Home Crime ಜೋತಿಷಿಯ ಮಾತು ಕೇಳಿ ಇಡೀ ಕುಟುಂಬವೇ ಬೆಂದು ಹೋದ ಕಥೆ ಇದು..! ಅಷ್ಟಕ್ಕೂ ಆ “ಕೊಲೆಗಾರ...

ಜೋತಿಷಿಯ ಮಾತು ಕೇಳಿ ಇಡೀ ಕುಟುಂಬವೇ ಬೆಂದು ಹೋದ ಕಥೆ ಇದು..! ಅಷ್ಟಕ್ಕೂ ಆ “ಕೊಲೆಗಾರ ಜೋತಿಷಿ” ಆ ಕುಟುಂಬ ಭೂಮಿಯಿಂದಲೇ ಮರೆಯಾಗಲು ಹೇಳಿದ ಮಾತು ಏನು.? ಏನಿದು ಕಥೆ..? ಸ್ಟೋರಿ ಓದಿ…

1538
0
SHARE

ಚಿಕ್ಕಬಳ್ಳಾಪುರದ ಎಪಿಎಂಸಿ ಬಡಾವಣೆಯ ಸರ್ ಎಂ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರಾದ ಅಶ್ವಥ್ ನಾರಾಯಣ್ ಅವರ ಕುಟುಂಬ ವಾಸವಿತ್ತು. ಮನೆಯಲ್ಲಿ ಪತ್ನಿ ಉಷಾ ಮತ್ತು ಮಕ್ಕಳಾದ ಸುಮಂತ್ ಹಾಗು ಸಾನ್ವಿ ವಾಸವಾಗಿದ್ರು.

ಅಶ್ವಥ್ ನಾರಾಯಣ್ ಮತ್ತು ಉಷಾ ಇಬ್ಬರು ಚಿಕ್ಕಬಳ್ಳಾಪುರದ ಅಕ್ಕಪಕ್ಕದ ಊರಿನವರು. ಅಶ್ವಥ್ ಅವರು ದಿಬ್ಬೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕೆಲಸ ಮಾಡ್ತಿದ್ರು. ಹೀಗಾಗಿ ಓಡಾಡ್ಲಿಕ್ಕೆ ಹತ್ತಿರವಾಗ್ಲಿ ಅಂತ ಅವರು ಚಿಕ್ಕಬಳ್ಳಾಪುರದಲ್ಲಿ ವಾಸವಾಗಿದ್ರು. ಆ ಸಂಸಾರದಲ್ಲಿ ಎಲ್ಲವೂ ಇತ್ತು. ಸಂಸಾರವನ್ನ ಆ ಹೆಣ್ಣು ಮಗಳು ಅಚ್ಚುಕಟ್ಟಾಗಿ ನಿಭಾಯಿಸ್ತಿದ್ರು. ಅಲ್ಲದೆ ಆ ಮನೆಯಲ್ಲಿ ಪ್ರೀತಿ, ಮಮತೆ, ವಿಶ್ವಾಸಕ್ಕೆ ಯಾವುದೇ ಕೊರತೆಯಿರಲಿಲ್ಲ. ಹೀಗಾಗಿ ಆ ನಾಲ್ಕು ಜನ ಖುಷಿಯಾಗಿದ್ರು.ಬದುಕೋದಕ್ಕೆ ಪ್ರೀತಿ, ಪ್ರೇಮದ ಹೊರತಾಗಿ ಇನ್ನೇನು ಬೇಕು ಅಲ್ವಾ. ಅದೇ ರೀತಿ ಇವರಿಗೆ ಅದ್ಯಾವುದರಲ್ಲೂ ಕೊರತೆಯಿರಲಿಲ್ಲ.

ಸರ್ಕಾರಿ ಕೆಲಸವು ಇದ್ದಿದ್ರಿಂದ ಅವರ ಬದುಕಿನ ಬಂಡಿ ಸರಾಗವಾಗಿ ಸಾಗ್ತಿತ್ತು. ಹೀಗಿದ್ದಾಗಲೇ ಆ ಮನೆಯ ಮೇಲೆ ಅದ್ಯಾರ ವಕ್ರದೃಷ್ಠಿ ಬಿತ್ತೋ ಗೊತ್ತಿಲ್ಲ. ಆ ಸಂಸಾರ ನಾಶವಾಗೋದಕ್ಕೆ ಬೇಕಾದ ಸಂದರ್ಭವೊಂದು ನಿರ್ಮಾಣವಾಗೋದಕ್ಕೆ ಶುರುವಾಗಿತ್ತು. ಉಷಾ ಅವ್ರಿಗೆ ತಮ್ಮ ಮಕ್ಕಳು ಅಂದ್ರೆ ತುಂಬಾನೇ ಪ್ರೀತಿ. ಆ ಮಕ್ಕಳ ಭವಿಷ್ಯವನ್ನ ಚೆನ್ನಾಗಿ ನಿರ್ಮಿಸಬೇಕು ಅಂತ ಅವ್ರು ಕನಸುಕಂಡಿದ್ರು. ಆ ಮಕ್ಕಳು ಹುಟ್ಟಿದಾಗ ಮಕ್ಕಳ ಜನ್ಮ ಜಾತಕವನ್ನ ಬರೆಸಿದ್ರು. ಆದ್ರೆ ಆ ಜಾತಕವನ್ನ ಯಾರ ಹತ್ತಿರವಾದ್ರು ತೋರಿಸಿ ಮಕ್ಕಳ ಭವಿಷ್ಯ ಹೇಗಿದೆ ಅನ್ನೋದನ್ನ ತಿಳಿದುಕೊಳ್ಳಬೇಕು ಅನ್ನೋ ಮನಸ್ಸಾಗಿತ್ತು. ಅಲ್ಲದೆ ಜಾತಕದಲ್ಲಿ ಏನಾದ್ರು ಗಂಡಾಂತರ ಇದೆಯಾ ಅಂತಾನು ನೋಡೋದಕ್ಕೆ ಅವರು ಮನಸ್ಸು ಮಾಡಿದ್ರು.ಹೀಗೆ ಅವ್ರು ತಮ್ಮ ಮಕ್ಕಳ ಜಾತಕವನ್ನ ಜ್ಯೋತಿಷಿಗಳೊಬ್ಬರ ಹತ್ತಿರ ತೆಗೆದುಕೊಂಡು ಹೋಗಿದ್ರು.

ಅಲ್ಲಿ ಹೋಗಿ ತಮ್ಮ ಮಕ್ಕಳ ಭವಿಷ್ಯ ಹೇಗಿದೆ. ಅವರಿಗೆ ಒಳಿತಾಗೋದಕ್ಕೆ ಏನು ಮಾಡೇಬೇಕು ಅಂತ ಕೇಳೋದಕ್ಕೆ ಹೋಗಿದ್ರು. ಅವ್ರು ಎಷ್ಟು ವರ್ಷಗಳಿಂದ ಆ ವ್ಯಕ್ತಿಯ ಬಳಿಗೆ ಹೋಗ್ತಿದ್ರೋ ಗೊತ್ತಿಲ್ಲ. ಅವರ ಮೇಲೆ ಅದೆಷ್ಟು ನಂಬಿಕೆಯಿಟ್ಟಿದ್ರು ಅನ್ನೋದು ಗೊತ್ತಿಲ್ಲ. ಹೀಗೆ ಅವರ ಮುಂದೆ ಹೋಗಿ ಮಕ್ಕಳ ಜಾತಕವನ್ನ ತೋರಿಸಿದ್ರು. ಆದ್ರೆ ಆ ಜಾತಕ ನೋಡ್ತಿದ್ದ ಹಾಗೆ ಆ ಜ್ಯೋತಿಷಿ ವಜ್ರಕಾಯ ಮೂವಿಯಲ್ಲಿ ಶಿವಣ್ಣನ ಜಾತಕ ನೋಡಿ ಸ್ವಾಮಿ ಕಣ್ಣು ಬಿಡೋ ಹಾಗೆ ಕಣ್ಣುಬಿಟ್ಟಿದ್ದ. ಅಯ್ಯಯ್ಯೋ ಅನಾಹುತವಾಗಿದೆ ಇದು ಜಾತಕನ ಅಂತ ಉಷಾ ಅವರ ಬಳಿ ಆತಂಕ ತೋಡಿಕೊಂಡಿದ್ದಾನೆ.

ಇಲ್ಲೇ ನೋಡಿ ಜ್ಯೋತಿಷಿಗಳಿಗೆ ಸುಳ್ಳುಕೋರರಿಗೂ ಇರೋ ವ್ಯತ್ಯಾಸ. ಜ್ಯೋತಿಷ್ಯ ಇರೋದು ಮನುಕುಲದ ಒಳಿತಿಗಾಗಿ. ಆ ಶಾಸ್ತ್ರ ಹೇಳೋದು ಎಲ್ಲವೂ ನಿಜವಲ್ಲದೇ ಇದ್ರು ಸುಳ್ಳಂತು ಅಲ್ಲ. ಹಾಗಂತ ಅದ್ರಲ್ಲಿ ಇರೋದೆಲ್ಲವು ಜ್ಯೋತಿಷಿಗೆ ಗೊತ್ತಾದ್ರೆ ಒಳ್ಳೆಯದನ್ನ ಮಾತ್ರವೇ ಹೇಳಬೇಕು. ಮತ್ತು ಮುಂದೆ ಇಂತಹದ್ದೊಂದು ಪರಿಹಾರ ಕಾರ್ಯ ಮಾಡಿ ಮಂಗಳವಾಗುತ್ತೆ ಅಂತ ಹೇಳಬೇಕು. ಇದು ಜ್ಯೋತಿಷ್ಯದ ಪ್ರಾಥಮಿಕ ಹಂತದಲ್ಲೇ ಭೋಧಿಸಲಾಗುತ್ತೆ. ಮನುಷ್ಯ ಮುಂದಿನ ಭವಿಷ್ಯ ತುಂಬಾ ತೊಂದರೆಯಿಂದ ಕೂಡಿದ್ರೆ ಅಥವಾ ಅನಾಹುತ ಸಂಭವಿಸುವಂತಿದ್ರೆ ಅದನ್ನ ಪೂರ್ಣವಾಗಿ ಎದುರಿಗೆ ಕುಳಿತಿರುವ ವ್ಯಕ್ತಿಗೆ ಹೇಳುವಂತಿಲ್ಲ. ಪ್ರತಿಯೊಂದು ವೃತ್ತಿಯಲ್ಲು ಒಂದು ವೃತ್ತಿ ಧರ್ಮ ಅನ್ನೋದಿರುತ್ತೆ.

ಈ ಜ್ಯೋತಿಷ್ಯ ಶಾಸ್ತ್ರದಲ್ಲೂ ಕೂಡ ಅದನ್ನ ಪಾಲಿಸ್ತಾರೆ.ಆದ್ರೆ ಅವತ್ತು ಅಲ್ಲಿ ಜ್ಯೋತಿಷ್ಯ ಹೇಳೋದಕ್ಕೆ ಕುಳಿತ್ತಿದ್ದ ವ್ಯಕ್ತಿಗೆ ಅದರ ಪರಿವೇ ಇರಲಿಲ್ಲ. ನಾನು ಹೇಳ್ತಿರೋ  ವಿಷಯದಿಂದ ಮುಂದೆ ಎಂತಹ ಅನಾಹುತ ಆಗುತ್ತೆ ಅನ್ನೋ ಭವಿಷ್ಯವೇ ಆತನಿಗೆ ಗೊತ್ತಿರಲಿಲ್ಲ. ಆತ ಅವತ್ತು ಅವರನ್ನ ಕಳುಹಿಸಿ ಅವರಿಗೆ ಕೆಲವೊಂದು ಪರಿಹಾರದ ಮಾರ್ಗವೇನು ಅಂತ ಹೇಳಿ ಕಳುಹಿಸಿದ್ರೆ ಖಂಡಿತಲಾಗಿಯು ಆ ಮನೆ ಸ್ಮಶಾನವಾಗ್ತಿರಲಿಲ್ಲ. ಆದ್ರೆ ಆ ಬುದ್ಧಿಭ್ರಮಣೆಯಾಗಿದ್ದ ಸ್ವಾಮಿ ಆಕೆಯ ಮುಂದೆ ಅದೇನನ್ನೋ ಒದರಿ ಹೋಗಿದ್ದ. ಆತನ ಮಾತನ್ನ ಕೇಳ್ತಿದ್ರೆ ಹೆತ್ತ ತಾಯಿಗೆ ಕರುಳು ಕಿತ್ತು ಬರೋದಕ್ಕೆ ಶುರುವಾಗಿತ್ತು. ಮಕ್ಕಳೇ ನಮ್ಮ ಸರ್ವಸ್ವ ಅಂತಿದ್ದವರಿಗೆ ನಿಮ್ಮ ಮಕ್ಕಳ ಮುಂದಿನ ಭವಿಷ್ಯ ಚೆನ್ನಾಗಿಲ್ಲ.

ಅವ್ರು ಜೀವನದಲ್ಲಿ ತುಂಬಾ ತೊಂದರೆ ಅನುಭವಿಸ್ತಾರೆ ಅಂದ್ರೆ ಯಾರಿಗೆ ತಾನೇ ಭಯವಾಗೋದಿಲ್ಲ ಹೇಳಿ.ಮಕ್ಕಳಿಗೆ ಸಣ್ಣ ಪಟ್ಟು ಹುಷಾರಿಲ್ಲ ಅಂದ್ರೇನೆ ತಾಯಿಯ ಕರುಳು ಚುರುಕ್ ಅನ್ನುತ್ತೆ. ಇನ್ನು ಇವರ ಭವಿಷ್ಯವೇ ಸರಿಯಿಲ್ಲ ಅಂದ್ರೆ ಆಕೆ ಹೇಗೆ ತಾನೇ ತಡೆದುಕೊಳ್ತಾಳೆ ಹೇಳಿ. ಹೀಗೆಆಕೆ ತನ್ನ ಮಕ್ಕಳ ಜಾತಕವನ್ನ ತಗೊಂಡು ದುಃಖದಲ್ಲಿ ವಾಪಸ್ ಮನೆಗೆ ಬಂದಿದ್ಲು. ಆದ್ರೆ ಮನೆಗೆ ಬಂದ್ರು ಯಾವುದೇ ಕೆಲಸದಲ್ಲಿ ಆಸಕ್ತಿಯಿರಲಿಲ್ಲ. ಆಕೆಗೆ ಇನ್ನು ಯಾವುದು ಬೇಡ ಅಂತ ಅನಿಸಿಬಿಟ್ಟಿತ್ತು. ಮಕ್ಕಳ ಜಾತಕ ಹೀಗ್ಯಾಕೆ ಆಗಿದೆ ಅನ್ನೋದು ಅವರನ್ನ ಕಾಡೋದಕ್ಕೆ ಶುರುವಾಗಿತ್ತು. ರಾತ್ರಿ ಗಂಡ ಮನೆಗೆ ಬಂದಾಗ್ಲೂ ಅವರಿಗೆ ಇದೇ ವಿಷಯವನ್ನ ತಿಳಿಸಿದ್ದಾರೆ.

ಆಗ ಅಶ್ವಥ್ ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬೇಡ. ದೇವರು ಎಲ್ಲದಕ್ಕೂ ದಾರಿ ತೋರಿಸ್ತಾನೆ ಅಂತ ಹೇಳಿದ್ರು. ಅಲ್ಲದೆ ಯಾವತ್ತೋ ಆಗೋ ವಿಚಾರಕ್ಕೆ ಈಗ್ಯಾಕೆ ತಲೆ ಕೆಡಿಸಿಕೊಳ್ತೀಯಾ ಅಂತಾನು ಬೈದು ಬುದ್ದಿ ಹೇಳಿದ್ರು.ಆದ್ರೆ ಅವರಿಗೆ ಯಾರು ಹೇಳಿದ್ರು ಕನ್ವಿನ್ಸ್ ಮಾಡೋದಕ್ಕೆ ಸಾಧ್ಯವೇ ಇರಲಿಲ್ಲ. ಅವರ ಜಾತಕದಲ್ಲಿ ಅಂತಹದ್ದು ದೋಷ ಏನಿದೆ ಆನ್ನೋದು ಅವರಿಗೆ ಗೊತ್ತಿರಲಿಲ್ಲ. ಏನಾದ್ರು ಇದ್ರೆ ಅದಕ್ಕೆ ಸಾಕಷ್ಟು ಪರಿಹಾರ ಮಾರ್ಗಗಳಿದೆ ಅದನ್ನ ಮಾಡಿದ್ರೆ ಆಯ್ತು ಅನ್ನೋ ಪಾಸಿಟಿವ್ ಥಿಂಕಿಂಗ್ ಬರಲೇ ಇಲ್ಲ. ಹೀಗಾಗಿ ಅವ್ರು ಇನ್ನಷ್ಟು ಡಿಪ್ರೆಷನ್ ಗೆ ಹೋದ್ರು. ಹಗಲು ರಾತ್ರಿ ಅನ್ನದೆ ಅವರಿಗೆ ಇದೇ ವಿಚಾರ ತಲೆಯಲ್ಲಿ ಕೊರೆಯೋದಕ್ಕೆ ಶುರುವಾಯ್ತು. ಆ ಜ್ಯೋತಿಷಿಯ ಹತ್ತಿರ ಹೋಗಿ ಬಂದ ಮೇಲೆ ಅವ್ರು ಮೊದಲಿನಂತೆ ನಾರ್ಮಲ್ ಆಗಿ ಇರಲೇ ಇಲ್ಲ.

ಅವರಿಗೆ ಜಾತಕ ಮತ್ತು ಮಕ್ಕಳನ್ನ ಬಿಟ್ರೆ ಬೇರೆಯದರ ಬಗ್ಗೆ ಯೋಚಿಸೋದಕ್ಕೆ ಸಾಧ್ಯವೇ ಆಗಲಿಲ್ಲ.ಜ್ಯೋತಿಷಿಯ ಬಳಿ ಹೋಗಿ ಬಂದ ಮೇಲೆ ಉಷಾ ತುಂಬಾನೇ ಡಿಪ್ರೆಷನ್  ಗೆ ಹೋಗಿದ್ರು. ಆ ಕ್ಷಣಕ್ಕೆ ಅವಳ ಮನಸ್ಥಿತಿಗೆ ಹೇಗಿದೆ ಅನ್ನೋದನ್ನ ಯಾರು ಅರ್ಥ ಮಾಡಿಕೊಳ್ಳಲೇ ಇಲ್ಲ. ಮಾನಸಿಕವಾಗಿ ಅವರೆಷ್ಟು ಕುಸಿದು ಹೋಗಿದ್ರು ಅನ್ನೋದನ್ನ ಗುರುತಿಸೋದಕ್ಕೆ ಯಾರಿಗೂ ಸಾಧ್ಯವೇ ಆಗಿರಲಿಲ್ಲ. ಅವತ್ತು ಅದನ್ನ ಯಾರಾದ್ರು ಗುರಿತಿಸಿ ಅವರಿಗೆ ಒಂದು ಕೌನ್ಸಿಲಿಂಗ್ ಮಾಡಿಸಿದ್ರೆ ಖಂಡಿತ ಉಷಾ ಮತ್ತು ಅವರ ಮಕ್ಕಳು ಇಬ್ಬರು ಉಳಿಯುತ್ತಾ ಇದ್ರು. ಅವತ್ತು ಉಷಾ ಅವ್ರು ತಮ್ಮ ಗಂಡನ ಜೊತೆ ಕೊನೆಯದಾಗಿ ಮಕ್ಕಳ ಭವಿಷ್ಯದ ಬಗ್ಗೆ ಮಾತನಾಡಿದ್ರು. ಆದ್ರೆ ಅಶ್ವಥ್ ಅದನ್ನ ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ.

ಅವರಿಗೆ ಅದೇನೋ ಕೆಲಸ ಇದೆ ಅಂತ ಹೇಳಿ ಅವತ್ತು ಮನೆಯಿಂದ ಬೆಳಗ್ಗೆ ಬೇಗನೆ ಹೊರಟು ಹೋಗಿದ್ರು. ಆಗ ಮನೆಯಲ್ಲಿದ್ದದ್ದು ಇದೇ ಉಷಾ ಮತ್ತು ಇವರ ಇಬ್ಬರ ಮಕ್ಕಳು. ಆಕೆಗೆ ಆ ಸಮಯದಲ್ಲಿ ಅದನೇ ಅನ್ನಿಸಿತೋ ಗೊತ್ತಿಲ್ಲ. ಅಥವಾ ಅವರು ಅದೆಷ್ಟು ದಿನದಿಂದ ಆ ಪ್ಲಾನ್ ಮಾಡ್ಕೊಂಡಿದ್ರೋ ಗೊತ್ತಿಲ್ಲ. ಗಂಡ ಮನೆಯಿಂದ ಹೋಗ್ತಿದ್ದ ಹಾಗೆ ಆಕೆ ತನ್ನ ಕೈಯಿಂದಲೇ ಒಂದು ಡೆತ್ ನೋಟ್ ಬರೆದಿಟ್ಟಿದ್ಲು. ಅದರಲ್ಲಿ ನನ್ನ ಸಾವಿಗೆ ನಾನೇ ಕಾರಣ, ನಾನು ಜ್ಯೋತಿಷಿಯ ಬಳಿ ಮಕ್ಕಳ ಜಾತಕ ತೋರಿಸಿದ್ದೆ. ಅದರಲ್ಲಿ ಅವರು ಭವಿಷ್ಯ ಸರಿಯಿಲ್ಲ ಅಂತ ಹೇಳಿದ್ದಾರೆ. ಹೀಗಾಗಿ ಮುಂದೆ ಮಕ್ಕಳು ತೊಂದರೆ ಅನುಭವಿಸಬಾರದು ಅನ್ನೋ ಕಾರಣಕ್ಕೆ ನಾನು ಅವರನ್ನ ಕೊಲ್ಲುತ್ತಿದ್ದೇನೆ.

ಅಲ್ಲದೆ ನಾನು ಆತ್ಮಹತ್ಯೆ ಮಾಡಿಕೊಳ್ತಿದ್ದೀನಿ. ನನ್ನ ಸಾವಿಗೆ ನಾನೇ ಕಾರಣ ಆಕೆ ಡೆತ್ ನೋಟ್ ಬರೆದಿಟ್ಟಿದ್ಲು. ನಂತ್ರ ಮಕ್ಕಳನ್ನ ರೂಂಗೆ ಕರೆದುಕೊಂಡು ಹೋಗಿ ಇಬ್ಬರಿಗೂ ನಿದ್ರೆ ಮಾತ್ರೆ ತಿನ್ನಿಸಿದ್ದಾರೆ. ಮಾತ್ರೆ ನುಂಗಿದ ಕೆಲವೇ ಹೊತ್ತಿನನಲ್ಲಿ ಮಕ್ಕಳು ಗಾಢವಾದ ನಿದ್ರೆಗೆ ಜಾರಿದ್ದಾರೆ. ಅಲ್ಲದೆ ಅಲ್ಲದ ಅದು ಅವರ ಶಾಶ್ವತ ನಿದ್ದೆಯೂ ಆಗಿತ್ತು. ಮಕ್ಕಳು ಸತ್ತಿದ್ದಾರೆ ಅನ್ನೋದು ಕನ್ಫರ್ಮ್ ಆಗ್ತಿದ್ದ ಹಾಗೆ ಉಷಾ ಅದೇ ತಮ್ಮ ರೂಂನ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅಲ್ಲಿಗೆ ಕೆಲವೇ ಹೊತ್ತಿನಲ್ಲಿ ಮೂವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಮೇಷ್ಟ್ರು ಮನೆಯಲ್ಲಿ ಇಂತಹದ್ದೊಂದು ಘಟನೆ ನಡೆದು ಹೋಗಿದೆ ಅನ್ನೋದು ಹೊರ ಜಗತ್ತಿಗೆ ಗೊತ್ತೇ ಇರಲಿಲ್ಲ.

ಯಾರದ್ದೋ ಒಂದು ಮಾತಿಗೆ ಇಲ್ಲಿ ಮೂರು ಹೆಣಗಳು ಬಿದ್ದು ಹೋಗಿತ್ತು. ಬೆಳಗ್ಗೆ ಕಿಲಕಿಲ ಅಂತ ನಗ್ತಿದ್ದ ಮಕ್ಕಳ ಸದ್ದು ಅಡಗಿ ಹೋಗಿತ್ತು. ತಾವು ಸಾಯೋವರೆಗು ಅಮ್ಮನ ಸೀರೆ ಹಿಡ್ಕೊಂಡು ಆಟವಾಡ್ತಿದ್ದ ಮಕ್ಕಳಿಗೆ ಇನ್ನೇನು ಕೆಲವೇ ನಿಮಿಷಗಳಲ್ಲಿ ನಾವು ಸಾಯ್ತೀವಿ ಅನ್ನೋದು ಗೊತ್ತೇ ಇರಲಿಲ್ಲ. ಅಮ್ಮ ನಮ್ಮನ್ನೆಲ್ಲಾ ಕರ್ಕೊಂಡು ಮತ್ತೊಂದು ಲೋಕಕ್ಕೆ ಹೋಗ್ತಾಳೆ ಅನ್ನೋದರ ಅರಿವು ಆ ಕಂದಮ್ಮಗಳಿಗೆ ಇರಲಿಲ್ಲ, ಅಪ್ಪ ಮನೆಯಿಂದ ಹೊರಗೆ ಹೋಗುವಾಗ ಟಾಟಾ ಮಾಡಿದ ಮಕ್ಕಳಿಗೆ ಅಪ್ಪನಿಗೆ ನಾವು ಶಾಶ್ವತವಾಗಿ ಬಾಯ್ ಹೇಳ್ತಿದ್ದೀವಿ ಅನ್ನೋದು ಗೊತ್ತೇ ಇರಲಿಲ್ಲ.ಅದಾದ ನಂತ್ರ ಕೆಲ ಹೊತ್ತಿನ ನಂತ್ರ ಅಶ್ವಥ್ ಮನೆಗೆ ಬಂದಿದ್ದಾರೆ. ಆದ್ರೆ ಮನೆಯ ಒಳಗಿನಿಂದ ಬಾಗಿಲು ಲಾಕ್ ಆಗಿತ್ತು.

ಕಾಲಿಂಗ್ ಬೆಲ್ ಮಾಡಿದ್ರು ಯಾರು ಬಾಗಿಲು ತೆಗೆಯುತ್ತಿಲ್ಲ. ಅಲ್ಲದೆ ಎಲ್ಲಾದ್ರು ಲಾಕ್ ಮಾಡ್ಕೊಂಡು ಹೊರಗೆ ಹೋಗಿದ್ದಾರಾ ಅಂತ ಅಂದುಕೊಂಡು ಸ್ವಲ್ಪ ಹೊತ್ತು ಹೊರಗೆ ಕೂತಿದ್ರು. ಅವ್ರಿಗೆ ಒಳಗೆ ಆಗಿರೋ ಅನಾಹುತದ ಬಗ್ಗೆ ಗೊತ್ತೇ ಇರಲಿಲ್ಲ. ಹೀಗೆ ಅವ್ರು ಕಾಯುತ್ತಾ ತುಂಬಾ ಹೊತ್ತಾದ ಮೇಲೆ ಅದ್ಯಾಕೋ ಅವರಿಗೆ ಅನುಮಾನ ಕಾಡಿತ್ತು. ಹೀಗಾಗಿ ಯಾವುದಕ್ಕೂ ಇರಲಿ ಅಂತ ಕಿಟಕಿಯಲ್ಲಿ ಇಣುಕಿ ನೋಡಿದ್ರೆ ಅವರ ಹೃದಯ ನಿಂತು ಹೋಗುವ ದೃಶ್ಯ ಕಾಣಸಿತ್ತು. ಆ ಕಿಟಿಕಿಯ ಕಂಡಿಯಲ್ಲಿ ಅಸ್ಪಷ್ಟವಾಗಿ ಉಷಾರ ದೇಹ ನೇತಾಡುತ್ತಿರೋದು ಕಂಡಿತ್ತು.ತಕ್ಷಣಕ್ಕೆ ಅವರಿಗೆ ಏನು ಮಾಡಬೇಕು ಅನ್ನೋದು ಗೊತ್ತಾಗಲಿಲ್ಲ.

ನಂತ್ರ ಅಕ್ಕಪಕ್ಕದವರನ್ನ ಓಡಿ ಹೋಗಿ ಕರ್ಕೊಂಡು ಬಂದು ಬಾಗಿಲು ಒಡೆದು ನೋಡಿದ್ರೆ, ಎಲ್ಲವೂ ಅದಾಗ್ಲೇ ಮುಗಿದು ಹೋಗಿತ್ತು. ಅಶ್ವಥ್ ಅಲ್ಲೇ ತಲೆ ಮೇಲೆ ಕೈ ಹೊತ್ತು ಕುಳಿತುಬಿಟ್ಟಿದ್ರು. ಅವರ ಕನಸು ಮನಸ್ಸಿನಲ್ಲೂ ಅಂದುಕೊಳ್ಳದ್ದು ಅಲ್ಲಿ ಆಗಿ ಹೋಗಿತ್ತು. ಬೆಳಗ್ಗೆಯಷ್ಟೇ ನಂದಗೋಲದಂತಿದ್ದ ಮನೆ ಈಗ ಸ್ಮಶಾನವಾಗಿ ಹೋಗಿತ್ತು. ಅವರಿಗೆ ಏನು ಮಾಡಬೇಕು ಅನ್ನೋದು ಗೊತ್ತೇ ಆಗಲಿಲ್ಲ. ಆಗಲೂ ಅವರಿಗೆ ತನ್ನ ಹೆಂಡತಿ ಮಕ್ಕಳನ್ನ ಕೊಂದು ತಾನ್ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅನ್ನೋದು ಗೊತ್ತೇ ಆಗಲಿಲ್ಲ. ನಂತ್ರ ಸ್ಥಳಿಯರೇ ಪೊಲೀಸ್ರಿಗೆ ಮಾಹಿತಿ ಕೊಟ್ಟಿದ್ರು.

ಈ ವಿಷಯ ತಿಳಿಯುತ್ತಾ ಇದ್ದ ಹಾಗೆ ಅವತ್ತು ಎಸ್ಪಿ ಕಾರ್ತಿಕ್ ರೆಡ್ಡಿಯವರೇ ಸ್ಥಳಕ್ಕೆ ಭೇಟಿ ನೀಡಿದ್ರು. ಅಲ್ಲದೆ ಪೊಲೀಸ್ರು ಇಡೀ ಮನೆಯನ್ನ ಶೋಧಿಸಿದಾಗ ಅವರಿಗೆ ಡೆತ್ ನೋಟ್ ಸಿಕ್ಕಿತ್ತು. ಅದ್ರಲ್ಲಿ ಈ ಜ್ಯೋತಿಷಿಯ ಪುರಾಣ ಬಯಲಾಗಿತ್ತು. ಆ ಡೆತ್ ನೋಟ್ ನೋಡಿ ಪೊಲೀಸ್ರಿಗೆ ಒಂದು ಸಲ ಆತಂಕವಾಗಿತ್ತು. ಜನ ಇವತ್ತಿಗೂ ಇದನ್ನೆಲ್ಲಾ ಇಷ್ಟು ಸೀರಿಯಸ್ ಆಗಿ ತೆಗೆದುಕೊಳ್ತಾರ ಅಂತ ಅವ್ರು ನೊಂದುಕೊಂಡಿದ್ರು. ಉಷಾರ ವಿರುದ್ಧ ಮಕ್ಕಳ ಕೊಂದ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ರು. ಕಾನೂನು ಪ್ರಕಾರವಾಗಿ ಮಾಡಬೇಕಾದ ಕೆಲಸವನ್ನ ಅವ್ರು ಮಾಡಿದ್ರು.

ಉಷಾರಿಗೆ ತಮ್ಮ ಮಕ್ಕಳ ಬಗ್ಗೆ ಅಪಾರವಾದ ಕಾಳಜಿ ಇತ್ತು. ಆದ್ರೆ ಅದು ಅವರನ್ನ ಸಾವಿಗೆ ದವಡೆಗೆ ಸಿಲುಕಿಸುತ್ತೆ ಅನ್ನೋದು ಯಾರಿಗೂ ಗೊತ್ತೇ ಇರಲಿಲ್ಲ. ಯಾವತ್ತೋ ಅನಾಹುತ ಆಗುತ್ತೆ ಅನ್ನೋ ಹೆದರಿಕೆಯಲ್ಲಿ ಉಷಾ ತಮ್ಮ ಅಮೂಲ್ಯವಾದ ಸಂಸಾರಿಕ ಜೀವನವನ್ನ ಹಾಳು ಮಾಡ್ಕೊಂಡಿದ್ರು. ಅಷ್ಟೇ ಅಲ್ಲ ತಮ್ಮ ವೀಕ್ನೆಸ್ ಮೈಂಡ್ ಗೆ ಬುದ್ಧಿಯನ್ನ ಕೊಟ್ಟು ಮಕ್ಕಳನ್ನ ಸಹ ಕೊಂದು ಬಿಟ್ಟಿದ್ರು. ಆ ವಿಧಿಗೆ ಅದೇನು ಹೇಳಬೇಕು ಅನ್ನೋದಕ್ಕೆ ಅಲ್ಲಿ ಯಾರ ಬಳಿಯು ಉತ್ತರವೇ ಇರಲಿಲ್ಲ. ಒಂದು ಚೆನ್ನಾಗಿದ್ದ ಸಂಸಾರ ಕ್ಷಣ ಮಾತ್ರದಲ್ಲಿ ಹಾಳಾಗಿದ್ದನ್ನ ನೋಡೋದಕ್ಕೆ ಅಲ್ಲಿದ್ದವರಿಗೆ ಯಾರಿಗೂ ಇಷ್ಟವೇ ಇರಲಿಲ್ಲ.

LEAVE A REPLY

Please enter your comment!
Please enter your name here