Home Crime ಡ್ಯಾಡಿ ಸಮಾನನಾದ ಲಕ್ಷ್ಮಣನ ಜೊತೆ ನಡೆಸಿದ್ಲು ಕಾಮಕೇಳಿ..! ಲಕ್ಷ್ಮಣನ ಚಟ್ಟ ಕಟ್ಟೋಕೆ ಅವನಿಂದಲೇ ಹಣ ಪಡೆದಿದ್ಲು...

ಡ್ಯಾಡಿ ಸಮಾನನಾದ ಲಕ್ಷ್ಮಣನ ಜೊತೆ ನಡೆಸಿದ್ಲು ಕಾಮಕೇಳಿ..! ಲಕ್ಷ್ಮಣನ ಚಟ್ಟ ಕಟ್ಟೋಕೆ ಅವನಿಂದಲೇ ಹಣ ಪಡೆದಿದ್ಲು ಸುಂದರಿ..! ಆತನಿಂದ ಲಂಡನ್ ನಲ್ಲಿ ರಾಣಿಯಂತೆ ಮೆರೆಯುತ್ತಿದ್ಲು ವರ್ಷಿಣಿ..!

6022
0
SHARE

ಬೆಂಗಳೂರಿನ ಕುಖ್ಯಾತ ರೌಡಿ ಲಕ್ಷ್ಮಣನ ಬದುಕಿರೋವರೆಗೂ ವರ್ಣರಂಜಿತವಾಗಿಯೇ ಬದುಕಿದ್ದ. ರಕ್ತದಲ್ಲಿಯೇ ತನ್ನ ಬದುಕನ್ನ ಕಟ್ಟಿಕೊಂಡಿದ್ದ. ಆದ್ರೆ ಅವನ ಸಾವು ಮತ್ತು ಸಾವಿನ ಸಂಚು ಕೂಡಾ ಅಷ್ಟೇ ವರ್ಣರಂಜಿತವಾಗಿರುತ್ತೆ ಅನ್ನೋದು ಯಾರಿಗೂ ಗೊತ್ತಿರಲಿಲ್ಲ.

ಲಕ್ಷ್ಮಣನ ಲೈಫ್ ಸ್ಟೋರಿ ಇನ್ನು ರಾಮ್ ಗೋಪಾಲ್ ವರ್ಮಾನ ಕಿವಿಗೆ ಬಿದ್ದಿಲ್ಲ ಇರಬೇಕು. ಇಲ್ಲಿದಿದ್ರೆ ಇತನನ್ನ ಕೊಂದ ಆರೋಪಿಗಳು ಅರೆಸ್ಟ್ ಆಗೋದ್ರೊಳಗೆ ಆತ ಒಂದು ಸಿನಿಮಾ ರೆಡಿ ಮಾಡಿ ರಿಲೀಸ್ ಮಾಡಿಬಿಡ್ತಿದ್ದ.  ಯಾಕಂದ್ರೆ ಲಕ್ಷ್ಮಣ ಬದುಕು ಮತ್ತು ಸಾವು ಅಷ್ಟು ಕಲರ್ ಕಲರ್ ಆಗಿತ್ತು. ಅವನು ಹೇಗೆ ಬದುಕಿದ್ದ, ಅವನು ಆಸ್ತಿ ಎಷ್ಟು, ಅವನ ದುಷ್ಮನ್ ಗಳ್ಯಾರು ಅನ್ನೋದು ಸರಿಯಾಗಿ ಯಾರಿಗೂ ಗೊತ್ತಿಲ್ಲ. ಆದ್ರೆ ಅವನ ಸಾವು ಹೇಗಾಯ್ತು ಯಾರಿಂದ ಆಯ್ತು ಮತ್ತು ಯಾಕಾಯ್ತು ಅನ್ನೋದು ಇವತ್ತು ಗುಟ್ಟಾಗಿ ಉಳಿದಿಲ್ಲ. ಒಬ್ಬ ರೌಡಿ ರಸ್ತೆಯಲ್ಲಿ ಹೆಣವಾಗೋದು ಅಂಡರ್ ವರ್ಲ್ಡ್ ನಲ್ಲಿ ಹೊಸದೇನಲ್ಲ. ಆದ್ರೆ ಲಕ್ಷ್ಮಣನ ಸಾವಿದೆಯಲ್ಲ ಅದು ಒಂದು ಥ್ರಿಲ್ಲರ್ ಸಿನಿಮಾದ ಸರಕು.ನಾವು ಈ ಹಿಂದೆ ಹೇಳಿದ್ವಿ. ಈ ಫಿಲ್ಡ್ ನಲ್ಲಿ ಹೆಣ್ಣಿನ  ಹಿಂದೆ ಬಿದ್ದವನು, ಹೆಣ್ಣಿಗಾಗಿ ಅಲೆದಾಡಿದವನು ಯಾವತ್ತು ನೆಮ್ಮದಿಯಾಗಿರೋದಿಲ್ಲ.

ಅಲ್ಲದೆ ಸಾವಿರ ದುಷ್ಮನ್ ಗಳನ್ನ ಎದುರಿನಿಂದ ಎದುರಿಸಬಹುದು. ಆದ್ರೆ ಪಕ್ಕದಲ್ಲೇ ಮಲಗಿಕೊಂಡು ಮುದ್ದು ಮಾಡೋ ಹೆಣ್ಣನ್ನ ಮಾತ್ರ ನಂಬೋದಕ್ಕೆ ಆಗೋದಿಲ್ಲ. ಇಲ್ಲಿ ಲಕ್ಷ್ಮಣನ ಕಥೆಯು ಇದೇ ಆಗಿತ್ತು. ಲಕ್ಷ್ಮಣನ ಸಾವಿಗೆ ಅವಳೊಬ್ಬಳು ಕಾರಣವಾಗಿ ಹೋಗಿದ್ಲು. ಮೂರು ಬಿಟ್ಟು ನಿಂತ ಹೆಣ್ಣಿಗೆ ನಿಯತ್ತಿಲ್ಲ ಅನ್ನೋದು ಲಕ್ಷ್ಮಣನ ಸಾವಿನಿಂದಲೇ ಗೊತ್ತಾಗುತ್ತೆ. ಇವತ್ತು ನಾವು ಕಲಿಯುಗದ ಲಕ್ಷ್ಮಣನ ಇನ್ ಸೈಡ್ ಔಟ್ ಸೈಡ್ ಸ್ಟೋರಿಯನ್ನೆಲ್ಲಾ ಹೇಳ್ತೀವಿ. ಅದ್ರಲ್ಲಿ ಸಿಂಗಲ್  ಇನ್ ಫರ್ಮೇಷನ್ ಕೂಡಾ ಮಿಸ್ ಆಗೋದಿಲ್ಲ.ಲಕ್ಷ್ಮಣ ಬೆಂಗಳೂರಿನಲ್ಲಿ ದೊಡ್ಡ ಹೆಸರು ಇವನದ್ದು. ಮೊನ್ನೆ ಮೊನ್ನೆಯವರೆಗು ಲಕ್ಷ್ಮಣ ರೌಡಿಸಂ ಫಿಲ್ಡ್ ಅನ್ನ ಆಳ್ತಿದ್ದ.  ಮನೆಯಿಂದ ಹೊರಗೆ ಕಾಲಿಟ್ಟ ಅಂದ್ರೆ ಅವನು ನಿಜಕ್ಕು ಖತರ್ನಾಕ್, ಆದ್ರೆ ಈ ಲಕ್ಷ್ಮಣ ಒಂದು ವಿಷಯದಲ್ಲಿ ಮಾತ್ರ ಯಾವ ಕಂಟ್ರೋಲ್ ಗೆ ಕೂಡಾ ಸಿಗ್ತಿರಲಿಲ್ಲ.

ಅದೇನಂದ್ರೆ ಹೆಂಗಸರ ವಿಷಯದಲ್ಲಿ ಲಕ್ಷ್ಮಣ ಪೂರ್ತಿಯಾಗಿ ಕಂಟ್ರೋಲ್ ತಪ್ಪಿ ಹೋಗಿದ್ದ. ಹೆಣ್ಣಿನ ವಿಚಾರವೊಂದರಲ್ಲಿ ಅವನು ಸರಿಯಾಗಿ ಇದ್ದಿದ್ರೆ ಖಂಡಿತವಾಗಿಯು ಅವನು ಇನ್ನೊಂದು ನಾಲ್ಕು ದಿನ ಬದುಕ್ತಿದ್ದ ಅನಿಸ್ತುತೆ. ಆದ್ರೆ ಅದೇ ಅವನ ವೀಕ್ನೆಸ್ ಆಗಿ ಹೋಗಿತ್ತು. ಈ ಲಕ್ಷ್ಮಣ ಫಿಲ್ಡ್ ಆಳೋದಕ್ಕೆ ಶುರುಮಾಡಿದಾಗ ಅವಳು ಇನ್ನು ಹುಟ್ಟಿರಲಿಲ್ಲ ಅನ್ಸುತ್ತೆ. ಆದ್ರೆ ಅವನು ರೌಡಿಸಂನ ಪೀಕ್ ನಲ್ಲಿರೋವಾಗ ಮಾತ್ರ ಅವಳು ಇವನ ಜೀವ ತೆಗೆಯೋದಕ್ಕೆ ರೆಡಿಯಾಗಿಬಿಟ್ಟಿದ್ಲು.ಇವಳೇ ನೋಡಿ ಆ ಸುಂದರಿ ಹಂತಕಿ ವರ್ಷಿಣಿ. ಈ ವರ್ಷಿಣಿ ಪದ್ಮಾ ಮತ್ತು ಮೂಟೆ ಅಲಿಯಾಸ್ ತರಕಾರಿ ಹರೀಶ್ ನ ಮಗಳು. ಇನ್ನು 21ರ ವಯಸ್ಸಿನ, ತುಂಬು ಯೌವ್ವನ ಹೊತ್ತ ಚೆಲುವೆ. ಇವಳ ಚೆಂದ ನೋಡಿ ಆಹಾ ಸಿನಿಮಾ ಹೀರೋಯಿನ್ ಇದ್ದ ಹಾಗೆ ಇದ್ದಾಳೆ.

ಅವಳ ವೈಯ್ಯಾರ, ಮೈಮಾಟ, ಎಲ್ಲವೂ ಕಂಡವರ ಕಣ್ಣು ಕುಕ್ಕಿಸುತ್ತಿತ್ತು. ಇವಳ ಅಪ್ಪ ಅಮ್ಮ ಲಕ್ಷ್ಮಣನಿಗೆ ಸುಮಾರು 20 ವರ್ಷಗಳಿಂದ ಪರಿಚಯವಿದ್ರು. ಇವಳು ಹುಟ್ಟಿದಾಗ ಇದೇ ಲಕ್ಷ್ಮಣ ಆಕೆಯನ್ನ ಬೆತ್ತಲಾಗಿ ನೋಡಿದ್ದ.  ಹರೀಶನ ಸ್ನೇಹಿತನಾಗಿ ಅದೇ ಅಪ್ಪನ ಸ್ಥಾನದಲ್ಲಿ ನಿಂತು ಆಕೆಯನ್ನ ನೋಡಿದ್ದ. ಅಲ್ಲದೆ ಕಣ್ಣೆದುರಿಗೆ ಆಕೆ ಸೌಂದರ್ಯವತಿಯಾಗಿ ಬೆಳೆದದ್ದನ್ನ ಕೂಡಾ ನೋಡಿದ್ದ. ಅಷ್ಟೇ ಅಲ್ಲ ಇದೇ ಸುಂದರಿಯನ್ನ ತಾನೊಬ್ಬನೇ ಅದೆಷ್ಟೋ ಬಾರಿ ಇದೇ ಆರ್ ಜಿ ಲಾಡ್ಜ್ ನಲ್ಲಿ ಬೆತ್ತಲಾಗಿಸಿ ರಸಹೀರಿದ್ದ.ಈ ಜಗತ್ತಲ್ಲಿ ಹೆಣ್ಣಿಗೆ ವಿದ್ಯೆ. ಹಣ, ಸಂಪತ್ತು ಯಾವುದು ಇಲ್ಲ ಅಂದ್ರು ಪರವಾಗಿಲ್ಲ ಆಕೆಗೆ ಸೌಂದರ್ಯವೊಂದು ಇದ್ದು ಬಿಟ್ರೆ ಉಳಿದೆಲ್ಲವನ್ನ ಆಕೆ ಈಸಿಯಾಗಿ ಗಳಿಸಿಬಿಡ್ತಾಳೆ. ಇಲ್ಲಿ ವರ್ಷಿಣಿಯ ಕಥೆಯು ಹಾಗೆ ಆಗಿತ್ತು.

ಇಲ್ಲಿ ಆಕೆಯ ಅಪ್ಪ ಅಮ್ಮನಿಗೆ ಹಣ ಬೇಕಾಗಿತ್ತು. ಆದ್ರೆ ಅದು ಅವರ ಬಳಿಯಿರಲಿಲ್ಲ. ಹಣ ಲಕ್ಷ್ಮಣನ ಖಜಾನೆಯಲ್ಲಿ ತುಂಬಿತುಳುಕುತ್ತಿತ್ತು. ಹೀಗಾಗಿ ಆ ಹಣವನ್ನ ಹೀರೋದಕ್ಕೆ ಪದ್ಮ ಮತ್ತು ಹರೀಶ್ ತಮ್ಮ ಮಗಳನ್ನ ಅವನ ಮುಂದೆ ನಿಲ್ಲಿಸಿಬಿಟ್ಟಿದ್ರು. ಹರೀಶ್ ಲಕ್ಷ್ಮಣನ ಹತ್ತಿರ ಹಣ ಕೇಳಿದ್ರೆ ಖಂಡಿತ ಕೊಡ್ತಿರಲಿಲ್ಲ. ಆದ್ರೆ ವರ್ಷಿಣಿ ಸ್ವಲ್ಪವೇ ಸ್ವಲ್ಪ ತುಟಿ ಮುಂದೆ ಮಾಡಿ ಉಮ್ಮಾ ಅಂದ್ರೆ ಸಾಕಿತ್ತು, ಹಣ ಹರಿದು ಬರ್ತಿತ್ತು. ಇದೇ ನೋಡಿ ಲಕ್ಷ್ಮಣ ಅನ್ನೋ ರೌಡಿಯ ವೀಕ್ನೆಸ್ಸು. ಆ ವೀಕ್ನೆಸ್ ಅನ್ನ ಯೂಸ್ ಮಾಡ್ಕೊಂಡು ವರ್ಷಿಣಿಯ ಪೇರೆಂಟ್ಸ್ ಹಣ ಸಂಪಾದನೆ ಮಾಡೋದಕ್ಕೆ ಶುರುಮಾಡಿದ್ರು.ಲಕ್ಷ್ಮಣ ಅದೆಷ್ಟು ಮರ್ಡರ್ ಮಾಡಿದ್ದಾನೆ, ಅದೆಷ್ಟು ಜನರನ್ನ ದ್ವೇಷ ಕಟ್ಟಿಕೊಂಡಿದ್ದಾನೆ ಅನ್ನೋದರ ಅವನಿಗೆ ಗೊತ್ತಿರಲಿಲ್ಲ ಅನ್ಸುತ್ತೆ. ಆದ್ರೆ ಇಲ್ಲಿವರೆಗೂ ಯಾರು ಕೂಡಾ ಅವನನ್ನ ಟಚ್ ಮಾಡೋದಕ್ಕೆ ಸಾಧ್ಯವಾಗಿರಲಿಲ್ಲ.

ಇದು ಫಿಲ್ಡ್ ನಲ್ಲಿರೋ ಎಲ್ಲರಿಗೂ ಗೊತ್ತಿತ್ತು. ಅಲ್ಲದೆ ಅವನನ್ನ ಮುಟ್ಟಿ ನಾವು ಸೇಡು ತೀರಿಸಿಕೊಳ್ತೀವಿ ಅನ್ನೋ ಮನಸ್ಸನ್ನ ಕೂಡಾ ಯಾರು ಮಾಡಿರಲಿಲ್ಲ. ಯಾಕಂದ್ರೆ ಅವನನ್ನ ಎದುರು ಹಾಕಿಕೊಂಡು ಬದುಕೋದಕ್ಕೆ ಆಗೋದಿಲ್ಲ ಅನ್ನೋದು ಅವರಿಗೆ ಗೊತ್ತಿತ್ತು. ಆದ್ರೆ ಶತೃಗಳು ಸುಮ್ಮನಿದ್ರು ಜೊತೆಗಿರೋರು ಸುಮ್ಮನಿರಬೇಕಲ್ವ. ಹಣದ ವಿಚಾರ ಬಂದಾಗ ಸ್ಟಾರ್ಟಿಂಗ್ ನಲ್ಲಿ ಎಲ್ಲರು ಚೆನ್ನಾಗಿಯೇ ಇರ್ತಾರೆ. ಆದ್ರೆ ಕೊಡೋದು ತಗೋಳೋದ್ರಲ್ಲಿ ಹೆಚ್ಚು ಕಡಿಮೆ ಆದ್ರೆ ಎಲ್ಲವೂ ಯಡವಟ್ಟಾಗಿ ಹೋಗುತ್ತೆ ಅದೇ ರೀತಿ ಇಲ್ಲೂ ಆಗಿತ್ತು.ಈ ಸುಂದರಿ ಲಕ್ಷ್ಮಣ್ ಜೊತೆ ಅದ್ಯಾವ ವಯಸ್ಸಲ್ಲಿ ಕಮಿಟ್ ಆದ್ಲೋ ಗೊತ್ತಿಲ್ಲ. ಆದ್ರೆ ಇವಳು ಬೆಂಗಳೂರಲ್ಲೇ ಒಂದು ಡ್ಯಾನ್ಸ್ ಕ್ಲಾಸ್ ಗೆ ಹೋಗ್ತಿದ್ಲು. ಇದೇ ವೇಳೆ ಆಕೆಗೆ ಅಲ್ಲಿ ರೂಪೇಶ್ ಅನ್ನೋ ಖತರ್ನಾಕ್ ಕಳ್ಳ ಅಂಡ್ ರೌಡಿಶೀಟರ್ ಪರಿಚಯವಾಗಿದ್ದ. ಅವನು ಇವಳ ಬ್ಯೂಟಿ ನೋಡಿ ಬೌಲ್ಡ್ ಆಗಿದ್ದ. ಅಲ್ಲದೆ ಇವಳನ್ನ ಲವ್ ಮಾಡೋದಕ್ಕೆ ಶುರುಮಾಡಿದ್ದ.

ಇವಳದ್ದು ಕೂಡಾ ಚಿಟ್ಟೆ ಮನಸ್ಸು ಅವಳು ಚೆನ್ನಾಗೇ ಲೈನ್ ಕೊಡ್ತಿದ್ಲು. ಇದನ್ನೇ ಲವ್ ಅಂದುಕೊಂಡ ರೂಪೇಶ್ ಅವಳ ಹಿಂದೆ ಸುತ್ತೋದಕ್ಕೆ ಶುರುಮಾಡಿದ್ದ. ಈ ವಿಷಯ ತಾಯಿ ಪದ್ಮಾಳಿಗೆ ಗೊತ್ತಾಗಿತ್ತು. ಅವಳು ಮಗಳನ್ನ ಬಿಟ್ಟು ಕೋಟಿ ಸಂಪಾದಿಸೋಣ ಅಂತ ಅಂದುಕೊಂಡ್ರೆ ಇವನ್ಯಾರೋ ಮಧ್ಯೆ ಬಂದು ಕಡ್ಡಿ ಆಡಿಸ್ತಿದ್ದಾನಲ್ಲ ಅಂತ ಕೋಪ ಮಾಡ್ಕೊಂಡಿದ್ಲು. ಅಲ್ಲದೆ ಮಗಳ ಹಿಂದೆ ಬಿದ್ದಿರೋ ರೂಪೇಶ್ ಗೆ ಧಮ್ಕಿ ಹಾಕೋದಕ್ಕೆ ಲಕ್ಷ್ಮಣನಿಗೆ ಹೇಳ್ತಾಳೆ.ಈ  ವಿಷಯ ಕೇಳಿ ಲಕ್ಷ್ಮಣ ಕೂಡಾ ಫುಲ್ ಗರಂ ಆಗ್ತಾನೆ. ಅಲ್ಲದೆ ಮಗನೇ ಅವಳ ತಂಟೆಗೆ ಬಂದ್ರೆ ಜಾನ್ ನಿಕಲ್ ಮಾಡ್ತೀನಿ ಅಂತ ಅವನಿಗೆ ಮೂರ್ನಾಲ್ಕು ಬಾರಿ ಅವಾಜ್ ಹಾಕಿದ್ದ.

ಅಲ್ಲಿಗೆ ಅವನ ಬೆನ್ನ ಮೇಲೆ ಶನಿ ಹೆಗಲೇರಿ ಕುಳಿತುಬಿಟ್ಟಿದ್ದ. ಇಲ್ಲಿ ರೂಪೇಶ್ ಮತ್ತು ವರ್ಷಿಣಿ ಲಕ್ಷ್ಮಣನಿಗೆ ಗೊತ್ತಿಲ್ಲದೆ ಪ್ರೀತಿಸೋದಕ್ಕೆ ಶುರುವಾಗಿತ್ತು. ಯಾವತ್ತಿದ್ರು ಲಕ್ಷ್ಮಣನಿಂದ ಕೇವಲ ಹಣ ಮಾತ್ರ ಸಿಗುತ್ತೆ. ಲೈಫ್ ನಲ್ಲಿ ಮದುವೆ ಅದು ಇದು ಆಗಬೇಕು ಅಂದ್ರೆ ಅದು ಇವನ ಜೊತೆ ಅನ್ನೋದು ಅವಳ ಆಸೆಯಾಗಿತ್ತು ಅನ್ಸುತ್ತೆ. ಅವಳನ್ನ ಲಂಡನ್ ಗೆ ಕಳಿಸಿದ್ರು ಬೆಂಗಳೂರಿನ  ಲವ್ ಅನ್ನ ಅವಳು ಮರೆತಿರಲಿಲ್ಲ. ನಿರಂತರವಾಗಿ ಆತನ ಜೊತೆ ಸಂಪರ್ಕದಲ್ಲಿ ಇದ್ಲು. ಅಲ್ಲದೆ ಲಕ್ಷ್ಮಣ ಏನು ಹೇಳಿದ್ರು, ಏನು ಮಾಡಿದ್ರು ಅದನ್ನ ರೂಪಿಗೆ ಹೇಳೋದಕ್ಕೆ ಶುರುಮಾಡಿದ್ಲು. ಅಲ್ಲದೆ ಒಂದು ದಿನ ಲಕ್ಷ್ಮಣ ನಮ್ಮ ಮನೇಲಿ ಗಲಾಟೆ ಮಾಡಿದ್ದಾನೆ ಅನ್ನೋದನ್ನ ಕೂಡಾ ಹೇಳಿದ್ಲು.ತಾವರೆಕೆರೆಯಲ್ಲಿ ನನಗೆ 15 ಎಕರೆ ಜಾಗ ಬರೆದುಕೊಟ್ಟಿದ್ದ. ಆದ್ರೀಗ ಅದನ್ನ ವಾಪಸ್ ನನ್ನ ಹೆಸರಿಗೆ ಬರೆದುಕೊಡಿ ಅಂತ ಹೆದರಿಸ್ತಿದ್ದಾನೆ ಅಂತ ರೂಪೇಶ್ ಗೆ ಹೇಳಿದ್ಲು. ಇದೇ ವಿಚಾರಕ್ಕೆ ಅಪ್ಪನಿಗೆ ಅವನಿಗು ಗಲಾಟೆ ನಡೆಯುತ್ತಿದೆ ಅನ್ನೋದನ್ನ ಹೇಳಿದ್ಲು.

ಲಕ್ಷ್ಮಣ ಫೋನ್ ಮಾಡಿದ್ರೆ ಮಾದಕವಾಗಿ ಮಾತನಾಡಿ ರೊಮ್ಯಾಂಟಿಕ್ ಮೂಡ್ ಗೆ ಕರ್ಕೊಂಡು ಹೋಗ್ತಿದ್ದ ಅವಳು ರೂಪೇಶ್ ಹತ್ತಿರ ಮಾತ್ರ ಅವನನ್ನ ಮಟ್ಟ ಹಾಕಬೇಕು ಹೇಗಾದ್ರು ಮಾಡಿ ಹಲ್ಲು ಕಡಿಯೋದಕ್ಕೆ ಶುರುಮಾಡಿದ್ಲು.ಹೇಮಂತ್ ಗೆ ಚನ್ನಪಟ್ಟಣದ ಆಂಬಡೆ ಚಂದ್ರನ ಕೇಸ್ ನಲ್ಲಿ ಇನ್ನು ಕೆಲವೇ ದಿನಗಳಲ್ಲಿ ಶಿಕ್ಷೆ ಪ್ರಕಟವಾಗೋದ್ರಲ್ಲಿತ್ತು. ಹೀಗಾಗಿ ಹೇಗಿದ್ರು ಜೈಲಿಗೆ ಹೋಗಿ ಕೂತ್ಕೋಬೇಕು. ಆ ಗ್ಯಾಪಲ್ಲಿ ಒಂದು ಮರ್ಡರ್ ಮಾಡಿ ಹೆಸರು ಮತ್ತು ಕಾಸು ಮಾಡಿಕೊಳ್ಳೋಣ ಅಂತ ಅಂದುಕೊಂಡು ಈ ಕೇಸ್ ಗೆ ಕೈ ಜೋಡಿಸಿದ್ದ. ಅಲ್ಲದೆ ಲಕ್ಷ್ಮಣನನ್ನ ಹೊಡೆದ್ರೆ ಬಜಾರ್ ಚೆನ್ನಾಗೆ ಓಡುತ್ತೆ ಅನ್ನೋದು ಗೊತ್ತಿತ್ತು. ಇನ್ನೊಂದು ಕಡೆ ರೂಪಿ ಕ್ಯಾಟ್ ರಾಜುನನ್ನ ಕೂಡ ಮೀಟ್ ಮಾಡಿದ್ದ. ಆತ ಕೂಡ ರೂಪಿ ಹೆಸ್ರು ನಿಂದು ಹೇಮಿದು ಬಸ್ರು ಮಾತ್ರ ನಂದು ಅಂತ ಕೈ ಜೋಡಿಸಿದ್ದ. ನಂತ್ರ ಎಲ್ಲಾ ಅರೆಂಜ್ ಮಾಡಿಕೊಂಡು ರೂಪಿ ಮತ್ತೆ ಅವಳ ಮುಂದೆ ಪ್ರತ್ಯಕ್ಷನಾಗಿದ್ದ. ಚಿನ್ನ ಆನೆ ಹೊಡಿಯೋದಕ್ಕೆ ಟೀಂ ರೆಡಿಯಿದೆ.

ಇನ್ನು ನೀನು ನಾನು ಹೇಳಿದ ಹಾಗೆ ಮಾಡಬೇಕು ಅಂತ ಹೇಳ್ತಾನೆ. ಅದಕ್ಕೆ ಅವಳು ಯೆಸ್ ಚಿನ್ನ ಬೇಗ ಕೆಲಸ ಮುಗಿಸು ಲವ್ ಯು ಚಿನ್ನ ಅಂತ ಹೇಳಿದ್ಲು.ವರ್ಷಿಣಿ ಈ ಕೇಸ್ ನಲ್ಲಿ ಎಷ್ಟು ಇನ್ವಾಲ್ ಆಗಿದ್ಲು ಅಂದ್ರೆ ಅವಳು ರೂಪಿ ಜೊತೆ ಕೈಜೋಡಿಸಿರೋ ವಿಷಯ ಯಾರಿಗೂ ಗೊತ್ತೇ ಆಗಲಿಲ್ಲ. ಹೆಣ್ಣು ಮನಸ್ಸು ಮಾಡಿದ್ರೆ ಏನು ಮಾಡಬಹುದು ಅನ್ನೋದನ್ನ ಆಕೆ ಮಾಡಿ ತೋರಿಸಿದ್ಲು. ಲಕ್ಷ್ಮಣ ಫೋನ್ ಮಾಡಿದಾಗಲೆಲ್ಲಾ ಮುದ್ದು ಮುದ್ದಾಗಿ ಮಾತನಾಡುತ್ತ, ಫೋನ್ ನಲ್ಲೇ ಅವನ್ನ ರೋಮಾಂಚಕ ಜಗತ್ತಿಗೆ ಕರ್ಕೊಂಡು ಹೋಗಿ ಅವನು ಯಾರ ಹತ್ತಿರವು ಹೇಳದೇ ಇರೋ ವಿಷಯವನ್ನೆಲ್ಲ ಇವಳ ಮುಂದೆ ಹೇಳುವ ಹಾಗೆ ಮಾಡ್ತಿದ್ಲು.

ನಂತ್ರ ನನಗೆ ಅರ್ಜೆಂಟ್ ಹಣ ಬೇಕು ಅಂತ ಹೇಳಿ ಹಣ ಹಾಕಿಸಿಕೊಂಡು ಅದನ್ನ ರೂಪಿ ಅಕೌಂಟ್ ಗೆ ಟ್ರಾನ್ಸ್ ಫರ್ ಮಾಡಿದ್ಲು. ಅಂದ್ರೆ ರೂಪಿಯ ಹಾಗೆ ಇವಳು ಕೂಡಾ ಈ ಕೇಸ್ ನಲ್ಲಿ ಫುಲ್ ಇನ್ವಾಲ್ವ್ ಆಗಿದ್ಲು.ಇವಳು ಅದೆಷ್ಟರ ಮಟ್ಟಿಗೆ ಆತನನ್ನ ಆವರಿಸಿಕೊಂಡಿದ್ಲು ಅಂದ್ರೆ ಲಕ್ಷ್ಮಣ ಇವಳ ಹತ್ತಿರ ನಾನು ಇನ್ನೊಂದು ಹೆಣ್ಣಿನ ಜೊತೆ ಮಲಗೋದಕ್ಕೆ ಹೋಗ್ತೀನಿ ಅನ್ನೋ ವಿಷಯವನ್ನ ಕೂಡಾ ಹೇಳಿದ್ದ.  ಅಲ್ಲದೆ ನಾನೊಬ್ಬನೆ ರೂಂಗೆ ಹೋಗ್ತಿದ್ದೀನಿ ಅನ್ನೋ ವಿಷಯವನ್ನ ಕೂಡಾ ಬಾಯಿಬಿಟ್ಟಿದ್ದ. ಈ ವಿಷಯ ಗೊತ್ತಾಗ್ತಿದ್ದ ಹಾಗೆ ಆಕೆ ರೂಪಿ ಫೋನ್ ಮಾಡಿ ವಿಷಯ ತಿಳಿಸಿದ್ಲು. ಆಕೆ ಅದೆಷ್ಟು ನಿಖರ ಮಾಹಿತಿ ಕೊಟ್ಟಿದ್ಲು ಅಂದ್ರೆ ಅವಳು ಹೇಳಿದ ಹಾಗೆಯೇ ಆಗಿತ್ತು. ಇದೇ ಟೈಂ ನೋಡಿ ರೂಪಿ ಅಂಡ್ ಟೀಂ ಲಕ್ಷ್ಮಣನಿಗೆ ಹೊಗೆ ಹಾಕಿಸಿದ್ರು.

ಅಲ್ಲಿಗೆ ಅವರು ಅಂದುಕೊಂಡಂತೆ ಎಲ್ಲವೂ ನಡೆದು ಹೋಗಿತ್ತು. ಆದ್ರೆ ಈ ಕೇಸ್ ನಲ್ಲಿ ಲಕ್ಷ್ಮಣನನ್ನ ಕೊಲೆ ಮಾಡೋ ತನಕ ಎಲ್ಲವೂ ಅವರು ಅಂದುಕೊಂಡಂತೆಯೇ ನಡೆದಿತ್ತು. ಆದ್ರೆ ಫೈನಲ್ ನಲ್ಲಿ ಮಾತ್ರ ಯಾರ್ಯಾರು ಈ ಕೇಸ್ ನಿಂದ ದೂರ ಉಳಿಬೇಕು ಅಂತ ಅಂದುಕೊಂಡಿದ್ರೋ ಅವರೆಲ್ಲಾ ತಗಲಾಕ್ಕಿಕೊಂಡಿದ್ರು. ಅದ್ರಲ್ಲು ಈಸಿಯಾಗಿ ಪಾರಾಗ್ತೀನಿ ಅಂತ ಅಂದುಕೊಂಡಿದ್ದ ವರ್ಷಿಣಿ ತಗಲಾಕಿಕೊಂಡಿದ್ಲು. ಅಲ್ಲದೆ ಆಕೆಯ ಮಾದಕ, ಅನೈತಿಕ ವ್ಯವಹಾರಗಳೆಲ್ಲಾ ಹೊರಜಗತ್ತಿಗೆ ತಿಳಿದು ಹೋಗಿತ್ತು.

LEAVE A REPLY

Please enter your comment!
Please enter your name here