ಆಪರೇಷನ್ ಕಮಲದ ಆಡಿಯೋ ಪ್ರಕರಣ ಮತ್ತೆ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದೆ. ಪ್ರಕರಣವನ್ನು ಎಸ್ಐಟಿ ತನಿಖೆಗೆ ಬಿಜೆಪಿ ತೀವ್ರ ವಿರುೋಧ ವ್ಯಕ್ತವಾಗಿದೆ. ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಬಿಜೆಪಿ ಶಾಸಕ ಮಾಧುಸ್ವಾಮಿ ಆಗ್ರಹಿಸಿದ್ದಾರೆ.
ಈ ಪ್ರಕರಣದಲ್ಲಿ ಕ್ರಿಮಿನಲ್ ಪ್ರೊಸೀಜರ್ ಅನುಸರಿಸಬೇಕು. ಎಸ್ ಐಟಿಯಿಂದ ಅದು ಸಾಧ್ಯವಿಲ್ಲ..ಕ್ರಿಮಿನಲ್ ಪ್ರೊಸೀಜರ್ ನಲ್ಲಿ ಎಫ್ ಐಆರ್ ಸಲ್ಲಿಸುವಾಗ ನ್ಯಾಯಾಲಯಕ್ಕೆ ಮಾತ್ರ ಸಲ್ಲಿಸಬೇಕು.ನೀವು ಸಹ ಹಲವು ಪೊಲೀಸ್ ಕೇಸ್ ಗಳಲ್ಲಿ ಬಲಿಪಶು ಆಗಿದ್ದೀರಿ.ದಯಮಾಡಿ ಶಾಸಕರನ್ನು ಅಂತಹಾ ಪೊಲೀಸರ ವಶಕ್ಕೆ ಕೊಡಬೇಡಿ ಎಂದು ಮಾಧುಸ್ವಾಮಿ ಮನವಿ ಮಾಡಿದರು.
ತಮ್ಮ ವೈಯಕ್ತಿಕ ಸ್ನೇಹಿತನಾಗಿ ಹೇಳುತ್ತಿದ್ದೇನೆ.ದೊಡ್ಡ ಮನಸ್ಸು ಮಾಡಿ ಈ ಪ್ರಕರಣ ಇಲ್ಲಿಗೆ ಕೈ ಬಿಡಿ.ತಪ್ಪಾಗಿದೆ.ನಾವು ತಪ್ಪು ಒಪ್ಪಿಕೊಳ್ಳುತ್ತೇವೆ.ದಯಮಾಡಿ ಈ ದಿಕ್ಕಿನಲ್ಲಿ ಯೋಚನೆ ಮಾಡಿ.ನಮಗೆ ಈ ವಿಷಯದಲ್ಲಿ ಹಠವಿಲ್ಲ.ಇನ್ನೊಂದು ವಿಷಯದಲ್ಲಿ ಮಾತ್ರ ದೊಡ್ಡ ಹಠವಿದೆ.ಅದಕ್ಜೆ ಮಾತ್ರ ನಾವು ನ್ಯಾಯಾಲಯದ ಮೊರೆಹೋಗುತ್ತೇವೆ.
ಕಾನೂನು ಬದ್ದ ಹೋರಾಟ ನಡೆಸುತ್ತೇವೆ..ತಮ್ಮ ಕಾಲದಲ್ಲಿ ಎಂಎಲ್ ಎ ಗಳಿಗೆ ಕ್ರಿಮಿನಲ್ ಪ್ರೊಸೀಜರ್ ವ್ಯಾಪ್ತಿಗೆ ತರುವ ಕೆಲಸ ತಮ್ಮಿಂದ ಆಗುವುದು ಬೇಡ.ಇದನ್ನು ರಾಜಕೀಯವಾಗಿ ತೆಗೆದುಕೊಳ್ಳಬೇಡಿ.ಯಾರಿಗೋ ವೆಪನ್ ಕೊಟ್ಟು ಶಾಸಕರನ್ನು ಬಲಿಪಶು ಮಾಡುವ ಪ್ರಕ್ರಿಯೆಗೆ ನಿಮ್ಮಿಂದ ಚಾಲನೆ ಆಗುವುದು ಬೇಡ ಎಂದು ಮನವಿ ಮಾಡಿದರು.ಶಾರದಾ ಚಿಟ್ ಫಂಡ್ ಪ್ರಕರಣದಲ್ಲಿ ಕೊಲ್ಕೊತ್ತಾ ಮುಖ್ಯಮಂತ್ರಿ ಸಿಬಿಐನ್ನೇ ಪ್ರಶ್ನಿಸಿದ್ದಾರೆ.
ಅಂತಹುದರಲ್ಲಿ ನಾವು ಎಸ್ ಐಟಿಯನ್ನು ಸುಮ್ಮನೆ ಬಿಡುತ್ತೇವೆಯೇ.ಕೋರ್ಟನಲ್ಲಿ ಖಂಡಿತ ಪ್ರಶ್ನಿಸುತ್ತೇವೆ.ಪೊಲೀಸರ ಜತೆ ನ ದೋಸ್ತಿ,ನ ದುಷ್ಮನಿ ..ಎರಡೂ ಬೇಡ.ಅವರಿಂದ ಅಂತರ ಕಾಯ್ದುಕೊಳ್ಳಬೇಕು. ನಾಲ್ಕು ಗೋಡೆಗಳ ಒಳಗೆ ಕೂತು ತಾವು ಇದನ್ನು ಸರಿಪಡಿಸಬಹುದಿತ್ತು.ನಮ್ಮ ಭಾವನೆಗಳಿಗೆ ಸಭಾದ್ಯಕ್ಷರು ಬೆಲೆ ಕೊಡಲಿಲ್ಲ ಎಂಬ ಆರೋಪ ಬರುವುದು ಬೇಡ ಎಂದು ಮನವಿ ಮಾಡಿದರು.