Home Elections 2019 ತಮಿಳುನಾಡು ಸರ್ಕಾರಕ್ಕೆ ಭಾರೀ ಮುಖಭಂಗ..!? ಮರೀನಾ ಬೀಚ್‌ನಲ್ಲೇ ಕರುಣಾನಿಧಿ ಅಂತ್ಯಸಂಸ್ಕಾರ…

ತಮಿಳುನಾಡು ಸರ್ಕಾರಕ್ಕೆ ಭಾರೀ ಮುಖಭಂಗ..!? ಮರೀನಾ ಬೀಚ್‌ನಲ್ಲೇ ಕರುಣಾನಿಧಿ ಅಂತ್ಯಸಂಸ್ಕಾರ…

749
0
SHARE

ಮರೀನಾ ಬೀಚ್‌ನಲ್ಲಿ ಕುರುಣಾನಿಧಿ ಅಂತ್ಯಸಂಸ್ಕಾರಕ್ಕೆ ತಮಿಳುನಾಡು ಹೈಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಮರೀನಾ ಬೀಚ್ನಲ್ಲಿ ಕರುಣಾನಿಧಿ ಅಂತ್ಯ ಸಂಸ್ಕಾರಕ್ಕೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಬೆಳಗ್ಗೆ 2ಗಂಟೆಗಳ ಕಾಲ ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿಗಳು ಎಐಎಡಿಎಂಕೆ ಸರ್ಕಾರದ ವಾದ ತಳ್ಳಿ ಹಾಕಿ, ಗುರು ಅಣ್ಣಾದೊರೈ ಸಮಾಧಿ ಪಕ್ಕದಲ್ಲೇ ಕರುಣಾನಿಧಿ ಅಂತ್ಯಸಂಸ್ಕಾರ ನಡೆಸಲು ಆದೇಶಿಸಿದೆ…

ಕೋರ್ಟ್ ಆದೇಶ ಹೊರ ಬೀಳುತ್ತಿದ್ದಂತೆ ಸ್ಟಾಲಿನ್, ಅಳಗಿರಿ ಕಣ್ಣೀರಿಟ್ಟರು.ಬಹು ಅಂಗಾಂಗ ವೈಫಲ್ಯದಿಂದ ನಿಧನರಾದ ತಮಿಳುನಾಡು ಮಾಜಿ ಸಿಎಂ ಕರುಣಾನಿಧಿಗೆ ಪ್ರಧಾನಿ ನರೇಂದ್ರ ಮೋದಿ ಅಂತಿಮ ನಮನ ಸಲ್ಲಿಸಿದ್ದಾರೆ. ಕುರುಣಾನಿಧಿ ಪಾರ್ಥೀವ ಶರೀರಕ್ಕೆ ಪ್ರಧಾನ ಮಂತ್ರಿ ಪುಷ್ಪ ಸಲ್ಲಿಸಿ ನಮನ ಸಲ್ಲಿಸಿದ್ದಾರೆ. ಇದೇ ವೇಳೆ ಕರುಣಾನಿಧಿ ಪುತ್ರ ಸ್ಟಾಲಿನ್‌ ಅಳಗಿರಿ ಸೇರಿದಂತೆ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ್ರು…

ಇದೇ ವೇಳೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ತಮಿಳುನಾಡು ರಾಜ್ಯಪಾಲ ಅನ್ವಾರಿ ಲಾಲ್ ಪುರೋಹಿತ್ ಅಂತಿಮ ನಮನ ಸಲ್ಲಿಸಿದ್ರು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿಯವರ ನಿಧನದಿಂದ ಕರ್ನಾಟಕ ತಮಿಳುನಾಡು ಗಡಿ ಭಾಗದ ತಾಳವಾಡಿಯಲ್ಲಿ ಸಾರ್ವಜನಿಕರು ಸ್ವಯಂ ಘೋಷಿತ ಬಂದ್ ಆಚರಿಸಿದರು…

ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಂತ್ತಿರುವ ತಮಿಳುನಾಡು ತಾಲ್ಲೂಕಿನಲ್ಲಿ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿರವರ ನಿಧನದಿಂದಾಗಿ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಬಾಗಿಲು ಹಾಕಿದ್ದು, ಬಂದ್‍ನಂತ್ತಿತ್ತು. ತಾಳವಾಡಿ ಬಸ್ ನಿಲ್ದಾಣದಲ್ಲಿ ಬಸ್‍ಗಳಿಲ್ಲದೆ ಬಿಕೋ ಎನ್ನುತ್ತಿತ್ತು, ಬಸ್ ನಿಲ್ದಾಣದ ಬಳಿ ಎಂ.ಕರುಣಾನಿಧಿಯವರ ಭಾವಚಿತ್ರ ಇಟ್ಟು ಮೌನಾಚರಣೆ ನಡೆಸಿದ ಸಾರ್ವಜನಿಕರು, ಅಗಲಿದ ನಾಯಕನ ನೆನೆದು ದುಃಖ ತೃಪ್ತರಾದರು…

ತಾಳವಾಡಿ ಬಳಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೂ ಬಸ್ತ್ ಮಾಡಲಾಗಿತ್ತು. ಕರ್ನಾಟಕ ತಮಿಳುನಾಡು ನಡುವೆ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಗಡಿ ತನಕ ಮಾತ್ರ ಬಸ್ ಸಂಚಾರ ಇತ್ತು…

LEAVE A REPLY

Please enter your comment!
Please enter your name here