Home District ತಮ್ಮನ ವಿರುದ್ಧ ಅಣ್ಣನನ್ನೇ ಅಸ್ತ್ರವಾಗಿಸಿದ ಕಮಲ ಪಡೆ..!? “ಬಿಜೆಪಿಯ ಹೆಬ್ಬಾಗಿಲು ಅಂತಾ ಹೇಳೊ ಕರ್ನಾಟಕವನ್ನ ಬಿಜೆಪಿಗರಿಂದ...

ತಮ್ಮನ ವಿರುದ್ಧ ಅಣ್ಣನನ್ನೇ ಅಸ್ತ್ರವಾಗಿಸಿದ ಕಮಲ ಪಡೆ..!? “ಬಿಜೆಪಿಯ ಹೆಬ್ಬಾಗಿಲು ಅಂತಾ ಹೇಳೊ ಕರ್ನಾಟಕವನ್ನ ಬಿಜೆಪಿಗರಿಂದ ಮುಕ್ತ ಮಾಡಬೇಕಾಗಿದೆ”- H.D.ದೇವೇಗೌಡರು

2971
0
SHARE

ಶಿವಮೊಗ್ಗದಲ್ಲಿ ಬಿಜೆಪಿ – ಜೆಡಿಎಸ್ ಹೋರಾಟ ಅನ್ನೋದಕ್ಕಿಂತ ಸಹೋದರರ ಕಾಳಗ ಎನ್ನುವಂತಾಗಿದೆ. ಮೈತ್ರಿ ಪಕ್ಷಗಳು ಬಂಗಾರಪ್ಪ ಹೆಸರನ್ನ ಚುನಾವಣೆಯಲ್ಲಿ ಎಳೆದು ತಂದಿದ್ದರಿಂದ ಬಿಜೆಪಿ ಎಚ್ಚೆತ್ತುಕೊಂಡಿದೆ. ಬಿಜೆಪಿ ಈಗ ಮಾಜಿ ಸಿಎಂ ಬಂಗಾರಪ್ಪ ಅವರನ್ನೆ ಚುನಾವಣಾ ಅಸ್ತ್ರವಾಗಿ ಬಳಸಿಕೊಂಡಿದೆ. ಬಂಗಾರಪ್ಪನವರ ಪುತ್ರ ಕುಮಾರ್ ಬಂಗಾರಪ್ಪ ಅವರಿಗೆ ಈಡಿಗ ಸಮುದಾಯದ ಮತಗಳನ್ನ ಸೆಳೆಯಲು ಜವಾಬ್ದಾರಿ ನೀಡಿದೆ. ಶಿವಮೊಗ್ಗದಲ್ಲಿ ಮಾತನಾಡಿದ ಶಾಸಕ ಕುಮಾರ್ ಬಂಗಾರಪ್ಪ, ಮಧು ವಿರುದ್ಧ ವಾಗ್ದಾಳಿ ಮಾಡಿದ್ರು.

ದಿನದಿಂದ ದಿನಕ್ಕೆ ರಂಗೇರುತ್ತಿದೆ ಉಪ ಚುನಾವಣಾ ಕಣ. ಜಾತಿ ಲೆಕ್ಕಚಾರದಲ್ಲಿ ನಡೆದಿದೆ ರಣ ತಂತ್ರ. ಶಿವಮೊಗ್ಗದಲ್ಲಿ ಬಂಗಾರಪ್ಪ ಹೆಸರಲ್ಲಿ ಚುನಾವಣೆ, ಬಳ್ಳಾರಿಯಲ್ಲಿ ನಾಯಕ ಜನಾಂಗದ ಹೆಸರು ಬಳಕೆ. ಜಮಖಂಡಿಯಲ್ಲಿ ಅನುಕಂಪದ ಅಲೆ ಮೇಲೆ ಮತ ಕೇಳುತ್ತಿದೆ ಕೈಪಡೆ. ರಾಮನಗರದಲ್ಲಿ ಮುಂದೆ ಸಾಗುತ್ತಿದ್ದಾಳೆ ತೆನೆ ಹೊತ್ತ ಮಹಿಳೆ. ಬಿಜೆಪಿ ಅಭ್ಯರ್ಥಿ ಪರ ಹಿರಿಯರೇ ಪ್ರಚಾರಕ್ಕೆ ಚಕ್ಕರ್.ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆ ಕಣ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ. ಮತದಾರರಲ್ಲಿ ಮಿನಿ ಸಮರದ ಬಗ್ಗೆ ಸಾಕಷ್ಟು ಕುತೂಹಲ ಗರಿಗೆದರಿದೆ.

ಶಿವಮೊಗ್ಗದಲ್ಲಿ ಕಾಂಗ್ರೆಸ್ ಜೆಡಿಎಸ್ ಬಿರುಸಿನ ಪ್ರಚಾರ ನಡೆಸುತ್ತಿದೆ. ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರ ಸಭೆ ದೇವೇಗೌಡರ ನೇತೃತ್ವದಲ್ಲಿ ನಡೆಯಿತು. ಬಳಿಕ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು ಬಿಜೆಪಿಯ ಹೆಬ್ಬಾಗಿಲು ಅಂತಾ ಹೇಳೊ ಕರ್ನಾಟಕವನ್ನ ಬಿಜೆಪಿಗರಿಂದ ಮುಕ್ತ ಮಾಡಬೇಕಾಗಿದೆ ಎಂದ್ರು.ಜಮಖಂಡಿಯಲ್ಲೂ ಜುನಾವಣಾ ಕಣ ರಂಗೇರಿದೆ.

ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡರ ಪರ ಡಿಸಿಎಂ ಪರಮೇಶ್ವರ್ ಸಾವಳಗಿ ಗ್ರಾಮದಲ್ಲಿ ಪಾದಯಾತ್ರೆ ನಡೆಸಿ ಪ್ರಚಾರ ನಡೆಸಿದ್ರು ಪರಮೇಶ್ವರ್ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.ಇತ್ತ ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರ ಪ್ರಚಾರದ ಭರಾಟೆ ಜೋರಾಗಿದೆ. ಆದ್ರೆ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಪರ ಪ್ರಚಾರ ಮಾಡಲು ಹಿರಿಯ ನಾಕರು ಬಾರದೆ ಇರೋದು ಬಿಜೆಪಿ ಕಾರ್ಯಕರ್ತರಲ್ಲಿ ನಿರುತ್ಸಾಹ ಮೂಡಿಸಿದೆ.

ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾಗಿದ್ದರಿಂದ ಎಚ್ಚೆತ್ತ ಬಿಜೆಪಿ ಮಖಂಡರು ಬಿಜೆಪಿ ನಾಯಕರಾದ ಅಶ್ವಥ್ ನಾರಾಯಣ್, ಮುನಿರಾಜುಗೌಡರನ್ನ ರಾಮನಗರಕ್ಕೆ ಕಳುಹಿಸಿ ಪ್ರಚಾರ ನಡೆಸಿದೆ.ಒಟ್ಟಾರೆ ಚುನಾವಣಾ ಕಣದಲ್ಲಿ ಮೈತ್ರಿ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಬಿರುಸಾಗಿದ್ದು, ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಇನ್ನಷ್ಟೇ ವೇಗ ಪಡೆದುಕೊಳ್ಳಬೇಕಾಗಿದೆ. ಆದ್ರೆ ಮತದಾರ ಪ್ರಭು ಯಾರಿಗೆ ಗೆಲುವಿನ ಹಾರ ಹಾಕುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

LEAVE A REPLY

Please enter your comment!
Please enter your name here