Home Cinema ತನುಶ್ರೀಗಾದ ಕಿರುಕುಳದ ವಿರುದ್ಧ ಧ್ವನಿ ಎತ್ತಿದಳು ಕನ್ನಡತಿ..!? ದಕ್ಷಿಣದಿಂದ ಉತ್ತರದವರೆಗೂ ಚಿತ್ರರಂಗದಲ್ಲಿದ್ದಾರೆ ಕಾಮುಕರು..! ಗೊತ್ತಾ, ಅಂದಿದ್ದೇನು...

ತನುಶ್ರೀಗಾದ ಕಿರುಕುಳದ ವಿರುದ್ಧ ಧ್ವನಿ ಎತ್ತಿದಳು ಕನ್ನಡತಿ..!? ದಕ್ಷಿಣದಿಂದ ಉತ್ತರದವರೆಗೂ ಚಿತ್ರರಂಗದಲ್ಲಿದ್ದಾರೆ ಕಾಮುಕರು..! ಗೊತ್ತಾ, ಅಂದಿದ್ದೇನು ಮೀ ಟು ಅಭಿಯಾನದಲ್ಲಿ ಭಾಗಿಯಾದವರು..!

501
0
SHARE

ತನುಶ್ರೀಗಾದ ಕಿರುಕುಳದ ವಿರುದ್ಧ ಧ್ವನಿ ಎತ್ತಿದಳು ಕನ್ನಡತಿ:ತನುಶ್ರೀ ದತ್ತಾ ನಾನಾ ಪಾಟೇಕರ್ ನಾನಾ ಅವತಾರಗಳನ್ನ ಬಯಲಿಗೆ ಎಳೆದ್ಮೇಲೆ, ಅನೇಕರು ಮಾತನಾಡುತ್ತಿದ್ದಾರೆ. ನನಗೂ ಇಂಥಹ ಅನುಭವ ಆಗಿತ್ತು ಅನ್ನುತ್ತಿದ್ದಾರೆ. ಇದೇ ವೇಳೆ ತನುಶ್ರೀಯ ಬೆಂಬಲಕ್ಕೂ ನಿಲ್ಲುತ್ತಿದ್ದಾರೆ. ಹೀಗೆ ತನುಶ್ರೀ ಪರವಾಗಿ ನಿಂತವರಲ್ಲಿ ಕನ್ನಡದ ಚಿಗರೆ ಕಂಗಳ ಸುಂದರಿ ಐಂದ್ರೀತಾ ರೇ ಕೂಡಾ ಒಬ್ಬರು.

ಯಸ್, ಐಂದ್ರಿತಾ.. ಕನ್ನಡ ಚಿತ್ರರಂಗದ ಸುಂದರಿ. ತಮ್ಮ ಅಭಿನಯದಿಂದ.. ಸೌಂದರ್ಯದಿಂದ.. ಅಭಿಮಾನಿಗಳನ್ನ ಮಂತ್ರಮುಗ್ದಗೊಳಿಸುವ ಐಂದ್ರೀತಾ, ಒಂಭತ್ತು ವರ್ಷಗಳ ಹಿಂದೆ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರ ವಿರುದ್ಧ ತಿರುಗಿ ಬಿದ್ದಿದ್ದರು. ಲಂಪಟ ಅಂದಿದ್ದರು. ನನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಅನ್ನುವ ಆರೋಪ ಮಾಡುವ ಮೂಲಕ ಸಂಚಲನವನ್ನೇ ಸೃಷ್ಠಿಸಿದ್ದರು.ಲೈಂಗಿಕ ದೌರ್ಜನ್ಯದ ವಿರುದ್ಧ, ನಟಿಯರಿಗಾಗ್ತಿರುವ ಅನ್ಯಾಯದ ವಿರುದ್ಧ..

ಅಂದಿನಿಂದನೂ ಧ್ವನಿ ಎತ್ತುತ್ತಾನೇ ಬರ‍್ತಿರುವ ಐಂದ್ರಿತಾ, ಇದೀಗ ತನುಶ್ರೀ ವಿಚಾರದಲ್ಲೂ ಮಾತನಾಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ತನುಶ್ರೀಗೆ ಬೆಂಬಲ ಸೂಚಿಸಿದ್ದಾರೆ. ತನುಶ್ರೀಗೆ ಐಂದ್ರಿತಾ ಬೆಂಬಲ:’ಲೈಂಗಿಕ ದೌರ್ಜನ್ಯದ ವಿರುದ್ಧ ಮಹಿಳೆಯರು ತುಂಬಾ ಸಮಯದ ನಂತರ ಧ್ವನಿ ಎತ್ತುತ್ತಿದ್ದಾರೆ. ಶೋಷಣೆಗೊಳಗಾದವರ ಬಾಯಿ ಮುಚ್ಚಿಸುವ ಪ್ರಯತ್ನ ಸಷ್ಟಿಸಲಾಗುತ್ತಿದೆ.

ಹೀಗಾಗಿ, ಅವರ ವಿರುದ್ಧ ಧ್ವನಿ ಎತ್ತದಂತೆ ಮಾಡಲಾಗ್ತಿದೆ”ಯಸ್, ಇದು.. ಐಂದ್ರಿತಾ ತನುಶ್ರೀಗೆ ಬೆಂಬಲ ಸೂಚಿಸಿರುವ ಪರಿ. ಇನ್ನೂ ತನುಶ್ರೀಗೆ ಬೆಂಬಲ ಸೂಚಿಸಿದ ಐಂದ್ರೀತಾಗೆ, ಇದೇ ವೇಳೆ ಅಭಿಮಾನಿಗಳು ಸಾಥ್ ನೀಡುತ್ತಿದ್ದಾರೆ. ಐಂದ್ರಿತಾ ಬೆಂಬಲವನ್ನ.. ಬೆಂಬಲಿಸುತ್ತಾನೇ, ಮೆಚ್ಚುಗೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ.ಇನ್ನೂ, ಬರೀ ಐಂದ್ರಿತಾ ರೇ ಅಷ್ಟೇ ಅಲ್ಲ, ಕನ್ನಡ ಚಿತ್ರರಂಗದ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಕೂಡಾ ಮೀ ಟು ಮೂವ್ಮೆಂಟ್‌ನ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಸಾಕಿನ್ನೂ ಮೌನ.. ಮಾತನಾಡಲೇಬೇಕಾದ ಪರಿಸ್ಥಿತಿ ದೌರ್ಜನ್ಯಕ್ಕೊಳಗಾದವರಿಗೆ ಬಂದಿದೆ ಅಂದಿದ್ದಾರೆ.

ಮೀ ಟೂ ರಾಗಿಣಿ:ತುಳಿತಕ್ಕೊಳಗಾದವರು, ಮೌನವಾಗಿದ್ದವರು. ಸಮಾಜವನ್ನ ಏದುರಿಸಲು ಭಯ ಪಡುವವರು ಇನ್ನೂ ಸುಮ್ಮನಿದ್ದರೆ ಪ್ರಯೋಜನವಿಲ್ಲ. ಇದು, ಮೀ ಟೂ ಎಂದು ಹೇಳುವ ಸಮಯ. ನಿಮ್ಮ ಧೈರ್ಯ ಅನೇಕರಲ್ಲೂ ಧೈರ್ಯ ತುಂಬುತ್ತೆ. ನಾನೂ ಕೂಡಾ ಮೀ ಟೂ ಚಳುವಳಿಯನ್ನ ಬೆಂಬಲಿಸುತ್ತೇನೆ.ಬರೀ, ಐಂದ್ರೀತಾ, ರಾಗಿಣಿ ಅಷ್ಟೇ ಅಲ್ಲ.. ಇನ್ನೂ ಅನೇಕ ಕನ್ನಡದ ನಟಿಯರೂ ಮೀ ಟೂ ಅಭಿಯಾನದಲ್ಲಿ ಭಾಗಿಯಾಗ್ತಿದ್ದಾರೆ. ಇನ್ನೂ ಸುಮ್ಮನಿರಬೇಡಿ, ಎದ್ಧೇಳಿ ಧೈರ್ಯ ಪ್ರದರ್ಶಿಸಿ ಅನ್ನುತ್ತಿದ್ದಾರೆ.

ಇನ್ನೂ.. ಮೀ ಟೂ ಅಭಿಯಾನ, ಜೋರಾದ ಬೆನ್ನಲ್ಲೇ ಸಿನಿಮಾರಂಗದಲ್ಲಿ ಸಭ್ಯಸ್ಥರ ಸೋಗಿನಲ್ಲಿರುವ ಕಾಮುಕರ ಒಂದೊಂದೇ ಎಪಿಸೋಡುಗಳು ಬಯಲಾಗ್ತಿವೆ.ಹೌದು, ತನುಶ್ರೀ ದತ್ತಾ ಹೇಳಿಕೆಯ ಬಳಿಕ, ಮೀ ಟೂ ಅಭಿಯಾನದಡಿ ಒಬ್ಬೊಬ್ಬರೇ ತಮಗಾದ ಲೈಂಗಿಕ ದೌರ್ಜನ್ಯದ ಕಥೆಗಳನ್ನ, ಬಿಚ್ಚಿಡ್ತಿದ್ದಾರೆ. ಇದಕ್ಕೆ ಲೇಟೆಸ್ಟ್ ಸೇರ್ಪಡೆ ಆದಿತಿ ರಾವ್ ಹೈದರಿ.ಯಸ್, ಆದಿತಿ ರಾವ್ ಹೈದರಿ. ಸದ್ಯ, ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಹಂತ ಹಂತವಾಗಿ ಗಟ್ಟಿ ನೆಲೆ ನಿಲ್ಲುತ್ತಿರುವ ಆದಿತಿ ರಾವ್ ಹೈದರಿಗೆ ತನ್ನ ಆರಂಭದ ಸಿನಿದಿನಗಳಲ್ಲಿ ಕೆಟ್ಟ ಅನುಭವವಾಗಿತ್ತಂತೆ.

ಹೌದು, ”ಬಾಲಿವುಡ್ ಇಂಡಸ್ಟ್ರಿಯಲ್ಲಿ ಅವಕಾಶಕ್ಕಾಗಿ ಕಷ್ಟಪಡುತ್ತಿದ್ದ ಸಮಯದಲ್ಲಿ ಆದಿತಿಗೆ, ನನ್ನ ಆಸೆ ಈಡೇರಿಸು.. ಈಡೇರಿಸಿದ್ರೆ ಒಂದಲ್ಲ ಬರೋಬ್ಬರಿ ಮೂರು ಸಿನಿಮಾಗಳಲ್ಲಿ ಅವಕಾಶ ಕೊಡಿಸುತ್ತೇನೆ ಎಂದು ಒಬ್ಬ ಮಹಾನುಭಾವ ಹೇಳಿದ್ದನಂತೆ. ಈ ರೀತಿ ಕಾಂಪ್ರಮೈಸ್ ಆಗುವ ವಾತಾವರಣದಲ್ಲಿ ನಾನ್ ಬೆಳೆದಿಲ್ಲ ಅಂದಿರುವ, ಅಂದು ಇಂಡಸ್ಟ್ರೀಗೆ ಹೊಸಬಳಾಗಿದ್ದರು. ಎಲ್ಲೂ ಬಗ್ಗದೆ ಕಾಂಪ್ರಮೈಸ್ ಮಾಡಿಕೊಳ್ಳದೇ..

ನನ್ನ ಆತ್ಮರಕ್ಷಣೆ ಮಾಡಿಕೊಂಡು ಮುಂದೆ ಸಾಗಿದ್ದೇನೆ ಅನ್ನುತ್ತಾರೆ.ಹಾಗಂತ, ಸಿನಿಮಾರಂಗ ಮಹಿಳೆಯರಿಗೆ ಅಲ್ಲ, ಮಹಿಳೆಯರಿಗೆ ಇಲ್ಲಿ ಬೆಲೆ ಇಲ್ಲ ಅನ್ನುವ ಮಾತನ್ನೂ ಆದಿತಿ ಇದೇ ವೇಳೆ ಒಪ್ಪುವುದಿಲ್ಲ. ಸಿನಿಮಾ ಇಂಡಸ್ಟ್ರಿ ಆಗಲಿ, ಬೇರೆ ಯಾವುದೇ ಇಂಡಸ್ಟ್ರಿಯಾಗಲಿ ಡಿಫ್ರೆಂಡ್ ಮೈಂಡ್ ಸೆಟ್ ಹೊಂದಿರುವ ಮನುಷ್ಯರು ಇದ್ದೇ ಇರ್ತಾರೆ. ಅದರಲ್ಲಿ ಒಳ್ಳೆಯವರು ಇರ್ತಾರೆ, ಕೆಟ್ಟವರು ಇರ್ತಾರೆ” ಅನ್ನೋದು ಆದಿತಿಯ ಅಂಬೋಣ.

ಅಂದ ಹಾಗೇ, ನಾನಾ ಪಾಟೇಕರ್, ವಿವೇಕ್ ಅಗ್ನಿಹೋತ್ರಿಯ ಕೆಲ್ಸಗಳನ್ನ ಬಯಲಿಗೆಳೆದಿದ್ದ ತನುಶ್ರೀ, ಇತ್ತೀಚಿಗಷ್ಟೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ದೂರು ದಾಖಲಿಸಿದ್ದರು. ಬರೀ ಪೊಲೀಸರಿಗಷ್ಟೇ ಅಲ್ಲ ಮಹಾರಾಷ್ಟ್ರದ ಮಹಿಳಾ ಆಯೋಗಕ್ಕೂ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡಿದ್ದ ಮಹಿಳಾ ಆಯೋಗ ಇದೀಗ ನಾನಾ ಪಾಟೇಕರ್‌ಗೆ ನೋಟಿಸ್ ಜಾರಿ ಮಾಡಿದೆ. ಹತ್ತು ದಿನದೊಳಗೆ ಉತ್ತರಿಸುವಂತೆ ಹೇಳಿದೆ.

ಇನ್ನೂ ಇದೆಲ್ಲದ್ರ ನಡುವೆ.. ಇನ್ನೊಂದಷ್ಟು ಕಾಮುಕ ನಿರ್ಮಾಪಕರು, ನಿರ್ದೇಶಕರು. ನಟರ ಕಾಮಪುರಾಣಗಳು.. ಮೀ ಟೂ ಅಭಿಯಾನದಡಿ ಒಂದೊಂದಾಗಿ ಬಯಲಿಗೆ ಬರ‍್ತಿವೆ. ಬರೀ ಹಿಂದಿ ಸಿನಿರಂಗದಲ್ಲಷ್ಟೇ ಅಲ್ಲ ದಕ್ಷಿಣ ಭಾರತೀಯ ಚಿತ್ರರಂಗದಲ್ಲೂ.. ನಟಿಯರ ಮೇಲಾದ ಲೈಂಗಿಕ ದೌರ್ಜನ್ಯದ ಎಪಿಸೋಡುಗಳು ರಿವೀಲಾಗ್ತಿವೆ.ಅದೇನೆ ಇರ‍್ಲಿ, ಸದ್ಯ.. ಮೀ ಟೂ ಅಭಿಯಾನದಡಿ, ಅನೇಕ ನಟಿಯರು ಚಿತ್ರರಂಗದಲ್ಲಿ ತಮ್ಮ ನರಳಾಟದ ಕಥೆಗಳನ್ನ ಹೇಳುತ್ತಿದ್ದಾರೆ. ಆರೋಪಗಳನ್ನ ಮಾಡ್ತಿದ್ದಾರೆ. ಮುಂದೆ, ಇದು.. ಇನ್ನೆಲ್ಲಿ ಹೋಗಿ ಮುಟ್ಟುತ್ತೆ. ಇನ್ಯಾರ ಹೆಸರು ಬಯಲಿಗೆ ಬರುತ್ತೆ ಅನ್ನೋದು ಕಾದು ನೋಡಬೇಕು…

 

LEAVE A REPLY

Please enter your comment!
Please enter your name here