Home Cinema ಡಾಲಿಯನ್ನು ಕೊಂಡಾಡಿದ್ರು ’ಕಾಂಟ್ರವರ್ಷಿಯಲ್ ಡೈರೆಕ್ಟರ್’ RGV..! ಸೌಥ್ ಸಿನಿ ಇಂಡಸ್ಟ್ರಿಯಲ್ಲೇ ಇಲ್ಲವಂತೆ ಧನಂಜಯ್‌ನಂತ ಆಕ್ಟರ್..!!

ಡಾಲಿಯನ್ನು ಕೊಂಡಾಡಿದ್ರು ’ಕಾಂಟ್ರವರ್ಷಿಯಲ್ ಡೈರೆಕ್ಟರ್’ RGV..! ಸೌಥ್ ಸಿನಿ ಇಂಡಸ್ಟ್ರಿಯಲ್ಲೇ ಇಲ್ಲವಂತೆ ಧನಂಜಯ್‌ನಂತ ಆಕ್ಟರ್..!!

501
0
SHARE

ಯಸ್, ಧನಂಜಯ್‌ರನ್ನ ಬಾಯ್ತುಂಬ ಹೊಗಳಿದ್ದಾರೆ ಕಾಂಟ್ರವರ್ಶಿಯಲ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ನಿಮಗೆ ಗೊತ್ತಿರಲಿ, ಅದ್ಯಾವ ಘಳಿಗೆಯಲ್ಲಿ ರಾಮು ಟಗರು ನೋಡಿದ್ರೋ, ಆಗ್ಲೇ ಧನಂಜಯ್ ಅಭಿನಯಕ್ಕೆ ಆರ್.ಜಿ.ವಿ. ಮನ ಸೋತಿದ್ದರು. ಇದೇ ಕಾರಣಕ್ಕೆ ತಮ್ಮ ಭೈರವಗೀತಾವನ್ನೂ ಧನು ಮಡಿಲಿಗೆ ಹಾಕಿದ್ದರು ವರ್ಮಾ.

ಇದೀಗ ಭೈರವಗೀತಾದಲ್ಲಿನ ಅಭಿನಯಕ್ಕೆ ಮನಸೋತಿರುವ ರಾಮು, ಸೌಥ್ ಸಿನಿದುನಿಯಾದಲ್ಲೇ ಧನಂಜಯ್‌ನಂಥ ಮೆಥಡ್ ಆಕ್ಟರ್ ಇಲ್ಲ ಅಂದಿದ್ದಾರೆ. ಧನಂಜಯ್ ಟ್ಯಾಲೆಂಟ್ ಬಗ್ಗೆ ಕೆಮ್ಮಂಗಿಲ್ಲ ಅಂದಿದ್ದಾರೆ. ಇಂಥ ನಟನನ್ನ ನಾನೇ ನೋಡಿಯೇ ಇಲ್ಲಾ ಅಂದಿದ್ದಾರೆ.ಅಂದ ಹಾಗೇ ರಾಯಲಸೀಮೆಯಲ್ಲಿ ನಡೆಯುವ ವೈಲೆಂಟ್ ಸ್ಟೋರಿಯಲ್ಲಿ ಸೈಲೆಂಟ್ ಪ್ರೀತಿನೂ ಇದೆ. ಇದೇ ಪ್ರೀತಿಯಾಗಿ ಇಲ್ಲಿ ಇರಾಮೋರಾ ಕಾಣಸಿಗಲಿದ್ದಾರೆ.

ಬೋಲ್ಡ್ & ಬ್ಯೂಟಿಫುಲ್ ಇರಾ ಬಳಿ ಗ್ಲ್ಯಾಮರೂ ಇದೆ, ಅಭಿನಯದ ಗ್ರಾಮರೂ ಇದೆ ಅನ್ನೋದು ಭೈರವಗೀತಾ ಚಿತ್ರತಂಡದ ಅಭಿಪ್ರಾಯ.ಇನ್ನೂ ಚಿತ್ರಕ್ಕೆ ಸಿದ್ಧಾರ್ಥ್ ನಿರ್ದೇಶನವಿದೆ. ರಾಮು ಕ್ಯಾಂಪಿನಲ್ಲಿ ಎಡಿಟರ್ ಆಗಿದ್ದ ಸಿದ್ಧಾರ್ಥ್ ಭೈರವಗೀತಾ ಮೂಲಕ ನಿರ್ದೇಶಕನಾಗಿದ್ದಾರೆ. ಅದು, ಬರೀ ೨೩ರ ವಯಸಿನಲ್ಲಿ.

ಕನ್ನಡದ ಭೈರವಗೀತಾಗೆ ಕೆ.ಕಲ್ಯಾಣ್ ಸಾಹಿತ್ಯ ಕೃಷಿ ಇದೆ. ಇನ್ನೂ ಟಗರು ಚಿತ್ರಕ್ಕೆ ಸಂಭಾಶಣೆ ಗೀಚಿದ್ದ ಮಾಸ್ತಿ ಭೈರವಗೀತಾ ಪ್ರೇಮಕಥನಕ್ಕೂ ಭಾವನೆಗಳನ್ನ ತುಂಬಿದ್ದಾರೆ. ರಂಗಭೂಮಿ ಕಲಾವಿದ ಬಾಲು ಬಲ್ವಾಡಿ ನಾಯಕಿ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಭಾಸ್ಕರ್ ಬಂಡವಾಳ ಹೂಡಿದ್ದಾರೆ.ಸದ್ಯ, ಟ್ರೇಲರ್‌ನ್ನೊತ್ತು ಬಂದ ಭೈರವಗೀತಾ ಇದೇ ನವೆಂಬರ್ ೨೨ಕ್ಕೆ ತೆರೆಗೆ ಬರಲಿದೆ.

ಆದ್ರೆ ಇದು ಸಾಧ್ಯನಾ ಅನ್ನುವ ಚರ್ಚೆನೂ ಇದೇ ವೇಳೆ ಆರಂಭವಾಗಿದೆ. ಕಾರಣ, ಭೈರವಗೀತಾ ಕಥೆಯನ್ನ ಸೆನ್ಸಾರ್ ಮಂಡಳಿ ಇನ್ನೂ ನೋಡಿ ಕಣ್ತುಂಬಿಕೊಂಡಿಲ್ಲ. ಅದೇನೆ ಇರ‍್ಲಿ, ಭೈರವಗೀತಾ ಅಬ್ಬರ ಶುರುವಾಗಿದೆ. ಇನ್ನೇನ್ ಇದ್ರೂ ಭೈರವಗೀತಾ ನೋಡೋದೊಂದೆ ಬಾಕಿ. ಅಲ್ಲಿವರೆಗೂ ಟ್ರೇಲರ್ ನೋಡಿ, ಹಾಡುಗಳನ್ನ ಕೇಳಲು ಸಿದ್ಧರಾಗಿ. ಕಾರಣ, ಸಿನಿಮಾ ನವೆಂಬರ್ ೨೨ಕ್ಕೆ ಬಿಡುಗಡೆಯಾಗ್ತಿದ್ದರೆ, ಹಾಡುಗಳು ನವೆಂಬರ್ ೧೭ಕ್ಕೆ ಬಿಡುಗಡೆಯಾಗಲಿವೆ.

LEAVE A REPLY

Please enter your comment!
Please enter your name here