Home Cinema ತಮಿಳು,ತೆಲುಗು,ಹಿಂದಿಯವ್ರ ಕಣ್ಣು ಕೆಂಪಾಯ್ತಾ ಕೆ.ಜಿ.ಎಫ್ ರಣಕೇಕೆಗೆ..? ಐ,ಟಿ ರೇಡ್ಗೆ ಕಾರಣವಾಯ್ತಾ ಕನ್ನಡ ಚಿತ್ರರಂಗದ ಬೃಹತ್ ಬೆಳವಣಿಗೆ..?

ತಮಿಳು,ತೆಲುಗು,ಹಿಂದಿಯವ್ರ ಕಣ್ಣು ಕೆಂಪಾಯ್ತಾ ಕೆ.ಜಿ.ಎಫ್ ರಣಕೇಕೆಗೆ..? ಐ,ಟಿ ರೇಡ್ಗೆ ಕಾರಣವಾಯ್ತಾ ಕನ್ನಡ ಚಿತ್ರರಂಗದ ಬೃಹತ್ ಬೆಳವಣಿಗೆ..?

2846
0
SHARE

ಕೆ.ಜಿ.ಎಫ್.. ದಿ ವಿಲನ್.. ಕುರುಕ್ಷೇತ್ರ, ಪೈಲ್ವಾನ್, & ಅಫ್‌ಕೋರ್ಸ್ ನಟಸಾರ್ವಭೌಮ.. ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ, ಮಾಡ್ತಿರುವ ಸಿನಿಮಾಗಳು. ಗಲ್ಲಾಪೆಟ್ಟಿಗೆಯಲ್ಲಿ ಭರ್ತಿ ೧೫೦ ಕೋಟಿ ಕೆ.ಜಿ.ಎಫ್ ಕೊಳ್ಳೆ ಹೊಡೆದಿದೆ. ಇತ್ತ, ದಿ ವಿಲನ್ ಕೂಡಾ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು ಕೋಟಿ ಕೋಟಿ ಕೊಳ್ಳೆ ಹೊಡೆದ ಸಿನಿಮಾ. ಇನ್ನೂ ನಟಸಾರ್ವಭೌಮ, ಪೈಲ್ವಾನ್ ಹಾಗೂ ಕುರುಕ್ಷೇತ್ರದ ನಿರ್ಮಾಣ ಆಗಿರೋದು, ಆಗ್ತಿರೋದು ಬಹುಕೋಟಿ ವೆಚ್ಚದಲ್ಲೇ. ಇದುವೇ ತೆಲುಗು, ತಮಿಳು, ಹಿಂದಿ ಚಿತ್ರರಂಗದವ್ರ ಕಣ್ಣು ಕೆಂಪಾಗುವಂತೆ ಮಾಡಿತಾ, ಇದೇ ಕಾರಣಕ್ಕೆ ಐ.ಟಿ.ದಾಳಿ ನಡಿತಾ..

ಹೀಗೊಂದು ಪ್ರಶ್ನೆ ಇದೀಗ ಎಲ್ಲರಲ್ಲೂ ಕಾಡ್ತಿದೆ.ಹೌದು, ನಿಮಗೆ ಗೊತ್ತಿರಲಿ ಕಾಲ ಮೊದಲಿನಂತಿಲ್ಲ. ಮೊದಲು ಕನ್ನಡ ಚಿತ್ರರಂಗದ ಮಾರುಕಟ್ಟೆ ಸಂಕೀರ್ಣವಾಗಿತ್ತು. ಕನ್ನಡ ಚಿತ್ರಗಳೂ ಕಡಿಮೆ ಖರ್ಚಿನಲ್ಲಿ ನಿರ್ಮಾಣವಾಗುತ್ತಿದ್ವು. ಕನ್ನಡದ ಚಿತ್ರಗಳು ಬರೀ ಕರ್ನಾಟಕದಲ್ಲಿ ಮಾತ್ರ ಬಿಡುಗಡೆಯಾಗುತ್ತಿದ್ವು. ಅದು, ಹೆಚ್ಚೆಂದ್ರೆ ಬರೀ ೫೦ರಿಂದ ೬೦ ಚಿತ್ರಮಂದಿರಗಳಲ್ಲಷ್ಟೇ. ಆದ್ರೀಗ ಕಾಲ ಬದಲಾದಂತೆ ಎಲ್ಲ ಬದಲಾಗಿದೆ. ಕನ್ನಡ ಚಿತ್ರಗಳೂ ದೊಡ್ಡ ಮಟ್ಟದಲ್ಲಿ ನಿರ್ಮಾಣಗೊಳ್ಳುತ್ತಿವೆ. ರಾಜ್ಯದಲ್ಲಷ್ಟೇ ಅಲ್ಲ ಹೊರರಾಜ್ಯಗಳಲ್ಲಷ್ಟೇ ಅಲ್ಲ ದೇಶದ ಮೂಲೆ ಮೂಲೆಯಲ್ಲಿ, ವಿದೇಶದ ಬೀದಿಗಳಲ್ಲಿ ಕನ್ನಡದ ಚಿತ್ರಗಳೂ ಏಕಕಾಲಕ್ಕೆ ಬಿಡುಗಡೆಯಾಗುತ್ತಿವೆ.

ಕನ್ನಡದ ಕಹಳೆಯನ್ನ ಊದುತ್ತಿವೆ. ಇಷ್ಟೇ ಅಲ್ಲ ಗಲ್ಲಾಪೆಟ್ಟಿಗೆಯಲ್ಲೂ ಕೋಟಿ ಕೋಟಿಗಳನ್ನ ಕೊಳ್ಳೆ ಹೊಡೆಯುತ್ತಿವೆ. ಹಾಗಾಗಿ, ಸಹಜವಾಗಿ ತಮಿಳು, ತೆಲುಗು, ಹಿಂದಿ ಸಿನಿರಂಗಕ್ಕೆ ನೇರ ಹಾಗೂ ದಿಟ್ಟ ಪ್ರತಿಸ್ಫರ್ದಿಯಾಗಿ ಕನ್ನಡ ಚಿತ್ರರಂಗ ತಲೆ ಎತ್ತಿ ನಿಂತಿದೆ. ಅದ್ರಲ್ಲೂ ಕೆ.ಜಿ.ಎಫ್ ರಣಕೇಕೆ ಹಾಕಿದ ರೀತಿ ಇದೆಯಲ್ಲಾ ಅದಕ್ಕೆ ಪೂರ್ತಿ ದೇಶವೇ ಬೆಚ್ಚಿ ಬಿದ್ದಿದೆ. ನ ಭೂತೋ ನ ಭವಿಷ್ಯತಿ ಅನ್ನುವಂತೆ ಗಲ್ಲಾಪೆಟ್ಟಿಗೆಯಲ್ಲಿ ಕೆ.ಜಿ.ಎಫ್ ೧೫೦ ಕೋಟಿ ಕೊಳ್ಳೆ ಹೊಡಿತಲ್ಲ, ಆಗ ಉರುಕೊಂಡು ಒದ್ದಾಡಿದವರು ಅದೆಷ್ಟೋ. ಕಾರಣ, ಕೆ.ಜಿ.ಎಫ್ ಇಂಥಹದ್ದೊಂದು ಇತಿಹಾಸವನ್ನ ಬರೆಯುತ್ತೆ ಅನ್ನುವ ಚಿಕ್ಕ ಊಹೆಯನ್ನೂ ಯಾರು ಮಾಡಿರಲಿಲ್ಲ.

ಆದ್ರೆ ಚಿತ್ರ ಬಿಡುಗಡೆಗೊಂಡ ಬಳಿಕ ಸೃಷ್ಠಿಯಾಗಿದ್ದು ಅಕ್ಷರಶ ಇತಿಹಾಸ.ಕೆ.ಜಿ.ಎಫ್ ಸೃಷ್ಠಿಸಿದ ಇತಿಹಾಸಕ್ಕೆ, ಎಲ್ಲ ಚಿತ್ರರಂಗದವರು ಹೌಹಾರಿದ್ದು ಸುಳ್ಳಲ್ಲ. ಅದ್ರಲ್ಲೂ ಹಿಂದಿ ಕ್ಷೇತ್ರದಲ್ಲೇ ಕೆ.ಜಿ.ಎಫ್ ಮೂವತ್ತು ಕೋಟಿಯ ವ್ಯವಹಾರ ಅನೇಕರ ಕಣ್ಣು ಕುಕ್ಕುವಂತೆ ಮಾಡಿದ್ದು ಸುಳ್ಳಲ್ಲ. ಇನ್ನೂ ತಮಿಳು ಹಾಗೂ ತೆಲುಗುದಲ್ಲೂ ಕೆ.ಜಿ.ಎಫ್ ಕೊಳ್ಳೆ ಹೊಡೆದಿದ್ದು ಕೋಟಿಗಳ ಲೆಕ್ಕದಲ್ಲೇ. ಇದು, ಅನೇಕರ ನಿದ್ದೆಗೆ ಕೊಳ್ಳಿ ಬೀಳುವಂತೆನೂ ಮಾಡಿದೆ. ಕನ್ನಡ ಚಿತ್ರರಂಗದ ಮಾರುಕಟ್ಟೆ ವಿಸ್ತಾರ ಮಾಡಬಹುದು ಅನ್ನುವ ಸುಳಿವನ್ನೂ ನೀಡಿದೆ.ಬಹುಶ ಇದೆಲ್ಲಾ ಕಾರಣದಿಂದ ಒಂದ್ಕಾಲದಲ್ಲಿ ಸಂಕೀರ್ಣವಾಗಿದ್ದ, ಸೀಮಿತವಾಗಿದ್ದ ಕನ್ನಡ ಚಿತ್ರರಂಗದ ಇಂದಿನ ಬೆಳವಣಿಗೆ ಕಂಡು ತಮಿಳು, ತೆಲುಗು, ಹಿಂದಿ ಚಿತ್ರರಂಗದ ಬೆದರಿದೆ.

ಇದಕ್ಕೆ ಸಾಕ್ಷಿ ಅನ್ನುವಂತೆ ಹಿಂದೆ ನಿಮ್ಮ ಸಿನಿಮಾಗಳನ್ನ ನಮ್ಮ ನೆಲದಲ್ಲಿ ನಮ್ಮ ಭಾಷೆಯಲ್ಲಿ ಬಿಡುಗಡೆ ಮಾಡುವದಾದ್ರೆ, ನಾವ್ ಕೂಡಾ ನಮ್ಮ ಸಿನಿಮಾಗಳನ್ನ ನಿಮ್ಮ ನೆಲದಲ್ಲಿ ನಿಮ್ಮ ಭಾಷೆಯಲ್ಲಿ ಬಿಡುಗಡೆ ಮಾಡ್ತೀವಿ ಅನ್ನುವ ಕೂಗೂ ದೇಶದ ನಾನಾ ದಿಕ್ಕುಗಳಿಂದ ಕೇಳಿ ಬಂದಿತ್ತು. ಇದೀಗ ಅಂದು ಕೇಳಿ ಬಂದ ಕೂಗಿನ ಬೆನ್ನಲ್ಲೇ ಕನ್ನಡ ಚಿತ್ರರಂಗದ ದಿಗ್ಗಜರ ಮನೆ ಮೇಲೆ ಐ.ಟಿ. ದಾಳಿ ನಡೆದಿದೆ. ಇದು, ಎಲ್ಲೋ ಒಂದು ಕಡೆ ವ್ಯವಸ್ಥಿತವಾಗಿ ಹೆಣೆಯಲಾದ ಚಕ್ರವ್ಯೂಹನಾ..? ಅನ್ನುವ ಅನುಮಾನಕ್ಕೂ ಎಡೆ ಮಾಡಿ ಕೊಟ್ಟಿದೆ.ಬರೀ. ಕೆ.ಜಿ.ಎಫ್, ದಿ ವಿಲನ್, ಕುರುಕ್ಷೇತ್ರ, ನಟಸಾರ್ವಭೌಮನಷ್ಟೇ ಅಲ್ಲ, ಹಿಂದೆ ಬಂದಿದ್ದ ಟಗರು, ರಾಜಕುಮಾರ, ಉಳಿದವರು ಕಂಡಂತೆ, ಲೂಸಿಯಾ, ಹೀಗೆ ಅನೇಕ ಚಿತ್ರಗಳೂ ಕನ್ನಡ ಚಿತ್ರರಂಗದ ಇಂದಿನ ಬೆಳವಣಿಗೆಗೆ, ಮೆಟ್ಟಿಲಾಗಿ ನಿಂತಿವೆ.

ಆದ್ರೇ, ಇವ್ಯಾವ ಸಿನಿಮಾಗಳೂ ಅನ್ಯ ಭಾಷೆಗಳಿಗೆ ಡಬ್ ಆಗಿರಲಿಲ್ಲ. ಅಲ್ಲಿ ಅವ್ರದ್ದೇ ಭಾಷೆಗಳಲ್ಲಿ ತೆರೆಗೆ ಬಂದಿರಲಿಲ್ಲ. ಹಾಗಾಗೇ, ತಮಿಳು, ತೆಲುಗು, ಹಿಂದಿ ಚಿತ್ರರಂಗ ಕನ್ನಡ ಚಿತ್ರರಂಗವನ್ನ ಅಂದು ಅಷ್ಟೊಂದು ಸಿರಿಯಸ್ಸಾಗಿ ಪರಿಗಣಿಸಿರಲಿಲ್ಲ.ಆದ್ರೆ ಇದೀಗ ಪರಿಗಣಿಸಲೇಬೇಕಾದ ಅನಿವಾರ್ಯತೆ ಇದೆ. ಕಾರಣ, ಕನ್ನಡದ ಸಿನಿಮಾಗಳ ಕ್ವಾಲಿಟಿಗೆ ಎಲ್ಲರೂ ತಲೆ ಬಾಗುತ್ತಿದ್ದಾರೆ. ಇನ್ನೂ ಕನ್ನಡದ ಚಿತ್ರಗಳೂ ಅವ್ರದ್ದೇ ನೆಲದಲ್ಲಿ ತೆರೆ ಕಂಡು, ಅವ್ರದ್ದೇ ಸಿನಿಮಾಗಳ ಸೋಲಿಗೂ ಕಾರಣವಾಗ್ತಿವೆ. ಇಂಥಹದ್ದೊಂದು ಸಂಪ್ರದಾಯಕ್ಕೆ ಕೆ.ಜಿ.ಎಫ್ ಆಗ್ಲೇ ನಾಂದಿ ಹಾಡಿದೆ.ಇನ್ನೂ, ಕೆ.ಜಿ.ಎಫ್ ಹಾದಿಯಲ್ಲೇ ಅನೇಕ ಕನ್ನಡದ ಸಿನಿಮಾಗಳೂ ಹೆಜ್ಜೆಯನ್ನಿಡಲು ತಯಾರಾಗುತ್ತಿವೆ.

ಇದೆಲ್ಲದ್ರಿಂದ ಕನ್ನಡ ಚಿತ್ರರಂಗದ ಅಭಿವೃದ್ದಿ ಕಂಡು ಎಲ್ಲ ಉದ್ಯಮಗಳೂ ಒಂದಾಗಿ ತಮ್ಮ ತಮ್ಮ ರಾಜಕೀಯ ಪ್ರಭಾವಗಳನ್ನ ಬಳಸಿಕೊಂಡು, ಐ.ಟಿ. ರೇಡ್ ಆಗುವಂತೆ ಮಾಡಿದ್ರಾ..? ವ್ಯವಸ್ಥಿತ ಷಡ್ಯಂತ್ರ ರೂಪಿಸಿದ್ರಾ ಅನ್ನುವ ಚರ್ಚೆ ಇದೀಗ ಗಾಂಧಿನಗರದ ಗಲ್ಲಿಗಳಲ್ಲಿ ನಡೆಯುತ್ತಿದೆ.ಸದ್ಯ, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ, ಐತಿಹಾಸಿಕ ದಾಳಿಗೆ ಕನ್ನಡ ಚಿತ್ರರಂಗ ಬೆದರಿದೆ. ನಲುಗಿದೆ. ಏಕಾಏಕಿ ನಡೆದ ಈ ಬೆಳವಣಿಗೆಗೆ ಕಾರಣವೇನೆಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಹಾಗಂತ ಐಟಿ ಅಧಿಕಾರಿಗಳೇನೂ ಏಕಾಏಕಿ ಈ ದಾಳಿ ನಡೆಸಿಲ್ಲ. ಈ ಬಗ್ಗೆ ಅಧಿಕಾರಿಗಳ ಟೀಮು ಎರಡು ವಾರಗಳಿಂದ ಸಿದ್ಧಗೊಂಡಿದೆ. ಹೀಗೆ ತಯಾರಾಗಿದ್ದ ಇನ್ನೂರು ಮಂದಿ ಅಧಿಕಾರಿಗಳು ಸ್ಯಾಂಡಲ್‌ವುಡ್ ಭಾಗವಾದ ಐವತ್ತು ಸ್ಥಳಗಳಿಗೆ ರೇಡು ನಡೆಸಿದೆ. ಇದರ ಹಿಂದಿರೋ ಅಸಲೀ ಉದ್ದೇಶಗಳೇನೆಂಬುದು ಇಷ್ಟರಲ್ಲಿಯೇ ಹೊರಬೀಳಲಿದೆ. ಅಲ್ಲಿವರೆಗೂ ಕಾಯಬೇಕಷ್ಟೇ…

LEAVE A REPLY

Please enter your comment!
Please enter your name here