Home Cinema ಟ್ರೋಲಿಗರ ವಿರುದ್ದ ರೋಚ್ಚಿಗೆದ್ದ ಸಮಂತಾ ಮಿಡಲ್ ಫಿಂಗರ್..?! ಸಮಂತಾ ವಾಟ್ಸಾಪ್ ಸ್ಟೇಟಸ್‌ಗೆ ಬೆರಗಾದ ಅಭಿಮಾನಿಗಳು…

ಟ್ರೋಲಿಗರ ವಿರುದ್ದ ರೋಚ್ಚಿಗೆದ್ದ ಸಮಂತಾ ಮಿಡಲ್ ಫಿಂಗರ್..?! ಸಮಂತಾ ವಾಟ್ಸಾಪ್ ಸ್ಟೇಟಸ್‌ಗೆ ಬೆರಗಾದ ಅಭಿಮಾನಿಗಳು…

580
0
SHARE

ನಾಗ್ ಚೈತನ್ಯ ಜೊತೆ ಸಮಂತಾ ಅನ್ನುವ ಸುಂದ್ರಿ ಮದುವೆಯಾದ್ಮೇಲೆ, ಅದೆಷ್ಟೋ.. ಪಡ್ಡೆಗಳ ಕನಸು ಭಗ್ನವಾಗಿತ್ತು. ಬಟ್. ಅಭಿಮಾನ.. ಅದು ಹಾಗೇ ಇತ್ತು. ಎಷ್ಟೇ ಆದ್ರೂ.. ಇಷ್ಟದ ನಟಿ ಅಂತ ಅಭಿಮಾನಿಗಳು ಅದೇ ಪ್ರೀತಿಯನ್ನ ಸಮಂತಾ ಮೇಲೆ ತೋರಿಸುತ್ತಿದ್ದರು. ಆದ್ರೆ ಇತ್ತೀಚೆಗೆ ಟ್ರೋಲಿಗರಿಂದ ಸಮಂತಾಗೆ ಸಿಕ್ಕಾಪಟ್ಟೆ ಕಿರಿಕಿರಿ ಉಂಟಾಗಿದ್ದು ತಮ್ಮ ಆಕ್ರೋಶವನ್ನು ಮೊಬೈಲ್‌ನಲ್ಲಿ ಸ್ಟೇಟಸ್ ಹಾಕಿಕೊಳ್ಳುವ ಮೂಲಕ ಟ್ರೋಲಿಗರಿಗೆ ಎಚ್ಚರಿಕೆ ನೀಡಿದ್ದಾರೆ.

ಸಮಂತಾ ಮೊದಲಿನಿಂದ್ಲೂ ಕಾಸ್ಟೂಮ್ ವಿಚಾರದಲ್ಲಿ ಅಥವಾ ಅವರು ಆಯ್ಕೆ ಮಾಡಿಕೊಳ್ಳುವ ಸಿನಿಮಾ ವಿಚಾರದಲ್ಲಿ ಬಹಳಾನೇ ಚ್ಯೂಸಿಯಾಗ್ತಾರೆ. ಹಾಗಾಗಿನೇ ಮದುವೆ ನಂತ್ರವೂ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಈಗ ಸಮಂತಾ ಅವರು ಹಾಕಿಕೊಂಡ ಕೆಲವು ಚಿತ್ರಗಳನ್ನು ನೋಡಿದ ನೆಟ್ಟಿಗರು ಉತ್ತಮ ರೆಸ್ಪಾನ್ಸ್ ಕೊಡುವ ಜೊತೆಗೆ ಸಮಂತಾ ವಿರುದ್ದ ಟ್ರೋಲ್ ಗಳನ್ನು ಮಾಡ್ತಿದ್ದಾರೆ. ಇದನ್ನೆಲ್ಲಾ ಸೈಲೆಂಟಾಗಿ ಗಮನಿಸಿರುವ ಸಮಂತಾ ವೈಲೆಂಟ್ ಆಗದೆ.

ತಮ್ಮ ವಾಟ್ಸಪ್ ಸ್ಟೇಟಸ್‌ನಲ್ಲಿ ಮಿಡಲ್ ಫಿಂಗರ್ ಇರುವ ಪೋಟೋ ಹಾಕುವ ಮೂಲಕ ತಿರುಗಿ ಬಿದ್ದಿದ್ದಾರೆ.ಸದಾ, ಫ್ಯಾನ್ ಗಳ ಮನಸನ್ನ ತಣಿಸುವ ನಿರ್ಧಾರಕ್ಕೆ ಬಂದ ಸಮಂತಾ, ಆಫ್ಟರ್ ಮ್ಯಾರೇಜ್.. ತುಂಬಾ ದಿನ ಚಿತ್ರರಂಗದಿಂದ ದೂರವೇನು ಉಳಿಲಿಲ್ಲ. ಥಟ್ ಅಂತ ಮತ್ತೆ, ಚಿತ್ರರಂಗದಲ್ಲಿ ಆಕ್ಟಿವ್ ಆದ ಸಮಂತಾ, ಕಳೆದ ವರ್ಷ.. ರಾಜು ಗರಿ ಗಾದಿ ೨, ಮರ್ಸಲ್, ಯೂ ಟರ್ನ್, ರಂಗಸ್ಥಳಂ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.

ಅಭಿಮಾನಿಗಳ ಮನತಣಿಸಿದ್ರು.ಸ್ಯಾಮ್ ಅಭಿನಯದ ಸಾಲು ಸಾಲು ಸಿನಿಮಾಗಳ, ಈ ವರ್ಷ ನಿಮ್ಮ ಮುಂದೆ ಬರಲಿವೆ. ಇದೇ ಹೊತ್ತಿನಲ್ಲಿ.. ಹೌದು.. ಸಮಂತಾ ಯು ಟರ್ನ್ ರಿಮೇಕ್‌ನಲ್ಲಿ ಕಾಣಿಸಿಕೊಂಡಿದ್ರು. ಸಮಂತಾ, ಯು ಟರ್ನ್‌ ಚಿತ್ರಕ್ಕೆ ಪ್ರೇಕ್ಷಕರಿಂದ ಸಿಕ್ಕ ರೆಸ್ಪಾನ್ಸ್ ಗೆ ಕ್ಲೀನ್ ಬೋಲ್ಡ್ ಆಗಿದ್ರು.ಇದೀಗ ಹೊಸ ರೀತಿಯ ಕಥೆಯ ಆಯ್ಕೆಯಲ್ಲಿ ಸಮಂತ ಬಿಝೀಯಾಗಿದ್ದಾರೆ.

ಆದರೆ ಸದ್ಯಕ್ಕೆ ನೆಟ್ಟಿಗರಿಂದ ವ್ಯಕ್ತವಾದ ಟ್ರೋಲಿಗೆ ಸಿಡಿಮಿಡಿಗೊಂಡಿದ್ದಾರೆ. ಅದೇನೇ ಇದ್ರು, ಸದ್ಯ ಟಾಲಿವುಡ್‌ನಲ್ಲಿ ಸಮಂತಾ ಧರಿಸಿರುವ ಕಾಸ್ಟೂಮ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದು, ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸಮಂತ ಕೂಲ್ ಆಗಿ ತಿರುಗೇಟು ನೀಡಿರೋದು ಟ್ರೋಲಿಗರ ಬಾಯಿಗೆ ಬೀಗ ಬಿದ್ದಂತಾಗಿರೋದು ಮಾತ್ರ ಸುಳ್ಳಲ್ಲ…

LEAVE A REPLY

Please enter your comment!
Please enter your name here