Home Crime ತಂದೆಯಾಗೋ ಖುಷಿಯಲ್ಲದ್ದ ನವವಿವಾಹಿತ ದಿಢೀರ್ ಆತ್ಮಹತ್ಯೆಗೆ ಕಾರಣವೇನು..?ಯಾವ ತೋದರೇನೂ ಇಲ್ಲದವ ಸೂಸೈಡ್ ಮಾಡಿಕೊಂಡನಾ..?!

ತಂದೆಯಾಗೋ ಖುಷಿಯಲ್ಲದ್ದ ನವವಿವಾಹಿತ ದಿಢೀರ್ ಆತ್ಮಹತ್ಯೆಗೆ ಕಾರಣವೇನು..?ಯಾವ ತೋದರೇನೂ ಇಲ್ಲದವ ಸೂಸೈಡ್ ಮಾಡಿಕೊಂಡನಾ..?!

558
0
SHARE

ಗ್ಯಾಸ್ ಲೀಕ್ ಮಾಡಿ ಆತ್ಮಹತ್ಯೆಗೆ ಶರಣಾದ ನವ ವಿವಾಹಿತ. ಸೂಸೈಡ್ ಮಾಡಿಕೊಳ್ಳೋದ್ರ ಹಿಂದಿನ ಅಸಲಿ ಕಾಣರವೇನು..?ಆತ ಕೆಲ್ಸಕ್ಕೆಂದು ಬೆಂಗಳೂರಿಗೆ ಬಂದಿದ್ದ. ಒಳ್ಳೆ ಕೆಲ್ಸವು ಸಿಕ್ಕಿತ್ತು. ಇತ್ತೀಚೆಗೆ ದಾಂಪತ್ಯ ಜೀವನಕ್ಕು ಕಾಲಿಟ್ಟಿದ್ದು, ಕೆಲವೇ ದಿನಗಳಲ್ಲಿ ತಂದೆಯಾಗೋ ಖುಷಿಯು ಆತನ ಮುಖದಲ್ಲಿತ್ತು. ಆದ್ರೆ, ಅದೇನಾಯ್ತೋ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬಂದ ಆತ ಸಿಲಿಂಡರ್ ನಿಂದ ಗ್ಯಾಸ್ ಲೀಕ್ ಮಾಡಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ…

ಒಂದೆಡೆ ಸುಟ್ಟು ಕರಕಲಾಗಿರೋ ಮಂಚ, ಇನ್ನೊಂದೆಡೆ ಒಡೆದು ಪೀಸ್ ಪೀಸ್ ಆಗಿರೋ ಕಿಟಕಿ, ಬಾಗಿಲುಗಳು. ಇವೆಲ್ಲವು ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಶಾಂತನಗರದಲ್ಲಿ ಸಂಭವಿಸಿದ ಸಿಲಿಂಡರ್ ಸ್ಪೋಟದ ಎಫೆಕ್ಟ್. ಇದರಲ್ಲಿ ಓರ್ವ ಸಾವನ್ನಪ್ಪಿದ್ದ, ಆದ್ರೆ, ಈ ದುರಂತ ಆಕಸ್ಮಿಕವಾಗಿ ಸಂಭವಿಸಿದಲ್ಲ. ಇದೊಂದು ಸೂಸೈಡ್. ತುಮಕೂರು ಜಿಲ್ಲೆಯ ಶಿರಾ ಮೂಲದ ರಾಘವೇಂದ್ರ ಬೆಂಗಳೂರಿನ ಪೀಣ್ಯಾ ಸೆಕೆಂಡ್ ಸ್ಟೇಜ್ ನ ಖಾಸಗಿ ಕಂಪನಿಯಲ್ಲಿ ಕೆಲ್ಸ ಮಾಡ್ತಿದ್ದ…

ಕೆಲ ತಿಂಗಳ ಹಿಂದೆಯಷ್ಟೇ ಮಂಜುಶ್ರೀ ಎಂಬಾಕೆಯೊಂದಿಗೆ ಸಪ್ತಪದಿ ತುಳಿದಿದ್ದ. ಇತ್ತ ಕೆಲ್ಸ ಮುಗಿಸಿಕೊಂಡು ರಜೆ ವೇಳೆ ಪತ್ನಿ ಮನೆ, ತಂದೆ ಮನೆಗೆ ಹೋಗಿ ಬರ್ತಿದ್ದ ರಾಘವೇಂದ್ರ ಶುಕ್ರವಾರ ಶಿರಾಕ್ಕೆ ತೆರಳಿ ಬೆಂಗಳೂರಿಗೆ ವಾಪಸ್ಸಾಗಿದ್ದ.ಇತ್ತ ಪ್ರಶಾಂತನಗರದ ಬಾಡಿಗೆ ಮನೆಗೆ ಬಂದ ರಾಘವೇಂದ್ರ ಅದೇನ್ ಯೋಚನೆ ಮಾಡಿಕೊಂಡು ಮನೆಗೆ ಬಂದಿದ್ನೋ ಗೊತ್ತಿಲ್ಲ…

ಬಾಗಿಲು ಲಾಕ್ ಮಾಡಿಕೊಂಡು ತನ್ನ ಬೈಕ್ ನ್ನ ಡೋರ್ ಗೆ ಅಡ್ಡಲಾಗಿ ನಿಲ್ಲಿಸಿದ್ದಾನೆ. ನಂತರ ಅಡುಗೆ ಮನೆಯಲ್ಲಿದ್ದ ಸಿಲಿಂಡರ್ ರೂಂಗೆ ತೆಗೆದುಕೊಂಡೋಗಿ ಗ್ಯಾಸ್ ಲೀಕ್ ಮಾಡಿ ಬೆಂಕಿ ಹಚ್ಚಿದ್ದಾನೆ. ಈ ವೇಳೆ ಏಕಾಏಕಿ ಅನಿಲ ಸ್ಪೋಟಗೊಂಡಿದ್ದು, ಮನೆಯ ಕಿಟಕಿ, ಬಾಗಿಲುಗಳು ಹೊಡೆದು ನೆರೆ ಮನೆಯ ಕಿಟಕಿ ಗ್ಲಾಸ್‌ಗಳು ಪೀಸ್ ಪೀಸ್ ಆಗಿವೆ…

ಅದರಲ್ಲಿ ರಾಘವೇಂದ್ರ ಸುಟ್ಟು ಕರಕಲಾಗಿದ್ದ.ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಬಾಗಲಗುಂಟೆ ಪೊಲೀಸ್ರು ಶವವನ್ನ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ತನಿಖೆ ಕೈಗೊಂಡಿದ್ದಾರೆ. ಆದ್ರೆ, ಸದ್ಯಕ್ಕೆ ರಾಘವೇಂದ್ರ ಆತ್ಮಹತ್ಯೆಗೆ ನಿಖರ ಕಾರಣ ಪತ್ತೆಯಾಗಿಲ್ಲ. ಈಗಾಗಿ ತನಿಖೆಯನ್ನ ತೀವ್ರ ಗೊಳಿಸಿದ್ದಾರೆ…

LEAVE A REPLY

Please enter your comment!
Please enter your name here