Home Cinema ಡೇಟಿಂಗ್ ರಿಯಾಲಿಟಿ ಶೋನಲ್ಲಿ ಸನ್ನಿ ಲಿಯೋನ್-ಸಂಯುಕ್ತ ರಂಗ..! ಕಿರಿಕ್ ಸಂಯುಕ್ತಳ ಹೊಸ ಅವತಾರ ನೋಡಿ..!!

ಡೇಟಿಂಗ್ ರಿಯಾಲಿಟಿ ಶೋನಲ್ಲಿ ಸನ್ನಿ ಲಿಯೋನ್-ಸಂಯುಕ್ತ ರಂಗ..! ಕಿರಿಕ್ ಸಂಯುಕ್ತಳ ಹೊಸ ಅವತಾರ ನೋಡಿ..!!

2114
0
SHARE

ಇದು.. ಸಂಯುಕ್ತಾ ಲೇಟೆಸ್ಟ್ ಅವತಾರ. ಸದ್ಯ ಸೋಶಿಯಲ್ ಪ್ಲ್ಯಾಟ್‌ಫಾರ್ಮ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿರೋ ಸಂಯುಕ್ತಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.  ಥರಹೇವಾರಿ ಭಂಗಿಗಳಿಂದ, ಟ್ರಾಲಿಗರಿಗೆ ಸದಾ ಆಹಾರವಾಗ್ತಿದ್ದ ಸಂಯುಕ್ತಾ ಈಗ ಹೊಸ ಚೇಂಜ್ ಓವರ್ ಬಯಸಿದಾರೆ. ಹಾಗಾಗಿನೇ ಹೊಸ ಕೆಲಸಕ್ಕೆ ಮುಂದಾಗಿದ್ದಾರೆ. ಅದು ಬೇರೆ ಏನು ಅಲ್ಲ ಹೊಸ ರಿಯಾಲಿಟಿ ಶೋನ ಕದ ತಟ್ಟಿದ್ದಾರೆ ಸಂಯುಕ್ತಾ.

ಹಾಗಾಗಿನೇ ಡೇಟಿಂಗ್ ರಿಯಾಲಿಟಿ ಶೋದಲ್ಲಿ ಸನ್ನಿ ಲಿಯೋನ್ ಜೊತೆಗೆ ಸಂಯುಕ್ತಾ ಕಾಣಿಸಿಕೊಳ್ಳಲಿದ್ದಾರೆ.ಕಿರಿಕ್ ಪಾರ್ಟಿಯ ಅಭೂತಪೂರ್ವ ಯಶಸ್ಸಿನ ಬಳಿಕ, ಬಿಗ್ ಬಾಸ್ ಮನೆಗೆ ಚೋಟುದ್ದದ ಚಡ್ಡಿ ತೊಟ್ಟು ಕಾಲಿಟ್ಟಿದ್ದಳು ಸಂಯುಕ್ತಾ  ಎಂಬ ಚೋಕರಿ. ಬಿಗ್ ಬಾಸ್ ನಂತ್ರ ಬ್ಯಾಕ್ ಟು ಬ್ಯಾಕ್ ರಿಯಾಲಿಟಿ ಶೋ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ರು. ವಿಭಿನ್ನ ರೀತಿ ಪೋಟೊಗೆ ಪೋಸ್ ಕೊಡೋ ಮೂಲಕ ಸದ್ದು ಮಾಡಿದ್ರು.

ಹೀಗೆ ಬೇಜಾನ್ ವಿಷಯಗಳಿಂದ ಸುದ್ದಿಯಲ್ಲಿದ ಸಂಯುಕ್ತಾ, ಅವತ್ತಿಂದ ಸಾಮಾಜಿಕ ಜಾಲತಾಣದಲ್ಲಿ ಕುಂತ್ರೂ ತಪ್ಪು, ನಿಂತ್ರೂ ತಪ್ಪು ಅನ್ನುವಂತೆ ಆಗಿ ಬಿಟ್ಟಿದ್ಲು. ಆಗ ಸ್ಯಾಂಡಲ್‌ವುಡ್‌ನಿಂದ ಮಾಯವಾಗಿದ್ದ ಸಂಯುಕ್ತಾ ಈಗ ಮತ್ತೊಂದು ರಿಯಾಲಿಟಿ ಶೋಗೆ ಎಂಟ್ರಿಕೊಟ್ಟಿದ್ದಾರೆ. ಮತ್ತೆ ಪ್ರೇಕ್ಷಕರ ಮುಂದೆ ಹಾಜರಾಗಿದ್ದಾರೆ.ಯಸ್..ಕಿರಿಕ್ ಬ್ಯೂಟಿ ಸಂಯುಕ್ತ ಹೆಗ್ಡೆ ಹಿಂದಿ ರಿಯಾಲಿಟಿ ಶೋಗಳ ಮೇಲೆ ಹೆಚ್ಚಾಗಿ ಒಲವಿಟ್ಟುಕೊಂಡಿದ್ದಾರೆ.

ಹಾಗಾಗಿನೇ ಯಾವುದೇ ಕಿರಿಕ್ ರಿಯಾಲಿಟಿ ಶೋಗಳಾಗ್ಲಿ ಅಲ್ಲಿಗೆ ಸಂಯುಕ್ತಾ ಎಂಟ್ರಿಕೊಡ್ತಾರೆ. ತಮ್ಮ ಚಮಕ್ ತೋರಿಸ್ತಾರೆ. ಈಗ ಸದ್ಯ ಸನ್ನಿ ಲಿಯೋನ್ ಮನೆ ಸೇರಿದ್ದಾರೆ ಸಂಯುಕ್ತಾ. ಸನ್ನಿ ಲಿಯೋನ್ ನಿರೂಪಣೆಯಲ್ಲಿ ಮೂಡಿಬರ್ತಿರುವ ಸ್ಟ್ಲಿಟ್ಸ್ ವಿಲ್ಲಾ ಮನೆಗೆ ಸಂಯುಕ್ತಾ ಎಂಟ್ರಿ ಕೊಟ್ಟಿದ್ದಾರೆ. ಹೌದು. ಸಂಯುಕ್ತಾ ಸದ್ಯ ಸ್ಲ್ಟಿಟ್ಸ್ ವಿಲ್ಲಾ ಸೀಸನ್ ೧೧ರ ಕಂಟೆಸ್ಟ್ಂಟ್ ಆಗಿ ಎಂಟ್ರಿ ಕೊಟ್ಟಿದ್ದಾರೆ.ಹಿಂದಿಯ ಜನಪ್ರಿಯ ಡೇಟಿಂಗ್ ರಿಯಾಲಿಟಿ ಶೋ ಆಗಿರೋ ಸ್ಲ್ಟಿಟ್ಸ್ ವಿಲ್ಲಾ ಹೆಚ್ಚಾಗಿ ವಯಸ್ಕರು ನೋಡೋ ಕಾರ್ಯಕ್ರಮ.

ರಾತ್ರಿ ೧೦ರ ನಂತ್ರ ಪ್ರಸಾರವಾಗೋ ಈ  ಕಾರ್ಯಕ್ರಮದಲ್ಲಿ ಸಂಯುಕ್ತಾ ಈಗ ಸ್ಪರ್ಧಿಯಾಗಿದ್ದಾರೆ. ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಿರುವ ವೇಳೆ ಸ್ಟೇಜ್ ಮೇಲ್ ಬೋಲ್ಡ್  ಆಗಿ ಸ್ಟೆಪ್ ಹಾಕುವ ಮೂಲಕ. ಉಳಿದ ಸ್ಪರ್ಧಿಗಳು ಬಾಯ್ಮೇಲೆ ಬೆರಳಿಟ್ಟು ನೋಡುವಂತೆ ಮಾಡಿದ್ದಾರೆ.ಈ ಹಿಂದೆ ಕಿರಿಕ್ ಹುಡುಗಿ ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ರೋಡೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು . ಅಲ್ಲೂ ಕೂಡ ಬೇಡದ ಕಿರಿಕ್ ಮಾಡಿಕೊಂಡು ಅರ್ಧಕ್ಕೆ ಕಾರ್ಯಕ್ರಮದಿಂದ ವಾಪಸ್ಸ್ ಬಂದಿದ್ರು.

ಅಲ್ಲಿಂದ ಬಿಗ್ ಬಾಸ್ ಕಾರ್ಯಕ್ರಮದ ಬಳಿಕ ಕಿರಿಕ್ ಹುಡುಗಿ ಟಾಲಿವುಡ್ ಸಿನಿಮಾಗಳಲ್ಲಿ ಬಿಝಿಯಾಗಿದ್ರು. ಇತ್ತೀಚೆಗೆ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಆಂಕರ್ ಆಗೋ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದ ಸಂಯುಕ್ತಾ, ಇದೀಗ ರಿಯಾಲಿಟಿ ಶೋಗೆ ಎಂಟ್ರಿಕೊಟ್ಟಿದ್ದಾರೆ. ಸ್ಯಾಂಡಲ್‌ವುಡ್ ಬಿಟ್ಟು ಬೇರೆ ಬೇರೆ ಕಾರ್ಯಕ್ರಮಗಳ ಮೂಲಕ ಗಮನಸೆಳೆಯುತ್ತಿದ್ದಾರೆ.ಇಷ್ಟೆಲ್ಲಾ ಆದಮೇಲೆ ಎಂದಿನಂತೆ ಟ್ರೋಲ್ ಹೈಕ್ಳು ಯದ್ವಾ ತದ್ವಾ ಮತ್ತೊಮ್ಮೆ ಸಂಯುಕ್ತಾರನ್ನ ಟ್ರೋಲ್ ಮಾಡ್ತಿದ್ದಾರೆ.

ಬಟ್, ಕಿರಿಕ್ ಪಾರ್ಟಿಯ ಕ್ವೀನ್ ಮಾತ್ರ, ಎಂದಿನಂತೆ ಐ ಡೊಂಟ್ ಕೇರ್ ಅಂತಿದಾರೆ. ಅದೇನೆ ಇರ‍್ಲಿ.. ಸದ್ಯ, ಟ್ರೋಲ್ ಮಾಡುವ ಮಂದಿಯ ಫೇವರೆಟ್ ಆಗಿರುವ ಚೋಟುದ್ದ ಚಡ್ಡಿಯನ್ನ ಇಷ್ಟ ಪಡುವ ಚೋಕರಿ ಸಂಯುಕ್ತಾ, ಮುಂದೆ.. ಇನ್ಯಾವ ಅವತಾರದಲ್ಲಿ ಪ್ರತ್ಯಕ್ಷವಾಗಲಿದ್ದಾರೋ ಅನ್ನೋದು ಟ್ರೋಲ್ ಹೈಕಳುಗಳಲ್ಲಿ ಭಾರೀ ಕುತೂಹಲ ಉಂಟುಮಾಡಿದೆ.ಒಟ್ಟಾರೆ, ಸಂಯುಕ್ತಾ ಮಾತ್ರ ತಮ್ಮ ಗುರಿ ಕಡೆ ಸಾಗ್ತಾ ಈಗ ಸ್ಲ್ಟಟ್ಸ್ ವಿಲ್ಲಾ ಸೀಸನ್ ೧೧ರ ಸ್ಪರ್ಧಿಯಾಗಿದ್ದಾರೆ. ಬಿಗ್ ಬಾಸ್‌ಗೂ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಸಂಯುಕ್ತಾ ಈ ಒಂದು ರಿಯಾಲಿಟಿ ಶೋದ ಲ್ಲಾದ್ರೂ  ಕೊನೆಯ ಅಂತ ತಲುಪ್ತಾರಾ ಕಾದು ನೋಡ್ಬೇಕಿದೆ.

LEAVE A REPLY

Please enter your comment!
Please enter your name here