Home District ಡಿಕೆಶಿ ಮಾತಿಗೆ ಬೆಲೆ ಕೊಟ್ಟು ಧರಣಿ ವಾಪಸ್ ಪಡೆದ ರೈತರು..! ಮತ್ತೆ ದೋಸ್ತಿ ಸರ್ಕಾರದ ನೆರವಿಗೆ...

ಡಿಕೆಶಿ ಮಾತಿಗೆ ಬೆಲೆ ಕೊಟ್ಟು ಧರಣಿ ವಾಪಸ್ ಪಡೆದ ರೈತರು..! ಮತ್ತೆ ದೋಸ್ತಿ ಸರ್ಕಾರದ ನೆರವಿಗೆ ಬಂದ ಟ್ರಬಲ್ ಶೂಟರ್…

945
0
SHARE

ಬೆಳಗಾವಿಯಲ್ಲಿ ಅಮರಣಾಂತ ಹೋರಾಟ ನಡೆಸುತ್ತಿದ್ದ ರೈತರ ಮನ ಓಲೈಸುವಲ್ಲಿ ಸಚಿವ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಇಂದು ಬೆಳಗಾವಿ ಡಿಸಿ ಕಚೇರಿ ಬಳಿಗೆ ಭೇಟಿ ನೀಡಿದ ಅವರು ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದ್ದರು, ಇವರ ಮನವಿಗೆ ಸ್ಪಂದಿಸಿದ ರೈತರು ಪ್ರತಿಭಟನೆಯನ್ನು ವಾಪಸ್ ಪಡೆದಿದ್ದಾರೆ.

ಇನ್ನು ಅಮರಣಾಂತ ಹೋರಾಟ ನಡೆಸುತ್ತಿದ್ದ ಸಿದ್ದೇಗೌಡ ಮೊದಗಿ ಮತ್ತು ಜಯಶ್ರೀಗೆ ಎಳನೀರು ನೀಡುವ ಮೂಲಕ ಸಂಧಾನ ಸಫಲಗೊಳಿಸಿದ್ದಾರೆ. ಇತ್ತ ಕಬ್ಬು ಬೆಳೆಗೆ ಬೆಂಬಲಿತ ಬೆಲೆ ನಿಗದಿ ಹಾಗೂ ಬಾಕಿ ಹಣ ಪಾವತಿ ಹಿನ್ನೆಲೆ ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರ ಅಹವಾಲು ಸ್ವೀಕರಿಸಿ ಸಮಸ್ಯೆ ಬಗೆಹರಿಸುವ ಜವಾಬ್ದಾರಿನ್ನು ಹೊತ್ತಿದ್ದಾರೆ.

ಇದರ ಬೆನ್ನೆಲ್ಲೇ ಬಳ್ಳಾರಿ ಉಸ್ತುವಾರಿ ಸಚಿವ ಡಿಕೆ.ಶಿವಕುಮಾರ್ ಎರಡು ಸುತ್ತು ರೈತರೊಂದಿಗೆ ಸಭೆ ನಡೆಸಿ, ರೈತರಿಗೆ ಅನುಕೂಲವಾಗುವಂತೆ ನಿರ್ಣಯ ಕೈಗೊಂಡಿದ್ದಾರೆ. ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತರೊಂದಿಗೆ ಸಭೆ ನಡೆಸಿ ರೈತರ ಕಬ್ಬು ಕಟಾವ್ ಗೆ ಹಾಗೂ ಕಟಾವ್ ಮಾಡಿದ ಕಬ್ಬು ಅಕ್ಕ ಪಕ್ಕದ ಕಾರ್ಖಾನೆಗೆ ರಫ್ತು ಮಾಡಲು ಸಾರಿಗೆ ವೆಚ್ಚವನ್ನು ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಒಪ್ಪಿಸಿದ್ದಾರೆ.

ಪಕ್ಕದ ಮೈಲಾರ, ಮುಂಡ್ರಗಿ ಹಾಗೂ ಯಾದಗಿರಿಗೆ ರಫ್ತು ಮಾಡಲು ಸೂಚಿಸಲಾಗಿದೆ. ಒಂದು ತಿಂಗಳಲ್ಲಿ ಕಟಾವ್ ಮಾಡಿ, ರಫ್ತು ಮಾಡಲು ಸೂಚಿಸಿ ಇದನ್ನು ಮಾನಿಟರ್ ಮಾಡಲು ಸಮಿತಿ ಮಾಡಲಾಗಿದೆ, ರೈತರಿಗೆ ತೊಂದರೆ ಇಲ್ಲ ಎಂದಿದ್ದಾರೆ.

ನಾನು ದೊಡ್ಡವರ ವಿಚಾರದಲ್ಲಿ ಏನು ಮಾತನಾಡಲು ಹೋಗುವುದಿಲ್ಲ ಎಂದು ಹೇಳುವ ಮೂಲಕ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿಗೆ ಸಚಿವ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ. ಸಕ್ಕರೆ ಕಾರ್ಖಾನೆಗಳ ಮಾಲೀಕರು ಕೋಜನರೆಶನ್ ದುಡ್ಡು ಬರುತ್ತಿಲ್ಲಾ ಎಂಬ ಆರೋಪ ಮಾಡಿದ್ದು, ಅದನ್ನು ಸರ್ಕಾರದ ಪರಿಹಾರ ಮಾಡುತ್ತೆ.

ನಮ್ಮ ಸರ್ಕಾರ ರೈತರ ಪರವಾಗಿದ್ದು, ಇಲ್ಲಿನ ಸಮಸ್ಯೆಯನ್ನು ಸಚಿವರು ಮಾಡುತ್ತಾರೆ ಎಂದಿದ್ದಾರೆ.ಇನ್ನು, ರೈತರ ಬಾಕಿ ಹಣ ಉಳಿಸಿಕೊಂಡಿರೋ ಸಕ್ಕರೆ ಕಾರ್ಖಾನೆ ಹೊಂದಿರೋ ರಮೇಶ್ ಜಾರಕಿಹೊಳಿ ಪ್ರಾಮಾಣಿಕರಾಗಿದ್ದಾರೆ.ಅವರು ರೈತರಿಗೆ ಬಾಕಿ ಹಣ ನೀಡುತ್ತಾರೆ ಎಂದಿದ್ದಾರೆ.

LEAVE A REPLY

Please enter your comment!
Please enter your name here