ಲಿ ಜೋಡೆತ್ತುಗಳಾಗಿ ಹವಾ ತೋರಿಸಿದ್ದ ದರ್ಶನ್& ಯಶ್ ಗೆ ಸಿಕ್ಕ ಜನಬೆಂಬಲ ನೋಡಿ ಸಿಎಂ ದಂಗಾಗಿದ್ದಾರೆ ಎಂಬ ಮಾತುಗಳು ಕೇಳಿಬರ್ತಿದ್ದು. ಹಾಗಾಗಿನೇ ಆಡಿಯೋ ಬಿಡುಗಡೆ ಮತ್ತು ಮಾತಿನ ಬಾಣಗಳ ಮೂಲಕ ಸುಮಲತಾರನ್ನು ನೇರವಾಗಿ ವೀಕ್ ಮಾಡುವ ತಂತ್ರಕ್ಕೆ ಸಿ.ಎಂ ಮುಂದಾಗಿದ್ದಾರೆನ್ನಲಾಗ್ತಿದೆ.. ಆದ್ರೆ ಈ ಅಂತೆ ಕಂತೆಗಳ ಸಂತೆಯಲ್ಲಿ ರಾಜಕೀಯದ ಕೆಸರೆರಚಾಟದಲ್ಲಿ ನಟರ ರಿಯಲ್ ವ್ಯಕ್ತಿಕ್ವಕ್ಕೆ ದಕ್ಕೆ ತಂದಿರೋದಂತು ಸುಳಲ್ಲ..