Home Health ಡಿಮ್ಯಾಂಡ್ ಹೆಚ್ಚಾಯ್ತು ಹಣ್ಣುಗಳ ರಾಜನಿಗೆ…ತುಂಬಾ ಲೇಟಾಗಿ ಬಂದಿದ್ದಾನೆ ಹಣ್ಣುಗಳ ರಾಜ..???! ಕಾಯ್ತಾ ಕೂತಿದ್ದ ಮಾವು...

ಡಿಮ್ಯಾಂಡ್ ಹೆಚ್ಚಾಯ್ತು ಹಣ್ಣುಗಳ ರಾಜನಿಗೆ…ತುಂಬಾ ಲೇಟಾಗಿ ಬಂದಿದ್ದಾನೆ ಹಣ್ಣುಗಳ ರಾಜ..???! ಕಾಯ್ತಾ ಕೂತಿದ್ದ ಮಾವು ಪ್ರಿಯರಿಗೆ ಮಜವೋ ಮಜಾ..!!!

936
0
SHARE


ನಿನ್ನ ಕಂಡ್ರೆ ಬಾಯಲ್ಲಿ ನೀರೂರತ್ತೆ… ಡಾಕ್ಟ್ರುಗಳು ಎಷ್ಟೆ ಹೇಳಿದ್ರೂ ನಿನ್ನ ರುಚಿಸದೇ ನಮ್ಮ ಕೈಯಲ್ಲಿ ಇರೋದಕ್ಕೆ ಆಗೋದೇ ಇಲ್ಲಾ… ನಿನಗೋಸ್ಕರ ದಿನ ಬೆಳಗೆದ್ದು ಹುಡುಕ್ದೇ ಇರೋ ಜಾಗವಿಲ್ಲ… ಕೊನೆಗೂ ಕಾಯಿಸಿ ಕಾಯಿಸಿ ಬಂದ್ಯಲ್ಲಾ…ಥ್ಯಾಂಕ್ ಗಾಡ್…ಇಷ್ಟು ದಿನ ನಿನ್ನ ಬಿಟ್ಟಿದ್ದ ದಾಹವನ್ನೆಲ್ಲಾ ಒಮ್ಮೆಗೆ ಆಸ್ವಾದಿಸ್ತಿನಿ.. ಇಗೋ ಬಂದೇ ಗೆಳೆಯ…


ಡೈಲಿ ಮಾರ್ಕೆಟ್ ಗೆ ಹೋಗೋದು….ಮಾವಿನಹಣ್ಣು ಬಂದಿಲ್ವಾ ಅಂತಾ ಕೇಳೋದು…ಯಾಕೆಂದ್ರೆ ವರ್ಷಕ್ಕೊಂದೇ ಸಾರಿ ಬರುವ ಹಣ್ಣುಗಳ ರಾಜನಿಗೋಸ್ಕರ ಇಡೀ ಸಿಲಿಕಾನ್ ಸಿಟಿ ಕಾಯ್ತಾ ಕೂತಿದ್ದು..ಯೂಷಲಿ ಮಾರ್ಚ್ 15ನೇ ತಾರೀಖಿನಷ್ಟರಲ್ಲಿ ಮಾವು ಮಾರ್ಕೆಟ್ ಗೆ ಬಂದು ಬಿಡ್ತಿತ್ತು…

ಬಟ್ ಈ ಸಾರಿ ಕೋಲಾರ, ಆಂಧ್ರ, ತಮಿಳುನಾಡಿನಲ್ಲಿ ಸಿಕ್ಕಾಪಟ್ಟೆ ಮಳೆಯಾಗಿದ್ರಿಂದ ಇಳುವರಿ ಲೇಟ್ ಆಗಿದೆ…ಈಗ್ಲೂ ಫುಲ್ ಆಗಿ ಮಾವಿನಹಣ್ಣು ಮಾರ್ಕೆಟ್ ಗೆ ಬಂದಿಲ್ಲ…ಡಿಮ್ಯಾಂಡ್ ಜಾಸ್ತಿ ಇರೋದ್ರಿಂದ ಅಲ್ವಸ್ವಲ್ಪ ಇದ್ ಬದ್ದ ಹಣ್ಣನ್ನೇ ಕಟಾವು ಮಾಡ್ಕೊಂಡು ತಂದು ಮಾರ್ಕೆಟ್ ಗೆ ಹಾಕಲಾಗಿದೆ. ಇನ್ನೂ ಕರೆಕ್ಟ್ ಆಗಿರೋ ಹಣ್ಣು ಬರಬೇಕಂದ್ರೆ ಹತ್ತು ಹದಿನೈದು ದಿನ ಬೇಕಾಗುತ್ತೆ..ಸದ್ಯಕ್ಕೆ ಬಂದಿರೋ ಹಣ್ಣುಗಳಿಗಂತೂ ಡಿಮ್ಯಾಂಡೋ ಡಿಮ್ಯಾಂಡ್. ..

ಇಳುವರಿ ಕಮ್ಮಿಯಾಗಿರೋದ್ರಿಂದ ಮಾವಿನ ರೇಟ್ ಈ ಸಾರಿ ಆಲ್ ಮೋಸ್ಟ್ ಡಬಲ್ ಆಗಿದೆ. ..

ಬಾದಾಮಿ- 120 ರೂ.
ಅಲ್ಫೋನ್ಸಾ- 120 ರೂ.
ಮಲ್ಲಿಕಾ – 115 ರೂ.
ಮಲಗಬೋ- 80 ರೂ.
ಮಿಡಿ ಕಾಯಿ- 20 ರೂ.

ತುಂಬಾ ಸ್ವೀಟ್ ಆಗಿರೋ ಬಾದಾಮಿ ಮಾವು ಸ್ಟಾರ್ಟಿಂಗ್ ನಲ್ಲೇ 120 ರೂಪಾಯಿ ಇದೆ… ಇನ್ನೂ ಅಲ್ಫೋನ್ಸಾ ಹಣ್ಣಿಗೆ 120 ರೂಪಾಯಿ ಇದ್ರೆ, ಮಲ್ಲಿಕಾ ಹಣ್ಣಿಗೆ 115 ರೂಪಾಯಿ ಇದ್ದು ತೋತಪೂರಿಗೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಬೆಂಗಳೂರಿಗರ ಅಚ್ಚು ಮೆಚ್ಚು ಮಲಗಬೋಗೆ ಸದ್ಯಕ್ಕೆ 80 ರೂಪಾಯಿ ಇದ್ರೆ, ಉಪ್ಪಿನಕಾಯಿ ಹಾಕೋ ಮಿಡಿಕಾಯಿಗೆ 20 ರೂಪಾಯಿ ಇದೆ.. ಇನ್ನೂ ಬರೋರೆಲ್ಲರೂ ಕೂಡಾ ಮಾರ್ಕೆಟ್ ನಲ್ಲಿ ಚೌಕಾಸಿ ಮಾಡ್ತಾನೇ ಇದ್ದಾರೆ…ಇನ್ನೈದಿನೈದು ದಿನದಲ್ಲಿ ಮಾವು ಮಾರ್ಕೆಟ್ ಗೆ ಬರ್ಲಿಲ್ಲ ಅಂದ್ರೆ ರೇಟ್ ಗಳು ಇನ್ನೂ ಡಬಲ್ ಆಗ್ತಾವೆ…

ಬಟ್ ಮಾವು ಪ್ರಿಯರಿರಿಗೊಂದು ಎಚ್ಚರಿಕೆ. ಮಾವಿನಹಣ್ಣನ್ನಾ ಮರದಲ್ಲಿ ಹಣ್ಣು ಮಾಡು ತಿಂದ್ರೆ ಚೆಂದ…ಬಟ್ ಕಾಯಿ ತಂದು ಪೌಡ್ರಾಕಿ ಹಣ್ಣು ಮಾಡೋದ್ರಿಂದ ಚೆನ್ನಾಗಿ ತೊಳೆದು ತಿನ್ನಿ..ಮಾರ್ಕೆಟ್ ನಲ್ಲಿ ಅದೇನೇನ್ ಪೌಡ್ರುಗಳು ಹಾಕ್ತಾರೋ ಗೊತ್ತಿಲ್ಲ.. ಮಾವಿನ ಹಣ್ಣನ್ನಾ ಸ್ವಲ್ಪ ತಿಂದ್ರೆ ಮೆಡಿಸನ್, ಜಾಸ್ತಿ ತಿಂದ್ರೆ ಪಾಯ್ಸನ್ ಸೋ ತಿನ್ನೋ ಮುಂಚೇ ಬಿ ಕೇರ್ ಫುಲ್…

LEAVE A REPLY

Please enter your comment!
Please enter your name here