Home District ಟಿಪ್ಪು ಜಯಂತಿಗೆ ಮಖ್ಯಮಂತ್ರಿಯೇ ಗೈರು..!? CM ಬದಲಿಗೆ DCM ಪರಮೇಶ್ವರ್ ಉದ್ಘಾಟನೆ..!? ಟಿಪ್ಪು ಜಯಂತಿ ವಿರುದ್ಧ...

ಟಿಪ್ಪು ಜಯಂತಿಗೆ ಮಖ್ಯಮಂತ್ರಿಯೇ ಗೈರು..!? CM ಬದಲಿಗೆ DCM ಪರಮೇಶ್ವರ್ ಉದ್ಘಾಟನೆ..!? ಟಿಪ್ಪು ಜಯಂತಿ ವಿರುದ್ಧ ಸಿಡಿದೆದ್ದ BJP..!

483
0
SHARE

ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಟಿಪ್ಪು ಜಯಂತಿ ಗೆ ಗೈರು ಹಾಜರಾಗಲಿದ್ದಾರೆ. ನಾಳೆ ವಿಧಾನಸೌದದ ಬಾಂಕ್ವೆಟ್ ಹಾಲ್ ನಲ್ಲಿ ನಡೆಯಲಿರೋ ಪ್ರಧಾನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೇ ಆಹ್ವಾನ ನೀಡಿಲ್ಲ.

ಕನ್ನಡ ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡಿರುವ ಆಹ್ವಾನ ಪತ್ರಿಕೆಯಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಹೆಸರು ಕಾಣೆಯಾಗಿದೆ.ಉದ್ಘಾಟಕರಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಭಾಗವಹಿಸುವುದಾಗಿ ಆಹ್ವಾನಪತ್ರಿಕೆಯಲ್ಲಿ ಮುದ್ರಿತವಾಗಿದೆ.

ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡರೆ ಕೇಡಾಗುತ್ತದೆ ಎಂಬ ಕಾರಣಕ್ಕೆ ಸಿಎಂ ಕುಮಾರಸ್ವಾಮಿ ಹಿಂಜರಿದರೋ ಅಥವಾ ಪೂರ್ವ ನಿಗದಿತ ಕಾರ್ಯ ಕ್ರಮಗಳ ಕಾರಣ ಟಿಪ್ಪು ಜಯಂತಿಯಲ್ಲಿ ಅವರು ಪಾಲ್ಗೊಳ್ಳುತ್ತಿಲ್ಲವೋ ಸ್ಪಷ್ಟವಾಗಿಲ್ಲ.ನಾಳೆ ರಾಜ್ಯ ಸರ್ಕಾರ ಆಚರಿಸೋ ಟಿಪ್ಪು ಜಯಂತಿಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ.

ಹೀಗಾಗಿ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಎಲ್ಲಾ ಜಿಲ್ಲಾಧಿಕಾರಿ ಕಚೇರಿಗಳ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರಿನ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.

ಸಂಸದ ಪಿ.ಸಿ.ಮೋಹನ್, ನಗರದ ಬಿಜೆಪಿ ಶಾಸಕರು, ಬಿಬಿಎಂಪಿ ಕಾರ್ಪೊರೇಟರ್ಸ್ ಮುಖಂಡರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಹಿಂದೂ ಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ವಿರೋಧದ ನಡುವೆಯೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಮ್ಮಿಶ್ರ ಸರಕಾರ ಟಿಪ್ಪು ಜಯಂತಿ ಆಚರಣೆಗೆ ಸಿದ್ಧತೆ ನಡೆಸಿರೋದು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು, ಸರಕಾರದ ಆದೇಶದಂತೆ ಟಿಪ್ಪು ಜಯಂತಿ ಆಚರಣೆಗೆ ಎಲ್ಲಾ ಜಿಲ್ಲಾಡಳಿತಗಳು ಸಿದ್ಧತೆ ನಡೆಸಿವೆ.

LEAVE A REPLY

Please enter your comment!
Please enter your name here