Home District ಡಿಕೆಶಿ ಇಟ್ಟ ಪವರ್ ಫುಲ್ ಬಾಂಬ್ ಗೆ ಗಣಿಕೋಟೆ ಫೀಸ್ ಫೀಸ್ .! ಈ ಉಪಚುನಾವಣೆಯಲ್ಲಿ...

ಡಿಕೆಶಿ ಇಟ್ಟ ಪವರ್ ಫುಲ್ ಬಾಂಬ್ ಗೆ ಗಣಿಕೋಟೆ ಫೀಸ್ ಫೀಸ್ .! ಈ ಉಪಚುನಾವಣೆಯಲ್ಲಿ ಸಿದ್ದು ಆದ್ರೇ ಮತ್ತೊಮ್ಮೆ ಮಾಸ್ ಲೀಡರ್.!?

701
0
SHARE

ಚುನಾವಣೆ ಮುಗಿದ ನಂತರ ಎಲ್ಲರಲ್ಲೂ ಸೋಲು ಗೆಲುವಿನ ಚರ್ಚೆ ಆಗುತ್ತಿದೆ. ಯಾರು ಎಲ್ಲಿ ಸೋತಿದ್ದಾರೋ ಅಲ್ಲಿ ಆತ್ಮ ವಿಮರ್ಶೆ ಮಾಡಿಕೊಳ್ಳುತ್ತಿದ್ದರೆ. ಯಾರು ಎಲ್ಲಿ ಗೆದ್ದಿದ್ದಾರೋ ಅಲ್ಲಿ ಗೆಲುವಿನ ಸಿಹಿ ಹಂಚುತ್ತಿದ್ದಾರೆ. ಈ ಬೈ ಎಲೆಕ್ಷನ್ ಹಲವಾರು ಮಾರ್ಪಾಡಿಗೂ ಕಾರಣವಾಗಿದೆ, ಅದ್ರಲ್ಲೂ ಬಳ್ಳಾರಿಯಲ್ಲಿ ಬಂದ ಫಲಿತಾಂಶ ಡಿಕೆ ಶಿವಕುಮಾರ್ ಪಾಲಿಗೆ ಮತ್ತೊಷ್ಟು ಪವರ್ ಪುಲ್ ಸ್ಥಾನವನ್ನ ನೀಡಿದೆ. ಗಣಿಕೊಟೆಗೆ ನುಗ್ಗಿ ರೆಡ್ಡಿ ಸಾಮ್ರಾಜ್ಯವನ್ನ ಪೀಸ್ ಪೀಸ್ ಮಾಡಿರೋ ಕನಕ ಪುರ ಬಂಡೆ. ದೋಸ್ತಿ ಸರ್ಕಾರದಲ್ಲಿ ತಮ್ಮ ಪವರ್ ಏನು ಅನ್ನೋದನ್ನ ತೋರಿಸಿದ್ದಾರೆ,

ಅಷ್ಟಕ್ಕೂ ಬಳ್ಳಾರಿ ವಶ ಪಡಿಸಿಕೊಳ್ಳುವಲ್ಲಿ ಡಿಕೆ ಶಿವಕುಮಾರ್ ವಹಿಸಿದ ಪಾತ್ರ ಎಂತಹದ್ದು? ಈ ಬೈ ಎಲೆಕ್ಷನ್ ಘೋಷಣೆ ಆಧ ಬೆನ್ನಲ್ಲೆ ಹತ್ತು ಹಲವು ಚರ್ಚೆಗೆ ಕಾರಣವಾಗಿತ್ತು. ಒಂದು ವೇಳೆ ದೋಸ್ತಿ ಪಡೆ ಸೋತಿದ್ದೇ ಆಗಿದ್ರೆ, ನಿಜಕ್ಕೂ ಸರ್ಕಾರಕ್ಕೆ ಕಂಟಕ ಬರುತ್ತಿತ್ತು. ಅಷ್ಟೆ ಅಲ್ಲ ರಾಜ್ಯದಲ್ಲಿ ದೋಸ್ತಿ ಸರ್ಕಾರಕ್ಕೆ ಜನರ ಬೆಂಬಲ ಇಲ್ಲಾ ಅನ್ನೋದು ಸಾಬೀತ್ ಆಗುತ್ತಿತ್ತು. ಆದ್ರೇ ಈ ಫಲಿತಾಂಶ ಎಲ್ಲವನ್ನು ಉಲ್ಟಾ ಮಾಡಿದೆ. ಬಿಜೆಪಿ ನಾಯಕರು ಹಾಕಿದ್ದ ಎಲ್ಲಾ ಲೆಕ್ಕಾಚಾರವನ್ನ ತಲೆಕೆಳಗು ಮಾಡಿದೆ. ಅದ್ರಲ್ಲೂ ಬಳ್ಳಾರಿಯಲ್ಲಿ ಬಂದ ರಿಸೆಲ್ಟ್ ಕಾಂಗ್ರೆಸ್ ಪಾಲಿಗೆ ಹೊಸ ಆಸೆಯನ್ನೇ ಚಿಗುರಿಸಿದೆ.ಬಳ್ಳಾರಿಯಲ್ಲಿ ನಿಜಕ್ಕೂ ಜಿದ್ದಾ ಜಿದ್ದಿನ ಹೋರಾಟವೇ ನಿರ್ಮಾಣವಾಗಿತ್ತು.

ಮೊದಲೆಲ್ಲ ಕಾಂಗ್ರೆಸ್ ಕೋಟೆ ಅಂತಾ ಬಿಂಬಿತವಾಗಿದ್ದ ಬಳ್ಳಾರಿಯನ್ನ ಗಣಿಧಣಿಗಳು ಆಕ್ರಮಿಸಿಕೊಂಡಿದ್ದರು. ಸತತ ಮೂರು ಬಾರಿ ಬಳ್ಳಾರಿಯಲ್ಲಿ ತಮ್ಮ ಖದರ್ ತೋರಿಸಿದ್ರು. ಗಣಿಧಣಿಗಳ ಪಾಲಿಗೆ ಬಳ್ಳಾರಿ ರಿಪಬ್ಲಿಕ್ ಆಗಿ ಹೋಗಿತ್ತು, ಅಷ್ಟರ ಮಟ್ಟಿಗೆ ಬಳ್ಳಾರಿಯನ್ನ ಆಕ್ರಮಿಸಿಕೊಂಡಿದ್ರು. ಇನ್ನೇನು ಬಳ್ಳಾರಿ ಬಿಜೆಪಿ ಖಾಯಂ ಭದ್ರ ಕೋಟೆ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದ್ರೆ ಈ ಬಾರಿ ಆಗಿದ್ದೇ ಬೇರೆ. ಬಳ್ಳಾರಿಯಲ್ಲಿ ಅಧಿಪತ್ಯ ಸ್ಥಾಪಿಸಿ ಮೆರೆಯುತ್ತಿದ್ದ ಗಣಿ ರೆಡ್ಡಿಗಳ ಕೋಟೆ ಉಡೀಸ್ ಆಗಿದೆ. ಅದ್ರಲ್ಲೂ ದಾಖಲೆಯ ಮತಗಳೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಜಯಬೇರಿ ಬಾರಿಸಿದ್ದಾರೆ.

ಅಂದ ಹಾಗೆ ಈ ಬಳ್ಳಾರಿ ಕೋಟೆಯನ್ನ ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಬೇರೆ ಯಾರು ಅಲ್ಲ. ಕಾಂಗ್ರೆಸ್ ನ ಟ್ರಬಲ್ ಶೂಟರ್.. ಸಚಿವ ಡಿಕೆ ಶಿವಕುಮಾರ್.ನಾನು ಚೆಸ್ ಆಡಿಯೇ ಚೆಕ್ ಕೊಡುತ್ತೇನೆ ಎಂದು ಹೇಳಿದ್ದ ಡಿಕೆಶಿ ಬಳ್ಳಾರಿ ಶಾಸಕರಿಗೆ ಟಾರ್ಗೆಟ್ ನೀಡಿದ್ದರು. ಸಿಎಂ ಸಿದ್ದರಾಮಯ್ಯ ಮೂಲಕವೇ ಟಾರ್ಗೆಟ್ ಅಸ್ತ್ರವನ್ನು ಪ್ರಯೋಗಿಸಿದ್ದರು. ಯಾರು ಅತಿ ಹೆಚ್ಚು ಲೀಡ್ ತಂದುಕೊಡುತ್ತಾರೋ ಅವರಿಗೆ ಮುಂದಿನ ಸಂಪುಟ ವಿಸ್ತರಣೆಯಲ್ಲಿ ಮಂತ್ರಿ ಸ್ಥಾನ ನೀಡಲಾಗುವುದು ಎಂದು ಸಿದ್ದರಾಮಯ್ಯ ಸಭೆ ನಡೆಸಿ ಟಾರ್ಗೆಟ್ ನೀಡಿದ್ದರು. ಈ ಸಭೆಯಲ್ಲಿ ಡಿಕೆ ಶಿವಕುಮಾರ್ ಸಹ ಭಾಗಿಯಾಗಿದ್ದರು.

ಮಂತ್ರಿಗಿರಿ ಸಿಗುತ್ತದೆ ಎನ್ನುವ ಕಾರಣಕ್ಕೆ ಶಾಸಕರು ಮತ್ತು ಕಾರ್ಯಕರ್ತರು ಭಿನ್ನಾಭಿಪ್ರಾಯಗಳನ್ನು ಬದಿಗೆ ತಳ್ಳಿ ಒಗ್ಗಟ್ಟಾಗಿ ಹೋರಾಡಿದ ಪರಿಣಾಮ ಬಳ್ಳಾರಿಯಲ್ಲಿ ಕಾಂಗ್ರೆಸ್ ಈಗ ನಗೆಯನ್ನು ಬೀರಿದೆ.ಸೋ ಬಳ್ಳಾರಿಯಲ್ಲಿ ಗಣಿಧಣಿಗಳ 14 ವರ್ಷದ ಗೆಲುವಿನ ಯಾತ್ರೆಗೆ ಡಿಕೆ ಶಿವಕುಮಾರ್ ಬ್ರೇಕ್ ಹಾಕಿದ್ದಾರೆ. ಈ ಮೂಲಕ ಮೈತ್ರಿ ಸರ್ಕಾರದಲ್ಲಿ ತಮ್ಮ ಪವರ್ ಏನು. ತಮ್ಮ ಪೊಲಿಟಿಕಲ್ ಸ್ಟ್ರಾಟರ್ಜಿ ಏನು ಅನ್ನೋದನ್ನ ಮತ್ತೆ ಸಾಬೀತು ಪಡಿಸಿದ್ದಾರೆ. ಸಧ್ಯಕ್ಕೆ ಡಿಕೆ ಶಿವಕುಮಾರ್ ದೋಸ್ತಿ ಸರ್ಕಾರದಲ್ಲಿ ಸೋಲಿಲ್ಲದ ಸಾಮ್ರಾಟನಾಗಿ ಮೆರೆಯುತ್ತಿದ್ದಾರೆ.

ಸಿದ್ದರಾಮಯ್ಯ…… ಮಾಜಿ ಸಿಎಂ ಸಿದ್ದರಾಮಯ್ಯ….. ಮತ್ತೆ ಫಿನಿಕ್ಸ್ ಹಕ್ಕಿಯಂತೆ ಮೇಲೆದ್ದು ಬಂದಿದ್ದಾರೆ. ಕೆಲವು ತಿಂಗಳ ಹಿಂದೆ ಅಷ್ಚೆ ದೋಸ್ತಿ ಪಕ್ಷದ ಮುಂದೆ ಕೈ ಕಟ್ಟಿ ನಿಂತಿದ್ದ ಈ ಟಗರು ಅಕ್ಷರಶಃ ಗುಟುರು ಹಾಕ್ತಾ ಇದೆ. ಸೈಲೆಂಟ್ ಆಗಿ ಕಾರ್ಯ ಸಾಧನೆ ಮಾಡುತ್ತಿರೋ ಸಿದ್ದರಾಮಯ್ಯಗೆ ಈ ಬೈ ಎಲೆಕ್ಷನ್ ಬೂಸ್ಟ್ ನೀಡಿದೆ. ಈ ಉಪ ಚುನಾವಣೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಿದ್ದ ಸಿದ್ದು ಬಳ್ಳಾರಿಯಲ್ಲಿ ಜಬರ್ದಸ್ತ್ ಮಾತುಗಳನ್ನ ಆಡಿದ್ರು, ಮಾತ್ರವಲ್ಲ ರೆಡ್ಡಿಗಳ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಸುರಿಸಿದ್ರು, ಅದ್ರ ಎಫೆಕ್ಟ್ ಇಂದು ಬಳ್ಳಾರಿಯಲ್ಲಿ ಕಾಂಗ್ರೆಸ್ ಕೈ ಬೀಸುತ್ತಿದೆ. ಇನ್ನು ಜಮಖಂಡಿಯಲ್ಲೂ ಅಷ್ಟೆ ಸಿದ್ದರಾಮಯ್ಯ ಆರ್ಭಟಿಸಿದ್ರು.

ಹೀಗೆ ಉತ್ತರ ಕರ್ನಾಟಕ ಮತ್ತು ಹೈದ್ರಬಾದ್ ಕರ್ನಾಟಕದಲ್ಲಿ ತಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸೋದ್ರ ಮೂಲಕ ಮತ್ತೆ ತಮ್ಮ ಅಧಿಪತ್ಯ ಸ್ಥಾಪಿಸಿದ್ದಾರೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದು ಕಾಂಗ್ರೆಸ್ ಪಾಲಿಗೆ ದಂಡನಾಯಕ ಆಗಿದ್ರು. ಕಳೆದ ಬಾರಿ ಉತ್ತಮ ಆಡಳಿತವನ್ನ ಕೊಟ್ಟಿದ್ದೇವೆ. ಮುಂದಿನ ಬಾರಿಯೂ ನಮ್ಮದೆ ಸರ್ಕಾರ ಅನ್ನೋ ಓವರ್ ಕಾನ್ಫಿಡೆನ್ಸ್ ಸಿದ್ದು ಅಂಡ್ ಟೀಂಗಿತ್ತು, ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಿದ್ದುಗಿದ್ದ ಆತ್ಮ ವಿಶ್ವಾಸ ಕಡಿಮೆಯಾಗ ತೊಡಗಿತು, ಚಾಮುಂಡೇಶ್ವರಿಯಲ್ಲಿ ನಿಂತ್ರು ಸಿದ್ದರಾಮಯ್ಯ ಗೆಲ್ಲಲ್ಲ ಅನ್ನೋ ಮಾತುಗಳು ಅಂದೇ ಕೇಳಿ ಬಂದ್ವು,

ಸೇಫರ್ ಸೈಡ್ ಗೆ ಇರ್ಲಿ ಅಂತಾ ಮೈಸೂರು ಬಿಟ್ಟು ದೂರದ ಬಾಗಲಕೋಟೆಯ ಬದಾಮಿಗೆ ಹೋಗಿ ಸ್ಪರ್ಧೆ ಮಾಡುವ ತೀರ್ಮಾನ ಮಾಡಿದ್ರು. ಫಲಿತಾಂಶದ ವೇಳೆಗೆ ಸಿದ್ದರಾಮಯ್ಯಗೆ ಬಂದ ಮಾಹಿತಿ ದೃಡವಾಯ್ತು. ಚಾಮುಂಡೇಶ್ವರಿಯಲ್ಲಿ ಸಿದ್ದು ಹೀನಾಯವಾಗಿ ಸೋತ್ರು, ರಾಜಕೀಯವಾಗಿ ಪುನರ್ಜನ್ಮ ಕೊಟ್ಟಿದ್ದ ಚಾಮುಂಡೇಶ್ವರಿ ಮತದಾರರು. ಸಿಎಂ ಅನ್ನೋದನ್ನು ನೋಡದೇ ಹೀನಾಯವಾಗಿ ಸೋಲಿಸಿ ಬಿಟ್ಟಿದ್ರು. ಸಿದ್ದು ಕೈ ಹಿಡಿಯುತ್ತಾರೆ ಅಂತಾ ಭಾವಿಸಿದ್ದ ಮತದಾರ ನಡು ನೀರಿನಲ್ಲೇ ಕೈ ಬಿಟ್ಟು ಹೋಗಿದ್ದ. ಅಲ್ಲಿಗೆ ಪುನರ್ಜನ್ಮ ಕೊಟ್ಟ ಕ್ಷೇತ್ರವೇ ರಾಜಕೀಯ ಜೀವನ ಮುಗಿಸುವ ಸೂಚನೆಯನ್ನು ನೀಡಿತ್ತು.

ಅಂದಿನ ಫಲಿತಾಂಶವನ್ನ ನೋಡೋದ್ರೆ ಸಿದ್ದರಾಮಯ್ಯ ಹೀವಾಯವಾಗಿ ಸೋತಿದ್ರು, ಸಿದ್ದು ಎದುರಿಗೆ ನಿಂತಿದ್ದ ಜೆಡಿಎಸ್ ನ ಜಿಟಿ ದೇವೇಗೌಡ್ರು 36 ಸಾವಿರ ಮತಗಳ ಅಂತರದಲ್ಲಿ ಸಿದ್ದುರನ್ನ ಸೋಲಿಸಿ ಬಿಟ್ಟಿದ್ರು, ಅಂದು ಸಿದ್ದರಾಮಯ್ಯ ಅಕ್ಷರಶಃ ರಾಜಕೀಯ ಪತನದ ಹಾದಿ ಹಿಡಿದಿದ್ರು. ಚಾಮುಂಡೇಶ್ವರಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ತೆಗೆದುಕೊಂಡ ಸ್ಥಾನಗಳ ಪರಿಣಾಮ ಸಿದ್ದರಾಮಯ್ಯನವರನ್ನ ಹೊಣೆಗಾರನ್ನಾಗಿ ಮಾಡಲಾಯ್ತು, ನೈತಿಕ ಹೊಣೆ ಹೊತ್ತಿದ ಸಿದ್ದರಾಮಯ್ಯ ಜೆಡಿಎಸ್ ಮುಂದೆ ಕೈ ಕಟ್ಟಿ ನಿಂತು ಸಿಎಂ ಸ್ಥಾನವನ್ನ ಬಿಟ್ಟು ಕೊಟ್ರು, ಅಲ್ಲಿಗೆ ಸಿದ್ದು ರಾಜಕೀಯವಾಗಿ ಮುಳುಗೇ ಹೋದ್ರು ಅನ್ನೋ ವಿಶ್ಲೆಷಣೆ ಕೇಳಿ ಬಂದ್ವು. ಎಲ್ಲಾ ಮುಗಿಯಿತು ಅನ್ನೊಷ್ಟರಳಗೆ ಸಿದ್ದು ಮತ್ತೆ ಫಿನಿಕ್ಸ್ ನಂತೆ ಎದ್ದು ಬಂದಿದ್ದಾರೆ. ಪಿಕ್ಚರ್ ಅಭಿ ಬಾಕಿ ಹೈ ಅಂತಾ ಘರ್ಜನೆ ಮಾಡುತ್ತಿದ್ದಾರೆ.

ಸಧ್ಯದ ಮಟ್ಟಿಗೆ ಹೇಳಬೇಕು ಅಂದ್ರೆ ಸಿದ್ದು ಸಮ್ಮಿಶ್ರ ಸರ್ಕಾರಕ್ಕೆ ಆಪತ್ಭಾಂಧವ. ಅಷ್ಟೆ ಅಲ್ಲ ಮಾತಿನಲ್ಲೇ ಮತ ಗಿಟ್ಟಿಸೋ ಚತುರ ಅನ್ನೋದು ಸಾಬೀತ್ ಆಗಿದೆ.ಚುನಾವಣಾ ಫಲಿತಾಂಶ ಹೊರ ಬಿದ್ದ ನಂತರ ಸಿದ್ದರಾಮಯ್ಯ ದೋಸ್ತಿ ಸರ್ಕಾರದಲ್ಲಿ ಅಕ್ಷರಶಃ ಮೂಲೆ ಗುಂಪಾಗಿದ್ರು, ಎಲ್ಲರು ಸಿದ್ದರಾಮಯ್ಯ ಅನ್ನೋ ಮಾಜಿ ಮುಖ್ಯಮಂತ್ರಿ ನಮ್ಮ ಸರ್ಕಾರದಲ್ಲಿ ಇದ್ದಾರೆ ಅನ್ನೋದನ್ನೇ ಮರೆತು ಹೋಗಿದ್ರು. ಅವತ್ತಿನ ಪರಿಸ್ಥಿತಿಯಲ್ಲಿ ಹೇಳೋದ್ ಆದ್ರೆ ಸಿದ್ದು ಅಕ್ಷರಶಃ ಪಾತಾಳಕ್ಕೆ ಕುಸಿದು ಹೋಗಿದ್ರು. ಆದ್ರೆ ಕಾಲ ಚಕ್ರ ಉರುಳಿತು ನೋಡಿ ಪಾತಳಕ್ಕೆ ಇಳಿದಿದ್ದ ಸಿದ್ದು ಫಿನಿಕ್ಸ್ ಹಕ್ಕಿಯಂತೆ ಕ್ಷಣ ಮಾತ್ರದಲ್ಲಿ ಬಾನೆತ್ತರಕ್ಕೆ ಜಿಗಿದಿದ್ದಾರೆ.

ಅಂದು ಯಾರೆಲ್ಲ ತಮ್ಮನ್ನ ಕೀಳಾಗಿ ಕಂಡಿದ್ರೋ ಅವರೆಲ್ಲಾ ಇಂದು ಸಿದ್ದು ಮನೆ ಬಾಗಿಲಿಗೆ ಬರ ಮಾಡಿಕೊಂಡಿದ್ದಾರೆ. ಎಲ್ಲರು ಪದ್ಮನಾಭ ನಗರವನ್ನ ಪವರ್ ಹೌಸ್ ಅಂದು ಕೊಂಡಿದ್ರು … ಆದ್ರೀಗ ಸಿದ್ದರಾಮಯ್ಯ ಅವರ ನಿವಾಸವೇ ಪವರ್ ಹೌಸ್ ಆಗಿದೆ. ಸಧ್ಯ ಸಿದ್ದು ಕಿರೀಟವಿಲ್ಲದ ರಾಜ್….. ಅರ್ಥಾತ್ ರಾಜ್ಯದ ಸೂಪರ್ ಸಿಎಂ.ಒಟ್ಟಾರೆ ಈ ಬೈ ಎಲೆಕ್ಷನ್ ಸಿದ್ದು ಪಾಲಿಗೆ ಬೂಸ್ಟ್ ಕೊಟ್ಟಿದೆ, ಎಲ್ಲಾ ಇದ್ದ ಸಿದ್ದು ಏನು ಇಲ್ಲದಂತಾದಾಗ ಬಂದ ಚುನಾವಣೆ ಮತ್ತೆ ವರ್ಚಸ್ಸನ್ನ ತಂದು ಕೊಟ್ಟಿದೆ. ಈ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಪವರ್ ಇನ್ನು ಇದೆ ಅನ್ನೋದನ್ನ ಸಾಬೀತು ಪಡಿಸಿದೆ, ಅಲ್ಲಿಗೆ ಪಾತಾಳಕ್ಕೆ ಕುಸಿದಿದ್ದ ಸಿದ್ದು ಮತ್ತೆ ಫಿನಿಕ್ಸ್ ನಂತೆ ಮೇಲೆ ಏರಿದ್ದಾರೆ.

LEAVE A REPLY

Please enter your comment!
Please enter your name here