Home Crime ಜ್ಯುವೆಲರಿ ಶಾಪ್‌ನಲ್ಲಿ ಖತರ್ನಾಕ್ ಕಳ್ಳಿಯರ ಕೈಚಳಕ..! ಎಕ್ಸ್‌ಚೇಂಜ್‌ಗೆ ಬಂದು ಹೊಸ ಚಿನ್ನ ಕಳ್ಳತನ ಸಿಸಿಟಿವಿಯಲ್ಲಿ ಸೆರೆ…

ಜ್ಯುವೆಲರಿ ಶಾಪ್‌ನಲ್ಲಿ ಖತರ್ನಾಕ್ ಕಳ್ಳಿಯರ ಕೈಚಳಕ..! ಎಕ್ಸ್‌ಚೇಂಜ್‌ಗೆ ಬಂದು ಹೊಸ ಚಿನ್ನ ಕಳ್ಳತನ ಸಿಸಿಟಿವಿಯಲ್ಲಿ ಸೆರೆ…

535
0
SHARE

ಇಬ್ಬರು ಖತರ್ನಾಕ್ ಕಳ್ಳಿಯರು ಹಳೇ ಚಿನ್ನದ ಸರ ಮಾರಾಟ ಮಾಡಿ ಹೊಸ ಒಡವೆ ಖರೀದಿಸುವ ವೇಳೆ ಅಂಗಡಿಯವನಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ…ಪರೀಕ್ಷೆಗೆ ಅಪ್ಪಟ್ಟ ಬಂಗಾರದ ಸರ ನೀಡಿದ ಮಹಿಳೆಯರು, ಬಳಿಕ ಮಾತಿನ ಮಧ್ಯದಲ್ಲಿ ಅಸಲಿ ಚಿನ್ನದ ಸರವನ್ನು ಅದಲು ಬದಲು ಮಾಡಿ ನಕಲಿ ಸರ ನೀಡಿ ಜ್ಯುವೆಲರಿ ಶಾಪ್ ಅವರನ್ನ ಯಾಮಾರಿಸಿದ್ದಾರೆ…

ತುಮಕೂರು‌ ಜಿಲ್ಲೆ ಚಿಕ್ಕನಾಯಕಹಳ್ಳಿಯ ಹೇಮಾವತಿ ಜ್ಯುವೆಲ್ಲರಿ ಶಾಪ್ ನಲ್ಲಿ ನಡೆದ ಈ ವಂಚನೆ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ..ಜ್ಯುವೆಲರಿ ಅಂಗಡಿಗೆ ಬಂದ ಇಬ್ಬರು ಖತರ್ನಾಕ್ ಕಳ್ಳಿಯರು 2 ಲಕ್ಷ ಮೌಲ್ಯದ ನಕಲಿ ಚಿನ್ನದ ಸರ ಮಾರಾಟ ಮಾಡಿ ಹೊಸ ಒಡವೆ ಖರೀದಿಸಿ ಪರಾರಿಯಾಗಿದ್ದಾರೆ…

ಹಳೇ ಸರ ಮಾರಾಟ ಮಾಡಿ ಹೊಸ ಒಡವೆಗಳನ್ನು ಖರೀದಿಸುವ ನೆಪದಲ್ಲಿ ಬಂದಿದ್ದ ಕಳ್ಳಿಯರು, ಅಂಗಡಿಯವನನ್ನ ಯಾಮಾರಿಸಿ ಮಾತಿನ ಮಧ್ಯೆ ತಮ್ಮ ಕೈಚಳಕ ತೋರಿಸಿ ಮಕ್ಮಲ್ ಟೋಪಿ ಹಾಕಿದ್ದಾರೆ..ಈ ವಂಚನೆಗೆ ಸಂಬಂಧಿಸಿ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

LEAVE A REPLY

Please enter your comment!
Please enter your name here