Home Crime ಡಿಕೆಶಿಗೆ ಬಂಧನದ ಭೀತಿ.? ಜನಾರ್ದನ ರೆಡ್ಡಿ ಅರೆಸ್ಟ್ ಬೆನ್ನಲ್ಲೇ ಡಿಕೆಶಿಗೆ ಸಂಕಷ್ಟ..!? ರೆಡ್ಡಿ ಅರೆಸ್ಟ್ ಬೆನ್ನಲ್ಲೇ...

ಡಿಕೆಶಿಗೆ ಬಂಧನದ ಭೀತಿ.? ಜನಾರ್ದನ ರೆಡ್ಡಿ ಅರೆಸ್ಟ್ ಬೆನ್ನಲ್ಲೇ ಡಿಕೆಶಿಗೆ ಸಂಕಷ್ಟ..!? ರೆಡ್ಡಿ ಅರೆಸ್ಟ್ ಬೆನ್ನಲ್ಲೇ ಪವರ್ ಮಿನಿಸ್ಟರ್ ಗೆ ಇಡಿ ಶಾಕ್!

962
0
SHARE

ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಗೆ ಮತ್ತೆ ಬಂಧನದ ಭೀತಿ ಎದುರಾಗಿದೆ. ಜನಾರ್ಧನ ರೆಡ್ಡಿ ಅರೆಸ್ಟ್ ಆದ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಗೆ ಖೆಡ್ಡ ತೊಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎನ್ನಲಾಗಿದೆ..ಐಟಿ ದಾಳಿ ವೇಳೆ ಸಿಕ್ಕ ಅಕ್ರಮ ಹಣದ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಇಡಿಯಿಂದ ಮೂರನೇ ನೋಟಿಸ್ ಜಾರಿಮಾಡಲಾಗಿದೆ..ಇದ್ರಿಂದ ಪವರ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಗೆ ಮತ್ತೆ ಸಂಕಷ್ಟ ಎದುರಾಗಿದೆ..

ಅಂಬಿಡೆಂಟ್ ಕಂಪನಿ ಜೊತೆ 20 ಕೋಟಿ ಡೀಲ್ ಕೇಸಲು ಜರ್ನಾದನ ರೆಡ್ಡಿ ಅರೆಸ್ಟ್ ಆದ ಬೆನ್ನಲ್ಲೇ ಕಾಂಗ್ರೆಸ್ ಪವರ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಗೆ ಇದೀಗ ಸಂಕಷ್ಟ ಎದುರಾಗಿದೆ..ಜಾರಿ ನಿದೇರ್ಶನಾಲಯದಿಂದ ಡಿ.ಕೆ.ಶಿವಕುಮಾರ್ ಗೆ ಮೂರನೇ ನೋಟಿಸ್ ನಿನ್ನೆ ಜಾರಿ ಮಾಡಿದೆ.ನಿಮ್ಮ ವಿರುದ್ಧ ಆರೋಪಗಳಿಗೆ ತಕ್ಷಣ ಬಂದು ಸ್ಪಷ್ಟೀಕರಣ ನೀಡಿ ಎಂದು ಇಡಿ ನೋಟಿಸ್ ಜಾರಿ ಮಾಡಿದೆ.

ಇನ್ನು ನೋಟಿಸ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಈ ಬಗ್ಗೆ ನನ್ಗೆ ಇನ್ನು ಮಾಹಿತಿ ಬಂದಿಲ್ಲ..ಕೇಂದ್ರ ಸರ್ಕಾರದಿಂದ ಅಧಿಕಾರ ದುರುಪಯೋಗ ಆಗುತ್ತಿರೋದು ಸತ್ಯ ಎಂದಿದ್ದಾರೆ.ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಹೆಚ್.ಡಿ. ಕುಮಾರಸ್ವಾಮಿ ,ಶಿವಕುಮಾರ್ ಗೆ ನೋಟಿಸ್ ಬಂದಿದ್ರೆ, ಸೂಕ್ತವಾದ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ..ಇನ್ನು ಡಿ.ಕೆ.ಶಿವಕುಮಾರ್ ತಪ್ಪ ಮಾಡಿದ್ರೆ ಬಂಧಿಸಲಿ ಅದನ್ನ ಬಿಟ್ಟು ದಿನನಿತ್ಯ ಕಿರುಕುಳ ಕೊಡೋದು ಬೇಡ..

ಶಿವಕುಮಾರ್ ಗೆ ಕಿರುಕುಳ ಕೊಟ್ಟಷ್ಟು ಅವ್ರು ಮತ್ತಷ್ಟು ಎತ್ತರಕ್ಕೆ ಹೋಗುತ್ತಾರೆ..ಜರ್ನಾದನ ರೆಡ್ಡಿ ಕೇಸ್ ಬೇರೆ, ಶಿವಕುಮಾರ್ ವ್ರ ಕೇಸ್ ಬೇರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ವಾಗ್ದಾಳಿ ನಡೆಸಿದ್ರು..

ಇಡಿಯಿಂದ ನಿನ್ನೆ ನೋಟಿಸ್ ಜಾರಿಯಾದ ಬೆನ್ನಲ್ಲೇ ಇಂದು ಡಿ.ಕೆ.ಶಿವಕುಮಾರ್ ಮಂಗಳೂರಿನ ಅಜ್ಞಾತ ಸ್ಥಳವೊಂದಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಇಡಿಯಿಂದ ಮೂರನೇ ನೋಟಿಸ್ ಜಾರಿಯಾಗಿರೋದ್ರಿಂದ ಡಿ.ಕೆ.ಶಿವಕುಮಾರ್ ಇದೀಗ ಮತ್ತೆ ಬಂಧನದ ಭೀತಿ ಎದುರಾಗಿದೆ.

LEAVE A REPLY

Please enter your comment!
Please enter your name here