Home District ಟಿಪ್ಪು ಜಯಂತಿಗೆ ಉದ್ಘಾಟಕರೇ ಗೈರು..!? ಸಿಎಂ HDK ಮಾರ್ಗವನ್ನೇ ಅನುಸರಿಸಿದ DCM..! ಟಿಪ್ಪು ಜಯಂತಿಯ ಪೂರ್ಣ...

ಟಿಪ್ಪು ಜಯಂತಿಗೆ ಉದ್ಘಾಟಕರೇ ಗೈರು..!? ಸಿಎಂ HDK ಮಾರ್ಗವನ್ನೇ ಅನುಸರಿಸಿದ DCM..! ಟಿಪ್ಪು ಜಯಂತಿಯ ಪೂರ್ಣ ಹೊಣೆ ಸಚಿವ ಜಮೀರ್ ಹೆಗಲಿಗೆ

680
0
SHARE

ರಾಜ್ಯ ಸರ್ಕಾರದಲ್ಲಿರುವ ಗೊಂದಲ,ಸಮನ್ವಯತೆ-ಸಂವಹನದ ಕೊರತೆ ಟಿಪ್ಪು ಜಯಂತಿ ವೇಳೆಯೂ ಮತ್ತೆ ಅನಾವರಗೊಂಡಿತು..ಅಧಿಕೃತವಾಗಿ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸಿಕೊಳ್ಳದೇ ಕಾರ್ಯಕ್ರಮಕ್ಕೆ ಸಿಎಂ ಗೈರಾಗಿದ್ದಲ್ಲದೆ, ಉದ್ಘಾಟನೆ ಮಾಡಬೇಕಿದ್ದ ಡಿಸಿಎಂ ಪರಮೇಶ್ವರ್ ಕೂಡ ಆಗಮಿಸಲಿಲ್ಲ..ಕೊನೆ ಹಂತದಲ್ಲೂ ಆದ ಗೊಂದಲಗಳಿಗೆ ಸಚಿವ ಜಮೀರ್ ಅಹ್ಮದ್ ತೇಪೆ ಹಚ್ಚುವ ಕೆಲಸ ಮಾಡಿದರು..

ಅತ್ತ ಯಾವ ಅಧಿಕೃತ ಕಾರ್ಯಕ್ರಮ ಇಲ್ಲದೆಯೂ ಮಾಜಿ ಸಿಎಂ ಸಿದ್ದರಾಮಯ್ಯ ಪೇಟ ತೊಟ್ಟು ವಿಜೃಂಭಿಸಿದರು.ಪಟ್ಟು ಬಿಡದೆ ಟಿಪ್ಪು ಜಯಂತಿ ಆಚರಿಸಲು ಮುಂದಾಗಿದ್ದು ರಾಜ್ಯ ಸರ್ಕಾರ..ಆದ್ರೆ ಆಚರಣೆ ಸಮಾರಂಭದ ಬಗ್ಗೆಯೂ ಗೊಂದಲ ಮಾಡಿಕೊಂಡು ತೇಪೆ ಹಚ್ಚುವ ಕೆಲಸ ಮಾಡಿದರು..ಅಚ್ಚರಿಯೆಂದರೆ ಸಚಿವ ಜಮೀರ್ ಅಹ್ಮದ್ ಅವರಿಗೆ ಸಮಾರಂಭದ ಟೈಮಿಂಗ್ ಬಗ್ಗೆಯೇ ಸರಿಯಾದ ಮಾಹಿತಿ ಹೋಗಿರಲಿಲ್ಲ..

ಮೂರು ದಿನಗಳ ಹಿಂದೆಯೇ ಅಧಿಕೃತ ಆಹ್ವಾನ ಪತ್ರಿಕೆ ಮುದ್ರಿಸಿದ್ದರೂ ಜಮೀರ್ ಅಹ್ಮದ್ ಅವರು ಮಾತ್ರ ಟೈಮಿಂಗ್ಸ್ ಗೊತ್ತಿರಲಿಲ್ಲ.. ಇನ್ನು ಟಿಪ್ಪು ಜಯಂತಿಯಿಂದ ಮೊದಲೇ ಕಾರಣ ಕೊಟ್ಟು ಹಿಂದೆ ಸರಿದಿದ್ದ ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಸಹಜವಾಗಿ ಭಾಗವಹಿಸಿರಲಿಲ್ಲ..ಆದ್ರೆ ಸಮಾರಂಭ ಉದ್ಘಾಟಿಸಬೇಕಿದ್ದ ಡಿಸಿಎಂ ಪರಮೇಶ್ವರ್ ಕೂಡ ಆಗಮಿಸದಿರುವುದು ಇನ್ನಷ್ಟು ಗೊಂದಲ ಸೃಷ್ಟಿಸಿತು.

ಡಿಸಿಎಂ ಪರಮೇಶ್ವರ್ ಅವರು ದಿಢೀರ್ ಅಂತ ಸಿಂಗಾಪುರಕ್ಕೆ ತೆರಳಿರೋದು ತಡವಾಗಿ ಗೊತ್ತಾಗಿದೆ..ಇನ್ನೇನು ಸಮಾರಂಭಕ್ಕೆ ಒಂದು ಗಂಟೆ ಇರುವಾಗ ಡಿಸಿಎಂ ಬರದೇ ಇರೋದು ಸ್ಪಷ್ಟವಾಗಿದೆ..ಆಗ ಎಚ್ಚೆತ್ತುಕೊಂಡ ಸಚಿವ ಜಮೀರ್ ಅಹ್ಮದ್, ಹಿರಿಯ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಕೊನೆ ಕ್ಷಣದಲ್ಲಿ ವಿನಂತಿಸಿಕೊಂಡು ವೇದಿಕೆಗೆ ಕರೆ ತಂದರು.

ಟಿಪ್ಪು ಜಯಂತಿ ಆಚರಿಸಲು ರಾಮನಗರಕ್ಕೆ ತೆರಳಬೇಕಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನಲ್ಲಿಯೇ ಇದ್ದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿದರು..ಟಿಪ್ಪು ಜಯಂತಿ ಕುರಿತು ಬಿಜೆಪಿ ನಾಯಕರ ನಿಲುವನ್ನು ಅವರು ಕಟುವಾಗಿ ಟೀಕಿಸಿದರು.ಇಷ್ಟೆಲ್ಲ ಗೊಂದಲದ ನಡುವೆ, ಮಾಜಿ ಸಿಎಂ ಸಿದ್ದರಾಮಯ್ಯ ಟಿಪ್ಪು ಜಯಂತಿಯನ್ನು ತಮ್ಮ ನಿವಾಸದಲ್ಲೇ ಖುಷಿಯಿಂದ ಆಚರಿಸಿದರು..

ಮುಖಂಡರು ತೊಡಿಸಿದ ಪೇಟಾ ತೊಟ್ಟು, ಖಡ್ಗ ಹಿಡಿದು ವಿಜೃಂಭಿಸಿದರು..ಟಿಪ್ಪು ಜಯಂತಿ ವಿರೋಧಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.ಇನ್ನು ಜಿಲ್ಲಾಮಟ್ಟದ ಟಿಪ್ಪು ಜಯಂತಿ ಸಮಾರಂಭಕ್ಕೆ ಪ್ರತಿಭಟನೆಯ ಬಿಸಿ ತಟ್ಟಿತ್ತು..ಸಂಪ್ರದಾಯಕ್ಕೆಂಬಂತೆ ಟಿಪ್ಪು ಜಯಂತಿ ಆಚರಿಸಿದ್ದು ಬಿಟ್ಟರೆ ಎಲ್ಲೂ ಹೇಳಿಕೊಳ್ಳುವಷ್ಟು ಸಂಭ್ರಮ ಕಾಣಲಿಲ್ಲ..

LEAVE A REPLY

Please enter your comment!
Please enter your name here