Home Crime ಟಿಕ್ ಟಾಕ್ ಬೆಡಗಿ ಜೊತೆ ಪತಿ ಲವ್ವಿ ಡವ್ವಿ..! ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತ ಹೆಂಡತಿ...

ಟಿಕ್ ಟಾಕ್ ಬೆಡಗಿ ಜೊತೆ ಪತಿ ಲವ್ವಿ ಡವ್ವಿ..! ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತ ಹೆಂಡತಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ..!?

1156
0
SHARE

ಅವಳದು 15 ವರ್ಷಗಳ ಸುಖ ಸಂಸಾರ.ಎರಡು ಮಕ್ಕಳು ನೆಮ್ಮದಿಯ ಜೀವನ ಹೀಗೆ ಚನ್ನಾಗಿ ಬದುಕು ಸಾಗಿಸುತ್ತಿದ್ದಳು, ಗಂಡ ಮಾಡಿದ ಅನೈತಿಕ ಸಂಭಂದದಿಂದ ಬೆಸತ್ತು ಹೋಗಿದ್ದಳು, ಹೀಗೆ ಗಂಡ ಹಾಗೂ ಸವತಿಯಿಂದ ನಿತ್ಯ ಕಿರುಕಳ ಅನುಭವಿಸುತ್ತಿರುವಾಗಲೇ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾಳೆ.

ಈ ಪೊಟೊದಲ್ಲಿರುವ ಮಹಿಳೆ ಹೆಸರು ಸುಖಿದೇವಿ, ಕಳೆದ 10 ವರ್ಷಗಳಿಂದ ಯಲಹಂಕ ನ್ಯೂ ಟೌನ್ ಬಳಿ ಪತಿ ಜಗದೀಶ್ ಜೊತೆ ವಾಸಾಗಿದ್ದಳು. ಆದ್ರೆ, ಪತಿ ಜಗದೀಶ್ ಟಿಕ್ ಟಾಕ್ ವಿಡಿಯೋದಲ್ಲಿ ಕಾಣಿಸಿಕೊಳ್ಳುವ ವಂದನಾ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಕದ್ದು ಮುಚ್ಚಿ ಮೂರು ವರ್ಷಗಳಿಂದ ಲವ್ವಿ ಡವ್ವಿ ನಡೆಸುತ್ತಿದ್ದರು. ಇವರಿಬ್ಬರು ಎಂಜಾಯ್ ಮಾಡುವ ಫೋಟೋವನ್ನು ಸುಖಿದೇವಿಗೆ ಕಳುಹಿಸಿಕೊಡುತ್ತಿದ್ದರು ಅಷ್ಟೊಂದು ಜೋರಾಗಿ ಇತ್ತು ಇವರ ಪ್ರೇಮ ಕಹಾನಿ.ಇದರ ನಡುವೆಯೇ ಈಗ ಸುಖಿದೇವಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾಳೆ.

ಜಗದೀಶ್ -ವಂದನ ತಬ್ಬಿ ಮುದ್ದಾಡ್ತಾ ಸುತ್ತಾಡು ಪೊಟೊ ನೋಡಿದ ಬಳಿಕ ಸುಖಿದೇವಿ ಕೋಪಗೊಂಡಿದ್ದಾಳೆ. ವಂದನ ಸಹವಾಸ ಬಿಡುವಂತೆ ತಾಕೀತು ಮಾಡಿದ್ದರು. ಗಂಡ ಹೆಂಡತಿ ನಡುವೆ ಎರಡು ಮೂರು ಬಾರಿ ಹಿರಿಯರು ರಾಜಿ ಮಾಡಿಸಿದ್ದರು. ಅದೇನೋಯ್ತೋ ನಿನ್ನೆ ರಾತ್ರಿ ಸುಖಿದೇವಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸುಖಿದೇವಿ ಸಂಬಂಧಿಕರು ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆ ಮುಂದೆ ಜಮಾಯಿಸಿದರು. ಜಗದೀಶ್ ಹಾಗೂ ವಂದನಾ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಸದ್ಯಕ್ಕೆ ಜಗದೀಶ್ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಏನೆ ಆಗಲಿ ಪ್ರೇಯಸಿ ಸಂಗ ಮಾಡಿ ಸಪ್ತಪದಿ ಸಾವಿಗೆ ಕಾರಣವಾದ ಜಗದೀಶ್‌ಗೆ ತಕ್ಕ ಶಿಕ್ಷೆ ಆಗಲಿ ಎಂಬುದೇ ಸಂಬಂಧಿಕರ ಒತ್ತಾಯವಾಗಿದೆ.

LEAVE A REPLY

Please enter your comment!
Please enter your name here