Home Crime ಟಾಲಿವುಡ್‌ನಲ್ಲಿ ಧೂಳೆಬ್ಬಿಸುತ್ತಿದೆ ರಾಜಮೌಳಿ ನೆಕ್ಟ್ ಪ್ರಾಜೆಕ್ಟ್..! ಆರ್.ಆರ್.ಆರ್ ಸೀಕ್ರೆಟ್ ಬಿಚ್ಚಿಟ್ಟಿದ್ದ ಸ್ಟಾರ್ ಡೈರೆಕ್ಟರ್…

ಟಾಲಿವುಡ್‌ನಲ್ಲಿ ಧೂಳೆಬ್ಬಿಸುತ್ತಿದೆ ರಾಜಮೌಳಿ ನೆಕ್ಟ್ ಪ್ರಾಜೆಕ್ಟ್..! ಆರ್.ಆರ್.ಆರ್ ಸೀಕ್ರೆಟ್ ಬಿಚ್ಚಿಟ್ಟಿದ್ದ ಸ್ಟಾರ್ ಡೈರೆಕ್ಟರ್…

716
0
SHARE

ರಾಜಮೌಳಿ ಕೇವಲ ಒಂದು ಹೆಸರಲ್ಲ ಬಿಡಿ. ’ಹೀ ಇಸ್ ಎ ಮಾಸ್ಟರ್ ಆಫ್ ಇಂಡಿಯನ್ ಸಿನಿಮಾ’. ಹಾಲಿವುಡ್ ಸಿನಿಮಾ ಮಂದಿ ಕೂಡ ರಾಜಮೌಳಿಯ ಸಿನಿಮಾ ಮ್ಯಾಜಿಕ್ ನೋಡಿ ಒಂದು ಕ್ಷಣ ನಾಚಿ ತಲೆತಗ್ಗಿಸುತ್ತಾರೆ. ರಾಜಮೌಳಿಯ ಕಾರ್ಯವೈಖರಿ ಎಷ್ಟೋ ಹೊಸ ನಿರ್ದೆಶಕರ ಪಾಲಿಗೆ ಟೆಸ್ಕ್ಟ್ ಬುಕ್ ನಂತಿರುತ್ತೆ. ರಾಜಮೌಳಿ ಸಿನಿಮಾ ಮಾಡ್ತಾರೆ ಅಂದ್ರೆ ಅದು ರೆಕಾರ್ಡ್‌ಗಳನ್ನ ಧೂಳಿಪಟ ಮಾಡೋ ಮನರಂಜನೆಯ ಮೃಷ್ಟಾನ್ನ ಭೋಜನವಾಗೊದಂತೂ ಗ್ಯಾರಂಟಿ ಅನ್ನುತ್ತೆ ಟಾಲಿವುಡ್ ಅಂಗಳ.

‘ಈಗ ಹಾಗೂ ಬಾಹುಬಲಿ’ ಸೀರಿಸ್‌ನ ಅಭೂತಪೂರ್ವ ಯಶಸ್ಸಿನ ನಂತರ ರಾಜಮೌಳಿ ಯಾವ ಸಿನಿಮಾ ಮಾಡ್ತಾರಪ್ಪ ಎನ್ನುವ ದೊಡ್ಡ ಕುತೂಹಲ ಎಲ್ಲರ ಮನಸ್ಸುಗಳಲ್ಲಿ ಮನೆ ಮಾಡಿತ್ತು. ರಾಜಮೌಳಿ ‘ಆರ್.ಆರ್.ಆರ್’ ಸಿನಿಮಾ ಅನೌನ್ಸ್ ಮಾಡಿದ್ದೇ ತಡ. ರಾಜಮೌಳಿ ಅಭಿಮಾನಿಗಳಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಅಲ್ಲದೇ ಸಿನಿಮಾದ ಟೈಟಲ್ ಬಗ್ಗೆಯೂ ಜನ ತಲೆಗೆ ಬೇಜಾನ್ ಹುಳ ಬಿಟ್ಟುಕೊಂಡ್ರು.

ಸಿನಿಮಾದ ಸ್ಟೋರಿಯ ಬಗ್ಗೆ ಎಲ್ಲೂ ತುಟಿಬಿಚ್ಚದ ರಾಜಮೌಳಿ ಟೈಟಲ್ ಸೀಕ್ರೆಟ್ ಏನು ಎನ್ನುವುದರ ಬಗ್ಗೆಯೂ ತುಟಿಕ್‌ಪಿಟಕ್ ಎನ್ನಲಿಲ್ಲ. ಕಥೆ ಹಾಗೂ ಟೈಟಲ್ ಪ್ರೇಕ್ಷಕನಿಗೆ ಮರೀಚಿಕೆಯಾಗೇ ಉಳಿದುಬಿಡ್ತು.ಆದರೆ ಈಗ ಎಲ್ಲವೂ ರಿವೀಲಾಗೋ ಸುಸಮಯ ಹತ್ತಿರ ಬಂದಿದೆ. ರಾಮ್‌ಚರಣ್ ಹಾಗೂ ಜ್ಯೂನಿಯರ್ ಎನ್.ಟಿ.ಆರ್. ಪಾರ್ಟನರ್‌ಶಿಪ್ ಸಿನಿಮಾದಲ್ಲಿ ಹೇಗೆ ಮೂಡಿಬಂದಿದೆ ಎನ್ನುವ ಸಣ್ಣ ಹಿಂಟ್ ಸಿಕ್ಕಿದೆ. ಆರ್.ಆರ್.ಆರ್ ಸಿನಿಮಾದ ಎರಡನೇ ಹಂತದ ಶೂಟಿಂಗ್ ಪ್ರಾರಂಭವಾಗಿರೋ ಹಿನ್ನೆಲೆಯಲ್ಲಿ ಖುದ್ದಾಗಿ ರಾಜಮೌಳಿಯೇ ತಮ್ಮ ಟ್ವೀಟರ್ ಖಾತೆಯಲ್ಲಿ ಈ ವಿಷಯವನ್ನ ಬಹಿರಂಗಪಡಿಸಿದ್ದಾರೆ.

ಎರಡನೇ ಹಂತದ ‘ಆರ್.ಆರ್.ಆರ್’ ಶೂಟಿಂಗ್‌ನಲ್ಲಿ ಬಹುತೇಕ ರಾಮ್‌ಚರಣ್ ಹಾಗೂ ಜ್ಯೂನಿಯರ್ ಎನ್.ಟಿ.ಆರ್ ಸೀನ್‌ಗಳೇ ರಾರಾಜಿಸಲಿದೆಯಂತೆ. ರಾಮ್‌ಚರಣ್ ಹಾಗೂ ಜ್ಯೂನಿಯರ್ ಎನ್.ಟಿ.ಆರ್ ಸೀನ್‌ಗಳನ್ನ ಶೂಟ್ ಮಾಡುವ ಸಂತೋಷದಲ್ಲಿ ರಾಜಮೌಳಿ ಬ್ಯಾಕ್ ಇನ್ ದಿ ಸೆಟ್ಸ್ ಎಂದು ಬರೆದುಕೊಂಡಿದಾರೆ. ೩೦೦ ಕೋಟಿ ಬಿಗ್‌ಬಜೆಟ್‌ನಲ್ಲಿ ತಯಾರಾಗ್ತೀರೊ ‘ಆರ್.ಆರ್.ಆರ್’ ಸಿನಿಮಾ ಎರಡು ಭಾಗಗಳಲ್ಲಿ ಬರುತ್ತೆ ಎಂದು ತೆಲುಗು ಸಿನಿಮಾ ಪಂಡಿತರಿಗೆ ಮಾಹಿತಿ ಸಿಕ್ಕಿದೆ.

ಫಸ್ಟ್ ಟೈಮ್ ಅಣ್ಣ-ತಮ್ಮಂದಿರ ಪಾತ್ರಗಳಲ್ಲಿ ಮಿಂಚ್ತಿರೋ ರಾಮ್‌ಚರಣ್ ಹಾಗೂ ಜ್ಯೂನಿಯರ್ ಎನ್.ಟಿ.ಆರ್ ಸಹಜವಾಗಿಯೇ ಸಿನಿಮಾದ ಮೈಲೇಜ್ ಹೆಚ್ಚಿಸಿದ್ದಾರೆ.ಒಂದು ಮೂಲದ ಪ್ರಕಾರ ಈಗಾಗಲೇ ‘ಆರ್.ಆರ್.ಆರ್’ ಶೀರ್ಷಿಕೆಯ ಗುಟ್ಟು ಕೂಡ ರಟ್ಟಾಗಿದೆ. ’ರಾಮ ರಾವಣ ರಾಜ್ಯಂ’ ಎನ್ನುವುದೇ ಸಿನಿಮಾ ಟೈಟಲ್ ಅರ್ಥ ಅಂತ ಎಲ್ಲರ ಬಾಯಲ್ಲೂ ಓಡಾಡುತಿದೆ. ಇದರ ಬೆನ್ನಲ್ಲೇ ರಾಜಮೌಳಿ ’ಆರ್.ಆರ್.ಆರ್’ ಸಿನಿಮಾ ಈಗೀನ ಟ್ರೆಂಡ್‌ಗೆ ಹೇಳಿಮಾಡಿಸಿದ ಹಾಗಿರುತ್ತೆ ಎನ್ನುವ ಹೊಸ ಸರ್‌ಪ್ರೈಸ್ ಬೇರೆ ಕೊಟ್ಟಿದಾರೆ.

ಹಾಗೇ ನೋಡಿದ್ರೆ ಜ್ಯೂನಿಯರ್ ಎನ್.ಟಿ.ಆರ್ ಹಾಗೂ ರಾಮ್‌ಚರಣ್ ಸಿನಿಕೆರಿಯರ್‌ಗಳಿಗೆ ಒಂದು ಗೋಲ್ಡನ್ ಟಚ್ ಕೊಟ್ಟಿದ್ದೇ ಈ ರಾಜಮೌಳಿ. ಈಗಲೂ ‘ಆರ್.ಆರ್.ಆರ್’ ಸಿನಿಮಾದ ಮೂಲಕ ಇಡೀ ಭಾರತೀಯ ಚಿತ್ರರಂಗವೇ ತಿರುಗಿನೊಡುವಂತ ಸಿನಿಮಾವಾಗಿತ್ತೆ ಎನ್ನುವ ಕ್ಲಿಯರ್ ಗಾಸಿಪ್ ಹರಿದಾಡ್ತಿವೆ. ಬಿಡುಗಡೆಗೂ ಮುಂಚೆಯೇ ಇಷ್ಟೆಲ್ಲಾ ಧೂಳೆಬ್ಬಿಸಿರೋ ‘ಆರ್.ಆರ್.ಆರ್’ ಸಿನಿಮಾ ರಿಲೀಸ್ ಆದ ಮೇಲೆ ಬಾಕ್ಸ್‌ಆಫಿಸ್‌ನಲ್ಲಿ ಯಾವ ರೀತಿ ರೆಕಾರ್ಡ್‌ಳನ್ನ ಚಿಂದಿ ಚಿತ್ರಾನ್ನ ಮಾಡುತ್ತೆ ಅನ್ನೋದೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ..

LEAVE A REPLY

Please enter your comment!
Please enter your name here