Home Latest ಡಿಎಂಕೆ ಪಾಲಾದ ರಜನಿಕಾಂತ್ ಪಕ್ಷದ ಕಾರ್ಯಕರ್ತರು..

ಡಿಎಂಕೆ ಪಾಲಾದ ರಜನಿಕಾಂತ್ ಪಕ್ಷದ ಕಾರ್ಯಕರ್ತರು..

479
0
SHARE

ಚೆನ್ನೈ: ತಮಿಳುನಾಡಿನ ಸೂಪರ್ ಸ್ಟಾರ್ ರಜನಿಕಾಂತ್ ಇತ್ತೀಚೆಗೆ ರಾಜಕೀಯ ಪ್ರವೇಶಿಸುವುದಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದೇ ತಡ ಕಳೆದ ಎರಡು ವರ್ಷಗಳ ಹಿಂದೆ ರಜನಿ ಸ್ಥಾಪಿಸಿದ್ದ RMM ರಜಿನಿ ಮಕ್ಕಳ ಮಂಡ್ ರಂ ಪಕ್ಷದ ಕಾರ್ಯಕರ್ತರು ಇತರ ಪಕ್ಷದ ಕಡೆ ಮುಖ ಮಾಡುತ್ತಿದ್ದಾರೆ..

ಹೌದು ಇನ್ನೇನು ರಾಜಕೀಯ ಪ್ರವೇಶ ಬಿಟ್ಟರು ತಲೈವಾ ಎನ್ನುವಾಗಲೇ ನಾಲ್ಕು ಪುಟಗಳ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ತಾವು ಯಾವುದೇ ಕಾರಣಕ್ಕೂ ರಾಜಕೀಯ ಪ್ರವೇಶಿಸುವುದಿಲ್ಲ ತಮ್ಮ ಆರೋಗ್ಯ ಸರಿಯಿಲ್ಲ ಆದರೆ ಜನಸೇವೆಯನ್ನು ಮುಂದುವರಿಸುತ್ತೇನೆ ಎಂಬ ಹೇಳಿಕೆಯನ್ನು ಬಿಡುಗಡೆ ಮಾಡಿ ಸ್ಪಷ್ಟವಾಗಿ ತಮ್ಮ ಅಭಿಮಾನಿಗಳಿಗೆ ಹಾಗೂ ತಮಿಳುನಾಡಿನ ಕೋಟ್ಯಾಂತರ ಜನರಿಗೆ ತಾವು ರಾಜಕೀಯ ಪ್ರವೇಶಿಸುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ರಜನಿಕಾಂತ್ ತಿಳಿಸಿದರು. ಆದರೆ ರಜನಿ ರಾಜಕೀಯ ಪ್ರವೇಶಿಸುತ್ತಾರೆ ಎಂದು ಕಳೆದ ಎರಡು ವರ್ಷಗಳ ಹಿಂದೆಯೇ ರಜಿನಿಕಾಂತ್ ಅಭಿಮಾನಿಗಳು RMM ಪಕ್ಷವನ್ನು ಸ್ಥಾಪಿಸಿದ್ದರು .

ಒಂದು ಕಾಲದಲ್ಲಿ ರಜನಿಕಾಂತ್ ಮಾತೆಂದರೆ ಶಾಸನ ಎಂಬಂತೆ ತಮಿಳುನಾಡಿನಲ್ಲಿ ಅವರ ಮಾತು ಶಾಸನದಂತೆ ಅಭಿಮಾನಿಗಳ ಮನಸ್ಸಿನಲ್ಲಿ ಜಾರಿಗೆ ಬರುತ್ತಿತ್ತು ಇದಕ್ಕೆ ಉದಾಹರಣೆ ಎನ್ನುವಂತೆ 1996 ರ ಚುನಾವಣೆಯಲ್ಲಿ ಜೈಲಲಿತಾ ಪಕ್ಷವನ್ನು ಸೋಲಿಸುವಂತೆ ಅಮೆರಿಕದಲ್ಲಿ ಕುಳಿತು ಹೇಳಿ ಒಂದು ಹೇಳಿಕೆಯನ್ನು ನೀಡಿದ ತಕ್ಷಣ ತಮಿಳುನಾಡಿನ ರಾಜಕೀಯ ಚಿತ್ರಣವೇ ಬದಲಾಗಿ ಹೋಯಿತು. ಆಗ ನಡೆದ ಚುನಾವಣೆಯಲ್ಲಿ ಜಯಲಲಿತಾರವರ ಎಐಎಡಿಎಂಕೆ ಪಕ್ಷ ಹೆಸರಿಲ್ಲದಂತೆ ಧೂಳಿಪಟ ವಾಗಿ ಕರುಣಾನಿಧಿಯವರ ಡಿಎಂಕೆ ಪಕ್ಷ ಅಧಿಕಾರಕ್ಕೆ ಬಂದು ಅವತ್ತು ಇಡೀ ದೇಶಕ್ಕೆ ರಜನಿಕಾಂತ ರವರ ಒಂದು ಮಾತಿನ ತಾಕತ್ತು ಎಲ್ಲರಿಗೂ ತಿಳಿಯಿತು.

ರಜನಿಕಾಂತ್ ಸ್ವಂತ ಪಕ್ಷವನ್ನೇ ಸ್ಥಾಪಿಸುತ್ತಿದ್ದಾರೆ ಎಂದರೆ ಇಡೀ ತಮಿಳುನಾಡಿನಲ್ಲಿ ಅಭಿಮಾನಿಗಳ ಮನದಲ್ಲಿ ವಿದ್ಯುತ್ ಸಂಚಾರ ವಾಗಿತ್ತು ರಜನಿ ಕೂಡ ಹಲವಾರು ಸಭೆಗಳನ್ನು ಮಾಡಿ ಹಲವು ರೀತಿಯ ಜನಗಳ ಹತ್ತಿರ ಹೊಸ ಪಕ್ಷ ಸ್ಥಾಪಿಸಲು ಹಲವು ಸಲಹೆ ಸೂಚನೆಗಳನ್ನು ಪಡೆದುಕೊಂಡರು ಅಭಿಮಾನಿಗಳು ಇನ್ನೇನು ರಜನಿ ಹೊಸ ಪಕ್ಷವನ್ನು ಘೋಷಿಸಿಬಿಟ್ಟರು ಎಂದು ಖುಷಿಯಲ್ಲಿದ್ದರು ಪೂರಕವೆಂಬಂತೆ ಎರಡು ವರ್ಷಗಳ ಹಿಂದೆಯೇ ಅಭಿಮಾನಿಗಳ ಸಂಘದ ಸದಸ್ಯರು * ರಜಿನಿ ಮಕ್ಕಳ ಮ0ಡ್ರಮ್* ಎಂಬ ಪಕ್ಷವನ್ನು ಸ್ಥಾಪಿಸಿ ಅದರ ಅಡಿಯಲ್ಲಿ ಹಲವಾರು ಸಮಾಜ ಸೇವೆಗಳನ್ನು ಹೆಸರಲ್ಲಿ ಕೈಗೊಂಡರು ಆದರೆ ಅವರಿಗೆ ಬರಸಿಡಿಲು ಎಂಬಂತೆ ಇತ್ತೀಚೆಗೆ ರಜನಿಕಾಂತ್ ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಘೋಷಣೆ ಮಾಡಿದ್ದೇ ತಡ ಅವರಿಗೆ ದಿಕ್ಕೇ ತೋಚದಂತಾಯಿತು.

ಈ ಹಿಂದೆ ರಜನಿಕಾಂತ್ ಡಿಸೆಂಬರ್ 31 ರಂದು ತಮ್ಮ ರಾಜಕೀಯ ನಡೆಯನ್ನು ಘೋಷಿಸುವುದಾಗಿ ಅವರು ತಿಳಿಸಿದರು ಆದರೆ ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ರಜನೀಕಾಂತ್ ಹೈದ್ರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಬಿಡುಗಡೆ ಹೊಂದಿದರು. ಡಿಸೆಂಬರ್ 31ಕ್ಕೆ ರಾಜಕೀಯ ಪ್ರವೇಶ ಸುದ್ದಿ ಕೇಳಲು ಕಾತರಿಸುತ್ತಿದ್ದ ತಮಿಳುನಾಡಿನ ಅಭಿಮಾನಿಗಳಿಗೆ ಎರಡು ದಿನಗಳ ಮುಂಚೆ ಅಂದರೆ ಡಿಸೆಂಬರ್ 29ಕ್ಕೆ ನಾಲ್ಕು ಪುಟಗಳ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ತಮ್ಮ ಆರೋಗ್ಯ ಸರಿಯಿಲ್ಲದ ಕಾರಣ ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಘೋಷಿಸಿ ಬಿಟ್ಟರು ರಜನೀಕಾಂತ್.

ರಜನಿಕಾಂತ್ ಅವರ ದಿಢೀರ್ ನಿರ್ಧಾರದಿಂದ ನಿರಾಸೆಗೊಂಡ RMM ಪಕ್ಷದ ರಾಜ್ಯ ಸೆಕ್ರೆಟರಿ ವಿ ಎಂ ಸುಧಾಕರ್ ಹಾಗೂ ಮೂರ್ನಾಲ್ಕು ಜಿಲ್ಲಾ ಸೆಕ್ರೆಟರಿ ಗಳು ಈಗ RMM ತೊರೆದು. Dmk ಸರ್ವೋಚ್ಛ ನಾಯಕ ಎಂ ಕೆ ಸ್ಟಾಲಿನ್ ಅವರ ನೇತೃತ್ವದ ಪಕ್ಷವನ್ನ ಸೇರುತ್ತಿದ್ದಾರೆ. ರಜನಿ ಅಭಿಮಾನಿಗಳು ತೆಗೆದುಕೊಂಡ ನಿರ್ಧಾರದಿಂದ ಬಿಜೆಪಿ ಹಾಗೂ ಎಐಡಿಎಂಕೆ ಬಹಳ ನಷ್ಟವಾಗುತ್ತಿರುವ ಅಂತೂ ಗ್ಯಾರಂಟಿ. ರಜನಿಕಾಂತ್ ಅಭಿಮಾನಿಗಳು ಹಾಗೂ ಅವರ ಪಕ್ಷದ ಕಾರ್ಯಕರ್ತರು ಸಾಗರೋಪಾದಿಯಲ್ಲಿ ಡಿಎಂಕೆ ಪಕ್ಷವನ್ನ ಸೇರುತ್ತಿರುವುದು ಆಡಳಿತರೂಢ ಎಐಎಡಿಎಂಕೆ ಹಾಗೂ ಅದರ ಮಿತ್ರಪಕ್ಷ ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವಾಗಿ ಕಾಣುತ್ತಿದೆ.

LEAVE A REPLY

Please enter your comment!
Please enter your name here