Home District ಡಿ.ಕೆ.ಶಿ ಕೊಟ್ಟ ಡಿಚ್ಚಿಗೆ ಬಳ್ಳಾರಿಯಲ್ಲಿ ಗಣಿಧಣಿಗಳು ಅಪ್ಪಚ್ಚಿ..! ಸಿದ್ದು-ಡಿಕೆಶಿ ರೂಪಿಸಿದ ಚಕ್ರವ್ಯೂಹದಲ್ಲಿ ಸಿಲುಕಿ ತತ್ತರಿಸಿ ಹೋದ...

ಡಿ.ಕೆ.ಶಿ ಕೊಟ್ಟ ಡಿಚ್ಚಿಗೆ ಬಳ್ಳಾರಿಯಲ್ಲಿ ಗಣಿಧಣಿಗಳು ಅಪ್ಪಚ್ಚಿ..! ಸಿದ್ದು-ಡಿಕೆಶಿ ರೂಪಿಸಿದ ಚಕ್ರವ್ಯೂಹದಲ್ಲಿ ಸಿಲುಕಿ ತತ್ತರಿಸಿ ಹೋದ ಶ್ರೀರಾಮುಲು, ಜನಾರ್ದನ ರೆಡ್ಡಿ..! BJP ಭದ್ರಕೋಟೆಗೆ ಕಾಂಗ್ರೆಸ್ ಲಗ್ಗೆ..!

332
0
SHARE

ಡಿ.ಕೆ.ಶಿವಕುಮಾರ್ ಕೊಟ್ಟ ಡಿಚ್ಚಿಗೆ ಬಳ್ಳಾರಿಯಲ್ಲಿ ಗಣಿಧಣಿಗಳು ಅಪ್ಪಚ್ಚಿಯಾಗಿದ್ದಾರೆ. ಹೈವೋಲ್ಟೇಜ್ ಕ್ಷೇತ್ರ ಎಂದೇ ಬಿಂಬಿತವಾಗಿದ್ದ ಬಳ್ಳಾರಿ ಲೋಕಸಭೆಯನ್ನು ಕಾಂಗ್ರೆಸ್ ತನ್ನ ತಕ್ಕೆಗೆ ಹಾಕಿಕೊಂಡು ಕೇಸರಿ ಕೋಟೆಯನ್ನು ಛಿದ್ರ ಛಿದ್ರ ಮಾಡಿದೆ.

ದಶಕದ ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗೆ ವಿಜಯಲಕ್ಷ್ಮೀ ಒಲಿದಿದ್ದಾಳೆ. ಬಳ್ಳಾರಿ ಲೋಕಸಭೆ ಫಲಿತಾಂಶ:ಕಾಂಗ್ರೆಸ್- ಉಗ್ರಪ್ಪ – 6,28,163 ಮತಗಳು.ಬಿಜೆಪಿ – ಜೆ.ಶಾಂತಾ- 3,84,892 ಮತಗಳು.ಗೆಲುವಿನ ಅಂತರ-2,43,271ಮತಗಳು.ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್.ಉಗ್ರಪ್ಪ 6,28,163 ಮತ ಪಡೆದ್ರೆ, ಬಿಜೆಪಿಯ ಜೆ.ಶಾಂತಾ 3,84,892 ಮತಗಳಿಸಿ ಸೋಲುಂಡಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್.ಉಗ್ರಪ್ಪ 2,43,271 ಮತಗಳ ಅತ್ಯಧಿಕ ಅಂತರದಿಂದ ಗೆಲುವಿನ ನಗು ಬೀರಿದ್ದಾರೆ.ಗೆಲುವಿನ ಹುಮ್ಮಸ್ಸಿನಲ್ಲಿರುವ ಡಿಕೆಶಿ ಚುನಾವಣಾ ಪ್ರಚಾರದ ವೇಳೆ ಬಳ್ಳಾರಿಯಲ್ಲೇ ಖರೀದಿ ಮಾಡಿದ್ದ ಜೀನ್ ಮತ್ತು ಶಾರ್ಟ್ ತೊಟ್ಟು ರೆಡ್ಡಿ ಬ್ರದರ್ಸ್‌ಗೆ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ.

ಶ್ರೀರಾಮುಲು ಅಣ್ಣ ಶಾಂತ ರೀತಿಯಲ್ಲಿ ಚುನಾವಣೆ ನಡೆಸಲು ಸಹಕರಿಸಿದ್ದು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕಾಲೆಳೆದಿದ್ದಾರೆ. ಮತ್ತೊಂದೆಡೆ ಬಳ್ಳಾರಿಯಲ್ಲಿ ನಮ್ಮದೇ ಪಾರುಪತ್ಯ, ನಮ್ಮನ್ನು ಕೇಳುವವರಿಲ್ಲಾ ಎಂದು ಹಮ್ಮಿನಿಂದ ಬೀಗುತ್ತಿದ್ದ ಶ್ರೀ ರಾಮುಲು ಅಂಡ್ ಟೀಂ ಕಂಗೆಟ್ಟಿದೆ. ಬಿಜೆಪಿ ಅಭ್ಯರ್ಥಿ ಸೋಲಿನ ಹೊಣೆಯನ್ನು ಶ್ರೀರಾಮುಲು ಹೊತ್ತುಕೊಂಡಿದ್ದಾರೆ.

ಬಳ್ಳಾರಿಯ ಸೋಲು ನನ್ನ ಸೋಲಾಗಿದೆ.. ದೋಸ್ತಿ ನಾಯಕರು ಹಣದ ಹೊಳೆಯನ್ನ ಹರಿಸಿ ಗೆಲುವು ಸಾಧಿಸಿದ್ದಾರೆ. ಆಡಳಿತಯಂತ್ರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಳ್ಳಾರಿಯ ರೆಡ್ಡಿ ಮತ್ತು ಶ್ರೀ ರಾಮುಲು ಕೋಟೆ ಮೇಲೆ ಕಾಂಗ್ರೆಸ್ ಬಾವುಟ ಹಾರಿದೆ.. ಬಳ್ಳಾರಿ ಉಸ್ತುವಾರಿ ಸಚಿವ ಡಿಕೆ.ಶಿವಕುಮಾರ್ ರಣತಂತ್ರ ಈ ಬೈ ಎಲೆಕ್ಷನ್ ನಲ್ಲಿ ಕೆಲಸ ಮಾಡಿದೆ. ಡಿಕೆಶಿ, ಸಿದ್ದು ಮಾಸ್ಟರ್ ಮೈಂಡ್‌ಗೆ ಕಮಲ ವಿಲವಿಲ ಒದ್ದಾಡಿದೆ.

LEAVE A REPLY

Please enter your comment!
Please enter your name here