Home Cinema ಡಾಲಿ ಅವತಾರ ಹೆತ್ತು ಚೋರಿಯರ ಮನ ಗೆದ್ದಿದ್ದ ಧನು ಬೈರವ ರೂಪದಲ್ಲಿ ಅವಳಿಗೆ ಮಾಡಿದ “ಲಿಪ್...

ಡಾಲಿ ಅವತಾರ ಹೆತ್ತು ಚೋರಿಯರ ಮನ ಗೆದ್ದಿದ್ದ ಧನು ಬೈರವ ರೂಪದಲ್ಲಿ ಅವಳಿಗೆ ಮಾಡಿದ “ಲಿಪ್ ಲಾಕ್”ಗೆ ಮುರಿದುಬಿಟ್ರು ಹೆಣ್ಣೈಕ್ಳ ಮನಸು..!

2276
0
SHARE

ಸ್ಯಾಂಡಲ್‌ವುಡ್‌ನಲ್ಲಿ ಡಾಲಿ ಅಂತನೇ ಖ್ಯಾತಿ ಗಳಿಸಿರೊ ಗಾಂಧಿನಗರದ ಸ್ಪೆಶಲ್ ಸ್ಟಾರ್ ಧನಂಜಯ್‌ನ ಭೈರವನ ಅವತಾರ ನೋಡಿ ಚಿತ್ರಾಭಿಮಾನಿಗಳು ಬೆರಗಿದ್ದಾರೆ..ಮೊನ್ನೆ ಮೊನ್ನೆ ವರೆಗೂ ರಗಡ್ ಭೈರವನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಧನು ಈಗ ದಿಡೀರನೆ ಹಾಟ್ ಭೈರವನಾಗಿ ಎಂಟ್ರಿ ಕೊಟ್ಟಿದ್ದು ನೋಡಿ ಅಭಿಮಾನಿಗಳು ದಂಗ್ ಆಗಿದ್ದಾರೆ…

ಧನಂಜಯ್ ಮತ್ತು ಚಿತ್ರದ ನಾಯಕಿ ಇರಾ ನಡುವಿನ ಲಿಪ್ ಲಾಕ್ ದೃಶ್ಯವೀಗ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸುತ್ತಿದೆ.. ನಾಯಕಿ ಇರಾ ತುಟಿಗೆ ತುಟಿಯೊತ್ತಿ ಕಿಸ್ ಮಾಡುತ್ತಿರುವ ಧನಂಜಯ್ ನೋಡಿ ಕನ್ನಡಾಭಿಮಾನಿಗಳು ಬೆರಗಾಗಿದ್ದಾರೆ..ರಗಡ್ ಗೆಟಪ್‌ನಲ್ಲಿರೊ ರೋಮ್ಯಾಂಟಿಕ್ ಧನು ನೋಡಿ ಹೆಣ್ಣುಹೈಕ್ಳು ಹೊಟ್ಟೆಯುರಿದುಕೊಳ್ಳುತಿದ್ದಾರೆ..

ಅಷ್ಟೆಯಲ್ಲ, ಮತ್ತೊಂದು ಫೋಟೊದಲ್ಲಿ ಡಾಲಿ ನಾಯಕಿಯ ಎದೆಗೆ ಒರಗಿ ನಿದ್ರಿಸುತ್ತಿರುವ ಫೊಟೋ ಸಹ ಸಿಕ್ಕಾ ಪಟ್ಟೆ ವೈರಲ್ ಆಗಿದೆ..ಸದ್ಯ ರಿಲೀಸ್ ಆಗಿರೊ ಮೂರು ಫೋಟೊಗಳು ಸಹ ಆಕ್ಷನ್ ಸಿನಿಮಾದ ರೊಮ್ಯಾಂಟಿಕ್ ಧನಂಜಯ್‌ನ ಅನಾವರಣ ಆಗಿದೆ..ಸದ್ಯ ಪೋಸ್ಟರ್ ಗಳ ಮೂಲಕವೆ ಈ ಪರಿ ಸದ್ದು ಮಾಡುತ್ತಿರುವ ಭೈರವ ಗೀತ ಸೆಪ್ಟಂಬರ್ ೧ ಕ್ಕೆ ಟ್ರೈಲರ್ ಮೂಲಕ ಮತ್ತಷ್ಟು ದಂಗ್ ಬಡಿಸಲು ಸಜ್ಜಾಗಿದ್ದಾರೆ…

ಟಗರು ಚಿತ್ರದಲ್ಲಿ ಡಾಲಿ ಆಗಿ ಮಿಂಚಿದ್ದ ಧನಂಜಯ್ ಈಗ ಟಾಲಿವುಡ್‌ನಲ್ಲೂ ತನ್ನ ಖದರ್ ತೋರಿಸಲು ತೇರಿಸುತಿದ್ದಾರೆ…ಭೈರವ ಗೀತಾ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಸಿನಿಮಾ..ಸದ್ಯ ವೈರಲ್ ಆಗಿರೊ ಹಾಟ್ ಹಾಟ್ ಫೋಟೊಗಳನ್ನು ಸ್ವತಹ ರಾಮ್ ಗೋಪಾಲ್ ವರ್ಮ ಟ್ವಿಟ್ಟರ್‌ನಲ್ಲಿ ಅಪ್ ಲೋಡ್ ಮಾಡಿದ್ದಾರೆ…

ಈಗಗಾಲೆ ಚಿತ್ರದ ಫಸ್ಟ್ ಲುಕ್ ಅಂಡ್ ಟೀಸರ್ ರಿಲೀಸ್ ಆಗಿದ್ದು ಮಾಸ್ ಧನಂಜಯ್‌ನ ಅವತಾರ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು…ಇದ್ರ ನಡುವೆ ಈಗ ರೊಮ್ಯಾಟಿಂಕ್ ದೃಶ್ಯಗಳು ರಿಲೀಸ್ ಆಗಿರುವುದು ಚಿತ್ರದ ಮೇಲಿನ ಕುತೂಹಲವನ್ನು ದುಪ್ಪಟ್ಟು ಮಾಡಿದೆ..ಈ ರೀತಿಯ ಲಿಪ್ ಲಾಕ್ ದೃಶ್ಯಗಳಲ್ಲಿ ಧನಂಜಯ್ ಕಾಣಿಸಿಕೊಳ್ಳುತ್ತಿರವುದು ಇದೆ ಮೊದಲೇನಲ್ಲ..

ಹಿಟ್ ಟಗರು ಚಿತ್ರದಲ್ಲೂ ಸಹ ಧನಂಜಯ್ ಹಾಟ್ ಹಾಟ್ ಕಿಸ್ಸಿಂಗ್ ದೃಶ್ಯ ಸಿಕ್ಕಾ ಪಟ್ಟೆ ಸದ್ದು ಮಾಡಿತ್ತು.ಸದ್ಯ ಕನ್ನಡ ಮತ್ತು ತೆಲಗು ಎರಡು ಭಾಷೆ ಎರಡರಲ್ಲೂ ತಯಾರಾಗುತ್ತಿರುವ ಭೈರವ ಗೀತ ಚಿತ್ರದಲ್ಲೂ ಧನಂಜಯ್ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ…ಪೋಸ್ಟರ್ಸ್ ಮೂಲಕವೆ ಮೊದಲ ತೆಲುಗು ಸಿನಿಮಾದಲ್ಲಿ ಧನಂಜಯ್ ಈ ಪರಿ ಸೌಂಡ್ ಮಾಡುತಿದ್ದಾರೆ ಅಂದ್ರೆ ಸಿನಿಮಾ ಇನ್ನೇಗೆ ಇರಲಿದೆ ಅನ್ನೋ ಕುತೂಹಲ ಚಿತ್ರಾಭಿಮಾನಿಗಲ್ಲಿ ಕಾಡುತ್ತಿದೆ..

ಅಂದಹಾಗೆ ಭೈರವಗೀತ ಹಿಂಸಾತ್ಮಕ ಪ್ರೇಮಕಥೆಯ ಹೊಂದಿರೊ ಸಿನಿಮಾ…ಯುವ ನಿರ್ದೇಶಕ ಸಿದ್ದಾರ್ಥ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಚಿತ್ರ..ಪೊಸ್ಟರ್ ಮತ್ತು ಟೀಸರ್‌ಗಳ ಮೂಲಕ ಮೊದಲ ಚಿತ್ರದಲ್ಲೆ ನಿರ್ದೇಶಕ ಸಿದ್ದಾರ್ಥ ಸಹ ಚಿತ್ರರಂಗದಲ್ಲಿ ಬರವಸೆ ಮೂಡಿಸಿದ್ದಾರೆ… ಒಟ್ನಲ್ಲಿ ಪೋಸ್ಟರಗಳ ಮೂಲಕ ಎಲ್ಲರ ಗಮನ ಸೆಳೆದಿರೊ ಧನಂಜಯ್ ಸಿನಿಮಾದಲ್ಲಿ ಹೇಗೆ ಕಾಣಿಸಿಕೊಂಡಿದ್ದಾರೆ ಅನ್ನುವ ಕ್ಯುರಿಯಸಿಟಿ ಮತ್ತಷ್ಟು ಹೆಚ್ಚಾಗಿದೆ..

LEAVE A REPLY

Please enter your comment!
Please enter your name here