Home Crime ತಾಯಿಗೆ ಕೆಟ್ಟದಾಗಿ ಸನ್ನೆ ಮಾಡಿದ್ದಕ್ಕೆ ಸಿಟ್ಟಿಗೆದ್ದ ಪುತ್ರ..! ಚುಡಾಯಿಸಿದ ಗೆಳೆಯನ ರುಂಡವನ್ನೇ ಚೆಂಡಾಡಿದ..! ಕಡಿದ ತಲೆ...

ತಾಯಿಗೆ ಕೆಟ್ಟದಾಗಿ ಸನ್ನೆ ಮಾಡಿದ್ದಕ್ಕೆ ಸಿಟ್ಟಿಗೆದ್ದ ಪುತ್ರ..! ಚುಡಾಯಿಸಿದ ಗೆಳೆಯನ ರುಂಡವನ್ನೇ ಚೆಂಡಾಡಿದ..! ಕಡಿದ ತಲೆ ಸಮೇತ ಪೊಲೀಸರಿಗೆ ಶರಣಾದ ಹಂತಕ..!

3021
0
SHARE

ಅವರಿಬ್ಬರು ತುಂಬಾ ವರ್ಷದ ಸ್ನೇಹಿತರು.. ಒಟ್ಟಿಗೆ ಒಡಾಡಿಕೊಂಡಿದ್ದ ಗೆಳೆಯರು… ಆದ್ರೆ ಮೊನ್ನೆ ಗೆಳೆಯ ತನ್ನ ತಾಯಿಗೆ ಕೆಟ್ಟದಾಗಿ ಸನ್ನೆ ಮಾಡಿದ ಎಂಬ ಕಾರಣಕ್ಕೆ ಆತನ ತಲೆಯನ್ನೇ ತೆಗೆದು ಬಿಟ್ಟಿದ್ದಾನೆ. ಅಷ್ಟೇ ಅಲ್ಲದೆ ಕಡಿದ ತಲೆಯನ್ನು ತೆಗೆದುಕೊಂಡು ಪೊಲೀಸ್ ಠಾಣೆಗೆ ಹೋಗಿ ಪೊಲೀಸರೆದುರು ನಾನೇ ಹತ್ಯೆ ಮಾಡಿದೆ ಎಂದು ಹೇಳಿದ್ದಾನೆ.

ಈ ಭಯಾನಕ ಹತ್ಯೆ ಕಂಡು ಪೊಲೀಸರು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.ಇಂದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚಿಕ್ಕಬಾಗಿಲು ಗ್ರಾಮದಲ್ಲಿ ಜನರು ಬೆಚ್ಚಿ ಬೀಳುವಂತಹ ಹತ್ಯೆಯೊಂದು ನಡೆದುಹೋಗಿದೆ.ತನ್ನ ತಾಯಿಯನ್ನು ಚುಡಾಯಿಸಿದ ಎಂಬ ಕಾರಣಕ್ಕೆ ಗೆಳೆಯನ ರುಂಡ- ಮುಂಡ ಸಪರೇಟ್ ಮಾಡಿದ್ದಾನೆ..ಇಲ್ಲಿ ಸತ್ತು ಬಿದ್ದಿರುವವನು ಚಿಕ್ಕಬಾಗಿಲು ಗ್ರಾಮದ ಪರಶಿವ ಮೂರ್ತಿ ಎನ್ನುವವರ ಮಗ ಗಿರೀಶ.

ಇದೇ ಗ್ರಾಮದ ನಾಗಣ್ಣ ಅವರ ಮಗ ಪಶುಪತಿ ಎನ್ನುವವನು ಗಿರೀಶನ ತಲೆಯನ್ನು ಕತ್ತರಿಸಿದ್ದಾನೆ. ಅಷ್ಟೇ ಅಲ್ಲದೆ ಕಡಿದ ತಲೆಯನ್ನು ತೆಗೆದುಕೊಂಡು ನೇರವಾಗಿ ಪೊಲೀಸ್ ಠಾಣೆಗೆ ಹೋಗಿದ್ದಾನೆ. ಇವನ ರೌದ್ರಾವತಾರವನ್ನು ಕಂಡು ಬೆಚ್ಚಿ ಬಿದ್ದ ಪೊಲೀಸರು ಯಾಕಪ್ಪ ಹೀಗೆ ಹತ್ಯೆ ಮಾಡಿದೆ ಅಂದ್ರೆ ಹಂತಕ ಪಶುಪತಿ ಪೊಲೀಸರೇ ಶಾಕ್ ಆಗುವಂತಹ ಹೇಳಿಕೆ ನೀಡಿದ್ದಾನೆ.ಹತ್ಯೆಯಾದ ಗಿರೀಶ್ ಹಾಗೂ ಹಂತಕ ಪಶುಪತಿ ಇಬ್ಬರು ಗೆಳೆಯರಾಗಿದ್ದು ನಿನ್ನೆ ರಾತ್ರಿ‌ ಮಳವಳ್ಳಿಗೆ ಬಂದು ಜೊತೆಯಲ್ಲೇ ಸಿನಿಮಾ ನೋಡಿಕೊಂಡು ಹೋಗಿದ್ರಂತೆ.

ಹೀಗೆ ಜೊತೆಗೆ ಓಡಾಡಿಕೊಂಡಿದ್ದ ಗೆಳೆಯನನ್ನುಬೆಳಗ್ಗೆಯೇ ಕರೆಸಿಕೊಂಡು ಆತನ ತಲೆ ಕಡಿದು 20 ಕಿಲೋ ಮೀಟರ್ ಆತನ ತಲೆಯನ್ನು ಬೈಕ್‌ನಲ್ಲಿಟ್ಟುಕೊಂಡು ಹೋಗುವಂತದ್ದಾದ್ರೂ ಏನಾಗಿತ್ತು. ಪಶುಪತಿ ತಾಯಿಗೆ ಗಿರೇಶ್ ಅದ್ಯಾವ ಸನ್ನೆ ಮಾಡಿದ್ದ ಎಂಬುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಇನ್ನು ಹಂತಕ ಪಶುಪತಿ ಅನುಕೂಲಸ್ಥರ ಮನೆ ಹುಡುಗ ತಂದೆ ನಾಗಣ್ಣ ಬಡ್ಡಿ ವ್ಯವಹಾರ ಮಾಡಿ ಚೆನ್ನಾಗಿ ದುಡಿದು ಇಟ್ಟಿದ್ದಾರಂತೆ. ಹೀಗಾಗಿ ಶೋಕಿ ಮಾಡಿಕೊಂಡು ಆಗಾಗ ಬೆಂಗಳೂರಿಗೂ ಹೋಗಿ ಬರುತ್ತಿದ್ದನಂತೆ.

ಕಳೆದ ಒಂದು ವಾರದಿಂದ ಪಕ್ಕಾ ಸೈಕೊ ಹಂಗೆ ಆಡ್ತಾ ಇದ್ನಂತೆ. ಇತ್ತ ಹತ್ಯೆಯಾದ ಗೀರಿಶನ ಬಗ್ಗೆ ಗ್ರಾಮಸ್ಥರು ಒಳ್ಳೆಯ ಮಾತುಗಳನ್ನೇ ಆಡುತ್ತಾರೆ. ಗಿರೀಶ ಕೆಟ್ಟ ವ್ಯಕ್ತಿಯಲ್ಲ ಇಬ್ಬರು ಕುಚುಕು ಗೆಳೆಯರೇ ಆಗಿದ್ದರಿಂದ ಪಶುಪತಿ ತಾಯಿಯನ್ನು ತನ್ನ ತಾಯಿಯಂತೆ ನೊಡ್ತಾ ಇದ್ದ ಎಂದು ಹೇಳ್ತಾರೆ.ಇತ್ತೀಚೆಗೆ ರಾಜ್ಯದಲ್ಲಿ ರುಂಡ ಕತ್ತರಿಸುವ ಪ್ರಕರಣಗಳು ಹೆಚ್ಚಾಗಿವೆ. ಇದೇ ತಿಂಗಳಲ್ಲಿ ರುಂಡ ಕತ್ತರಿಸಿ, ಕತ್ತರಿಸಿದ ತಲೆಯೊಂದಿಗೆ ಪೊಲೀಸರಿಗೆ ಶರಣಾಗಿರುವ ಮೂರು ಪ್ರಕರಣಗಳು ಪತ್ತೆಯಾಗಿವೆ.

ಕಳೆದ ಮೂರು ದಿನಗಳ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಪುರುಷನೋರ್ವ ತನ್ನ ಪ್ರಿಯತಮೆಗೆ ಬೇರೊಬ್ಬನೊಂದಿಗೆ ಸಂಬಂಧವಿದೆ ಎಂದು ಆಕೆಯ ತಲೆ ಕಡಿದುಕೊಂಡು ಬಂದು ಪೊಲೀಸ್ ಠಾಣೆಗೆ ಶರಣಾಗಿದ್ದ. ಅಲ್ಲದೆ ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಇದೇ ತಿಂಗಳ 8ನೇ ತಾರಿಖು ಪತಿ ತನ್ನ ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಪತ್ನಿಯ ರುಂಡ ಕಡಿದುಕೊಂಡು ಹೋಗಿ ಪೊಲೀಸರಿಗೆ ಶರಣಾಗಿದ್ದ.

ಒಟ್ಟಾರೆ ಕುಟುಂಬಕ್ಕೆ ಆದಾರ ವಾಗಿದ್ದ ಗಿರೀಶ ಇಹ ಲೋಕ ಸೇರಿದ್ದಾನೆ. ತಂದೆ ಎರಡುಕಾಲು ಕಳೆದು ಕೊಂಡು ಮೂಲೆ ಹಿಡಿದಿದ್ದಾರೆ. ಹೆತ್ತವರಿಗೆ ನೆರವಾಗುತ್ತಿದ್ದ ಮಗ ನಿಲ್ಲದೆ ತಂದೆ ತಾಯಿ‌ ಕಣ್ಣೀರಿನಲ್ಲಿ‌ ಕೈ ತೊಳೆಯುತ್ತಿದ್ದಾರೆ‌. ಸದ್ಯ ಬೆಳಕವಾಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲೀಸರ ತನಿಖೆಯಿಂದ ಹತ್ಯೆಯ ಸತ್ಯ ಹೊರ ಬೀಳಬೇಕಿದೆ.

 

LEAVE A REPLY

Please enter your comment!
Please enter your name here