Home Crime ತನ್ನದೇ ಕಾಮದಾಟ ಚಿತ್ರೀಕರಿಸುತ್ತಿದ್ದ ಚಪಲ ತೀರದ ವೃದ್ಧ..!? ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ...

ತನ್ನದೇ ಕಾಮದಾಟ ಚಿತ್ರೀಕರಿಸುತ್ತಿದ್ದ ಚಪಲ ತೀರದ ವೃದ್ಧ..!? ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿ ಬ್ಲಾಕ್ ಮೇಲ್..?!

1033
0
SHARE

ಕೆಲವರು ಕಾಮತೀಟೆ ತೀರಿಸಿಕೊಳ್ಳುವುದು ಖಯಾಲಿ. ಅದಕ್ಕಾಗಿ ಮಕ್ಕಳು, ಹರೆಯದ ಯುವತಿಯರನ್ನು ಆಮಿಷ ತೋರಿಸಿ, ಬಳಸಿಕೊಂಡು ಆಬಳಿಕ ಬ್ಲಾಕ್ ಮೇಲ್ ಮಾಡುತ್ತಾರೆ. ಅಂಥದ್ದೇ ವಿಕೃತಕಾಮಿಯೊಬ್ಬನ ವಿಕಟ ರೂಪ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಅವನನ್ನು ಹೀಗೆ ನೋಡಿದರೆ ಭಾರೀ ಸಂಭಾವಿತನಾಗೇ ಕಾಣುತ್ತಾನೆ..

ಆದರೆ, ಈತನ ಖತರ್ನಾಕ್ ಬುದ್ಧಿ ಕೇಳಿದ್ರೆ ನೀವೇ ಬೆಚ್ಚಿ ಬೀಳುತ್ತೀರಿ… ಹೌದು.. ಹರೆಯದ ಮಕ್ಕಳನ್ನು ಆಮಿಷವೊಡ್ಡಿ ತನ್ನ ಕಾಮತೃಷೆಗೆ ಬಳಸ್ಕೊಂಡು ಬಳಿಕ ವಿಡಿಯೋ ಮಾಡಿ ಬ್ಲಾಕ್ಮೇಲ್ ಮಾಡುತ್ತಿದ್ದ ಖತರ್ನಾಕ್ ವೃದ್ಧನ ಕತೆಯಿದು.. ಇದು ಬೆಳಕಿಗೆ ಬಂದಿರುವುದು ಬುದ್ಧಿವಂತರ ಜಿಲ್ಲೆಯೆಂದು ಹಣೆಪಟ್ಟಿ ಕಟ್ಟಿಕೊಂಡಿರೋ ಮಂಗಳೂರಿನಲ್ಲಿ.

ಕೇರಳ ಮೂಲದ ನಿವಾಸಿಯಾಗಿರೋ ಈತನ ಹೆಸರು ಶಶಿ. 60ರ ಆಸುಪಾಸಿನ ಈ ವೃದ್ಧ ಕಳೆದ ಹಲವು ವರ್ಷಗಳಿಂದ ಯುವತಿಯರನ್ನು ಆಮಿಷ ತೋರಿಸಿ, ತನ್ನ ಬೆಡ್ಡಿಗೆ ಕರೆಸಿಕೊಳ್ಳುತ್ತಿದ್ದ. ಅಷ್ಟೇ ಅಲ್ಲ, ಇದನ್ನು ಅವರಿಗೆ ಗೊತ್ತಿಲ್ಲದಂತೆ ವಿಡಿಯೋ ಕ್ಯಾಮರಾ ಇಟ್ಟು ತನ್ನದೇ ಕಾಮದಾಟವನ್ನು ಚಿತ್ರೀಕರಿಸಿಕೊಂಡಿದ್ದ. ಆ ಬಳಿಕ ಸತತವಾಗಿ ಅವರನ್ನು ಬ್ಲಾಕ್ಮೇಲ್ ಮಾಡಿ, ಕಾಮತೃಷೆ ತೀರಿಸಿಕೊಳ್ಳುತ್ತಿದ್ನಂತೆ ಚಪಲ ತೀರದ ವೃದ್ಧ.

ಆದರೆ, ಈ ಬಗ್ಗೆ ಅರಿತ ಯುವತಿಯೊಬ್ಬಳು ಕ್ಯಾಮರಾದಲ್ಲಿದ್ದ ಚಿಪ್ ಅನ್ನೇ ಕದ್ದು ಸಾಮಾಜಿಕ ಕಾರ್ಯಕರ್ತೆ ಮಹಿಳೆಗೆ ನೀಡಿದ್ದರು.ಅದರಂತೆ ಕಾರ್ಯಾಚರಣೆ ನಡೆಸಿದ್ದ ಶ್ರೀಲತಾ ಎಂಬಾಕೆ ವೃದ್ಧನ ಜೊತೆ ಸಲುಗೆಯ ಮಾತನಾಡಿ, ಸಿಕ್ಕಿಬೀಳುವಂತೆ ಮಾಡಿದ್ದಾಳೆ. ಅಲ್ಲದೆ, ಬಳಿಕ ಮಾಧ್ಯಮದವರನ್ನೂ ಕರೆಸಿ, ಮಂಗಳೂರಿನ ಕದ್ರಿ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾಳೆ.

ಅಲ್ಲದೆ, 15ಕ್ಕೂ ಹೆಚ್ಚು ಯುವತಿಯರ ಜೊತೆ ಕಾಮದಾಟವಾಡಿದ್ದ ಬಗ್ಗೆ ವಿಡಿಯೋ ಚಿತ್ರೀಕರಣದ ಕಾಪಿಯನ್ನೂ ಪೊಲೀಸರಿಗೆ ನೀಡಿದ್ದಾಳೆ.ಆದರೆ, ಕದ್ರಿ ಠಾಣೆ ಪೊಲೀಸರು ಆತನ ವಿರುದ್ಧ ದೂರು ದಾಖಲಾಗಿಲ್ಲವೆಂಬ ನೆಪದಲ್ಲಿ ಖತರ್ನಾಕ್ ವೃದ್ಧನನ್ನು ಬಂಧಿಸದೆ ಬಿಟ್ಟಿದ್ದಾರೆ. ಹರೆಯದ ಮಕ್ಕಳು, ಯುವತಿಯರನ್ನು ಬಳಸ್ಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದಾನೆಂದು ಮೌಖಿಕ ದೂರಿತ್ತಿದ್ದರೂ, ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ.

ಆದರೆ, ಆರೋಪಿ ಶಶಿ ಬಳಿಕ ಸಾಮಾಜಿಕ ಕಾರ್ಯಕರ್ತೆ ಶ್ರೀಲತಾ ವಿರುದ್ಧವೇ ಬರ್ಕೆ ಠಾಣೆಯಲ್ಲಿ ರಾಬರಿ ನಡೆಸಿದ್ದಾಗಿ ದೂರು ದಾಖಲಿಸಿದ್ದಾಳೆ. ಇದರಿಂದಾಗಿ ಪೊಲೀಸರು ಶ್ರೀಲತಾಳನ್ನು ವಶಕ್ಕೆ ಪಡೆದಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ಪೊಲೀಸರ ನಡೆಯೇ ಸಂಶಯ ಹುಟ್ಟಿಸಿದ್ದು, ಕಾಮಿ ಕೃಮಿಯನ್ನು ಬಿಟ್ಟು ಹಿಡಿದು ಕೊಟ್ಟವಳನ್ನೇ ಬಂಧಿಸಲು ಮುಂದಾಗಿದ್ದು ಶೋಚನೀಯ ಅನ್ನಬೇಕಷ್ಚೆ.

LEAVE A REPLY

Please enter your comment!
Please enter your name here