Home District ಡಿಕೆಶಿ-ರಮೇಶ್ ಜಾರಕಿಹೊಳಿ ತಾರಕಕ್ಕೇರಿದ ಜಟಾಪಟಿ..! ನಾವಿಬ್ಬರು ಗುಡ್ ಫ್ರೆಂಡ್ಸ್ ಅಂತಾ ಕಾಲೆಳೆದ ಶಿವಕುಮಾರ್..!

ಡಿಕೆಶಿ-ರಮೇಶ್ ಜಾರಕಿಹೊಳಿ ತಾರಕಕ್ಕೇರಿದ ಜಟಾಪಟಿ..! ನಾವಿಬ್ಬರು ಗುಡ್ ಫ್ರೆಂಡ್ಸ್ ಅಂತಾ ಕಾಲೆಳೆದ ಶಿವಕುಮಾರ್..!

311
0
SHARE

ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆ. ಪರಿಣಾಮ ಕಾಂಗ್ರೆಸ್ ನಲ್ಲಿ ಮತ್ತೆ ಅಸಮಾಧಾನ ಸ್ಪೋಟವಾಗಿದೆ. ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದ 10ಕ್ಕೂ ಹೆಚ್ಚು ಶಾಸಕರು ಮುಂಬೈನತ್ತ ಪ್ರಯಾಣ ಬೆಳೆಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ವರಿಷ್ಠರ ಮೇಲೆ ಒತ್ತಡ ತಂತ್ರ ರೂಪಿಸುವ ಪ್ರಯತ್ನ ಆರಂಭವಾಗಿದೆ. ವಿಶೇಷ ಅಂದ್ರೆ, ಅಸಮಾಧಾನಿತ ಶಾಸಕರ ತಂಡದ ನೇತೃತ್ವ ವಹಿಸಿರುವ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಮಾತ್ರ ಬೆಂಗಳೂರಲ್ಲೇ ಉಳಿದಿದ್ದಾರೆ.

ತಾವು ಬಂಡಾಯದ ನೇತೃತ್ವ ವಹಿಸಿಲ್ಲ ಅನ್ನೋ ಸಂದೇಶ ಕೊಡುವ ಪ್ರಯತ್ನ ಮಾಡಿದ್ದಾರೆ. ಜತೆ ಜತೆಗೆ ಡಿ.ಕೆ.ಶಿವಕುಮಾರ್ ವಿರುದ್ಧ ಮತ್ತೆ ರಮೇಶ್ ಜಾರಕಿಹೊಳಿ ಗುಡುಗಿದ್ದಾರೆ.ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ನಡುವಿನ ರಾಜಕೀಯ ಸಂಘರ್ಷ ಸಧ್ಯಕ್ಕೆ ಕೊನೆಗೊಳ್ಳುವ ಲಕ್ಷಣ ಇಲ್ಲ… ಬೆಳಗಾವಿ ರಾಜಕೀಯ ವಿಚಾರದಲ್ಲಿ ಡಿಕೆಶಿ ಹಸ್ತಕ್ಷೇಪ ನಡೆಸುವ ವಿಚಾರದಲ್ಲಿ ಶುರುವಾದ ಉಭಯ ನಾಯಕರ ಗುದ್ದಾಟ ಮುಂದುವರೆದಿದೆ.

ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಅತೃಪ್ತ ಶಾಸಕರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ.. ಈಗಾಗಲೇ 10ಕ್ಕೂ ಹೆಚ್ಚು ಶಾಸಕರು ಮುಂಬೈನತ್ತ ಪಯಣ ಬೆಳೆಸಿದ್ದಾರೆ ಎಂಬ ವದಂತಿ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿತ್ತು… ಈ ಸುದ್ದಿ ಜಾಡನ್ನ ಹಿಡಿದು ಮಾಧ್ಯಮಗಳು ರಮೇಶ್ ಜಾರಕಿಹೊಳಿ ಅವರನ್ನ ಮಾತನಾಡಿಸಿದಾಗ, ಅವರು ಪರೋಕ್ಷವಾಗಿ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ರು… ನಾನು ಮುಂಬೈಗೆ ಹೋಗಿದ್ದೇನೆ ಎಂಬುದು ಸುಳ್ಳು ಸುದ್ದಿ. ಕಳೆದ 2 ದಿನಗಳಿಂದ ಮನೆಯಲ್ಲೇ ಇದ್ದೇನೆ.

ಆದರೆ ನನ್ನ ಹೆಸರು ಕೆಡಿಸಲು ಕಾಂಗ್ರೆಸ್ ನ ಪ್ರಭಾವಿ ಮುಖಂಡರೊಬ್ಬರು ಕುತಂತ್ರ ನಡೆಸುತ್ತಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ಡಿಕೆ ಶಿವಕುಮಾರ್ ಹೆಸರನ್ನು ಹೇಳದೇ ಹರಿಹಾಯ್ದರು.ರಮೇಶ್ ಜಾರಕಿ ಹೊಳಿ ವಿಚಾರದಲ್ಲಿ ಡಿಕೆಶಿ ಪ್ರತಿಕ್ರಿಯೆ ನೀಡಿ ನಮ್ಮಿಬ್ಬರ ನಡುವೆ ಏನೂ ಇಲ್ಲ… ರಮೇಶ್ ಜಾರಕಿಹೊಳಿ ಯೂತ್ ಕಾಂಗ್ರೆಸ್​ನಿಂದ ಬೆಳೆದು ಬಂದವರು. ರಮೇಶ್ ಅವರು ನನ್ನ ಪರ್ಸನಲ್ ಫ್ರೆಂಡ್ ಕೂಡ.

ಅವರ ಇಮೇಜ್​ಅನ್ನು ಯಾಕೆ ಹಾಳು ಮಾಡುತ್ತಿರಾ? ಎಂದು ಮಾಧ್ಯಮದವರ ಮೇಲೆ ಗರಂ ಆದರು.ಇದೇ ವೇಳೆ ಮಾತನಾಡಿದ ಸಂಸದ ಡಿ.ಕೆ. ಸುರೇಶ್ ಅವರು ಕಾಂಗ್ರೆಸ್​​ ಶಾಸಕರು ಮುಂಬೈಗೆ ಹೋಗುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.. ಸಮಸ್ಯೆಗಳಿದ್ರೆ ಪಕ್ಷದ ವರಿಷ್ಟರು ಸರಿಪಡಿಸುತ್ತಾರೆ ಎಂದು ಅಸಮಾಧಾನಿತ ಶಾಸಕರಿಗೆ ಮನವಿ ಮಾಡಿದ್ದಾರೆ.ಒಟ್ಟಾರೆ ಉಭಯ ನಾಯಕರ ಕಿತ್ತಾಟ ಕಾಂಗ್ರೆಸ್ ವರಿಷ್ಠರಿಗೆ ಮತ್ತು ರಾಜ್ಯ ನಾಯಕರಿಗೆ ತಲೆನೋವಾಗಿದೆ. ಮತ್ತೊಂದೆಡೆ, ರಮೇಶ್ ಜಾರಕಿಹೊಳಿ ಬಂಡಾಯ ದೋಸ್ತಿ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ…

LEAVE A REPLY

Please enter your comment!
Please enter your name here