Home KARNATAKA ಮೆಲ್ಬೋರ್ನ್ ನಲ್ಲಿ ಟೀಂ ಇಂಡಿಯಾ ಸೂಪರ್ ಆಟ..! ಬಾಕ್ಸಿಂಗ್ ಡೇ ಟೆಸ್ಟ್‌ ಗೆಲುವಿನ ಸನಿಹದಲ್ಲಿ...

ಮೆಲ್ಬೋರ್ನ್ ನಲ್ಲಿ ಟೀಂ ಇಂಡಿಯಾ ಸೂಪರ್ ಆಟ..! ಬಾಕ್ಸಿಂಗ್ ಡೇ ಟೆಸ್ಟ್‌ ಗೆಲುವಿನ ಸನಿಹದಲ್ಲಿ ಕೊಹ್ಲಿ ಪಡೆ..!

771
0
SHARE

ಮೆಲ್ಬೋರ್ನ್ ನಲ್ಲಿ ನಡೆಯುತ್ತಿರೋ ಬಾಕ್ಸಿಂಗ್ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಭಾರತ ಗೆಲುವಿನತ್ತ ದಾಪುಗಾಲು ಇಟ್ಟಿದೆ. ಟೀಂ ಇಂಡಿಯಾ ನೀಡಿದ್ದ 399 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿರೋ ಆಸೀಸ್ 4ನೇ ದಿನದಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿದೆ. ಅಲ್ಲದೇ ಇನ್ನು ಎರಡು ವಿಕೆಟ್ ಮಾತ್ರ ಬಾಕಿ ಉಳಿದರುವಂತೆಯೇ ಗೆಲುವಿಗಾಗಿ 141 ರನ್ ಗಳಿಸಬೇಕಾದ ಅಗತ್ಯವಿದೆ.

ಮೆಲ್ಬೋರ್ನ್ ನಲ್ಲಿ ನಡೆಯುತ್ತಿರೋ ಆಸ್ಟ್ರೇಲಿಯಾ ವಿರುದ್ಧದ 3ನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ಸನಿಹದಲ್ಲಿದೆ. ಈಗಾಗ್ಲೆ ದ್ವಿತೀಯ ಇನ್ನಿಂಗ್ಸ್ ನಲ್ಲಿ ಆಸೀಸ್ 8 ವಿಕೆಟ್ ಗಳನ್ನ ಕಳೆದುಕೊಂಡು ದಿನದ ಅಂತ್ಯಕ್ಕೆ 258 ರನ್ ಗಳಿಸಿದೆ. ಹೀಗಾಗಿ ಟೀಂ ಇಂಡಿಯಾ ಗೆಲುವಿಗೆ ಕೇವಲ 2 ವಿಕೆಟ್ ಬಾಕಿ ಇದೆ.54 ರನ್ ಗಳೊಂದಿಗೆ 4ನೇ ದಿನದಾಟ ಪ್ರಾರಂಭಿಸಿದ ಭಾರತ, ದ್ವಿತೀಯ ಇನ್ನಿಂಗ್ಸ್ ನಲ್ಲಿ 106ಕ್ಕೆ 8 ವಿಕೆಟ್ ಕಳೆದುಕೊಂಡು ಡಿಕ್ಲೇರ್ ಮಾಡಿಕೊಂಡಿತು.

ಕನ್ನಡಿಗ ಮಯಾಂಕ್ ಅಗರ್ವಾಲ್ 42 ಹಾಗೂ ರಿಶಬ್ ಪಂತ್ 33 ರನ್ ಗಳಿಸಿ ತಂಡ ಬೃಹತ್ ಮೊತ್ತ ಪೇರಿಸುವಲ್ಲಿ ನೇರವಾದ್ರು.ಭಾರತದ ನೀಡಿದ್ದ 399 ರನ್ ಗಳ ಸವಾಲನ್ನ ಬೆನ್ನಟ್ಟಿದ ಆಸೀಸ್ಗೆ ಆರಂಭದಲ್ಲೆ ಆಘಾತಕ್ಕೆ ಒಳಗಾಯ್ತು. ಆರೋನ್ ಫಿಂಚ್ 3, ಮಾರ್ಕಸ್ ಹ್ಯಾರಿಸ್ 13 , ಉನ್ಮಾನ್ ಖ್ವೋಜಾ 33, ಶಾನ್ ಮಾರ್ಷ್ 44 ಮತ್ತು ಟ್ರಾವಿಡ್ ಹೆಡ್ 34 , ಟಿಮ್ ಪೈನ್ 26, ಸ್ಟಾರ್ಕ್ 15 ರನ್ ಸಿಡಿಸಿದ್ರು.

ಪ್ಯಾಟ್ ಕಮಿನ್ಸ್ ಆಲ್ರೌಂಡ್ ಆಟಕ್ಕೆ ಕೊಹ್ಲಿಪಡೆ ಸುಸ್ತು:175 ರನ್ ಗಳಿಗೆ ಪ್ರಮುಖ 8 ವಿಕೆಟ್ ಗಳನ್ನ ಕಳೆದುಕೊಂಡು ಸಂಕಷ್ಟ ಸಿಲುಕಿದ್ದ ತಂಡಕ್ಕೆ ಆಲ್ರೌಂಡರ್ ಪ್ಯಾಟ್ ಕಮಿನ್ಸ್ ಆಧಾರವಾದ್ರು. ಆಸೀಸ್ ಪರ ಅದ್ಭುತ ಬೌಲಿಂಗ್ ನಿರ್ವಹಣೆ ಮಾಡಿ 6 ವಿಕೆಟ್ ಪಡೆದಿದ್ದ ಕಮಿನ್ಸ್, ಬ್ಯಾಟಿಂಗ್ ನಲ್ಲಿ ಅಜೇಯ 61 ಬಾರಿಸಿ ತಮ್ಮ ಖದರ್ ತೋರಿಸಿದ್ರು. ಇದ್ರಿಂದ 8 ಓವರ್ ಹೆಚ್ಚುವರಿಯಾಗಿ ತೆಗೆದುಕೊಂಡಿದ್ದರೂ ಭಾರತಕ್ಕೆ 4ನೇ ದಿನವೇ ಗೆಲುವು ತಕ್ಕದಂತೆ ನೋಡಿಕೊಂಡ್ರು.

ಇನ್ನೂ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಜಿದ್ದಾಜಿದ್ದಿಗೆ ಕಾರಣವಾಗಿದೆ. ನಿನ್ನೆ ರಿಷಬ್ ಪಂತ್ ಬ್ಯಾಟಿಂಗ್ ಮಾಡುತ್ತಿದ್ದಾಗ ಆಸೀಸ್ ಕ್ಯಾಪ್ಟನ್ ಟಿಮ್ ಪೈನ್, ನಾನು ನನ್ನ ಹೆಂಡತಿಯ ಜೊತೆ ಸಿನಿಮಾ ನೋಡಲು ಹೋಗುತ್ತೇನೆ. ನೀನು ನನ್ನ ಮಕ್ಕಳನ್ನು ನೋಡಿಕೊಳ್ಳುತ್ತೀಯ? ಎಂದು ಕಾಲೆಳೆದಿದ್ದರು. ಇದಕ್ಕೆ ಇಂದು ರಿಷಬ್ ಪಂತ್ ಮುಯ್ಯಿ ತೀರಿಸಿಕೊಂಡಿದ್ದಾರೆ. ಟಿಮ್ ಪೈನ್ ಬ್ಯಾಟಿಂಗ್ ಮಾಡುತ್ತಿದ್ದಾಗ ರಿಷಬ್ ಪಂತ್ ಪೈನ್ ಗೆ ತಾತ್ಕಾಲಿಕ ನಾಯಕ ಎಂದು ಕಾಲೆಳೆದಿದ್ದಾರೆ.

LEAVE A REPLY

Please enter your comment!
Please enter your name here