ಸದ್ಯ ರಾಜ್ಯದಲ್ಲಿ ರಚನೆಯಾಗಿರೋ ಸಮ್ಮೀಶ್ರ ಸರ್ಕಾರದ ಪಾಲಿಗೆ ನಿಜವಾದ ಹೀರೋ ಅಂತ ಯಾರಾದ್ರೂ ಇದ್ರೆ ಅದು ಡಿ.ಕೆ.ಶಿವಕುಮಾರ್. ರಾಜ್ಯಪಾಲರಿಂದ ಪ್ರಮಾಣ ವಚನ ಸ್ವೀಕರಿಸೋ ಅವಕಾಶ ಪಡೆದು ಆಪರೇಶನ್ ಕಮಲಕ್ಕೆ ಕೈ ಹಾಕಿದ್ದ ಕಮಲ ಪಡೆಯನ್ನ ತಡೆದುನಿಲ್ಲಿಸಿದ್ದು ಡಿ.ಕೆ.ಶಿವಕುಮಾರ್…
ಕಾಂಗ್ರೆಸ್ ಪಕ್ಷದ ವರೀಷ್ಠರು ಕೊಟ್ಟ ಜವಾಬ್ದಾರಿಯನ್ನ ಯಶಸ್ವಿಯಾಗಿ ನಿಭಾಯಿಸಿದ ಡಿ.ಕೆ.ಶಿ ಕಾಂಗ್ರೆಸ್ ಪಾಳೆಯದಲ್ಲಿ ಹೀರೋ ಅನ್ನಿಸಿಕೊಂಡ್ರೆ, ಬಿ.ಜೆಪಿಯವರಿಗೆ ವಿಲನ್ ಆಗಿ ಪರಿಣಮಿಸಿದ್ರು. ತನ್ನ ಪಾಲಿಗೆ ಬಲಿಷ್ಠ ವಿಲನ್ ಅನ್ನಿಸಿಕೊಂಡಿರೋ ಡಿ.ಕೆ.ಶಿಯನ್ನ ಬಿ.ಜೆ,ಪಿ ಮುಗಿಸೋದಕ್ಕೆ ಮುಂದಾಗಿದೆಯಾ..? ಟ್ರಬಲ್ ಶೂಟರ್ ಅಂತ ಕರೆಸಿಕೊಳ್ಳೊ ಶಿವಕುಮಾರ್ ರನ್ನ ದೊಡ್ಡ ಟ್ರಬಲ್ ನಲ್ಲಿ ಸಿಕ್ಕಿಲಾಗ್ತಿದೆಯಾ…
ಅಸಲಿಗೆ ಡಿ.ಕೆ.ಶಿವಕುಮಾರ್ ಬಿ.ಜೆ.ಪಿಯ ಟಾರ್ಗೆಟ್ ಪಟ್ಟಿ ಸೇರಿದ್ದು ಕಳೆದ ಬಾರಿ ಗುಜರಾತ್ ಶಾಸಕರನ್ನ ರೆಸಾರ್ಟ್ ನಲ್ಲಿ ಕೂಡಿಟ್ಟಿದ್ದ ವೇಳೆ. ಅಲ್ಲಿಂದ ಮುಂದೆ ಬಿ.ಜೆ.ಪಿ, ಶಿವಕುಮಾರ್ ರನ್ನ ಟಾರ್ಗೆಟ್ ಮಾಡ್ತಾನೇ ಬಂದಿದೆ.ಕಳೆದ ವರ್ಷ ಅಗಸ್ಟ್ ತಿಂಗಳಲ್ಲಿ ಗುಜರಾತ್ ನಲ್ಲಿ ರಾಜ್ಯಸಭಾ ಚುನಾವಣೆ ನಡೀತಾ ಇದ್ದ ವೇಳೆ ಕಾಂಗ್ರೆಸ್ ಶಾಸಕರನ್ನ ಖರೀಧಿಸೋದಕ್ಕೆ ಗುಜರಾತ್ ಬಿ.ಜೆ.ಪಿ ಪ್ರಯತ್ನ ಮಾಡ್ತಾ ಇತ್ತು…
ಆಗ ಕಾಂಗ್ರೆಸ್ ಹೈಕಮಾಂಡ್ ಗುಜರಾತ್ ಶಾಸಕರನ್ನ ಕರ್ನಾಟಕಕ್ಕೆ ಕಳುಹಿಸಿ ಅವರನ್ನ ಸುರಕ್ಷಿತವಾಗಿ ನೋಡಿಕೊಳ್ಳೋ ಜವಾಬ್ದಾರಿಯನ್ನ ಪವರ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಗೆ ವಹಿಸಿತ್ತು. ಡಿ.ಕೆ.ಶಿ ಯಾವಾಗ ಈ ಜವಾಬ್ದಾರಿ ಹೊತ್ತುಕೊಂಡ್ರೋ ಆಗಿನಿಂದಲೇ ಕೇಂದ್ರ ಸರ್ಕಾರದ ಟಾರ್ಗೆಟ್ ಪಟ್ಟಿಯಲ್ಲಿ ಸೇರಿಕೊಂಡ್ರು…
ನ್ಯಾಯವಾಗಿ ನೋಡಹೋದ್ರೆ ಡಿ.ಕೆ.ಶಿವಕುಮಾರ್ ಈ ಬಾರಿ ಸರ್ಕಾರದಲ್ಲಿ ಡಿ.ಸಿ,ಎಂ ಪಟ್ಟ ಪಡೀಬೇಕಿತ್ತು. ಆದ್ರೆ ಪಕ್ಷನಿಷ್ಠನಾಗಿ ದುಡಿದ ಶಿವಕುಮಾರ್ ಗೆ ಡಿ.ಸಿ.ಎಂ ಸ್ಥಾನ ಸಿಗಲಿಲ್ಲ. ಒಂದು ಕಡೆಗೆ ಅಧಿಕಾರವೂ ಸಿಗಲಿಲ್ಲ. ಮತ್ತೊಂದು ಕಡೆಗೆ ಬಿ.ಜೆ.ಪಿ ಕಡೆಯಿಂದ ದ್ವೇಷ ರಾಜಕಾರಣಕ್ಕೆ ಬಲಿಯಾಗ್ತಿದ್ದಾರೆ. ರಾಜ್ಯದ ರಾಜಕಾರಣದ ಚಕ್ರವ್ಯೂಹದಲ್ಲಿ ಡಿ.ಕೆ.ಶಿವಕುಮಾರ್ ಬಲಿ ಪಶುವಾಗ್ತಿದ್ದಾರಾ..???