Home Cinema ತಲೆಗೆ ಹುಳ ಬಿಟ್ಟ ’ಮೂಕವಿಸ್ಮಿತ’ ಟ್ರೈಲರ್..! ಇದು ಟೊಳ್ಳು ನಿರೀಕ್ಷೆಯಿಲ್ಲದ ಗಟ್ಟಿ ಖದರ್..!

ತಲೆಗೆ ಹುಳ ಬಿಟ್ಟ ’ಮೂಕವಿಸ್ಮಿತ’ ಟ್ರೈಲರ್..! ಇದು ಟೊಳ್ಳು ನಿರೀಕ್ಷೆಯಿಲ್ಲದ ಗಟ್ಟಿ ಖದರ್..!

327
0
SHARE

’ಮೂಕವಿಸ್ಮಿತ’. ಸ್ಯಾಂಡಲ್‌ವುಡ್‌ನಲ್ಲಿ ಹೊಸ ಕನಸುಗಳ ಬೆನ್ನುಹತ್ತಿ ಪ್ರೇಕ್ಷಕರಿಗೆ ಮನರಂಜನೆಯ ಮೃಷ್ಟಾನ್ನವನ್ನೇ ಬಡಿಸಲು ರೆಡಿಯಾಗಿರುವ ಹೊಸ ಸಿನಿಮಾ. ಕನ್ನಡದಲ್ಲಿ ಬರ‍್ತೀರೊ ಹೊಡಿಬಡಿ ಸಂಸ್ಕ್ರತಿಯ ಚಿತ್ರಗಳ ಮಧ್ಯೆ ವಿಶೆಷವಾದ ಜಾಗ ಸಂಪಾದಿಸೋಕೆ ’ಮೂಕವಿಸ್ಮಿತ’ ಚಿತ್ರತಂಡ ಸಜ್ಜಾಗಿದೆ.

ಒಂದು ವಿಭಿನ್ನ ಸ್ಟೋರಿಲೈನ್ ಹಾಗೂ ಮಿನಿಂಗ್‌ಫುಲ್ ಪ್ರೆಸೆಂಟೇಶನ್ ಮೂಲಕ ಗಾಂಧಿನಗರದಲ್ಲಿ ತಮ್ಮದೇ ಆದ ಸೌಂಡ್ ಮಾಡ್ತೀವಿ ಅಂತ ಹಠ ತೊಟ್ಟು ಹೊರಟಿರುವ ಮೂಕವಿಸ್ಮಿತ ಚಿತ್ರದ ಟ್ರೈಲರ್ ನೋಡ್ತಿದ್ರೆ ನಿಜಕ್ಕೂ ಪಾತ್ರೆಯಲ್ಲಿ ಅನ್ನ ಸರಿಯಾಗಿ ಬೆಂದಿದೆ ಅಂತ ಪ್ರೂವ್ ಆಗುತ್ತೆ. ನೀವು ಒಂದು ಸಲ ಟ್ರೈಲರ್ ರುಚಿ ಹೇಗಿದೆ ಅಂತ ನೋಡಿ ಬಿಡಿ.ನಿನ್ನೆ ಬೆಂಗಳೂರಿನ ಮಲ್ಲೇಶ್ವರಂನ ರೇಣುಕಾಂಭ ಸ್ಟುಡಿಯೋದಲ್ಲಿ ’ಮೂಕವಿಸ್ಮಿತ’ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿ ನಡೆಯಿತು.

ಅಡಂಬರಕ್ಕೆ ಅವಕಾಶ ಕೊಡದೇ ಕನ್ನಡದ ಹಿರಿಯ ಸಾಹಿತಿಗಳಿಂದ ಚಿತ್ರದ ಹಾಡುಗಳ ಬಿಡುಗಡೆಯಾಯಿತು. ಇದೇ ಸಂದರ್ಭದಲ್ಲಿ ಹೊಸಬರ ತಂಡವನ್ನ ಕಟ್ಟಲು ಸತತವಾಗಿ ಶ್ರಮಿಸಿದ ನಿರ್ದೆಶಕ ಗುರುದತ್ ಶ್ರೀಕಾಂತ್ ತಮ್ಮ ಮನದಾಳದ ಮಾತುಗಳನ್ನ ಆಚೆ ಹಾಕಿದ್ರು. ಚಿತ್ರದ ಸ್ಕ್ರೀನ್ ಪ್ಲೇನಲ್ಲಿ ಅಡಿಯನ್ಸ್‌ಗೆ ಹೊಸ ಸರ್‌ಪ್ರೈಸ್ ಕಾದಿದೆಯಂತೆ. ಹಾಗೇ ಈ ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕಿಯಾರಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿರುವ ವಾಣಿಶ್ರಿ ಭಟ್ ಹಾಗೂ ಶುಭಾ ರಕ್ಷಾ ತಮ್ಮ ಸಂತಸವನ್ನ ಎಲ್ಲರ ಜೊತೆ ಹಂಚಿಕೊಂಡ್ರು.

ಇನ್ನು ಚಿತ್ರದಲ್ಲಿ ನಟಿಸಿರುವ ರಂಗಭೂಮಿ ಕಲಾವಿದ ಹಾಗೂ ಪತ್ರಕರ್ತ ಮಾವಳ್ಳಿ ಕಾರ್ತಿಕ್‌ಗೆ ಮೂಕವಿಸ್ಮಿತ ಒಂದು ವಿಶೇಷವಾದ ಅನುಭವವಂತೆ. ಹೊಸಬರ ತಂಡವಾದ್ರೂ ಸಿನಿಮಾದಲ್ಲಿ ಎಲ್ಲರಿಗೂ ಇಷ್ಟವಾಗುವ ಕಂಟೆಂಟ್ ಇದೆ ಎನ್ನುವ ಕಾರ್ತಿಕ್ ತಮ್ಮ ಪಾತ್ರದ ಬಗೆಗಿನ ವಿವರಣೆ ಕೊಟ್ಟ ರೀತಿ ಹೀಗಿತ್ತು.ಅಂತೂ ತನ್ನ ವಿಶಿಷ್ಟವಾದ ನಿರೂಪಣೆಯಿಂದ ಗಾಂಧಿನಗರದಲ್ಲಿ ಭರವಸೆ ಮೂಡಿಸಿರುವ ’ಮೂಕವಿಸ್ಮಿತ’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ’ಯು’ ಸರ್ಟಿಫಿಕೆಟ್ ಸಿಕ್ಕಿದೆ. ಚಿತ್ರದ ಹಾಡುಗಳು ಎಮೊಷನಲ್ ಫೀಲ್ ಕೊಡೋದ್ರಲ್ಲಿ ಹಿಂದೆ ಬಿದ್ದಿಲ್ಲ.

ಚಿತ್ರಕ್ಕೆ ಹೊಂದಾಣಿಕೆಯಾಗುವ ಸಂಗೀತ ಸಂಯೋಜಿಸಿರುವ ಚಿನ್ಮಯ್.ಡಿ.ರಾವ್ ಮೂಕವಿಸ್ಮಿತ ಖಂಡಿತ ಪ್ರೇಕ್ಷಕರನ್ನ ಪಾಸಿಟಿವ್ ಆಗಿ ತಲುಪುತ್ತೆ ಎನ್ನುವ ನಂಬಿಕೆಯಲ್ಲಿದಾರೆ. ಒಟ್ಟಾರೆಯಾಗಿ ಜೂನ್‌ಅಥವಾ ಜುಲೈನಲ್ಲಿ ಬಿಡುಗಡೆಯಾಗಲಿರುವ ಮೂಕವಿಸ್ಮಿತ ಕನ್ನಡ ಚಿತ್ರರಂಗಕ್ಕೆ ಹೊಸ ಮೈಲಿಗಲ್ಲನ್ನ ತಂದುಕೊಡುತ್ತಾ? ಕಥೆಯಿಲ್ಲದ ಬಿಗ್‌ಬಜೆಟ್ ಸಿನಿಮಾಗಳ ನಡುವೆ ತನ್ನ ಸ್ಥಾನವನ್ನ ಸಂಪಾದಿಸಿಕೊಳ್ಳುತ್ತಾ ಎನ್ನುವುದೇ ಸದ್ಯದ ಸಸ್ಪೆನ್ಸ್.

LEAVE A REPLY

Please enter your comment!
Please enter your name here