Home Cinema ತಪ್ಪದೇ ನೋಡಿ “ಅಮ್ಮನ ಮನೆ”ಯ ಅಂಗಳವನ್ನ..! ರಾಘಣ್ಣನ ರೀ-ಎಂಟ್ರಿಗೆ ಕಾದು ಕುಳಿತಿದೆ ಚಂದನವನ…

ತಪ್ಪದೇ ನೋಡಿ “ಅಮ್ಮನ ಮನೆ”ಯ ಅಂಗಳವನ್ನ..! ರಾಘಣ್ಣನ ರೀ-ಎಂಟ್ರಿಗೆ ಕಾದು ಕುಳಿತಿದೆ ಚಂದನವನ…

1443
0
SHARE

ಯಸ್.. ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿಕೊಟ್ಟ ರಾಘಣ್ಣ ಸದ್ಯ ಅಮ್ಮನ ಮನೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಪಕ್ಕದ್ಮನೆ ಹುಡುಗಿ ಚಿತ್ರದ ನಂತರ ಬೇರೆ ಯಾವ ಸಿನಿಮಾದಲ್ಲೂ ಕಾಣಿಸಿಕೊಳ್ಳದ ರಾಘಣ್ಣ ಅನಾರೋಗ್ಯದಿಂದ ಚಿತ್ರರಂಗದ ದಿಂದ ದೂರ ಉಳಿದಿದ್ರು.

ಈ ಸದ್ಯ ಅಮ್ಮನ ಮನೆ ಚಿತ್ರದ ಮೂಲಕ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಭರ್ತಿ ೧೪ ವರ್ಷಗಳ ನಂತ್ರ ಅಂದ್ರೆ ನೀವು ನಂಬ್ಲೇ ಬೇಕು. ಅಮ್ಮನ ಮೆನೆ ಟೈಟಲ್ ಮೂಲಕವೇ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಮನೆಯ ನಂದಾದೀಪ ಪಾರ್ವತಮ್ಮನವರನ್ನು ನೆನಪು ಮಾಡಿದ ಸಿನಿಮಾ. ಈ ಚಿತ್ರದಲ್ಲಿ ರಾಘವೇಂದ್ರರಾಜ್‌ಕುಮಾರ್ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದು. ಪೆಪ್ಪರ್ ಅಂಡ್ ಸಾಲ್ಟ್ ಲುಕ್‌ನಲ್ಲಿ ರಾಘಣ್ಣ ತೆರೆಮೇಲೆ ರಾರಾಜಿಸೋದಕ್ಕೆ ಸಜ್ಜಾಗಿದ್ದಾರೆ.ಇದೊಂದು ಫ್ಯಾಮಿಲಿ ಎಂಟಟ್ರೈನ್ ಮೆಂಟ್ ಸಿನಿಮಾ.

ಒಬ್ಬ ವ್ಯಕ್ತಿ ತಾಯಿಯನ್ನು ಮೂರು ರೀತಿಯಲ್ಲಿ ಕಾಣುತ್ತಾರೆ. ಅದು ತಾಯಿಯಾಗಿ, ಮಡದಿಯಾಗಿ ಹಾಗೂ ಮಗಳಾಗಿ ಅನ್ನೋಂದು ಈ ಸಿನಿಮಾದಲ್ಲಿ ಕಾಣಬಹುದಾಗಿದೆ. ಸದ್ಯ ರಿಲೀಸ್ ಆಗಿರುವ ಮೇಕಿಂಗ್‌ನಲ್ಲಿ ಕೈಯಲ್ಲಿ ಫುಟ್ ಬಾಲ್ ಹಿಡಿದು ಬುದ್ದಿವಾದ ಹೇಳುವ ಪೀಟಿ ಮಾಸ್ಟರ್ ಪಾತ್ರದ ಮೂಲಕ ರಾಘವೇಂದ್ರ ರಾಜ್‌ಕುಮಾರ್ ಗಮನಸೆಳೆಯುತ್ತಿದ್ದಾರೆ. ಅಲ್ಲದೆ ಮುಗ್ಧ ಪಾತ್ರದ ಮೂಲಕ ಅಮ್ಮನ ಮಾತನ್ನು ದಾಟದ ಮಗನಾಗಿ ನಟಿಸಿದ್ದಾರೆ. ತಮ್ಮ ಶಕ್ತಿ ಮೀರಿ ನಟಿಸಿರುವ ರಾಘಣ್ಣ ಚಿತ್ರಕ್ಕಾಗಿ ಗಾಡಿ ಓಡಿಸಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಅಲ್ಲದೆ ಮಗಳಿಂದಲ್ಲೇ ಪ್ರಾಡ್ ಫಾದರ್ ಎನ್ನಿಸಿಕೊಳ್ಳುವ ರೋಲ್‌ನ್ನು ನಿರ್ವಹಿಸಿದ್ದಾರೆ. ನಿಖಿಲ್ ಮಂಜು ಚಿತ್ರದ ನಿರ್ದೇಶಕ. ಈಗಾಗಲ್ಲೇ ಸಾಕಷ್ಟು ಉತ್ತಮ ಚಿತ್ರಗಳಿನ್ನು ನೀಡಿರುವ ಪ್ರತಿಭಾವಂತ ನಿರ್ದೇಶಕ ಕಂ ನಟ. ಚಿತ್ರದಲ್ಲಿ ಪೋಲೀಸ್ ಆಫೀಸರ್ ಪಾತ್ರ ಮಾಡಿದ್ದಾರೆ. ಈ ಚಿತ್ರಕ್ಕೆ ರಾಘಣ್ಣನನ್ನು ಕಾಸ್ಟ್ ಮಾಡಿರುವ ನಿಖಿಲ್. ಚಿತ್ರದ ಸಬ್ಜೆಕ್ಟ್‌ಗೆ ರಾಘವೇಂದ್ರ ರಾಜ್‌ಕುಮಾರ್ ಅವರೇ ಸೂಕ್ತ ಎನ್ನಿಸಿ ೧೪ವರ್ಷಗಳ ಬಳಿಕ ಹಿರಿತೆರೆಗೆ ಕರೆತಂದಿದ್ದಾರೆ. ಅವರಲ್ಲಿದ್ದ ಕಲಾದೇವತೆಯನ್ನು ಬಡಿದೆಬ್ಬಿಸಿದ್ದಾರೆ.

ಜೊತೆಗೆ ಚಿತ್ರೀಕರಣದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಸಾಕಷ್ಟು ಚಾಲೆಂಜಸ್‌ಗಳನ್ನು ಫೇಸ್ ಮಾಡಿದಾರೆ.ರಾಘಣ್ಣನ ಈ ಪ್ರಯತ್ನದಿಂದ ದೊಡ್ಮನೆಯಲ್ಲಿ ಸಂತಸ ಮನೆಮಾಡಿದ್ದು. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ತಮ್ಮ ಸಂತಸವನ್ನು ವ್ಯಕ್ತಪಡಿದಿದ್ದಾರೆ. ೭ ವರ್ಷಗಳಿಂದ ಅನಾರೋಗ್ಯದಿಂದ ಫಿನಿಕ್ಸ್ ಪಕ್ಷಿಯಂತೆ ಎದ್ದು ಬಂದ ತಮ್ಮ ಕಂಬ್ಯಾಕ್ ಮಾಡಿರುವ ಚಿತ್ರ ಯಶಸ್ವಿಯಾಗಲೆಂದು ಪ್ರೀತಿಯಿಂದ ಹಾರೈಸಿದ್ದಾರೆ.
ಇನ್ನು ರಾಘಣ್ಣ ಚಿತ್ರದಲ್ಲಿ ನಟಿಸಿರುವುದು ಖುಷಿ ಎನ್ನುವ ಅಪ್ಪು. ಚಿತ್ರದ ಟೈಟಲ್‌ನಲ್ಲೇ ಪಾಸಿಟಿವಿ ಇದೆ.

ಒಳ್ಳೆಯ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರ್ತಿರುವ ರಾಘಣ್ಣನಿಗೆ ನಿಮ್ಮ ಅಭಿಮಾನ ಸದಾ ಹೀಗೆ ಇರಲಿ ಅಂತಾರೆ.ಇನ್ನು ಜೋಕರ್ ಆಗಿ, ಸೀರಿಯಸ್ ಪಾತ್ರದಲ್ಲಿ ರಾಘಣ್ಣ ಮಿಂಚಿದ್ದು. ಚಿತ್ರದ ಎರಡು ಬಿಟ್ ಸಾಂಗ್‌ನ್ನು ಹಾಡಿದ್ದಾರೆ. ಆ ಒಂದು ಸಾಂಗ್ ಈಗಾಗಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು. ಚಿತ್ರದ ಮೇಲಿನ ನಿರೀಕ್ಷೆ ಹೆಜ್ಜಾಗಲು ಇರುವ ಮತ್ತೊಂದು ಕಾರಣವಾಗಿದೆ. ಅಪ್ಪನ ವಿನೂತನ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸುವ ವಿನಯ್ ರಾಜ್‌ಕುಮಾರ್, ಗುರುರಾಜ್‌ಕುಮಾರ್ ಚಿತ್ರೀಕರಣದ ಸ್ಥಳದಲ್ಲಿ ಅಪ್ಪನೊಟ್ಟಿಗೆ ಇದ್ದು. ಚಿತ್ರ ಯಶಸ್ವಿಯಾಗಿ ಕಂಪ್ಲೀಟ್ ಮಾಡಲು ಕಾರಣರಾಗಿದ್ದಾರೆ.

ಲಾಂಗ್ ಗ್ಯಾಂಪ್ ಬಳಿಕ ಅಪ್ಪ ಮತ್ತೆ ಬೆಳ್ಳಿತೆರೆಗೆ ಎಂಟ್ರಿಕೊಟ್ಟಿರೋದು ನಮ್ಮಲ್ಲಿದ್ದ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚುಮಾಡಿದೆ ಅಂತಾರೆ ವಿನಯ್ ರಾಜ್‌ಕುಮಾರ್.ಇನ್ನು ಸೆಂಟಿಮೆಂಟ್ ಕಂ ಸಮಾಜಕ್ಕೊಂದು ಒಳ್ಳೆಯ ಸಂದೇಶವಿರುವ ಚಿತ್ರದಲ್ಲಿ ರಾಜೀವ ಪಾತ್ರದಲ್ಲಿರುವ ರಾಘಣ್ಣನಿಗೆ ಮಾನಸಿ ಸುಧೀರ್ ಜೋಡಿಯಾಗಿದ್ದಾರೆ. ಅಮ್ಮನ ಮನೆ ಚಿತ್ರದಲ್ಲಿ ದೊಡ್ಡ ಕಲಾವಿದ ದಂಡು ನೆರೆದಿದೆ. ಪ್ರಮುಖ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್, ತಬಲನಾಣಿ, ನಿರ್ದೇಶಕ ನಾಗಾಭರಣ, ನಿಖಿಲ್ ಮಂಜು, ರಂಗಭೂಮಿ ಕಲಾವಿದೆ ರೋಹಿಣಿ ತಾಯಿಯ ಪಾತ್ರದಲ್ಲಿ.

ಶೀತಲ್ ಮಗಳ ಪಾತ್ರದಲ್ಲಿ ಮಿಂಚಿದ್ದಾರೆ.ಚಿತ್ರಕ್ಕೆ ಬಿ.ಬಿ.ಆರ್ ಸ್ವಾಮಿ ಛಾಯಾಗ್ರಹಣ, ಬಿ. ಶಿವಾನಂದ ಸಂಭಾಷಣೆ, ಸಮೀರ್ ಕುಲಕರ್ಣಿ ಸಂಗೀತವಿದ್ದು. ೪೦ ದಿನಗಳ ಚಿತ್ರೀಕರಣವನ್ನು ಬೆಂಗಳೂರು ಸುತ್ತಮುತ್ತ ಚಿತ್ರೀಕರಣಗೊಂಡಿದೆ. ೧೦೦ಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ಮಾರ್ಚ್ ೧ರಂದು ಚಿತ್ರ ರಾಜ್ಯಾದ್ಯಂತ ರಿಲೀಸ್ ಆಗಲಿದ್ದು. ಇದೇ ತಿಂಗಳು ೨೮ರಂದು ಆಸ್ಟ್ರೇಲಿಯಾ, ಸಿಂಗಪುರ್‌ನಲ್ಲಿ ಚಿತ್ರದ ಪ್ರೀಮೀಯರ್ ಶೋ ನಡೆಯಲಿದೆ. ಇದೇ ೪ ವರ್ಷಗಳ ಹಿಂದೆ ಸಿಂಗಾಪೂರಕ್ಕೆ ಚಿಕಿತ್ಸೆ ತೆಗೆದು ಕೊಳ್ಳೊದಕ್ಕೆ ಹೋಗಿದ್ದ ರಾಘವೇಂದ್ರ ರಾಜ್‌ಕುಮಾರ್.

ಈಗ ಅದೇ ಸಿಂಗಪೂರಕ್ಕೆ ಪ್ರೀಮಿಯರ್ ಶೋವನ್ನು ಅಭಿಮಾನಿಗಳ ಜೊತೆಗೆ ನೋಡೊದಕ್ಕೆ ಹೋಗ್ತಿದ್ದಾರೆ ಅನ್ನೊದು ಚಿತ್ರತಂಡ ಮತ್ತು ದೊಡ್ಮನೆ ಅಭಿಮಾನಿಗಳಲ್ಲಿ ಹೆಚ್ಚು ಸಂತಸಕ್ಕೆ ಕಾರಣವಾಗಿದೆ. ಶ್ರೀ ಲಲಿತ ಚಿತ್ರಕಲೆ ಬ್ಯಾನರ್ ಅಡಿಯಲ್ಲಿ ಚಿತ್ರ ಮೂಡಿಬಂದಿದ್ದು. ನಿರ್ಮಾಪಕರು ಆತ್ಮ ಶ್ರೀ ಆರ್. ಎಸ್. ಕುಮಾರ್ ಸಹ ನಿರ್ಮಾಣವಿದೆ. ಶೀ ಲಲಿತೆ ಚಿತ್ರಾಲಯ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಶ್ರೀಮತಿ ಆತ್ಮಶ್ರೀ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅದೇನೇ ಇದ್ರು ೧೪ ವರ್ಷಗಳ ಬಳಿಕ ಮತ್ತೆ ರಾಘಣ್ಣ ಬಣ್ಣ ಹಚ್ಚಿದ್ದು. ಚಿತ್ರ ನೋಡುವ ಕಾತುರತೆ ಅಭಿಮಾನಿಗಳಲ್ಲಿದೆ. ಅಭಿಮಾನಿಗಳ ಇದೇ ಕಾತುರತೆಗೆ ಉತ್ತರ ಮಾರ್ಚ್ ೧ಕ್ಕೆ ಸಿಗಲಿದೆ.

LEAVE A REPLY

Please enter your comment!
Please enter your name here