Home Cinema ‘ತಮನ್ನಾ, ಕಾಜಲ್, ಸಮಂತಾ’ ಕಂಗಾಲಾದ್ರಾ ಕಂಡು “ಕರ್ನಾಟಕ ಕ್ರಶ್” ರಶ್ಮಿಕಾ ಸೆಳೆತ’..! ‘ಟಿ ಟೌನ್‌ನಲ್ಲಿ ‘ರಶ್ಮಿಕಾ’ಗೆ...

‘ತಮನ್ನಾ, ಕಾಜಲ್, ಸಮಂತಾ’ ಕಂಗಾಲಾದ್ರಾ ಕಂಡು “ಕರ್ನಾಟಕ ಕ್ರಶ್” ರಶ್ಮಿಕಾ ಸೆಳೆತ’..! ‘ಟಿ ಟೌನ್‌ನಲ್ಲಿ ‘ರಶ್ಮಿಕಾ’ಗೆ ಇರುವ ಡಿಮ್ಯಾoಡು ಎಂಥಹದ್ದು ಗೊತ್ತಾ..!

724
0
SHARE

ಕಿರಿಕ್ ಪಾರ್ಟಿಯಲ್ಲಿ ರಕ್ಷಿತ್‌ಗೆ ಜೋಡಿಯಾಗಿ ರಶ್ಮಿಕಾ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಬೆರಗು ಮೂಡಿಸಿದ್ರು. ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಅಂತ ಹಾಡಿದ್ಮೇಲೆ.. ಕಾಲೇಜ್ ಕುಮಾರರ ಕನನ್ಸಿನ ರಾಣಿಯಾಗಿ ರಶ್ಮಿಕಾ ಮೆರೋದಕ್ಕೆ ಶುರುಮಾಡಿದ್ರು.ಆಫ್ಟರ್ ಕಿರಿಕ್ ಪಾರ್ಟಿ ರಶ್ಮಿಕಾ ಅಂಜನಿಪುತ್ರ ಚಿತ್ರದಲ್ಲಿ ನಟಿಸಿದ್ರು. ಎರಡನೇ ಚಿತ್ರದಲ್ಲಿಯೇ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆಗೆ ಸ್ಕ್ರೀನ್ ಶೇರ್ ಮಾಡುವ ಅವಕಾಶ ರಶ್ಮಿಕಾ ಪಾಲಾಗಿತ್ತು. ಹರ್ಷ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿತ್ತು.

ಚಂದ ಚಂದ ಚಂದ ಚಂದ ನನ್ನ್ ಹೆಂಡ್ತಿ ಎಂಬ ಹಾಡಿನ ಮೂಲಕ ಚಿತ್ರ ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡಿತ್ತು. ರಶ್ಮಿಕಾ ಫರ್ಫಾಮೆನ್ಸ್ ಕೂಡ ಪ್ರೇಕ್ಷಕರಿಗೆ ಇಷ್ಟವಾಗಿತ್ತು.ಅಂಜನಿಪುತ್ರ ಚಿತ್ರದ ಬಳಿಕ ರಶ್ಮಿಕಾ ಲಕ್ ಬದಲಾಗಿ ಹೊಯ್ತು. ಹಾಗ್ಲೇ ಟಾಲಿವುಡ್‌ನಿಂದ ರ ಶ್ಮಿಕಾಗೆ ಅವಕಾಶಗಳು ಹರಸಿ ಬಂದಿದ್ದು. ಆಗ್ಲೇ ರಶ್ಮಿಕಾ ಎರಡು ಲಾಗ್ವೇಜ್‌ಗಳಲ್ಲಿ ಕೆಲಸ ಮಾಡುವ ಅದೃಷ್ಟ ಒದಗಿ ಬಂದಿತ್ತು. ಚಲೋ ಚಿತ್ರದ ಮೂಲಕ ಸಾನ್ವಿ ಎಂಬ ಸಾನ್ವಿ ಕಾರ್ತಿಕಾ ಪಾತ್ರದ ಮೂಲಕ ಟಾಲಿವುಡ್ ಇಂಡಸ್ಟ್ರಿಗೆ ಬಲಗಾಲಿಟ್ಟು ಹೋಗಿದ್ರು.

ಆದ್ರೆ ಚಲೋ ಚಿತ್ರ ಟಾಲಿವುಡ್‌ನಲ್ಲಿ ಹೇಳುವಂತಹ ಚಮಾತ್ಕಾರವೇನು ಮಾಡ್ಲಿಲ್ಲ. ಜನರ ಮನಸ್ಸು ಮುಟ್ಟುವಲ್ಲಿ ವಿಫಲವಾಯ್ತು.ಚಲೋ ಚಿತ್ರದಲ್ಲಿ ನಟಿಸುವಾಗ್ಲೇ ಚಷ್ಮಾ ಗರ್ಲ್‌ಗೆ ಚಮಕ್ ಚಿತ್ರಕ್ಕೆ ಮತ್ತೆ ಬುಲಾವ್ ಬಂದಿತ್ತು. ಅದು ಗೋಲ್ಡನ್ ಸ್ಟಾರ್ ಗಣೇಶ್‌ಗೆ ಜೋಡಿಯಾಗಿ ಈಗೀನ ಜಮಾನದ ಬೆಡಗಿಯಾಗಿ ಕಮಾಲ್ ಮಾಡಿದ್ರು. ಚಮಕ್ ಚಿತ್ರದಲ್ಲಿ ಖುಷಿ ಪಾತ್ರದಲ್ಲಿ ಮಿಂಚಿದ್ದ ರಶ್ಮಿಕಾ ಗಣೇಶ್‌ಗೆ ಜೋಡಿಯಾಗಿ ಮಿಂಚು ಹರಿಸಿದ್ರು. ಸುನಿ ನಿರ್ದೇಶನದ ‘ಚಮಕ್’ನಲ್ಲಿ ಗಣೇಶ್ ಮೊದಲ ಬಾರಿಗೆ ಡಾಕ್ಟರ್ ಆಗಿ ಕಾಣಿಸಿಕೊಂಡಿದ್ರು. ಇನ್ನು ಮಾಡ್ರನ್ ಹುಡುಗಿಯಾಗಿ ರಶ್ಮಿಕಾ ಸಿನಿ ಪ್ರೇಕ್ಷಕರಿಂದ ಶಿಳ್ಳೆ ಗಿಟ್ಟಿಸಿಕೊಂಡಿದ್ರು.

ಹೇಳಿ ಕೇಳಿ.. ನಿರ್ದೇಶಕ ಸುನಿ ಚಿತ್ರ. ಅಲ್ಲಿ ಪಂಚಿಂಗ್ ಡೈ ಲಾಗ್‌ಗಳ ಜೊತೆಗೆ ಪೋಲಿ ಸಂಭಾಷಣೆಗಳು ತುಸು ಹೆಚ್ಚೇ ಇರುತ್ತೆ. ಚಮಕ್ ಹೆಸರು ಕೇಳಿದಾಗ ಇದು ಕಾಮಿಡಿ ಹಿನ್ನೆಲೆಯಲ್ಲಿ ಸಾಗುವ ಸಿನಿಮಾ ಅಂದು ಕೊಂಡು ಚಿತ್ರಮಂದಿರಕ್ಕೆ ಹೋದ ಪ್ರೇಕ್ಷಕರಿಗೆ ಚಮಕ್ ಚಿತ್ರತಂಡ ಒಳ್ಳೆಯ ಚಮಕ್ಕನ್ನೇ ನೀಡಿತ್ತು. ಯಸ್.. ಸೆಕೆಂಡ್ ಆಫ್‌ನಲ್ಲಿ ಕಾಮಿಡಿ ಜೊತೆಗೆ ಸೆಂಟಿಮೆಂಟ್ ಕೂಡ ಚಿತ್ರದಲ್ಲಿ ನಿರ್ದೇಶಕ ಸುನಿ ನೀಡಿದ್ರು. ಯೂಥ್ ಜೊತೆಗೆ ಫ್ಯಾಮಿಲಿ ಕೂಡಾ ಈ ಸಿನಿಮಾವನ್ನು ನೋಡಿ ಎಂಜಯ್ ಮಾಡಿದ್ರು.ಚಮಕ್ ಯಶಸ್ಸಿನ ಖುಷಿಯಲ್ಲಿರುವಾಗ್ಲೇ ರಶ್ಮಿಕಾಗೆ ಗೀತಾ ಗೋವಿಂದಂ ಚಿತ್ರದ ಆಫರ್ ಸಿಕ್ಕಿತ್ತು.

ಚಿತ್ರದ ಟೀಸರ್ ಬಿಡುಗಡೆಗೊಂಡು ಸಖತ್ ಸದ್ದು ಮಾಡಿತ್ತು. ಅಲ್ಲಿವರೆಗೂ ಡಿಸೆಂಟ್ ಮತ್ತು ಕಾಲೇಜ್ ಹುಡುಗಿಯಾಗಿ ನಟಿಸುತ್ತಿದ್ದ ರಶ್ಮಿಕಾ ವಿಜಯ್ ಜೊತೆಗೆ ರೋಮ್ಯಾಂಟಿಕಾಗಿ ಕಾಣಿಸಿಕೊಂಡಿದ್ರು. ಲಿಪ್‌ಲಾಕ್ ಮಾಡುವ ಮೂಲಕ ಸ್ಯಾಂಡಲ್‌ವುಡ್ ಮತ್ತು ಟಾಲಿವುಡ್ ಸಿನಿಮಾ ಮಂದಿಯ ಉಬ್ಬೇರುವಂತೆ ಮಾಡಿದ್ರು. ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ತು ಜೊತೆಗೆ ಬಾಕ್ಸಾಫೀಸ್‌ನಲ್ಲಿ ಚಿತ್ರ ಕೋಟಿ ಕೋಟಿ ಲೂಟಿ ಮಾಡ್ತು.ರಶ್ಮಿಕಾ ಆಕ್ಟಿಂಗ್‌ಗೆ ಟಾಲಿವುಡ್‌ಗೆ ಟಾಲಿವುಡ್ ಫಿದಾ ಆಗಿತ್ತು. ರಶ್ಮಿಕಾ ಉತ್ತಮ ನಟನೆಗೆ ಆಫರ್ ಮೇಲೆ ಆಫರ್‌ಗಳು ರಶ್ಮಿಕಾರನ್ನು ಹರಸಿ ಬಂದವು.

ಕರ್ನಾಟಕ ಕ್ರಷ್‌ಗೆ ಸಿಕ್ಕ ದಿಢೀರ್ ಸಕ್ಸಸ್ ತಮನ್ನಾ, ಕಾಜಲ್, ಸಮಂತಾ ಸಾನ್ವಿಯ ಸೆಳೆತ ಕಂಡು ಕಂಗಾಲಾಗಿ ಹೋಗಿದ್ದಾರೆ.ಒಟ್ಟಾರೆ ಟಾಲಿವುಡ್‌ನಲ್ಲಿ ಸಾನ್ವಿಯ ಹವಾ ದಿನದಿಂದ ದಿನಕ್ಕೆ ಜೋರಾಗ್ತಿದ್ದು, ಇನ್ನಷ್ಟು ಸಿನಿಮಾಗಳು ಸಾನ್ವಿಯ ಸಿನಿಮಾ ಲಿಸ್ಟ್‌ಗೆ ಸೇರೋದಕ್ಕೆ ತುದಿಗಾಲಿನಲ್ಲಿ ನಿಂತಿದೆ.ಇಷ್ಟೆ ಅಲ್ಲ ಟಾಲಿವುಡ್‌ನ ಟಾಪ್ ಸ್ಟಾರ್ ನಟರು ಸಹ ಸಾನ್ವಿಯ ಅಭಿನಯಕ್ಕೆ ಫಿದಾ ಆಗಿದ್ದಾರೆ. ಯಸ್. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಚಿತ್ರ ನೋಡಿ ರಶ್ಮಿಕಾರನ್ನು ಹಾಡಿಹೋಗಳಿದ್ರು. ಅಷ್ಟಕ್ಕೂ ಮಹೇಶ್ ಬಾಬು ಟಾಲಿವುಡ್‌ನ ಸೂಪರ್‌ಸ್ಟಾರ್ ಆಗಿದ್ರು ಯಾರನ್ನು ಸುಖಾ ಸುಮ್ಮನೆ ಹೊಗಳುವವರಲ್ಲ.

ಅಂತಾದ್ರಲ್ಲಿ ಗೀತಗೋವಿಂದಂ ಸಿನಿಮಾ ನೋಡಿ ಹೊಗಳಿಕೆಯ ಹಾರ ಹಾಕಿದ್ರು. ಅಂದ್ರೆ ರಶ್ಮಿಕಾ ಹವಾ ಎಷ್ಟರ ಮಟ್ಟಿಗೆ ಟಾಲಿವುಡ್‌ನಲ್ಲಿ ಹೊಸ ಶಕೆ ಪ್ರಾರಂಭವಾಗಿದೆ ಅಂತ ನೀವೆ ಅಂದಾಜಿಸಿಕೊಳ್ಳಿ..ಹೌದು, ಸೂಪರ್ ಸ್ಟಾರ್‌ಗಳು ರಶ್ಮಿಕಾನೇ ನಾಯಕಿಯಾಗ್ಲಿ ಅಂತ ಹಿಂದೆ ಬಿದ್ದಿದ್ದಾರೆ. ತಾರಕ್ ಅಭಿನಯದ ಮುಂದಿನ ಸಿನಿಮಾಗೆ ರಶ್ಮಿಕಾ ನಾಯಕಿಯಾಗುವ ಲಕ್ಷಣಗಳು ದಟ್ಟವಾಗಿ ಕೇಳಿಬರ್ತಿದೆ. ಸದ್ಯ ರಶ್ಮಿಕಾ ಜೊತೆಗೆ ಒಂದು ಸುತ್ತಿನ ಮಾತುಕಥೆ ನಡೆಸಿರುವ ಚಿತ್ರತಂಡ, ರಶ್ಮಿಕಾ ಗ್ರೀನ್ ಸಿಗ್ನಲ್‌ಗಾಗಿ ಕಾದು ಕುಳಿತ್ತಿದೆ.ಇನ್ನು ಜ್ಯೂನಿಯರ್ ಎನ್ ಟಿ ಆರ್ ಜೊತೆ ರಶ್ಮಿಕಾ ಹೆಸರು ಕೂಡ ಥಳುಕು ಹಾಕಿಕೊಂಡಿದೆ.

ತಾರಕ್ ಜೊತೆ ರಶ್ಮಿಕಾ ಕಾಣಿಸಿಕೊಳ್ಳಬೇಕೆಂದು ಪಟ್ಟು ಹಿಡಿದು ಕುಂತಿದ್ದಾರೆ. ಅಲ್ಲಿಗೆ ನೀವೆ ಲೆಕ್ಕ ಹಾಕಿ. ರಶ್ಮಿಕಾ ಮಾಡಿರುವ ಮೋಡಿ ಎಂಥದ್ದು ಅನ್ನೋದು.ಬರೀ.ಜ್ಯೂ ಎನ್ ಟಿ ಆರ್ ಸಿನಿಮಾಗಳಷ್ಟೇ ಅಲ್ಲ, ಟಿಟೌನ್ ಪ್ರಿನ್ಸ್ ಮಹೇಶ್ ಬಾಬು ಅಲ್ಲು ಅರ್ಜುನ್ ಸಿನಿಮಾಗಳಿಗೂ ರಶ್ಮಿಕಾ ನಾಯಕಿಯಾಗುವ ಸಾಧ್ಯತೆಗಳಿವೆ. ಇನ್ನು ಇದೆಲ್ಲದ್ರ ನಡುವೆ ವಿಜಯ್ ದೇವರ ಕೊಂಡ ಮತ್ತು ರಶ್ಮಿಕಾ ಜೋಡಿ ಮತ್ತೊಮ್ಮೆ ಒಂದಾಗಲಿದೆ. ಗೀತಾ ಗೋವಿಂದ ಚಿತ್ರದಲ್ಲಿ ರೋಮ್ಯಾಂಟಿಕ್ ಸಾಂಗ್ ಮೂಲಕ ಎಲ್ಲರನ್ನೂ ಕ್ಲೀನ್ ಬೋಲ್ಡ್ ಮಾಡಿದ್ರು.

ಇದೀಗ ಮತ್ತೆ ಈ ಸೂಪರ್ ಹಿಟ್ ಜೋಡಿ ‘ಡಿಯರ್ ಕಾಮ್ರೇಡ್’ ಚಿತ್ರದ ಮೂಲಕ ಒಂದಾಗ್ತಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಮತ್ತೊಮ್ಮೆ ಭರಪೂರ ಮನೋರಜನೆ ನೀಡಲು ತಯಾರಿಯಲ್ಲಿದ್ದಾರೆ. ಒಟ್ನಲ್ಲಿ ರಶ್ಮಿಕಾ ಮಂದಣ್ಣ ಗೀತ ಗೋವಿಂದಂ ಚಿತ್ರದಲ್ಲಿ ಇಂಥದೊಂದು ಹಾಟ್ ಸೀನಲ್ಲಿ ಕಾಣಿಸಿಕೊಂಡು, ಸುದ್ದಿಗೆ ಆಹಾರವಾಗಿದ್ದಾರೆ. ಅಲ್ಲದೆ ಇದು ರಕ್ಷಿತ್ ಅವರೊಂದಿಗಿನ ಅವರ ವೈಯುಕ್ತಿಕ ಜೀವನಕ್ಕೆ ಧಕ್ಕೆ ತರುವಂಥ ತಿರುವನ್ನೂ ಪಡೆದು ಕೊಂಡಿದೆ ಅಂದ್ರೆ ನೀವು ಅಚ್ಚರಿ ಪಡಬೇಕಿಲ್ಲ.ಅದೇನೇ ಇದ್ರೂ ತಮ್ಮ ಮೊದಲ ಚಿತ್ರದಲ್ಲೇ ಅಭಿಮಾನಿಗಳ ಮನಗೆದ್ದು, ಸಾಲು ಸಾಲು ಸಿನಿಮಾ ಮೂಲಕ ಅಭಿಮಾನಿಗಳ ಮನರಂಜಿಸೋದಕ್ಕೆ ಸಜ್ಜಾಗಿರುವ ರಶ್ಮಿಕಾ ರಂಗು ಮುಂದಿನ ದಿನಗಳಲ್ಲಿ ಇನ್ಯಾವ ರೀತಿ ಇರದಲಿದೆ ಕಾದುನೋಡಬೇಕಿದೆ.

LEAVE A REPLY

Please enter your comment!
Please enter your name here