Home District ಡಿಕೆಶಿಗೇ ಶಾಕ್ ಕೊಟ್ಟ ಡಿ.ಕೆ.ಸುರೇಶ್..!? ಸಹೋದರ ಸುರೇಶ್ ಮಾಡಿದ ಆಪರೇಷನ್ ಡಿಕೆಶಿಗೆ ಗೊತ್ತೇ ಇಲ್ಲ..!! ಬಿಜೆಪಿಗೆ...

ಡಿಕೆಶಿಗೇ ಶಾಕ್ ಕೊಟ್ಟ ಡಿ.ಕೆ.ಸುರೇಶ್..!? ಸಹೋದರ ಸುರೇಶ್ ಮಾಡಿದ ಆಪರೇಷನ್ ಡಿಕೆಶಿಗೆ ಗೊತ್ತೇ ಇಲ್ಲ..!! ಬಿಜೆಪಿಗೆ ಟಾಂಗ್ ಕೊಟ್ಟ ಸಿದ್ದರಾಮಯ್ಯ..!

2620
0
SHARE

ಬಿಜೆಪಿಗೆ ಚಂದ್ರಶೇಖರ್ ಕೈ ಕೊಟ್ಟ ವಿಚಾರ ನನಗೆ ಗೊತ್ತೇ ಇಲ್ಲ ಅಂತ ಡಿಕೆಶಿ ಹೇಳಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ಅವರು ಬೆಂಗಳೂರಿನಿಂದ ನಾನು ಬಂದಿದ್ದೇನೆ. ಎಲ್ಲವೂ ತಿಳಿದುಕೊಂಡು ಪ್ರತಿಕ್ರಿಯೆ ನೀಡುವೆ ಅಂತ ನಗುನಗುತ್ತಲೇ ಡಿಕೆಶಿ ಹೇಳಿದ್ದಾರೆ. 6ನೇ ತಾರೀಖು ಬಿಜೆಪಿಯವರು ಸರ್ಕಾರ ಫಥನಗೊಳಿಸುತ್ತಾರೆಂತೆ.. ಅದೇನು ಮಾಡ್ತಾರೋ ನೋಡೋಣ ಎಂದು ಬಿಜೆಪಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ರಾಮನಗರ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದಕ್ಕೆ ವಿಚಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಸಿದ್ದಾರೆ. ಅಪ್ಪ, ಮಗ ಕಾಂಗ್ರೆಸ್ ನಲ್ಲೇ ಇದ್ದೋರು.. ಅವರು ಬಿಜೆಪಿಗೆ ಹೋಗಿದ್ದೇ ತಪ್ಪು.. ರಾಮನಗರದಲ್ಲಿ ಬಿಜೆಪಿಗೆ ಅಸ್ತತ್ವವೇ ಇಲ್ಲ…ಹೀಗಾಗಿ ಚಂದ್ರಶೇಖರ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಈಗ ಬಿಜೆಪಿಯವರು ಮಾಡಿದ್ದುಣ್ಣೋ ಮಾರಾಯ… ಅನ್ನೋ ಸ್ಥಿತಿ ಎದುರಾಗಿದೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ.

ಚುನಾವಣಾ ಕಣದಿಂದ ಬಿಜೆಪಿ ಅಭ್ಯರ್ಥಿ ಹಿಂದೆ ಸರಿದ ವಿಚಾರಕ್ಕೆ ಡಿಸಿಎಂ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು ರಾಮನಗರದಲ್ಲಿ ಬಿಜೆಪಿ ಅಸ್ತತ್ವವೇ ಇಲ್ಲ. ಒತ್ತಾಯ ಪೂರ್ವಕವಾಗಿ ಚಂದ್ರಶೇಖರ್‌ರನ್ನು ಬಿಜೆಪಿ ಪಕ್ಷದಿಂದ ನಿಲ್ಲಿಸಿದ್ದರು. ಅಭ್ಯರ್ಥಿಗೆ ಬಿಜೆಪಿ ನಾಯಕರು ಬೆಂಬಲ ಸೂಚಿಸದ ಹಿನ್ನೆಲೆಯಲ್ಲಿ ಡಿಕೆ.ಸುರೇಶ್ ಅವರನ್ನು ಮನವೊಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆದು ಪರಮೇಶ್ವರ್ ಹೇಳಿದ್ದಾರೆ.

ಇನ್ನು ಇದೇ ವಿಚಾರಕ್ಕೆ ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಸಿದ್ದಾರೆ. ಚುನಾವಣಾ ಕಣದಿಂದ ಚಂದ್ರಶೇಖರ್ ಸರಿದಿರೋದು ಬಿಜೆಪಿಗೆ ಒಂದು ಪಾಠವಾಗಿದೆ. ಇನ್ನೂಂದಾದ್ರೂ ರಾಮನಗರ ನಮ್ಮ ಪಕ್ಷ, ಕಾರ್ಯಕರ್ತರನ್ನು ಬಲ ಪಡಿಸಬೇಕು. ಆದ್ರೆ ಚಂದ್ರ ಶೇಖರ್ ಇಲ್ಲಸಲ್ಲದ ಆರೋಪಗಳು ಮಾಡೋದು ಸರಿಯಲ್ಲ. ಇದರಲ್ಲಿ ದಳ- ಕೈ ನಾಯಕರ ಕೈವಾಡ ಇದೆ. ಅವರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ…

ಇದೇ ವಿಷಯಕ್ಕೆ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಅಸಮಾಧಾನ ಹೊರಹಾಕಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಚಂದ್ರಶೇಖರ್‌ರನ್ನು ನಂಬಿ ಟಿಕೆಟ್ ಕೊಟ್ಟಿದ್ದೇವು. ಆದ್ರೆ ಅವರು ಬಿಜೆಪಿ ಪಕ್ಷಕ್ಕೆ ದೊಡ್ಡ ದ್ರೋಹ ಮಾಡಿದ್ದಾರೆ. ಅವರ ತಂದೆಯೇ ನನ್ನ ಮಗ ಮಾಡಿದ್ದು ನಾಚಿಕೇಗೇಡು ಅಂತ ಹೇಳಿದ್ದಾರೆ. ಇವತ್ತು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಇದೊಂದು ಪ್ರಿಪ್ಲಾನ್ ಆಗಿರಬಹುದು ಅಂತ ಜಗದೀಶ್ ಶೆಟ್ಟರ್ ಅಸಮಾಧಾನ ಹೊರಹಾಕಿದ್ದಾರೆ…

ರಾಮನಗರ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದಕ್ಕೆ ಸರಿದ ವಿಚಾರ ಯಾದಗಿರಿಯಲ್ಲಿ ಸಚಿವ ರಾಜಶೇಖರ ಪಾಟೀಲ ಹೇಳಿಕೆ,ಮತದಾನ ಮುನ್ನವೇ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್ ಸೇರಿದ್ದು ರಾಜ್ಯದಲ್ಲಿ ಬಿಜೆಪಿ ಪ್ರತಿಷ್ಠೆ ಏನಾಗಿದೆ ಎಂದು ತೊರುತ್ತದೆ,ಮತದಾನ ಮುನ್ನವೇ ಬಿಜೆಪಿ ಪ್ರತಿಷ್ಠೆ ಏನು ಉಳಿಯಿತು,ರಾಮನಗರ ಬಿಜೆಪಿ ಅಭ್ಯರ್ಥಿ ಆಪರೇಷನ್ ಹಸ್ತ ಮಾಡಿಲ್ಲ…

ಅವರೇ ಸೋಲಿನ ಭೀತಿ ಕಂಡು ಕಣದಿಂದ ಹಿಂದಕ್ಕೆ ಸರಿದಿದ್ದಾರೆ,ರಾಜ್ಯದ ಐದು ಕ್ಷೇತ್ರದ ಉಪಚುನಾವಣೆಯಲ್ಲಿ 5 ಕಡೆ ಮೈತ್ರಿ ಅಭ್ಯರ್ಥಿ ಗಳು ಗೆಲ್ಲುತ್ತಾರೆ,ಉಪಚುನಾವಣೆ ಫಲಿತಾಂಶ ಲೋಕಸಭಾ ಚುನಾವಣಗೆ ದಿಕ್ಸೂಚಿ ಯಾಗಲಿದೆ,ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿ ಯಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಲಿದ್ದಾರೆ.ಯಾದಗಿರಿಯಲ್ಲಿ‌ ಸಚಿವ ರಾಜಶೇಖರ ಪಾಟೀಲ ಸುದ್ದಿಗೋಷ್ಠಿಯಲ್ಲಿ ಹೇಳಿಕೆ…

 

LEAVE A REPLY

Please enter your comment!
Please enter your name here